ಸಾವಯವದಲ್ಲಿ ‘ಜಂಬುನೇರಳೆ’ ಸಾಧನೆ

ತೋಟಕಾರಿಕೆ ಬೆಳೆ ಬೆಳೆದಿರುವ ಕೃಷಿಕ ಜಗನ್ನಾಥ್‌ ಸಂತಸ

Team Udayavani, Jul 26, 2019, 10:50 AM IST

cb-tdy-2

ಗೌರಿಬಿದನೂರು ತಾಲೂಕು ಮಂಚೇನಹಳ್ಳಿ ಹೋಬಳಿಯ ಆರ್ಕುಂದ ಗ್ರಾಮದ ಶಿಕ್ಷಕ ಹಾಗೂ ಕೃಷಿಕ ಜಗನ್ನಾಥ್‌ ಯಶಸ್ವಿಯಾಗಿ ಬೆಳೆದಿರುವ ಜಂಬುನೇರಳೆ ಬೆಳೆ.

ಗೌರಿಬಿದನೂರು: ಗುರಿ ಸಾಧಿಸಬೇಕೆಂಬುವವರಿಗೆ ಛಲದೊಂದಿಗೆ ಕಾಯಕದ ಇಚ್ಚಾಶಕ್ತಿ ಇದ್ದರೆ ಏನನ್ನು ಬೇಕಾದರೂ ಮಾಡಬಹುದು ಎಂಬ ಸಿದ್ಧಾಂತದೊಂದಿಗೆ ನಿತ್ಯದ ವೃತ್ತಿ ಬದುಕಿನ ಜೊತೆಯಲ್ಲಿ ಕೃಷಿಯ ಬಗ್ಗೆ ಆಸಕ್ತಿ ಬೆಳೆಸಿಕೊಂಡು ಸಾವಯವ ಪದ್ಧತಿಯಲ್ಲಿಯೇ ಭರ್ಜರಿಯಾದ ‘ಜಂಬು ನೇರಳೆ’ ಹಣ್ಣನ್ನು ಬೆಳೆದಿರುವ ಸಾಧನೆೆ ಜಗನ್ನಾಥ್‌ ರವರದ್ದು.

ತಾಲೂಕಿನ ಮಂಚೇನಹಳ್ಳಿ ಹೋಬಳಿಯ ಆರ್ಕುಂದ ಗ್ರಾಮದ ಈ ಯುವಕ ವೃತ್ತಿಯಲ್ಲಿ ಶಿಕ್ಷಕರಾಗಿದ್ದರೂ ಕೂಡ ಬೇಸಾಯ ಮತ್ತು ಪರಿಸರ ಸಂರಕ್ಷಣೆಯಲ್ಲಿ ಅಪಾರವಾದ ಆಸಕ್ತಿಯನ್ನು ಬೆಳೆಸಿಕೊಂಡಿದ್ದಾರೆ. ಮೂಲತಃ ರೈತ ಕುಟುಂಬದಿಂದ ಬೆಳೆದು ಬಂದು ಸ್ನಾತಕೋತ್ತರ ಪದವೀಧರರಾಗಿರುವ ಇವರು ನಿತ್ಯ ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಶಿಕ್ಷಣದ ದಾಹವನ್ನು ನೀಗಿಸುವ ಪ್ರಯತ್ನ ಮಾಡುತ್ತಿದ್ದು, ಇದರೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರಕವಾದ ತರಬೇತಿಯನ್ನು ನೀಡುವಲ್ಲಿ ಯಶಸ್ವಿಯಾಗಿದ್ದಾರೆ.

