ಇನ್ಸ್ಟಾಗ್ರಾಮ್ ಸ್ನೇಹದಿಂದ ಕೊಹ್ಲಿಗೆ ಕೊಕ್ ನೀಡಿದರೆ ರೋಹಿತ್ ಶರ್ಮ?
Team Udayavani, Jul 26, 2019, 5:08 AM IST
ಮುಂಬೈ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಯನ್ನು ಇನ್ಸ್ಟಾಗ್ರಾಮ್ ಸ್ನೇಹಬಳಗದಿಂದ ಈಗಾಗಲೇ ಹೊರಹಾಕಿರುವ ರೋಹಿತ್ ಶರ್ಮ, ಈಗ ಕೊಹ್ಲಿ ಪತ್ನಿ ಅನುಷ್ಕಾ ಶರ್ಮರನ್ನೂ ಹೊರದಬ್ಬಿದ್ದಾರೆಂದು ಹೇಳಲಾಗಿದೆ. ಇಬ್ಬರ ನಡುವಿನ ಸಂಬಂಧ ಸರಿ ಯಾಗಿಲ್ಲ ವೆನ್ನುವುದಕ್ಕೆ ಇದು ಸಾಕ್ಷಿ ಎನ್ನಲಾಗಿದೆ. ರೋಹಿತ್ ಹೀಗೆ ಮಾಡಿರುವ ಕುರಿತು ಮುಂಬೈ ಮಿರರ್ ಪತ್ರಿಕೆಯಲ್ಲಿ ವರದಿಯಾಗಿದೆ. ಆದರೆ ಅವರು ಹೀಗೆ ನಿಜಕ್ಕೂ ಮಾಡಿ ದ್ದಾರೆಯೇ ಎನ್ನುವುದು ಇನ್ನಷ್ಟೇ ಖಚಿತವಾಗಬೇಕು.
ಕಳೆದ ಎರಡುವರ್ಷಗಳಿಂದ ರೋಹಿತ್ ಮತ್ತು ಕೊಹ್ಲಿ ನಡುವೆ ಸಂಬಂಧ ಸರಿಯಾಗಿಲ್ಲ ಎಂದು ಹೇಳುತ್ತಲೇ ಬರಲಾಗಿದೆ. 2018ರಲ್ಲಿ ಭಾರತ ಇಂಗ್ಲೆಂಡ್ ಪ್ರವಾಸದಲ್ಲಿದ್ದಾಗ, ಭಾರತೀಯ ರಾಯಭಾರ ಕಚೇರಿ ಔತಣಕೂಟ ಏರ್ಪಡಿಸಿತ್ತು. ಆಗ ನಿಯಮ ಮೀರಿ ಕೊಹ್ಲಿಯೊಂದಿಗೆ ಪತ್ನಿ ಅನುಷ್ಕಾ ಶರ್ಮ ಅವರೂ ಕಾಣಿಸಿಕೊಂಡಿದ್ದರು. ಆಟಗಾರರ ಪತ್ನಿಯರ ಬಗ್ಗೆ ಬಿಸಿಸಿಐ ದ್ವಂದ್ವ ನೀತಿಯನ್ನು ಅಭಿಮಾನಿಯೊಬ್ಬರು ಪ್ರಶ್ನಿಸಿದ್ದರು. ಅದನ್ನು ರೋಹಿತ್ ಶರ್ಮ ರೀಟ್ವೀಟ್ ಮಾಡಿದ್ದರು. ಆಗ ಇಬ್ಬರ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವುದಕ್ಕೆ ಬಲವಾದ ಆಧಾರ ಸಿಕ್ಕಿತ್ತು.
