ಆರೋಗ್ಯ ಭಾಗ್ಯಕ್ಕೆ ಪೂರ್ವಜರ ತಿಂಡಿ ತಿನಿಸುಗಳೇ ಪ್ರೇರಕ


Team Udayavani, Jul 26, 2019, 10:12 AM IST

mumbai-tdy-1

ಮುಂಬಯಿ, ಜು. 25: ಅಗೋಳಿ ಮಂಜಣ್ಣನಂತಹ ವೀರ ಪುರುಷರು ಹುಟ್ಟಿದ ನಮ್ಮ ತುಳುನಾಡಿನಲ್ಲಿ ವರ್ಷವಿಡೀ ನಾವು ಹಬ್ಬ ಹರಿದಿನಗಳನ್ನು ಆಚರಿಸುತ್ತಿರುತ್ತೇವೆ. ಈ ಪೈಕಿ ಆಷಾಢ ಮಾಸವೂ ಒಂದಾಗಿದೆ. ಆಟಿ ಅಂದರೆ ಕಷ್ಟದ ತಿಂಗಳೆಂಬ ಪ್ರತೀತಿ ಈ ಹಿಂದಿತ್ತು. ಆಟಿ ತಿಂಗಳಿಗೆ ವಿಶೇಷ ಪ್ರಾಮುಖ್ಯತೆ ಏಕೆಂದರೆ ಲಗ್ನವಾಗಿ ಹೋದ ಹೆಣ್ಣು ಮಕ್ಕಳು ತಾಯಿಯ ಮನೆಗೆ ಬಂದಾಗ ವಿಶೇಷ ಖಾದ್ಯಗಳನ್ನು ಮಾಡಿ ತಿನಿಸುವುದು, ಆಟಿ ಕಳಂಜ, ಆಟಿಯ ಅಮವಾಸ್ಯೆ, ಪಾಲೆದ ಕೆತ್ತೆಯಿಂದ ಹಾಲು ತೆಗೆದು ಅದಕ್ಕೆ ಬೊರ್‌ಗಲ್ಲನ್ನು ಕಾಯಿಸಿ ಬೆಳ್ಳುಳ್ಳಿ ಹಾಕಿ ಬಿಸಿ ಬೊರ್‌ಗಲ್ಲಿನಿಂದ ಒಗ್ಗರಣೆ ನೀಡುವ ವಿಶೇಷತೆ ಇದೆ. ಇದನ್ನು ಕುಡಿದವರ ರೋಗ ರುಜಿನಗಳು ಮಾಯವಾಗುತ್ತವೆ ಎಂಬ ಪ್ರತೀತಿ ಇದೆ. ಭಾರತೀಯ ಸಂಸ್ಕೃತಿಯಲ್ಲಿ ನಮ್ಮ ಆಚಾರ-ವಿಚಾರಗಳು ವಿಭಿನ್ನವಾಗಿವೆ ಎಂದು ನಗರದ ಹಿರಿಯ ಸಾಹಿತಿ ಡಾ| ಸುನೀತಾ ಎಂ. ಶೆಟ್ಟಿ ತಿಳಿಸಿದರು.

ಜು. 21ರಂದು ಅಂಧೇರಿ ಪೂರ್ವದ ಮಾತೋಶ್ರೀ ಸಭಾಗೃಹದಲ್ಲಿ ಬಂಟರ ಸಂಘ ಮುಂಬಯಿ ಅಂಧೇರಿ ಬಾಂದ್ರಾ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗವು ಆಯೋಜಿಸಿದ್ದ ಆಟಿಡೊಂಜಿ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂತಹ ಕಾರ್ಯಕ್ರಮಗಳಲ್ಲಿ ಮಕ್ಕಳನ್ನು ಭಾಗಿಯಾಗುವಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ. ಆಗ ಇಂತಹ ಆಚಾರ-ವಿಚಾರಗಳು ಬೆಳೆಯಲು ಸಾಧ್ಯವಿದೆ ಎಂದು ನುಡಿದರು.

ಬಂಟರ ಸಂಘ ಮುಂಬಯಿ ಉಪಾಧ್ಯಕ್ಷ ಚಂದ್ರಹಾಸ ಕೆ. ಶೆಟ್ಟಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಅಂಧೇರಿ ಬಾಂದ್ರಾ ಪ್ರಾದೇಶಿಕ ಸಮಿತಿಯು ಪ್ರಾರಂಭದಿಂದಲೂ ವಿವಿಧ ಕಾರ್ಯಾಧ್ಯಕ್ಷರ ಮುಂದಾಳತ್ವದಲ್ಲಿ ಅವರವರ ಕಲಾನುಸಾರ ಉತ್ತಮ, ಅರ್ಥಪೂರ್ಣ ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಈ ಸಮಿತಿಯ ಸಂಚಾಲಕನಾಗಿ ದುಡಿದ ಅನುಭವ ನನಗಿದೆ. ಬಂಟರ ಸಂಘದ ಮೂಲ ಉದ್ದೇಶ ಸಮಾಜ ಬಾಂಧವರೆಲ್ಲರನ್ನೂ ಒಗ್ಗೂಡಿಸಿ ಒಗ್ಗಟ್ಟನ್ನು ಕಾಯ್ದುಕೊಳ್ಳುವುದು. ಸುಖ-ಕಷ್ಟಗಳಲ್ಲಿ ಒಬ್ಬರಿಗೊಬ್ಬರು ಭಾಗಿಯಾಗುವುದು. ನಮ್ಮ ಪೂರ್ವಜರು ಆಟಿ ತಿಂಗಳ ವಿಶೇಷ ತಿಂಡಿ-ತಿನಿಸು ಹಾಗೂ ಪ್ರಾಕೃತಿಕ ಪದಾರ್ಥಗಳನ್ನು ಸೇವಿಸುತ್ತಿರಬೇಕೆಂದು ನಮಗೆಲ್ಲಾ ತಿಳಿಸಿರುವುದರಲ್ಲಿ ಸತ್ಯವಿದೆ ಎಂದರು.