ಇವೆಲ್ಲದರ ಜೊತೆಯಲ್ಲಿ ನಿತ್ಯದ ಬದುಕಿನಲ್ಲಿ ಕೃಷಿ ಚಟುವಟಿಕೆಗಳನ್ನು ಆಸಕ್ತಿ ಮತ್ತು ಸ್ಫೂರ್ತಿದಾಯಕವಾಗಿ ಮಾಡಬಲ್ಲ ಚಾಣಾಕ್ಷ ್ಯತನವನ್ನು ಹೊಂದಿರುವ ಇವರು ಕಳೆದ ನಾಲ್ಕೆ ೖದು ವರ್ಷಗಳ ಹಿಂದಿನಿಂದಲೂ ತನ್ನ ಜಮೀನಿನಲ್ಲಿ ಬೆಳೆಯುತ್ತಿದ್ದ ಬೆಳೆಗಳ ಜೊತೆಯಲ್ಲಿ ಇನ್ನಿತರ ಮಿಶ್ರ ಬೆಳೆಗಳನ್ನು ಬೆಳೆದರೆ ಆರ್ಥಿಕವಾಗಿ ಸಹಕಾರಿಯಾಗಬಲ್ಲದು ಮತ್ತು ಕೃಷಿ ಚಟುವಟಿಕೆಗಳಿಗೆ ಆಸರೆಯಾಗಬಹುದು ಎಂಬುದನ್ನು ಅರಿತು ಕೃಷಿ ಮತ್ತು ತೋಟಗಾರಿಕಾ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಉತ್ತಮ ತಳಿಯಾದ ‘ದೂಪ್‌ ದಾಲ್’ ಹೆಸರಿನ ಜಂಬು ನೇರಳೆ ಗಿಡಗಳನ್ನು ತಂದು ತನ್ನ ಕೃಷಿ ಭೂಮಿಯ ಬದುಗಳಲ್ಲಿ ನಾಟಿ ಮಾಡಿ ಸಾವಯವ ಗೊಬ್ಬರ ಮತ್ತು ಮಿತವಾದ ನೀರನ್ನು ನೀಡುತ್ತಾ ಬೆಳೆಸಿಕೊಂಡು ಬಂದಿದ್ದಾರೆ.

ಕೃಷಿ ಭೂಮಿಯ ಬದುಗಳಲ್ಲಿ ನೆಟ್ಟಿರುವ ನೇರಳೆ ಗಿಡಗಳು ಇಂದು ಬೆಳೆದು ಮರಗಳಾಗಿವೆ. ಕೃಷಿ ಭೂಮಿಯಲ್ಲಿನ ಮಣ್ಣಿನ ಫ‌ಲವತ್ತತೆಯು ಮಳೆ ನೀರಿಗೆ ಕೊಚ್ಚಿ ಹೋಗದಂತೆ ಸಂರಕ್ಷಣೆ ಮಾಡುತ್ತಿದ್ದು, ಮತ್ತೂಂದೆಡೆ ಉತ್ತಮ ಪರಿಸರವನ್ನು ನಿರ್ಮಾಣ ಮಾಡಲು ಸಹಕಾರಿಯಾಗಿದೆ.

ನೇರಳೆ ಹಣ್ಣಿಗೆ ಬಂಗಾರದ ಬೆಲೆ; ಜಂಬು ನೇರಳೆ ಹಣ್ಣುಗಳು ಮಧುಮೇಹ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಸಂಜೀವಿನಿ ಇದ್ದ ಹಾಗೆ. ಅಲ್ಲದೆ ಇತರ ಸಾಕಷ್ಟು ಕಾಯಿಲೆಗಳಿಗೂ ಇದು ಸೂಕ್ತ ಮದ್ದಾಗಿದೆ. ಆದ್ದರಿಂದ ಋತು ಆರಂಭದಿಂದ ಅಂತ್ಯದವರೆಗೂ ಇದರ ಬೆಲೆ ಬಂಗಾರದಂತಿರುತ್ತದೆ. ಇದನ್ನು ಬೆಳೆದಂತಹ ರೈತರು ಮುಂಗಾರಿನ ಆರಂಭದಲ್ಲಿ ಆರ್ಥಿಕವಾಗಿ ಸಬಲರಾಗುತ್ತಾರೆ ಎಂಬುದು ವ್ಯಾಪಾರಸ್ಥರ ಲೆಕ್ಕಾಚಾರ.

