ಗಟ್ಟಿಗಿತ್ತಿಯ ರೋಚಕ ಪುರಾಣ


Team Udayavani, Jul 27, 2019, 12:42 PM IST

Mahira

ಆಕೆ ಮಾಯಾನಾ ಅಥವಾ ದೇವಕಿನಾ, ಕೆಫೆ ನಡೆಸುತ್ತಿರುವ ಆಕೆ ಅಂಡರ್‌ ಕವರ್‌ ಏಜೆಂಟಾ, ಹಾಗಾದರೆ ಆಕೆ ಹಿನ್ನೆಲೆಯೇನು? – ನಾಲ್ಕು ವರ್ಷಗಳಿಂದ ಬೀಚ್‌ನಲ್ಲಿ ಆಕೆ ನಡೆಸುತ್ತಿರುವ ಕೆಫೆಯನ್ನು ಧ್ವಂಸ ಮಾಡಲು ಬಂದ ಗ್ಯಾಂಗ್‌ ಅನ್ನು ಆಕೆ ಶೂಟೌಟ್‌ ಮಾಡುವವರೆಗೆ ಆಕೆಯ
ಬ್ಯಾಕ್‌ಗ್ರೌಂಡ್‌ ಏನೆಂದು ಯಾರಿಗೂ ಗೊತ್ತಿರುವುದಿಲ್ಲ. ಅಷ್ಟು ದಿನ “ಮಾಯಾ, ಮಾಯಾ’ ಎಂದು ಪ್ರೀತಿಯಿಂದ ಕರೆಯುತ್ತಿದ್ದ ಮಗಳು ಕೂಡಾ ಶಾಕ್‌ಗೆ ಒಳಗಾಗುತ್ತಾಳೆ. ತನ್ನ ತಾಯಿಯ ಹಿಂದೆ ದೊಡ್ಡದೊಂದು ಕಥೆ ಇದೆ ಮತ್ತು ಆ ಕಥೆ ರೋಚಕ ಹಾಗೂ ಅಷ್ಟೇ ಭಯಾನಕವಾಗಿದೆ ಎಂಬುದನ್ನು ತಿಳಿದು ಒಂದು ಕ್ಷಣ ದಂಗಾಗುತ್ತಾಳೆ ಮಗಳು. ಅಷ್ಟಕ್ಕೂ ಆ ರೋಚಕ ಕಥೆಯೇನು, ದೇವಕಿ,
ಮಾಯಾ ಆಗಿದ್ದು ಯಾಕೆ ಎಂಬ ಕುತೂಹಲ ನಿಮಗಿದ್ದರೆ ನೀವು “ಮಹಿರ’ ಚಿತ್ರವನ್ನು ನೋಡಬಹುದು.

ಕನ್ನಡದಲ್ಲಿ ಸಾಕಷ್ಟು ಸಸ್ಪೆನ್ಸ್‌-ಥ್ರಿಲ್ಲರ್‌ ಸಿನಿಮಾಗಳು ಬರುತ್ತಲೇ ಇರುತ್ತವೆ. ಆದರೆ, ಹಾಗೆ ಬಂದ ಸಿನಿಮಾಗಳೆಲ್ಲವೂ ಗಮನಸೆಳೆಯುತ್ತವೆ ಮತ್ತು ಹೊಸ ಪ್ರಯೋಗದಿಂದ ಕೂಡಿರುತ್ತದೆ ಎಂದು ಹೇಳುವಂತಿಲ್ಲ. ಆದರೆ, “ಮಹಿರ’ ಚಿತ್ರ ಮಾತ್ರ ತನ್ನ ಕಥೆ ಹಾಗೂ ನಿರೂಪಣೆಯಿಂದ ಗಮನಸೆಳೆಯುವಂತಿದೆ. ಈ ಮೂಲಕ ನಿರ್ದೇಶಕ ಮಹೇಶ್‌ ಗೌಡ ಭವಿಷ್ಯದ ಭರವಸೆ
ಮೂಡಿಸಿದ್ದಾರೆ. ಒಂದು ಥ್ರಿಲ್ಲರ್‌ ಸಿನಿಮಾವನ್ನು ಹೇಗೆ ಕಟ್ಟಿಕೊಟ್ಟರೆ ಜನರಿಗೆ ಇಷ್ಟವಾಗಬಹುದು, ಯಾವ್ಯಾವ ಅಂಶಗಳನ್ನು ಯಾವ ಹಂತದಲ್ಲಿ ರಿವೀಲ್‌ ಮಾಡಬೇಕೆಂಬ ಸ್ಪಷ್ಟ ಕಲ್ಪನೆ ಮಹೇಶ್‌ ಅವರಿಗಿದೆ. ಅದೇ ಕಾರಣದಿಂದ ಚಿತ್ರ ಎಲ್ಲೂ ಬೋರ್‌ ಅನಿಸದೇ, ನೀಟಾಗಿ ನೋಡಿಸಿಕೊಂಡು ಹೋಗುತ್ತದೆ.