ಕಳೆದ ವರ್ಷ ರೋಹಿತ್ ನಾಯಕತ್ವ ವಹಿಸಿಕೊಳ್ಳುವು ದಕ್ಕೆ ತಾನು ಸಿದ್ಧ ಎಂದು ಹೇಳಿ ಅಚ್ಚರಿ ಸೃಷ್ಟಿಸಿದ್ದರು. ಆ ಸಂದರ್ಭದಲ್ಲಿ ಕೊಹ್ಲಿ ನಾಯಕತ್ವದ ಬಗ್ಗೆ ಎಲ್ಲಿಯೂ ಅಪ ಸ್ವರವಿರಲಿಲ್ಲ. ಆದರೂ ಅವರು ಹೇಳಿದ್ದು ಪ್ರಶ್ನಾರ್ಥಕ ವಾಗಿತ್ತು. ಪ್ರಸ್ತುತ ವಿಶ್ವಕಪ್ ಮುಗಿದ ಮೇಲೆ ಕೊಹ್ಲಿ ಯಿಂದ ನಾಯಕತ್ವವನ್ನು ರೋಹಿತ್‌ಗೆ ವರ್ಗಾಯಿಸ ಬೇಕೆಂದು ಅಭಿಮಾನಿಗಳು ಆಗ್ರಹಿಸಿದ್ದರು. ಅಷ್ಟು ಮಾತ್ರವಲ್ಲ, ಇಬ್ಬರ ನಡುವೆ ಮುನಿಸಿದೆ ಎಂಬ ವಿವಾದ ಜೋರಾಗಿತ್ತು. ಆದರೆ ಬಿಸಿಸಿಐ ಇದನ್ನು ಅಲ್ಲಗಳೆದಿದೆ. ತಂಡದ ತರಬೇತು ಸಿಬ್ಬಂದಿಯೂ ಇವೆಲ್ಲ ಸುಳ್ಳು ಎಂದು ಹೇಳಿದ್ದಾರೆ. ಅಷ್ಟಾಗಿಯೂ ವದಂತಿಗಳು ನಿಲ್ಲುತ್ತಿಲ್ಲ.
ಇನ್ಸ್ಟಾಗ್ರಾಮ್ ನಿಂದ ಹೊರಹಾಕಿದ್ದು ಸತ್ಯವೇ?
ಇದೀಗ ಉದ್ಭವಿಸಿರುವ ಪ್ರಶ್ನೆ ನಿಜಕ್ಕೂ ರೋಹಿತ್, ಕೊಹ್ಲಿ ಮತ್ತವರ ಪತ್ನಿಯನ್ನು ಇನ್ಸ್ಟಾಗ್ರಾಮ್ ಸ್ನೇಹ ಬಳಗದಿಂದ ಹೊರಹಾಕಿದ್ದಾರೆಯೇ ಎನ್ನುವುದು. ಅವರು ಯಾವತ್ತಾದರೂ ಕೊಹ್ಲಿಯೊಂದಿಗೆ ಇನ್ಸ್ಟಾಗ್ರಾಮ್ ನಲ್ಲಿ ಸ್ನೇಹ ಹೊಂದಿದ್ದರೆ ಮಾತ್ರ ಹೊರಹಾಕುವ ಪ್ರಶ್ನೆ ಬರುತ್ತದೆ. ಆದರೆ ಹಾಗೆ ಸ್ನೇಹ ಹೊಂದಿದ್ದರೆ ಎನ್ನುವುದನ್ನು ಸ್ವತಃ ರೋಹಿತ್ ಮತ್ತು ಕೊಹ್ಲಿಯೇ ವಿವರಿಸಬೇಕು! ಗೊಂದಲ ಹುಟ್ಟುವುದಕ್ಕೆ ಕಾರಣ, ಕೊಹ್ಲಿ ಇನ್ಸ್ಟಾಗ್ರಾಮ್ ನಲ್ಲಿ ರೋಹಿತ್ ಮತ್ತು ಅವರ ಪತ್ನಿ ರಿತಿಕಾ ಸಜ್ದೆಯನ್ನು ತಮ್ಮ ಸ್ನೇಹಬಳಗದಲ್ಲಿ ಉಳಿಸಿಕೊಂಡಿದ್ದಾರೆ! ಸದ್ಯ ಭಾರತ ವಿಶ್ವಕಪ್‌ನ ಸೆಮಿಫೈನಲ್ನಲ್ಲಿ ಸೋತ ನಂತರ ಕೊಹ್ಲಿ ಟಿ20, ಏಕದಿನ ಸರಣಿಯಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಾರೆ. ಎನ್ನಲಾಗಿತ್ತು. ಅಚ್ಚರಿಯ ರೀತಿಯಲ್ಲಿ ಅವರು ತಂಡದ ನಾಯಕತ್ವವಹಿಸಿಕೊಂಡಿರುವುದೂ ಪ್ರಶ್ನಾರ್ಥಕವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
World Test Championship: ಪರ್ತ್ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ
IPL Auction 2025: ಯಾರು, ಯಾವ ತಂಡಕ್ಕೆ, ಎಷ್ಟು ಕೋಟಿಗೆ?.. ಇಲ್ಲಿದೆ ಇದುವರೆಗಿನ ಲಿಸ್ಟ್
IPL Auction: ಕೇನ್, ಮಯಾಂಕ್, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.