ನಗರದಲ್ಲಿ ಜೋರು ವ್ಯಾಪಾರ; ಮುಂಗಾರು ಆರಂಭದ ಮೇ ಕೊನೆಯವಾರದಿಂದ ಹಿಡಿದು ಜುಲೈ ತಿಂಗಳು ಮುಗಿಯುವವ ರೆವಿಗೂ ಈ ನೇರಳೆ ಹಣ್ಣುಗಳು ಮರದಲ್ಲಿ ಮತ್ತು ಮಾರುಕಟ್ಟೆಯಲ್ಲಿ ಸಿಗುತ್ತವೆ. ವ್ಯಾಪಾರಸ್ಥರು ಗ್ರಾಮೀಣ ಭಾಗದಲ್ಲಿರುವ ಈ ಹಣ್ಣನ್ನು ಮರದ ರೂಪದಲ್ಲಿ ಕೊಂಡು ನಂತರ ಅವುಗಳನ್ನು ಜೋಪಾನವಾಗಿ ಬಿಡಿಸಿಕೊಂಡು ಬಂದು ನಗರದ ಜನನಿಬಿಡ ಪ್ರದೇಶದಲ್ಲಿ ಮಾರಾಟ ಮಾಡಲು ಮುಂದಾಗುತ್ತಾರೆ. ಆರಂಭದ ದಿನಗಳಲ್ಲಿ ಕೆ.ಜಿ ಜಂಬುನೇರಳೆ ಹಣ್ಣಿನ ಬೆಲೆ 180 ರಿಂದ 400 ರೂಗಳು ನಂತರದ ದಿನಗಳಲ್ಲಿ 140 ರಿಂದ 160 ರೂಗಳಿಗೆ ಇಳಿಮುಖವಾಗುತ್ತದೆ. ಆದರೂ ಇದರ ಬೇಡಿಕೆ ಮಾತ್ರ ಹೆಚ್ಚಾಗಿರುತ್ತದೆ.

ಜಂಬು ನೇರಳೆ ಗಿಡಗಳನ್ನು ಬೆಳೆಸಿ; ಸರ್ಕಾರ ಹಾಗೂ ಸಂಘಸಂಸ್ಥೆಗಳು ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಪ್ರದೇಶ, ಶಾಲಾ ಕಾಲೇಜುಗಳ ಆವರಣ, ರಸ್ತೆ ಬದಿಗಳಲ್ಲಿ ಹಾಗೂ ಇನ್ನಿತರ ಕಡೆಗಳಲ್ಲಿ ಹೆಚ್ಚಿನ ಗಿಡಗಳನ್ನು ನೆಟ್ಟು ಪೋಷಿಸುವಂತೆ ಪ್ರತೀ ಗ್ರಾಪಂ ಮಟ್ಟದಲ್ಲಿ ತಿಳಿಸಿದೆ. ಇದರ ಸಲುವಾಗಿ ಅಧಿಕಾರಿಗಳು ಮತ್ತು ಸ್ವಯಂಸೇವಕರು ಹೆಚ್ಚಿನ ಜಂಬು ನೇರಳೆ ಹಣ್ಣಿನ ಗಿಡಗಳನ್ನು ನೆಟ್ಟು ಪೋಷಿಸಿದಲ್ಲಿ ಮುಂದಿನ ನಾಲ್ಕೆ ೖದು ವರ್ಷಗಳಲ್ಲಿ ಉತ್ತಮ ಫ‌ಸಲನ್ನು ಕಾಣುವುದಲ್ಲದೆ ಸಾಕಷ್ಟು ನೇರಳೆ ಹಣ್ಣುಗಳನ್ನು ಸ್ಥಳೀಯ ಸಮುದಾಯದಲ್ಲೆ ಪಡೆಯಬಹುದಾಗಿದೆ. ಅಲ್ಲದೆ ಸುತ್ತಲಿನ ಪರಿಸರವನ್ನು ಸಂರಕ್ಷಣೆ ಮಾಡಲು ಇದು ಸಹಕಾರಿಯಾಗುತ್ತದೆ ಎನ್ನುತ್ತಾರೆ ಜಗನ್ನಾಥ್‌. ಇದರ ಬಗ್ಗೆ ಹೆಚ್ವಿನ ಮಾಹಿತಿ ಪಡೆಯಲು 9986291418 ಸಂಪರ್ಕಿಸಬಹುದಾಗಿದೆ.

