ಸುಸಜ್ಜಿತ ಮಾರುಕಟ್ಟೆ ನಿರ್ಮಿಸಿದ್ರೂ ವ್ಯಾಪಾರಿಗಳು ಬರಲ್ಲ

ಫ‌ುಟ್ಪಾತ್‌ನಲ್ಲೇ ವ್ಯಾಪಾರ ವಹಿವಾಟು ನಡೆಸುತ್ತಿರುವ ಹೂ, ಹಣ್ಣು ವ್ಯಾಪಾರಿಗಳು

Team Udayavani, Jul 27, 2019, 10:01 AM IST

kolar-tdy–1

ಮುಳಬಾಗಿಲು ನಗರದ ಬಸ್‌ ನಿಲ್ದಾಣದ ಸಮೀಪ ನಗರಸಭೆಯಿಂದ ಲಕ್ಷಾಂತರ ರೂ. ಖರ್ಚು ಮಾಡಿ ನಿರ್ಮಿಸಿರುವ ಹೂವು ಮತ್ತು ಹಣ್ಣು ಮಾರುಕಟ್ಟೆ.

ಮುಳಬಾಗಿಲು: ನಗರದ ಪ್ರಮುಖ ರಸ್ತೆಯ ಫ‌ುಟ್ಪಾತ್‌ನಲ್ಲಿ ಹೂ ಮತ್ತು ಹಣ್ಣು ವ್ಯಾಪಾರ ಮಾಡುತ್ತಿರುವುದರಿಂದ ವಾಹನ ಸಂಚಾರಕ್ಕೆ ತೊಂದರೆ ಆಗುತ್ತಿದೆ. ಇದನ್ನು ತಪ್ಪಿಸಲು ನಗರಸಭೆಯು ಲಕ್ಷಾಂತರ ರೂ. ವೆಚ್ಚ ಮಾಡಿ ಮಾರುಕಟ್ಟೆ ನಿರ್ಮಿಸಿದ್ದರೂ ಯಾರು ಅಲ್ಲಿಗೆ ಹೋಗುತ್ತಿಲ್ಲ. ಇದರಿಂದ ಮಳಿಗೆಗಳು ಮಲ ಮೂತ್ರ ವಿಸರ್ಜನೆ ತಾಣಗಳಾಗಿವೆ.

2007-08ರಲ್ಲಿ ಅಂದಿನ ಪೌರಾಡಳಿತ ಸಚಿವ ಆಲಂಗೂರ್‌ ಶ್ರೀನಿವಾಸ್‌ ಕ್ಷೇತ್ರಾಭಿವೃದ್ಧಿ ಅನುದಾನ ದಲ್ಲಿ ಬಸ್‌ ನಿಲ್ದಾಣದಂಚಿನಲ್ಲಿ ನಗರಸಭೆಯು 10 ಲಕ್ಷ ರೂ.ನಲ್ಲಿ ಹೂವು ಮತ್ತು ಹಣ್ಣು ಮಾರುಕಟ್ಟೆ ಸ್ಥಾಪಿಸಿದೆ. ಒಟ್ಟು 250 ವ್ಯಾಪಾರಿಗಳಿಗೆ ಮಳಿಗೆಗಳನ್ನು ಗೊತ್ತು ಮಾಡಿ, 2500 ರೂ. ಠೇವಣಿ, ಮಾಸಿಕ ಬಾಡಿಗೆ 260 ರೂ. ನಿಗದಿ ಪಡಿಸಿ, ವ್ಯಾಪಾರಕ್ಕೆ ಚಾಲನೆ ನೀಡಲಾಗಿತ್ತು.

ಆದಾಯಕ್ಕೆ ಹೊಡೆತ: ಪ್ರಾರಂಭದ ದಿನಗಳಲ್ಲಿ ಭರ್ಜರಿ ವ್ಯಾಪಾರ ವಹಿವಾಟುಗಳು ನಡೆಯುತ್ತಿತ್ತು. ಈ ಸಮಯದಲ್ಲಿ ಪ್ರಮುಖ ರಸ್ತೆಗಳಲ್ಲಿರುವ ಅಂಗಡಿ ವರ್ತಕರು ಹಲವು ವರ್ಷಗಳಿಂದ ತಮ್ಮ ಅಂಗಡಿ ಮುಂಭಾಗದಲ್ಲಿ ವ್ಯಾಪಾರ ಮಾಡಲು ಹೂವು ಮತ್ತು ಹಣ್ಣು ಮಾರಾಟಗಾರರಿಗೆ ಸ್ಥಳ ನೀಡಿ, ದಿನವೊಂದಕ್ಕೆ 100-150 ರೂ.ನಂತೆ ಶುಲ್ಕ ಪಡೆಯು ತ್ತಿದ್ದರು.ನಗರಸಭೆ ಮಾರುಕಟ್ಟೆ ಸ್ಥಾಪಿಸಿದ್ದರಿಂದ ಆದಾಯಕ್ಕೆ ಹೊಡೆತ ಬಿದ್ದಿತ್ತು.

