ಸಿದ್ದು ಬಾಂಬ್ ಅಲ್ಲಗಳೆದ ಅತೃಪ್ತರು
Team Udayavani, Jul 28, 2019, 7:00 AM IST
ಬೆಂಗಳೂರು: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಪುಣೆ ಯಲ್ಲಿರುವ ಇಬ್ಬರು ಅತೃಪ್ತರು ನನಗೆ ದೂರವಾಣಿ ಕರೆ ಮಾಡಿದ್ದರು ಎಂದು ಹೇಳುವ ಮೂಲಕ ಮಾಜಿ ಸಿಎಂ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೊಸ ‘ಬಾಂಬ್’ ಸಿಡಿಸಿದ್ದಾರೆ. ಆದರೆ ತಾನು ಕರೆ ಸ್ವೀಕರಿಸ ಲಿಲ್ಲ ಎಂದೂ ಹೇಳಿದ್ದಾರೆ.
ಅತೃಪ್ತ ಶಾಸಕರು ನನ್ನನ್ನು ದೂರ ವಾಣಿ ಮೂಲಕ ಸಂಪರ್ಕಿಸಲು ಯತ್ನಿಸಿದ್ದರು ಎಂದು ಮಾಜಿ ಗೃಹ ಸಚಿವ ಎಂ.ಬಿ. ಪಾಟೀಲ್ ಹೇಳಿಕೆ ಸರಿ ಎಂದು ಮಾಜಿ ಸಿಎಂ ತಿಳಿಸಿದ್ದಾರೆ.
ಅತೃಪ್ತ ಶಾಸಕರು ಬಂದಿದ್ದರೆ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ ಉಳಿಯುತ್ತಿತ್ತು. ಅವರು ಬಾರದೆ ಸರಕಾರ ಪತನಗೊಂಡಿತು. ಹೀಗಾಗಿ ಅವರ ಜತೆ ಮಾತು ಇಲ್ಲ. ಇನ್ನೇನಿದ್ದರೂ ಕ್ರಮ ಅಷ್ಟೇ ಎಂದು ಸಿದ್ದರಾಮಯ್ಯ ತಿಳಿಸಿದರು.
ಸುಳ್ಳೇಸುಳ್ಳು
ಆದರೆ ಇದನ್ನು ಅಲ್ಲಗಳೆದ ಎಚ್. ವಿಶ್ವನಾಥ್, ನಮ್ಮಲ್ಲಿ ಗೊಂದಲ ಮೂಡಿಸಲು ಇಂಥ ಹೇಳಿಕೆ ನೀಡ ಲಾಗುತ್ತಿದೆ. ಎಲ್ಲವೂ ಸುಳ್ಳು. ಸಿದ್ದರಾಮಯ್ಯ, ಎಂ.ಬಿ. ಪಾಟೀಲ್ ದಾರಿ ತಪ್ಪಿದ ಮಕ್ಕಳು ಎಂದು ಲೇವಡಿ ಮಾಡಿದ್ದಾರೆ.
ನಾವು ಹದಿನೈದು ಶಾಸಕರು ಒಟ್ಟಾಗಿದ್ದು, ನಮ್ಮ ನಿರ್ಧಾರ ಗಟ್ಟಿಯಾಗಿದೆ. ನಾವು ಬಂಡೆಯಂತಿದ್ದೇವೆ, ಮಂಗಳವಾರ ಬೆಂಗಳೂರಿಗೆ ಬಂದು ಪತ್ರಿಕಾಗೋಷ್ಠಿ ನಡೆಸಿ ರಾಜೀನಾಮೆಗೆ ಕಾರಣ ಬಹಿರಂಗಪಡಿಸುತ್ತೇವೆ ಎಂದರು.
ನಾಗರಾಜ್ ಮಾತನಾಡಿ, ಸಿದ್ದರಾಮಯ್ಯ ಅವರು ಶಾಸಕಾಂಗ ಪಕ್ಷದ ನಾಯಕರಾಗಿ ಸರಿಯಾಗಿ ನಿಭಾಯಿಸಲಿಲ್ಲ. ನಾವು ನೋವು ಹೇಳಿಕೊಂಡರೆ ಗಮನ ನೀಡಲಿಲ್ಲ. ಈಗ ನಮ್ಮನ್ನೇ ದೂರುತ್ತಿದ್ದಾರೆ. ನಾವು ಯಾರನ್ನೂ ಸಂಪರ್ಕಿಸಿಲ್ಲ. ಎಲ್ಲವೂ ಸುಳ್ಳು ಎಂದರು.
ಎಂ.ಬಿ. ಪಾಟೀಲ್ ಹೇಳಿದ್ದೇನು?
ವಿಜಯಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಎಂ.ಬಿ.ಪಾಟೀಲ್, ಮುಂಬಯಿಯಲ್ಲಿರುವ ಅತೃಪ್ತ ಇಬ್ಬರು ಶಾಸಕರು ಶುಕ್ರವಾರ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮೊಬೈಲ್ಗೆ ಕರೆ ಮಾಡಿ ಸಂಪರ್ಕಿಸಲು ಯತ್ನಿಸಿದ್ದಾರೆ. ಆದರೆ ಅವರು ಕರೆ ಸ್ವೀಕರಿಸಿಲ್ಲ ಎಂದಿದ್ದರು. ಯಡಿಯೂರಪ್ಪನವರು ಏನೆಲ್ಲ ತಂತ್ರಗಾರಿಕೆ ಮಾಡಿದರೂ ಅವರ ಸರಕಾರಕ್ಕೆ ಆರು ತಿಂಗಳಿಂದ ಒಂದು ವರ್ಷ ಮಾತ್ರ ಆಯುಷ್ಯ ಇದೆ ಎಂದು ಭವಿಷ್ಯ ನುಡಿದರು.
