ಕುಂಬಳೆ: ಎಂಟು ಮಕ್ಕಳನ್ನು ಹೆತ್ತು ಹೊತ್ತ ತಾಯಿಯ ಕರುಣಾಜನಕ ಕ(ವ್ಯ)ಥೆ !
Team Udayavani, Jul 28, 2019, 5:38 AM IST
ಕುಂಬಳೆ : ಕುಂಬಳೆ ಗ್ರಾಮ ಪಂಚಾಯತ್‌ನ ಲಕ್ಷಂವೀಡು ಕಾಲನಿಯಲ್ಲಿ ಸುಮಾರು ಐವತ್ತು ವರ್ಷಗಳ ಹಿಂದೆ ಸರಕಾರದ ಲಕ್ಷಮನೆ ಯೋಜನೆಯಲ್ಲಿ ಲಭಿಸಿದ ಅದೇ ಮುರುಕು ಮನೆಯಲ್ಲಿ ವಿಧವೆಯಾಗಿರುವ ಎಂಭತ್ತೇಳರ ಹರೆಯದ ಪರಿಶಿಷ್ಟ ವರ್ಗದ ಚಮ್ಮಾರ ಸಮುದಾಯದ ದೇವಕಿ ಅಮ್ಮ ತನ್ನ ಓರ್ವ ಅಶಕ್ತೆ ಪುತ್ರಿಯೊಂದಿಗೆ ವಾಸಿಸುತ್ತಿರುವರು..
ಅತ್ಯಂತ ದುರ್ಬಲವಾಗಿರುವ ಎರಡು ಕೋಣೆಯ ಹಂಚು ಹಾಸಿದ ಕಲ್ಲು ಮಣ್ಣಿನ ಗೋಡೆಯಿಂದ ನಿರ್ಮಿಸಿದ ಹರುಕುಮುರುಕು ಮನೆಯೊಳಗೆ ಗಾಳಿ ಮಳೆಗೆ ಯಾವ ಕ್ಷಣದಲ್ಲೂ ಧರಾಶಾಯಿಯಾಗುವ ಭಯ,ಆತಂಕದಲ್ಲಿ ಇವರಿಬ್ಬರು ದಿನ ಕಳೆಯುತ್ತಿರುವರು. ಶೌಚಾಲಯ, ನೀರು ಮತ್ತು ವಿದ್ಯುತ್ತಿನ ಸಂಪರ್ಕವೂ ಇಲ್ಲದ ಈ ಮನೆಯಲ್ಲಿ ಮಾನಸಿಕ ಅಸ್ವಸ್ಥೆ, ಅರ್ಬುದ ರೋಗ ಪೀಡಿತೆ 45ರ ಹರೆಯದ ಪುತ್ರಿಯೊಂದಿಗೆ ದೇವಕಿ ಜೀವನ ಸಾಗಿಸುತ್ತಿದ್ದಾರೆ.
ವಯೋಸಹಜ ಕಾಯಿಲೆಯಿಂದ ಬಳಲುತ್ತಿರುವ ದೇವಕಿ ಅಮ್ಮ ಮತ್ತು ಪುತ್ರಿಗೆ ಲಭಿಸುವ ಸರಕಾರದ ಕೇವಲ ಪಿಂಚಣಿ ಯೇ ಇವರ ಜೀವನಕ್ಕೆ ಆಧಾರವಾಗಿದೆ. ಮೂರು ಅಥವಾ ನಾಲ್ಕು ತಿಂಗಳಿಗೊಮ್ಮೆ ಕೈಸೇರುವ ಪಿಂಚಣೆಯಲ್ಲಿ ಔಷಧಿ ಸಹಿತ ತಮ್ಮ ಇತರ ಎಲ್ಲ ಖರ್ಚುವೆಚ್ಚಗಳನ್ನು ಸರಿದೂಗಿಸಬೇಕಾಗಿದೆ.