ಬಂಟರ ಸಂಘ ಮುಂಬಯಿ ಇದರ ಜತೆ ಕೋಶಾಧಿಕಾರಿ ಗುಣಪಾಲ್ ಶೆಟ್ಟಿ ಐಕಳ, ಮಹಿಳಾ ವಿಭಾಗದ ಕಾರ್ಯದರ್ಶಿ ಮನೋ ರಮಾ ಎನ್‌. ಬಿ. ಶೆಟ್ಟಿ, ಪಶ್ಚಿಮ ಪ್ರಾದೇಶಿಕ ವಲಯಗಳ ಸಮನ್ವಯಕ ಸಂಘದ ಡಾ| ಪ್ರಭಾಕರ್‌ ಶೆಟ್ಟಿ ಬೋಳ ಸಮಯೋಚಿತವಾಗಿ ಮಾತನಾಡಿ ಶುಭಹಾರೈಸಿದರು. ಪ್ರಾದೇಶಿಕ ಸಮಿತಿಯ ಸಂಚಾಲಕ ಡಿ. ಕೆೆ. ಶೆಟ್ಟಿ, ಉಪ ಕಾರ್ಯಾಧ್ಯಕ್ಷ ನ್ಯಾಯವಾದಿ ಆರ್‌. ಜಿ. ಶೆಟ್ಟಿ, ಗೌರವ ಕಾರ್ಯದರ್ಶಿ ರವಿ ಆರ್‌. ಶೆಟ್ಟಿ, ಕೋಶಾಧಿಕಾರಿ ಕರುಣಾಕರ್‌ ವಿ. ಶೆಟ್ಟಿ, ಜತೆ ಕಾರ್ಯದರ್ಶಿ ರಮೇಶ್‌ ಡಿ. ರೈ ಕಯ್ನಾರು, ಜೊತೆ ಕೋಶಾಧಿಕಾರಿ ಪ್ರಸಾದ್‌ ಶೆಟ್ಟಿ, ಪ್ರಾದೇಶಿಕ ಸಮಿತಿಯ ಕೋಶಾಧಿಕಾರಿ ಪ್ರೇಮಾ ಬಿ. ಶೆಟ್ಟಿ, ಮಹಿಳಾ ಜತೆ ಕಾರ್ಯದರ್ಶಿ ಜ್ಯೋತಿ ಆರ್‌. ಜಿ. ಶೆಟ್ಟಿ, ಜತೆ ಕೋಶಾಧಿಕಾರಿ ಉಷಾ ವಿ. ಶೆಟ್ಟಿ, ರತ್ನಾ ಪಿ. ಶೆಟ್ಟಿ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಯಶವಂತ ಶೆಟ್ಟಿ, ಕೃಷ್ಣ ಶೆಟ್ಟಿ, ಜಯರಾಮ ಶೆಟ್ಟಿ, ಸುಜಾತಾ ಗುಣಪಾಲ್ ಶೆಟ್ಟಿ, ಶೋಭಾ ರಮೇಶ್‌ ರೈ, ಶೋಭಾ ಶಂಕರ್‌ ಶೆಟ್ಟಿ ಮತ್ತಿತರ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. ಸದಸ್ಯ-ಸದಸ್ಯೆಯರು ಆಟಿ ತಿಂಗಳ ನೂರಾರು ಬಗೆಯ ತಿಂಡಿ-ತಿನಿಸುಗಳ ಬಗ್ಗೆ ತಿಳಿಸಿದರು. ಪ್ರಾದೇಶಿಕ ಸಮಿತಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವನಿತಾ ವೈ. ನೋಂಡಾ ಸ್ವಾಗತಿಸಿ ಪ್ರಸ್ತಾವನೆಗೈದರು. ಪ್ರಾದೇಶಿಕ ಸಮಿತಿಯ ಮಹಿಳಾ ಉಪ ಕಾರ್ಯಾಧ್ಯಕ್ಷೆ ಡಾ| ಪೂರ್ಣಿಮಾ ಎಸ್‌. ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ವಜ್ರಾ ಕೆ. ಪೂಂಜ ವಂದಿಸಿದರು.