ಕಾಂಗ್ರೆಸ್- ಜೆಡಿಎಸ್ ಚುನಾವಣೆಗೆ ಸಿದ್ಧತೆ
ಅತೃಪ್ತ ಶಾಸಕರ ಪೈಕಿ ಮೂವರ ಸದಸ್ಯತ್ವ ಅನರ್ಹವಾದದ್ದು ಬಿಟ್ಟರೆ, ಉಳಿದವರ ಬಗ್ಗೆ ನಿರ್ಧಾರ ಆಗಿಲ್ಲ. ಈ ನಡುವೆ ಕಾಂಗ್ರೆಸ್, ಜೆಡಿಎಸ್ ಉಪಚುನಾವಣೆಗೆ ತಯಾರಿ ನಡೆಸಿವೆ. ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಈ ಕುರಿತು ಶನಿವಾರ ಸಭೆ ನಡೆಸಿದರು.
ಜತೆಗೆ ಉಪಚುನಾವಣೆ ನಡೆದರೆ, ಗೋಕಾಕ್‌ಗೆಲಖನ್ ಜಾರಕಿಹೊಳಿ, ಕಾಗವಾಡಕ್ಕೆ ಪ್ರಕಾಶ್ ಹುಕ್ಕೇರಿ, ಚಿಕ್ಕಬಳ್ಳಾಪುರಕ್ಕೆ ಶಾಸಕ ಡಾ| ಎಂ.ಸಿ. ಸುಧಾಕರ್, ಮಹಾ ಲಕ್ಷ್ಮೀ ಬಡಾವಣೆಗೆ ಮಾಗಡಿ ಬಾಲಕೃಷ್ಣ, ರಾಜ ರಾಜೇಶ್ವರಿ ನಗರಕ್ಕೆ ರಾಜ್‌ಕುಮಾರ್ ಅಥವಾ ಪ್ರಿಯಾಕೃಷ್ಣ, ಕೆ.ಆರ್. ಪುರಕ್ಕೆ ನಾರಾಯಣ ಸ್ವಾಮಿ, ಕೆ.ಆರ್. ಪೇಟೆಗೆ ಚೆಲುವ ರಾಯಸ್ವಾಮಿ ಅಥವಾ ಕೆ.ಬಿ. ಚಂದ್ರಶೇಖರ್, ಶಿವಾಜಿ ನಗರಕ್ಕೆ ರಿಜ್ವಾನ್ ಹರ್ಷದ್ ಹೆಸರು ಪ್ರಸ್ತಾಪವಾಯಿತು ಎನ್ನಲಾಗಿದೆ.
ಅತ್ತ ದೇವೇಗೌಡರೂ ಉಪಚುನಾವಣೆಗೆ ತಮ್ಮವರಿಗೆ ಸಜ್ಜಾಗುವಂತೆ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shakti scheme; ಪುರುಷರಿಗೆ ಉಚಿತ ಪ್ರಯಾಣ ಸೌಲಭ್ಯ ಇಲ್ಲ: ರಾಮಲಿಂಗಾರೆಡ್ಡಿ
B Z Zameer ahmed khan ಹೇಳಿಕೆ ಹಿಂದೆ ಎಚ್‌ಡಿಕೆಯದ್ದೇ ಕೈವಾಡ ಎಂದ ಕೈ ಶಾಸಕ
Marriage registration ಪ್ರಮಾಣಪತ್ರ ನೀಡುವ ಅಧಿಕಾರ ವಕ್ಫ್ ಬೋರ್ಡ್‌ಗೆ ಎಲ್ಲಿದೆ?
Libya; 8 ವರ್ಷಗಳ ಬಳಿಕ ಲಿಬಿಯಾಕ್ಕೆ ತೆರಳಲು ಭಾರತೀಯರಿಗೆ ಅನುಮತಿ
CM-DCM ಮಹಾರಾಷ್ಟ್ರ ಚುನಾವಣ ಪ್ರಚಾರದಲ್ಲಿ ಭಾಗಿ
MUST WATCH
ಹೊಸ ಸೇರ್ಪಡೆ
Byndoor: ಮೀನು ಸಾಗಿಸುವ ವಾಹನದಲ್ಲಿ ಜಾನುವಾರು ಸಾಗಾಟ!
Aishwarya Rai ಖುಷಿಗಿಂತ ಬೇರೇನು ಬೇಕು?: ಮಾಜಿ ಪ್ರೇಮಿ ಸಲ್ಮಾನ್
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
Shakti scheme; ಪುರುಷರಿಗೆ ಉಚಿತ ಪ್ರಯಾಣ ಸೌಲಭ್ಯ ಇಲ್ಲ: ರಾಮಲಿಂಗಾರೆಡ್ಡಿ
CBSE: ಶೇ.15 ಪಠ್ಯಕ್ರಮ ಕಡಿತ, ತೆರೆದ ಪುಸ್ತಕ ಮಾದರಿ ಪರೀಕ್ಷೆ ಇಲ್ಲ: ಸಿಬಿಎಸ್‌ಇ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.