ನಾಲ್ಕು ಹೆಣ್ಣು ಮತ್ತು ನಾಲ್ಕು ಗಂಡು ಮಕ್ಕಳನ್ನು ಹೆತ್ತ ತಾಯಿಯಾಗಿದ್ದರೂ ತನ್ನ ಬುದ್ಧಿಮಾಂದ್ಯ ಮಗಳನ್ನು ಕರೆದುಕೊಂಡು ಮಕ್ಕಳ ಜೊತೆ ವಾಸಿಸಲು ಒಪ್ಪದೆ ಈ ಮನೆಯಲ್ಲಿಯೇ ನೆಲೆಸಿರುವರು.ಇತರ ಮಕ್ಕಳೆಲ್ಲರಿಗೂ ಮದುವೆಯಾಗಿದ್ದು ಕುಟುಂಬ ಸಮೇತ ಪರವೂರಿನಲ್ಲಿ ನೆಲೆಸಿದ್ದಾರೆ. ನಾಲ್ವರು ಗಂಡು ಮಕ್ಕಳಲ್ಲಿ ಓರ್ವ ಕಳೆದ ವರ್ಷ ಅಪಘಾತದಲ್ಲಿ ಮೃತಪಟ್ಟು ಇತರ ಮೂರು ಮಂದಿ ಕೂಲಿ ನಾಲಿ ಮಾಡಿಕೊಂಡು ಬಾಡಿಗೆ ಮನೆಯಲ್ಲಿ ಪತ್ನಿ ಮಕ್ಕಳೊಂದಿಗೆ ಜೀವನ ಸಾಗಿಸುತ್ತಿರುವರು.
ಯಾವುದೇ ಮೂಲಭೂತ ಸೌಕರ್ಯಗಳಿಲ್ಲದ ಈ ಮನೆಯಲ್ಲಿ ತಾಯಿಯೊಂದಿಗಿರಲು ಯಾವ ಮಕ್ಕಳೂ ಸಿದ್ಧರಿಲ್ಲ. ನಿತ್ಯವೂ ನೀರಿಗಾಗಿ ಅಕ್ಕ ಪಕ್ಕದ ಮನೆಯವರ ಕೊಳವೆ ಬಾವಿ ಅಥವಾ ದೂರದಲ್ಲಿರುವ ಸಾರ್ವಜನಿಕ ಬಾವಿಯನ್ನು ಆಶ್ರಯಿಸಬೇಕಾಗಿದೆ. ಮೇಲ್ಛಾವಣಿ ಮತ್ತು ಭದ್ರವಾದ ಬಾಗಿಲು ಇಲ್ಲದ ಬಚ್ಚಲು ಮನೆಯನ್ನು ಸ್ಥಾನಕ್ಕೆ ಬಳಸಬೇಕು. ಕತ್ತಲೆಯ ಬದುಕಿನ ಬೆಳಕಿಗೆ ಸೀಮೆ ಎಣ್ಣೆಯ ದೀಪವೇ ಗತಿ.
2016ರಲ್ಲಿ ಕೇಂದ್ರ ಸರಕಾರದ ಸ್ವಚ್ಛ ಭಾರತ ಯೋಜನೆಯಲ್ಲಿ ಎಲ್ಲ ಮನೆಗೂ ಶೌಚಾಲಯ ನಿರ್ಮಿಸಲು ಅನುದಾನಕ್ಕೆ ಅರ್ಹರಾದ ಫಲಾನುಭವಿ ಪಟ್ಟಿಯಲ್ಲಿ ದೇವಕಿಯಮ್ಮನ ಹೆಸರು ಸೇರ್ಪಡೆಗೊಂಡಿದ್ದರೂ ಈ ವೇಳೆ ತನ್ನ ಅಸೌಖ್ಯ ಪೀಡಿತ ಮಗಳ ಚಿಕಿತ್ಸೆಗಾಗಿ ಮಂಗಳೂರಿನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಕಾರಣಕ್ಕೆ ಅದರಿಂದ ಅವರು ವಂಚಿತರಾಗಿರುವರು.
ಕಳೆದ ವರ್ಷ ವಾರ್ಡು ಸದಸ್ಯೆ ಪುಷ್ಪಲತಾ ಶಾಂತಿಪಳ್ಳ ಇವರ ಮುತುವರ್ಜಿಯಿಂದ ಕೇಂದ್ರ ಸರಕಾರ ಉಜ್ವಲ ಯೋಜನೆಯಲ್ಲಿ ಉಚಿತ ಅಡುಗೆ ಅನಿಲ ಸಂಪರ್ಕ ಮತ್ತು ಗ್ರಾಮ ಪಂಚಾಯತ್ ವತಿಯಿಂದ ಮಂಚವೂ ಲಭಿಸಿರುವುದಾಗಿ ದೇವಕಿ ಅಮ್ಮ ಕೃತಜ್ಞತೆಯಿಂದ ನೆನೆಯುತ್ತಾರೆ.