ಸರ್ಕಾರಕ್ಕೆ ನಷ್ಟ: ಬಜಾರು ರಸ್ತೆ, ಎಂ.ಸಿ.ರಸ್ತೆ ವರ್ತಕರಿಗೆ ಫ‌ುಟ್ಪಾತ್‌ ವ್ಯಾಪಾರಿಗಳಿಂದ ತಿಂಗಳಿಗೆ 3 ರಿಂದ 4 ಸಾವಿರ ರೂ. ಆದಾಯ ಬರುತ್ತಿತ್ತು. ಇದಕ್ಕೆ ಕತ್ತರಿ ಬಿದ್ದಿದ್ದರಿಂದ ಮುಖ್ಯರಸ್ತೆಗಳೇ ವ್ಯಾಪಾರಕ್ಕೆ ಸೂಕ್ತ ಎಂದು ಹೂ ಹಣ್ಣು ಮಾರಾಟಗಾರನ್ನು ಮರಳು ಮಾಡಿ ಅಲ್ಲಿಂದ ಖಾಲಿ ಮಾಡುವಂತೆ ಮಾಡಿದರು.

ಮಾರುಕಟ್ಟೆ ನಿರ್ಮಾಣ ಮಾಡಿ ಹಲವು ವರ್ಷ ಕಳೆದರೂ ಮಳಿಗೆ ಬಾಡಿಗೆ ಪಡೆದಿರುವ ಮಾರಾಟಗಾರರು, ಇತ್ತ ಸುಳಿದಿಲ್ಲ.ಇದರಿಂದ ಸರ್ಕಾರಕ್ಕೆ ಲಕ್ಷಾಂತರ ರೂ. ನಷ್ಟವಾಗಿದೆ. ಈ ವಿಚಾರದ ಬಗ್ಗೆ ಹೂ ಮತ್ತು ಹಣ್ಣು ಮಾರಾಟಗಾರರ ಸಂಘ ಹಲವು ಬಾರಿ ತಿಳಿಸಲಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಳಲು ತೋಡಿಕೊಂಡಿದೆ.

ಮಾರುಕಟ್ಟೆಯಲ್ಲಿ ಅಂಗಡಿ ದುರಸ್ತಿಗೊಳಿಸಿ ಶೀಘ್ರದಲ್ಲಿಯೇ ಹರಾಜು ಹಾಕಲಾಗುವುದು ಎಂದು ನಗರಸಭೆ ಪೌರಾಯುಕ್ತ ಶ್ರೀನಿವಾಸ್‌ ಹೇಳಿದರು.