 

ನಾವು ದಿನಂಪ್ರತಿ ಸೇವಿಸುವ ದಿನಸಿ ಸಾಮಾನು, ತಿಂಡಿ ತಿನಿಸುಗಳು, ಹಾಲು, ಹಣ್ಣು-ಹಂಪಲುಗಳಲ್ಲಿ ವ್ಯಾಪಾರಸ್ಥರು ತಮ್ಮ ಲಾಭಕ್ಕಾಗಿ ರಾಸಾಯನಿಕ ವಸ್ತುಗಳನ್ನು ಬೆರೆಸುತ್ತಿದ್ದು, ನಾವು ಇದನ್ನು ತಿಳಿದೋ ತಿಳಿಯದೋ ಸೇವಿಸುತ್ತೇವೆ. ರಾಸಾಯನಿಕ ಮಿಶ್ರಣವಿರುವ ವಸ್ತುಗಳನ್ನು ಸೇವಿಸಿದ ಪರಿಣಾಮವೇ ನಮ್ಮ ಆರೋಗ್ಯ ಹದಗೆಡುತ್ತದೆ. ಶುದ್ಧತೆ, ಆರೋಗ್ಯದಾಯಕ ತಿನಿಸುಗಳ ಬಗ್ಗೆ ವಿದ್ಯಾವಂತ ಸಮಾಜ ಜಾಗೃತರಾಗದಿರುವುದು ವಿಷಾದನೀಯ. ಆದರೆ ಓದು ಬರಹ ತಿಳಿಯದ ಪೂರ್ವಜರು ಭವಿಷ್ಯದ ಆರೋಗ್ಯಕ್ಕಾಗಿ ಕಾಲಾನುಸಾರ ಆಹಾರವನ್ನು ಔಷಧಿಯಾಗಿಯೇ ಬಳಸುತ್ತಿದ್ದ ಕಾರಣ ಶತಾಯುಷ್ಯವನ್ನು ಕಾಯ್ದಿರಿಸಿದ್ದರು. ವರ್ಷದ ಎಲ್ಲಾ ತಿಂಗಳುಗಳಲ್ಲಿ ಕಾಲಾನುಸಾರ ಆಹಾರವನ್ನು ಸೇವಿಸುತ್ತಾ ಬದುಕನ್ನು ನೆಮ್ಮದಿಯಾಗಿರಿಸಿದ್ದಾರೆ. ಆ ಪೈಕಿ ಆಹಾರ ಪದ್ಧತಿಗೆ ಅತೀ ಮಹತ್ವದ ತಿಂಗಳನ್ನು ಆಟಿ ತಿಂಗಳಾಗಿಸಿ ರೋಗ ನಿರೋಧ ಶಕ್ತಿಗಳಿರುವ ಕೆಸುವಿನ ಎಲೆ, ಹಾಳೆೆ ಮರದ ತೊಗಡು, ನುಗ್ಗೆ ಸೊಪ್ಪು, ಮೆತ್ತೆ ಗಂಜಿ ಇತ್ಯಾದಿಗಳನ್ನು ತಿನ್ನುತ್ತಿದ್ದರು. ಇವೆಲ್ಲವೂ ಕಾಯಿಲೆಮುಕ್ತ, ರೋಗನಿವಾರಕ ತಿನಿಸುಗಳಾಗಿದ್ದ ಕಾರಣ ಈ ಬಗ್ಗೆ ನಾವೂ ನಮ್ಮ ಮಕ್ಕಳಲ್ಲಿ ಇದರ ಮಹತ್ವದ ಬಗ್ಗೆ ತಿಳಿಸುವ ಅಗತ್ಯವಿದೆ. – ಡಾ| ಆರ್‌. ಕೆ. ಶೆಟ್ಟಿ, ಕಾರ್ಯಾಧ್ಯಕ್ಷರು, ಬಂಟರ ಸಂಘ ಬಾಂದ್ರಾ ಪ್ರಾದೇಶಿಕ ಸಮಿತಿ
ಚಿತ್ರ-ವರದಿ : ರೊನಿಡಾ ಮುಂಬಯಿ.

ಟಾಪ್ ನ್ಯೂಸ್

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Raj-Thackrey

Election: ರಾಜ್‌ ಠಾಕ್ರೆ ಎಂಎನ್‌ಎಸ್‌ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!

Delhi-School

Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್‌

President-Murmu

Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ

supreme-Court

Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ

Karthi

EVM Issue: ಮತಯಂತ್ರ ತಿರುಚಿದ್ದು ಸಾಬೀತಿಗೆ ನನ್ನ ಬಳಿ ಪುರಾವೆಗಳಿಲ್ಲ: ಕಾರ್ತಿ ಚಿದಂಬರಂ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Raj-Thackrey

Election: ರಾಜ್‌ ಠಾಕ್ರೆ ಎಂಎನ್‌ಎಸ್‌ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!

Delhi-School

Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್‌

President-Murmu

Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ

supreme-Court

Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.