ಆದರೆ ಎಲ್ಲಕ್ಕಿಂತ ಮುಖ್ಯವಾಗಿ ವಾಸಯೋಗ್ಯವಾಗಿರುವ ಸುಸಜ್ಜಿತ ಮನೆಯೊಂದು ದೇವಕಿ ಮತ್ತು ಅವರ ಪುತ್ರಿಯ ತುರ್ತು ಆವಶ್ಯಕತೆಯಾಗಿದೆ. ಇದಕ್ಕಾಗಿ ದೇವಕಿ ಅಮ್ಮನ ಕುಟುಂಬದ ಹಿತಚಿಂತಕರಾದ ಕೆಲವುಯುವಕರು ಸೇರಿ ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯೆಯ ನೇತೃತ್ವದಲ್ಲಿ ಸಾರ್ವಜನಿಕ,ಉದಾರ ದಾನಿಗಳ ಆರ್ಥಿಕ ನೆರವಿನಿಂದ ಮೂಲಭೂತ ಸೌಕರ್ಯಗಳೊಂದಿಗೆ ಚಿಕ್ಕ ಚೊಕ್ಕದಾದ ಮನೆಯೊಂದನ್ನು ನಿರ್ಮಿಸಿಕೊಡಲು ಮತ್ತು ಅವರಿಬ್ಬರ ಕಾಯಿಲೆಗೆ ಔಷಧಿ,ಚಿಕಿತ್ಸೆ ಪಡೆಯಲು ಶಾಶ್ವತ ನಿಧಿ ಸಂಗ್ರಹಿಸಲು ಮುಂದಾಗಿರುವರು.
ಇದಕ್ಕೆ ಊರ ಪರವೂರ ಸಹೃದಯಿ ದಾನಿಗಳ, ಸಂಘ, ಸಂಸ್ಥೆಗಳ ಮತ್ತು ಸಾರ್ವಜನಿಕರ ಸಹಕಾರ ಆಗತ್ಯವಿದ್ದು ಆರ್ಥಿಕ ಸಹಾಯ ನೀಡಲಿಚ್ಚಿಸುವವರು ದೇವಕಿ ಅವರ ಖಾತೆ ಶ್ರೀಮತಿ ದೇವಕಿ ಡಿ/ಟ ತನಿಯನಾಯ್ಕ ಕೇರಳ ಗ್ರಾಮೀಣ ಬ್ಯಾಂಕ್,ಕುಂಬಳೆ ಶಾಖೆ SB A/c No 40517101045019-IFSC KLGB0040517 ಖಾತೆಗೆ ಪಾವತಿಸಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
BJP Internal Dispute: ಶಾಸಕ ಬಸನಗೌಡ ಯತ್ನಾಳ್ ವಿವಾದ ಇತ್ಯರ್ಥಕ್ಕೆ ಡಿ.9ರ ಗಡುವು
Constitution Day: ಉಡುಪಿ ಪೇಜಾವರ ಶ್ರೀ ಮನುಸ್ಮೃತಿ ಪ್ರತಿಪಾದಕರು: ಸಿಎಂ ಸಿದ್ದರಾಮಯ್ಯ
Train: ಗೋಮಟೇಶ್ವರ ಎಕ್ಸ್‌ಪ್ರೆಸ್ ರೈಲು ಮಂಗಳೂರು ಸೆಂಟ್ರಲ್‌ಗೆ ಬಾರದು
Kambala: ತೀರ್ಪುಗಾರರ ತೀರ್ಮಾನವೇ ಅಂತಿಮ:ಜಿಲ್ಲಾ ಕಂಬಳ ಸಮಿತಿ ಸಭೆಯಲ್ಲಿ ನಿರ್ಣಯ
Congress: ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಸ್ವರ ಎತ್ತಿದರೆ ಶಿಸ್ತುಕ್ರಮ: ಡಿ.ಕೆ.ಶಿವಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.