ಮುಖ್ಯವಾಗಿ ನಿರ್ದೇಶಕರು ಸ್ಕ್ರಿಪ್ಟ್ ಮೇಲೆ ಹಿಡಿತ  ಸಾಧಿಸಿರುವುದು ಇಲ್ಲಿ ಗೊತ್ತಾಗುತ್ತದೆ. ಸೂಕ್ಷ್ಮ ಅಂಶಗಳನ್ನು ಗಮನಿಸಿ, ಅದಕ್ಕೆ ತಾರ್ಕಿಕ ಅಂತ್ಯ ಕೊಡಲು ಯತ್ನಿಸಿದ್ದಾರೆ. “ಮಹಿರ’ ಕಥೆ ಮುಂದೆ ಸಾಗುತ್ತಿದ್ದಂತೆ ನಿಮಗೆ ಅಲ್ಲಿ ಗಂಡ-ಹೆಂಡತಿಯ ಪ್ರೀತಿ, ತಾಯಿ-ಮಗುವಿನ ಸೆಂಟಿಮೆಂಟ್‌, ವರ್ಕ್‌ ಕಮಿಟ್‌ಮೆಂಟ್‌ … ಹೀಗೆ ಅನೇಕ ಅಂಶಗಳು ಚಿತ್ರದಲ್ಲಿ ಕಾಣಸಿಗುತ್ತವೆ. ಹಾಗಂತ ನಿರ್ದೇಶಕರು ಅದನ್ನು ಹೆಚ್ಚು ಬೆಳೆಸಿಲ್ಲ. ಥ್ರಿಲ್ಲರ್‌ ಕಥೆಗಳಲ್ಲಿ ಸೆಂಟಿಮೆಂಟ್‌ ಹೆಚ್ಚು ವಕೌìಟ್‌ ಆಗೋದಿಲ್ಲ ಎಂಬುದು ನಿರ್ದೇಶಕರಿಗೆ ಗೊತ್ತಿದ್ದಂತಿದೆ. ಹಾಗಾಗಿ, ಅನವಶ್ಯಕ ಅಂಶಗಳನ್ನು ಹೆಚ್ಚು ಎಳೆಯದೇ, ಮೂಲಕಥೆಗೆ ನ್ಯಾಯ ಒದಗಿಸಲು ಶ್ರಮಿಸಿದ್ದಾರೆ.

ಅಷ್ಟಕ್ಕೂ ಸಿನಿಮಾದ ಕಥೆ ಏನು ಎಂದು ನೀವು ಕೇಳಬಹುದು. ಐಐಡಿಯಲ್ಲಿ (ಇಂಡಿಯನ್‌ ಇಂಟಲಿಜೆನ್ಸ್‌ ಡಿಪಾರ್ಟ್‌ಮೆಂಟ್‌) ದಕ್ಷ ಅಧಿಕಾರಿಯಾಗಿದ್ದ ದೇವಕಿಯ ಜೀವನದಲ್ಲಿ ಘಟನೆಯೊಂದು ನಡೆಯುತ್ತದೆ. ಆ ನಂತರ ಆಕೆಯ ಸಂಸ್ಥೆಯೇ ಆಕೆಯ ವಿರುದ್ಧ ಬೀಳುತ್ತದೆ. ಹಾಗಾದರೆ, ಆಕೆಯ ಹಿಂದೆ ಐಐಡಿ ಬೀಳಲು ಕಾರಣ, ಅದರ ಹಿಂದಿನ ಸತ್ಯವೇನು ಎಂಬ ಅಂಶವನ್ನಿಟ್ಟುಕೊಂಡು “ಮಹಿರ’ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕರು. ಸಹಜವಾಗಿಯೇ ಚಿತ್ರದಲ್ಲಿ ಸಣ್ಣ ಪುಟ್ಟ ತಪ್ಪುಗಳಿವೆ. ಅವೆಲ್ಲವನ್ನು ಪಕ್ಕಕ್ಕಿಟ್ಟರೆ ಒಂದು ಪ್ರಯತ್ನವಾಗಿ “ಮಹಿರ’ ಮೆಚ್ಚುಗೆಗೆ ಅರ್ಹ.

