55 ಕೋಟಿಯ ಆಸ್ತಿ ಖರೀದಿಸಿದ ಆರರ ಯೂಟ್ಯೂಬ್ ಸ್ಟಾರ್!
Team Udayavani, Jul 28, 2019, 7:11 AM IST
ಹೊಸದಿಲ್ಲಿ: ಯೂಟ್ಯೂಬ್‌ನಲ್ಲಿ ದೊಡ್ಡವರಷ್ಟೇ ಅಲ್ಲ, ಮಕ್ಕಳೂ ಸ್ಟಾರ್‌ಗಳಾಗುತ್ತಾರೆ! ಅಲ್ಲಿ ಮಕ್ಕಳ ಆಟಿಕೆಗಳ ವಿಮರ್ಶೆ ಮಾಡಿ ಕೋಟ್ಯಂತರ ರೂಪಾಯಿ ಗಳಿಸಿದವರಿದ್ದಾರೆ. ಮಕ್ಕಳೇ ಹಾಗೆ ಮಾಡಿದರೆ ಅದು ಮಕ್ಕಳಾಟವಲ್ಲ!
ನಿಜ, ಇದು ದಕ್ಷಿಣ ಕೊರಿಯಾದ ಬೋರಮ್ ಎಂಬ ಆರರ ಬಾಲಕಿಯ ಸುದ್ದಿ. ಈ ಪುಟ್ಟ ಕಂದಮ್ಮ ಆಟಿಕೆ ವಿಮರ್ಶೆಯ ಯೂಟ್ಯೂಬ್ ವೀಡಿಯೊ ಮೂಲಕ ಗಳಿಸಿದ ಆದಾಯದಲ್ಲಿ 55 ಕೋಟಿ ರೂ.ಗಳ ಮೂರು ಮಹಡಿ ಮನೆ ಖರೀದಿಸಿದ್ದಾಳೆ.
ದಕ್ಷಿಣ ಕೊರಿಯಾದ ರಾಜಧಾನಿ ಸೋಲ್ನಐಷಾರಾಮಿ ಪ್ರದೇಶವಾದ ಗಂಗ್ನಮ್‌ನಲ್ಲಿ ಮಗು ವಿನ ಕುಟುಂಬ ಮನೆ ಖರೀದಿ ಮಾಡಿದೆ.
ಮಾಸಿಕ ಆದಾಯ 21 ಲಕ್ಷ ರೂ.
ಈ ಯೂಟ್ಯೂಬ್ ಸ್ಟಾರ್‌ನ ಪಾಲಕರು ತಮ್ಮದೇ ಕಂಪೆನಿ ಹೊಂದಿದ್ದು, ಇದರಡಿ ಯೂಟ್ಯೂಬ್ ವಹಿವಾಟು ನಡೆಸುತ್ತಾರೆ. ಬೋರಮ್‌ನ ಆಟಿಕೆ ವಿಮರ್ಶೆಗಳು ಭಾರೀ ಜನಪ್ರಿಯ. 1.36 ಕೋಟಿ ಜನರು ಈ ಚಾನೆಲ್ ಸಬ್‌ಸೆðೖಬ್ ಮಾಡಿದ್ದಾರೆ. ಈಕೆಯ ವೀಡಿಯೋ ಬ್ಲಾಗ್ ಕೂಡ ಇದ್ದು, ಇದಕ್ಕೆ 1.76 ಕೋಟಿ ಸಬ್‌ಸೆðೖಬರ್‌ಗಳಿದ್ದಾರೆ. ಈ ಮಗುವಿನ ಮಾಸಿಕ ಆದಾಯ ಸುಮಾರು 21 ಲಕ್ಷ ರೂ.!
ಈಕೆಯ ಒಂದೊಂದು ವೀಡಿಯೋ ಕೂಡ 30 ಕೋಟಿಗಳಿಗಿಂತ ಹೆಚ್ಚು ವ್ಯೂ ಪಡೆದಿವೆ. ಅಡುಗೆ ಮನೆಆಟಿಕೆ ಬಳಸಿ ಇನ್‌ಸ್ಟಂಟ್ ನೂಡಲ್ ತಿನ್ನುವವೀಡಿಯೋ ಮನೆಮಾತಾಗಿದೆ. ಬೋರಮ್‌ನಪ್ರತಿ ವೀಡಿಯೋ ಕೂಡ ವಿಶಿಷ್ಟ ಪರಿಕಲ್ಪನೆಯನ್ನು ಹೊಂದಿರುತ್ತದೆ.
ದುಡ್ಡು ಮಾಡುವುದು ಹೇಗೆ?
ಯೂಟ್ಯೂಬ್ ವೀಡಿಯೋಗಳಲ್ಲಿ ತಾನು ಜಾಹೀರಾತು ಪ್ರದರ್ಶಿಸುವುದರಿಂದ ಬರುವ ಆದಾಯದ ಭಾಗವನ್ನು ಆಯಾ ಚಾನೆಲ್ ಮಾಲಕ ರಿಗೆ ನೀಡುತ್ತದೆ. ಆಟಿಕೆ ತಯಾರಕ ಕಂಪೆನಿ ಗಳೂ ಈ ಮಕ್ಕಳ ಜತೆ ಒಪ್ಪಂದ ಮಾಡಿ ಹಣ ನೀಡುತ್ತವೆ. ವಿವಿಧ ಉತ್ಪನ್ನಗಳನ್ನು ಕೂಡ ಪ್ರಚಾರ ಮಾಡುವ ಮೂಲಕವೂ ಮಕ್ಕಳು ಹಣ ಗಳಿಸುತ್ತಾರೆ.
ಫೋಬ್ರ್ಸ್ ನಿಯತಕಾಲಿಕವೂ ಇಂಥ ಮಕ್ಕಳ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. 2018ರ ಪಟ್ಟಿಯಲ್ಲಿ 7 ವರ್ಷದ ರ್ಯಾನ್ ಕಜಿ ಎಂಬ ಮಗು ಅತಿ ಹೆಚ್ಚು ಆದಾಯವುಳ್ಳದ್ದಾಗಿತ್ತು. ಈ ಮಗು ತನ್ನ ಯೂಟ್ಯೂಬ್ ಚಾನೆಲ್ನಿಂದ 150 ಕೋಟಿ ರೂ. ಗಳಿಸಿದ್ದು, 2 ಕೋಟಿ ಸಬ್‌ಸೆðೖಬರ್‌ಗಳನ್ನು ಹೊಂದಿತ್ತು. ಅಮೆರಿಕನ್ ಟೈಡಸ್ ಕೂಡ ಈ ಪಟ್ಟಿಯಲ್ಲಿ ಸ್ಥಾನ ಪಡೆದಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ
Andaman: ಕೋಸ್ಟ್ ಗಾರ್ಡ್ ಕಾರ್ಯಾಚರಣೆ… ಮೀನುಗಾರಿಕಾ ದೋಣಿಯಲ್ಲಿದ್ದ 5ಟನ್ ಮಾದಕ ವಸ್ತು ವಶ
Maharashtra: ಕಾಂಗ್ರೆಸ್ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Gangolli: ಬೈಕ್‌ಗೆ ಕಾರು ಢಿಕ್ಕಿ; ಇಬ್ಬರಿಗೆ ಗಾಯ
Udupi: ಪಿಕಪ್ ವಾಹನ ಢಿಕ್ಕಿ ಹೊಡೆದು ವ್ಯಕ್ತಿ ಗಾಯ
Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!
Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ
IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.