ಟಾಪ್ ನ್ಯೂಸ್

Sahakara-saptha

Cooperation: ನಬಾರ್ಡ್‌ ನೆರವು ಕಡಿತದಿಂದ ರಾಜ್ಯದ ರೈತರಿಗೆ ದೊಡ್ಡ ಅನ್ಯಾಯ: ಸಿದ್ದರಾಮಯ್ಯ

navaneth-Rana

Maharashtra: ಬಿಜೆಪಿ ನಾಯಕಿ ನವನೀತ್‌ ರಾಣಾ, ಬೆಂಬಲಿಗರ ಮೇಲೆ ಹಲ್ಲೆ, ಎಫ್‌ಐಆರ್‌ ದಾಖಲು

400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್‌ ನೀಡಿದ ಬೋಯಿಂಗ್‌

Boeing: 400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್‌ ನೀಡಿದ ಬೋಯಿಂಗ್‌

Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು

Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು

1-erqrer

Kanguva ಕುರಿತು ಭಾರೀ ನೆಗೆಟಿವ್ ವಿಮರ್ಶೆ: ನಟ ಸೂರ್ಯ ಪತ್ನಿ ಜ್ಯೋತಿಕಾ ಆಕ್ರೋಶ

ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್‌ ನೋಟಿಸ್‌

Madhya Pradesh: ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್‌ ನೋಟಿಸ್‌

1-reee

Congress ಜೂಟ್ ಮತ್ತು ಲೂಟ್ ರಾಜಕೀಯದಲ್ಲಿ ತೊಡಗಿದೆ: ರಾಜಸ್ಥಾನ ಸಿಎಂ ಭಜನ್ ಲಾಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್

Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್

Chikkaballapur: ಪರಿಹಾರ ಕೊಡದ ಎಸಿ ಕಚೇರಿ ಸಂತ್ರಸ್ತರಿಂದ ಜಪ್ತಿ!

Chikkaballapur: ಪರಿಹಾರ ಕೊಡದ ಎಸಿ ಕಚೇರಿ ಸಂತ್ರಸ್ತರಿಂದ ಜಪ್ತಿ!

ಸಂಸದ ಡಾ. ಸುಧಾಕರ್‌ ವಿರುದ್ಧ ಏನೂ ಮಾತನಾಡಲ್ಲ: ಪ್ರದೀಪ್‌

MP ಡಾ. ಸುಧಾಕರ್‌ ವಿರುದ್ಧ ಏನೂ ಮಾತನಾಡಲ್ಲ: ಪ್ರದೀಪ್‌

13-bng

Crime: ಸತ್ತಂತೆ ನಟಿಸಿ ಗುಂಡಿಯಿಂದ ಬದುಕಿ ಬಂದ ಬೆಂಗಳೂರಿನ ಯೋಗ ಶಿಕ್ಷಕಿ!

ಹಳ್ಳಕ್ಕೆ ಬಿದ್ದು ಓಮ್ನಿ ಕಾರು ಸ್ಫೋಟ: ಒಬ್ಬ ಮೃತ

Chintamani: ಹಳ್ಳಕ್ಕೆ ಬಿದ್ದು ಓಮ್ನಿ ಕಾರು ಸ್ಫೋಟ; ಒಬ್ಬ ಮೃತ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

2

Udupi: ಯುವತಿ ನಾಪತ್ತೆ; ದೂರು ದಾಖಲು

Sahakara-saptha

Cooperation: ನಬಾರ್ಡ್‌ ನೆರವು ಕಡಿತದಿಂದ ರಾಜ್ಯದ ರೈತರಿಗೆ ದೊಡ್ಡ ಅನ್ಯಾಯ: ಸಿದ್ದರಾಮಯ್ಯ

Devadurga

Karkala: ಅಕ್ರಮ ಮದ್ಯ ದಾಸ್ತಾನು; ಆರೋಪಿ ಸೆರೆ

Brahmavar

Malpe: ಅಸ್ವಾಭಾವಿಕ ಸಾವು; ಪ್ರಕರಣ ದಾಖಲು

WhatsApp Image 2024-11-17 at 21.09.50

Chennai: ನಟಿ ಕಸ್ತೂರಿ ಶಂಕರ್‌ಗೆ ನ.29ರ ವರೆಗೆ ನ್ಯಾಯಾಂಗ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.