ಇಡೀ ಸಿನಿಮಾ ಹೈಲೈಟ್‌ ವರ್ಜೀನಿಯಾ ರಾಡ್ರಿಗಸ್‌. ತುಂಬಾ ಗಂಭೀರ ಹಾಗೂ ಟಫ್ ಪಾತ್ರಕ್ಕೆ ಅವರು ನ್ಯಾಯ ಒದಗಿಸಿದ್ದಾರೆ. ಪ್ರತಿ ದೃಶ್ಯಗಳಲ್ಲೂ ಅವರ ಎನರ್ಜಿ ಮೆಚ್ಚುವಂಥದ್ದು. ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿರುವ ಚೈತ್ರಾ, ಬಾಲಾಜಿ ಮನೋಹರ್‌ , ಗೋಪಾಲ್‌ ಕೃಷ್ಣ ದೇಶಪಾಂಡೆ ಸೇರಿದಂತೆ ಇತರರು ನ್ಯಾಯ ಒದಗಿಸಿದ್ದಾರೆ. ರಾಜ್‌ ಬಿ ಶೆಟ್ಟಿ ಪಾತ್ರ ಮತ್ತಷ್ಟು ಗಂಭೀರವಾಗಿರಬೇಕಿತ್ತು.ಉಳಿದಂತೆ ಚಿತ್ರದ ಸಾಹಸ, ಹಿನ್ನೆಲೆ ಸಂಗೀತ, ಛಾಯಾಗ್ರಹಣ ಚೆನ್ನಾಗಿದೆ.

ಚಿತ್ರ: ಮಹಿರಾ
*ನಿರ್ಮಾಣ: ವಿವೇಕ್‌ ಕೊಡಪ್ಪ
*ನಿರ್ದೇಶನ: ಮಹೇಶ್‌ ಗೌಡ
*ತಾರಾಗಣ: ವರ್ಜೀನಿಯಾ ರಾಡ್ರಿಗಸ್‌, ದಿಲೀಪ್‌ ರಾಜ್‌,
ಚೈತ್ರಾ, ಬಾಲಾಜಿ ಮನೋಹರ್‌, ರಾಜ್‌ ಬಿ ಶೆಟ್ಟಿ ಮತ್ತಿತರರು.

*ರವಿಪ್ರಕಾಶ್‌ ರೈ

ಟಾಪ್ ನ್ಯೂಸ್

Khadri–cm

Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್‌ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!

DVG-Tagaru

Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ

1-IFFI

IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ

1-ree

IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!

isrel netanyahu

Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ

Madikeri-1

Madikeri: ರೈಲ್ವೆ ಕಂಬಿಯ ಬೇಲಿಗೆ ಸಿಲುಕಿದ ಕಾಡಾನೆಯ ರಕ್ಷಣೆ

Kharge

JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kiran raj’s Megha movie

‌Megha Movie: ನಾನು ಎಂಟು ಸಾರಿ ಕೇಳಿದ ಕಥೆಯಿದು…: ಕಿರಣ್‌ ರಾಜ್

Sudeep: ‘Max’ release date fixed: Production company wakes up to Kichchan’s anger

Sudeep: ʼಮ್ಯಾಕ್ಸ್‌ʼ ರಿಲೀಸ್‌ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ

BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್

BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್

Vijay Raghavendra is in Rudrabhishekam Movie

Kannada Cinema: ‘ರುದ್ರಾಭಿಷೇಕಂ’ನಲ್ಲಿ ವಿಜಯ್‌ ರಾಘವೇಂದ್ರ

Shivaraj-Kumar

Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್‌

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

crime

Gangolli: ಬೈಕ್‌ಗೆ ಕಾರು ಢಿಕ್ಕಿ; ಇಬ್ಬರಿಗೆ ಗಾಯ

road-mishap

Udupi: ಪಿಕಪ್‌ ವಾಹನ ಢಿಕ್ಕಿ ಹೊಡೆದು ವ್ಯಕ್ತಿ ಗಾಯ

Khadri–cm

Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್‌ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!

DVG-Tagaru

Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ

1-IFFI

IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.