ವೈದ್ಯರು ರೋಗಿಗಳೊಂದಿಗೆ ಸ್ನೇಹದಿಂದ ವರ್ತಿಸಲಿ
ಜಿಲ್ಲಾ ಪಂಚಾಯಿತಿ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಜಸಂತಾ ಅನಿಲ್ಕುಮಾರ್ ಸಲಹೆ
Team Udayavani, Jul 26, 2019, 3:49 PM IST
ಮೂಡಿಗೆರೆ: ಎಂಜಿಎಂ ಆಸ್ಪತ್ರೆಗೆ ಭೇಟಿ ನೀಡಿದ ಜಿಪಂ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಜಸಂತಾ ಅನಿಲ್ಕುಮಾರ್ ವಿವಿಧ ವಾರ್ಡ್‌ಗಳನ್ನು ಪರಿಶೀಲಿಸಿದರು.
ಮೂಡಿಗೆರೆ: ರೋಗಿಗಳು ಮತ್ತು ಸಾರ್ವಜನಿಕ ರೊಂದಿಗೆ ವೈದ್ಯರು ಸ್ನೇಹದಿಂದ ವ್ಯವಹರಿಸಿದರೆ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದೆಂದು ಜಿಪಂ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಜಸಂತಾ ಅನಿಲ್ಕುಮಾರ್ ತಿಳಿಸಿದರು.
ಪಟ್ಟಣದ ಎಂಜಿಎಂ ಆಸ್ಪತ್ರೆಗೆ ಗುರುವಾರ ಭೇಟಿ ನೀಡಿದ ಅವರು, ಆಸ್ಪತ್ರೆಯ ವಿವಿಧ ವಿಭಾಗಗಳು ಮತ್ತು ವಾರ್ಡ್‌ಗಳನ್ನು ಪರಿಶೀಲಿಸಿ ನಂತರ ಆಸ್ಪತ್ರೆಯ ಕುಂದುಕೊರತೆ ಸಭೆಯಲ್ಲಿ ಮಾತನಾಡಿದರು.
ಬಹುತೇಕ ಸರಕಾರಿ ಆಸ್ಪತ್ರೆಗೆ ತೆರಳಿ ಅಲ್ಲಿನ ಸಮಸ್ಯೆಗಳನ್ನು ಸರಿಪಡಿಸುವ ಕೆಲಸ ಮಾಡಲಾಗುತ್ತಿದೆ. ಇಲ್ಲಿನ ಕಟ್ಟಡ ಮತ್ತು ಸ್ವಚ್ಛತೆ ಉತ್ತಮವಾಗಿದೆ. ಸರಕಾರದಿಂದ ಆಧುನಿಕ ಯಂತ್ರೋಪಕರಣಗಳು ಸರಬರಾಜಾಗಿದ್ದು, ಅವು ಗಳನ್ನು ರೋಗಿಗಳ ಸುರಕ್ಷಿತತೆಗೆ ಬಳಸಿಕೊಳ್ಳಬೇಕು. ರೋಗಿಗಳಿಗೆ 104 ಉಚಿತ ಸಹಾಯವಾಣಿ ಇದೆ. ಅಲ್ಲದೇ, ಆಯುರ್ವೇದ ವಿಭಾಗ, ಆಯುಷ್ಮಾನ್ ಯೋಜನೆ, ಜನರಿಕ್ ಔಷಧಿಗಳ ಉಪಯೋಗ ಪಡೆದುಕೊಳ್ಳಬೇಕು. ಇಲ್ಲಿನ ತುರ್ತು ನಿಗಾ ಘಟಕ ಕೂಡ ಉತ್ತಮವಾಗಿದೆ. ಡೆಂಘೀ, ಮಲೇರಿಯಾ ಮುಂತಾದ ಕಾಯಿಲೆಗಳು ಸಾರ್ವಜನಿಕರಿಗೆ ಅತೀ ಹೆಚ್ಚು ಬಾದಿಸುತ್ತಿದ್ದು, ಈ ಬಗ್ಗೆ ಮುಂಜಾಗ್ರತೆ ಮತ್ತು ಹತೋಟಿಗೆ ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಜಿಪಂ ಸದಸ್ಯೆ ಸುಧಾ ಯೋಗೇಶ್ ಮಾತನಾಡಿ, ವೈದ್ಯರು ಮತ್ತು ಸಿಬ್ಬಂದಿಗೆ ಸಮಸ್ಯೆಗಳ ಪರಿಹಾರವೇ ಕಾಯಕವಾಗಿರಬೇಕು. ಎಲ್ಲಾ ರೋಗಗಳಿಗೂ ಇಲ್ಲಿಯೇ ಚಿಕಿತ್ಸೆ ನೀಡಲು ಸಹಕರಿಸಬೇಕೆಂದು ಸೂಚಿಸಿದರು.