● ಎಂ.ನಾಗರಾಜಯ್ಯ

ಟಾಪ್ ನ್ಯೂಸ್

Rave Party: ನಟಿ ಹೇಮಾ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್‌ ತಡೆ

Rave Party: ನಟಿ ಹೇಮಾ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್‌ ತಡೆ

ಹೊಸ ವರ್ಷಾಚರಣೆ ಹಿನ್ನೆಲೆ: ದೇಗುಲಗಳಲ್ಲಿ ಭಕ್ತಸಾಗರ

ಹೊಸ ವರ್ಷಾಚರಣೆ ಹಿನ್ನೆಲೆ: ದೇಗುಲಗಳಲ್ಲಿ ಭಕ್ತಸಾಗರ

Congress: ಪ್ರಿಯಾಂಕ್‌ ಖರ್ಗೆ ರಾಜೀನಾಮೆಗೆ ಮುಂದುವರಿದ ಒತ್ತಡ

Congress: ಪ್ರಿಯಾಂಕ್‌ ಖರ್ಗೆ ರಾಜೀನಾಮೆಗೆ ಮುಂದುವರಿದ ಒತ್ತಡ

Priyank Kharge ರಾಜೀನಾಮೆ ಕೇಳುವುದಕ್ಕೆ ಸಿಎಂಗೆ ಧೈರ್ಯವಿಲ್ಲ: ಛಲವಾದಿ ವ್ಯಂಗ್ಯ

Priyank Kharge ರಾಜೀನಾಮೆ ಕೇಳುವುದಕ್ಕೆ ಸಿಎಂಗೆ ಧೈರ್ಯವಿಲ್ಲ: ಛಲವಾದಿ ವ್ಯಂಗ್ಯ

Karnataka: “ಆರೋಗ್ಯ ಸಂಜೀವಿನಿ’ ತ್ವರಿತ ಅನುಷ್ಠಾನಕ್ಕೆ ಸಿಎಸ್‌ಗೆ ಮನವಿ

Karnataka: “ಆರೋಗ್ಯ ಸಂಜೀವಿನಿ’ ತ್ವರಿತ ಅನುಷ್ಠಾನಕ್ಕೆ ಸಿಎಸ್‌ಗೆ ಮನವಿ

CM Siddaramaiah: ರಾಜ್ಯ ಸಂಪುಟ ವಿಸ್ತರಣೆ ಬಗ್ಗೆ ವರಿಷ್ಠರೊಂದಿಗೆ ಚರ್ಚೆ

CM Siddaramaiah: ರಾಜ್ಯ ಸಂಪುಟ ವಿಸ್ತರಣೆ ಬಗ್ಗೆ ವರಿಷ್ಠರೊಂದಿಗೆ ಚರ್ಚೆ

Karnataka ಪಠ್ಯಪುಸ್ತಕ ಬೇಡಿಕೆ: ಜ.10ರೊಳಗೆ ದೃಢೀಕರಣ ರಾಜ್ಯಹಂತಕ್ಕೆ ಕಳುಹಿಸಿ

Karnataka ಪಠ್ಯಪುಸ್ತಕ ಬೇಡಿಕೆ: ಜ.10ರೊಳಗೆ ದೃಢೀಕರಣ ರಾಜ್ಯಹಂತಕ್ಕೆ ಕಳುಹಿಸಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bannana-Leaf

Kolara: ಏಲಕ್ಕಿ ಬಾಳೆಕಾಯಿ ಬೆಲೆ ಕುಸಿತ: 3 ಎಕರೆ ಬೆಳೆ ಕಡಿದು ಹಾಕಿದ ರೈತ

Mulabagil

Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!

Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು

Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು

Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು

Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು

Rain-1

Cyclone Fengal: ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಶಾಲೆ, ಕಾಲೇಜಿಗೆ ಡಿ.2ರಂದು ರಜೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Rave Party: ನಟಿ ಹೇಮಾ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್‌ ತಡೆ

Rave Party: ನಟಿ ಹೇಮಾ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್‌ ತಡೆ

ಹೊಸ ವರ್ಷಾಚರಣೆ ಹಿನ್ನೆಲೆ: ದೇಗುಲಗಳಲ್ಲಿ ಭಕ್ತಸಾಗರ

ಹೊಸ ವರ್ಷಾಚರಣೆ ಹಿನ್ನೆಲೆ: ದೇಗುಲಗಳಲ್ಲಿ ಭಕ್ತಸಾಗರ

Congress: ಪ್ರಿಯಾಂಕ್‌ ಖರ್ಗೆ ರಾಜೀನಾಮೆಗೆ ಮುಂದುವರಿದ ಒತ್ತಡ

Congress: ಪ್ರಿಯಾಂಕ್‌ ಖರ್ಗೆ ರಾಜೀನಾಮೆಗೆ ಮುಂದುವರಿದ ಒತ್ತಡ

Priyank Kharge ರಾಜೀನಾಮೆ ಕೇಳುವುದಕ್ಕೆ ಸಿಎಂಗೆ ಧೈರ್ಯವಿಲ್ಲ: ಛಲವಾದಿ ವ್ಯಂಗ್ಯ

Priyank Kharge ರಾಜೀನಾಮೆ ಕೇಳುವುದಕ್ಕೆ ಸಿಎಂಗೆ ಧೈರ್ಯವಿಲ್ಲ: ಛಲವಾದಿ ವ್ಯಂಗ್ಯ

Karnataka: “ಆರೋಗ್ಯ ಸಂಜೀವಿನಿ’ ತ್ವರಿತ ಅನುಷ್ಠಾನಕ್ಕೆ ಸಿಎಸ್‌ಗೆ ಮನವಿ

Karnataka: “ಆರೋಗ್ಯ ಸಂಜೀವಿನಿ’ ತ್ವರಿತ ಅನುಷ್ಠಾನಕ್ಕೆ ಸಿಎಸ್‌ಗೆ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.