ಜಿಪಂ ಸದಸ್ಯೆ ಅಮಿತಾ ಮುತ್ತಪ್ಪ ಮಾತನಾಡಿ, ಗೋಣಿಬೀಡು ಆಸ್ಪತ್ರೆಯಲ್ಲಿ ವೈದ್ಯರ ಕೊರತೆಯಿದ್ದು, ದಿನದ 24 ಗಂಟೆಯೂ ಕಾರ್ಯ ನಿರ್ವಹಿಸುವಂತೆ ಕ್ರಮ ಕೈಗೊಳ್ಳಬೇಕು. ಅಲ್ಲದೇ, ಆಶಾ ಕಾರ್ಯಕರ್ತೆಯರು ಮತ್ತು ಗ್ರಾಮೀಣ ದಾದಿಯರು ಸರಕಾರದ ಯೋಜನೆಗಳನ್ನು ಮನೆ ಮನೆಗೆ ತಿಳಿಸಿ, ಸರ್ವರಿಗೂ ತಲುಪಿಸುವಂತಹ ಕೆಲಸ ಮಾಡಬೇಕೆಂದು ಸೂಚಿಸಿದರು.
ತಾಲೂಕು ವೈದ್ಯಾಧಿಕಾರಿ ಡಾ.ಸುಂದರೇಶ್, ಎಂಜಿಎಂ ವೈದ್ಯಾಧಿಕಾರಿ ಅಶ್ವತ್ಥಬಾಬು, ವೈದ್ಯರಾದ ಮುದುಸೂಧನ್, ಸಂತೋಷ್, ಪ್ರೀತಿ, ರಾಜೀವ್, ಇಕ್ಲಾಸ್ ಅಹಮ್ಮದ್, ನಿರ್ಮಲ, ಶ್ರೀಕಾಂತ್, ನವೀನ್, ಎಂಜಿಎಂ ಆಸ್ಪತ್ರೆಯ ಮಂಜುಳಾ, ಸಿಬ್ಬಂದಿ ಸೇರಿದಂತೆ ಯೋಗೇಶ್, ಮುತ್ತಪ್ಪ, ನಯನ ತಳವಾರ, ಸಂಜಯ್ ಕೊಟ್ಟಿಗೆಹಾರ ಮತ್ತಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…
Chikkamagaluru: ಕೇರಳದಿಂದ “ಸುರಕ್ಷಿತ’ ಮಲೆನಾಡಿನತ್ತ “ನಕ್ಸಲರು’?
Naxalite: ಮಲೆನಾಡಿಗೆ ನಕ್ಸಲರ ಭೇಟಿ ದೃಢ; 3 ಬಂದೂಕು-ಮದ್ದುಗುಂಡು ವಶ
ಚಿಕಿತ್ಸೆಗೆಂದು ಬಂದಿದ್ದ ರೋಗಿ ಸಾವು; ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರ ಆರೋಪ
Chikkamagaluru: ಮನೆಯೊಂದರಲ್ಲಿ ಬಂದೂಕು ಪತ್ತೆ; ನಕ್ಸಲ್ ಓಡಾಟ ಶಂಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.