ಯೋಧರ ಸೇವೆ ಸ್ಮರಣೀಯ
ಯುವ ಜನಾಂಗಕ್ಕೆ ಸೈನಿಕರು ರೋಲ್ ಮಾಡೆಲ್ •ದೇಶಭಕ್ತಿ ಬೆಳೆಸಿಕೊಳ್ಳಲು ಸಲಹೆ
Team Udayavani, Jul 28, 2019, 10:23 AM IST
ಸಿಂದಗಿ: ಗುರುಕುಲ ಶಿಕ್ಷಣ ಸಂಸ್ಥೆಯಲ್ಲಿ ಕಾನಿಪ ಹಾಗೂ ಕಸಾಪ ಸಹಯೋಗದಲ್ಲಿ ಕಾರ್ಗಿಲ್ ವಿಜಯೋತ್ಸವ ಆಚರಿಸಲಾಯಿತು.
ಸಿಂದಗಿ: ದೇಶದ ನಿಜವಾದ ನಾಯಕರು ಎಂದರೆ ನಮ್ಮನ್ನು ಸದಾ ರಕ್ಷಣೆ ಮಾಡುತ್ತಿರುವ ಸೈನಿಕರು. ನಾವು ಚಲನಚಿತ್ರ ನಾಯಕರನ್ನು ಜೀವನದಲ್ಲಿ ಮಾದರಿಯನ್ನಾಗಿ ಮಾಡಿಕೊಳ್ಳುವ ಬದಲು ಸೈನಿಕರನ್ನು ಮಾದರಿಯಾಗಿಸಿಕೊಂಡಲ್ಲಿ ನಮ್ಮ ಜೀವನ ಸಾರ್ಥಕ ಎಂದು ಜಿ.ಪಿ. ಪೋರವಾಲ ಮಹಾವಿದ್ಯಾಲದ ಪ್ರಾಧ್ಯಾಪಕ ಡಿ.ಎಂ. ಪಾಟೀಲ ಹೇಳಿದರು.
ಪಟ್ಟಣದ ಪದ್ಮರಾಜ ಶಿಕ್ಷಣ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಆಶ್ರಯದಲ್ಲಿ ಕಾರ್ಗಿಲ್ ವಿಜಯೋತ್ಸವ ನಿಮಿತ್ತ ಹಮ್ಮಿಕೊಂಡಿದ್ದ ಶ್ರಮದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ದೇಶಕ್ಕೆ ಬಲಿದಾನ ಮಾಡಿದ ಸೈನಿಕರ ಸೇವೆ ಮತ್ತು ತ್ಯಾಗ ಸ್ಮರಿಸುವುದು ಎಲ್ಲರ ಕರ್ತವ್ಯ ಎಂದರು.
ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ| ಶರಣಬಸವ ಜೋಗೂರ ಮತ್ತು ಉಪನ್ಯಾಸಕ ಪಿ.ಎಂ. ಮಡಿವಾಳರ ಮಾತನಾಡಿದರು.
ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕರಾದ ಜೆ.ಸಿ. ನಂದಿಕೋಲ, ಸಿದ್ದಲಿಂಗ ಕಿಣಗಿ, ಡಿ.ಎಸ್. ಮಠಪತಿ, ಸುಧಾಕರ ಚವ್ಹಾಣ, ಎನ್.ಬಿ. ಪೂಜಾರಿ, ವಿ.ಕೆ. ಭಜಂತ್ರಿ, ಚನ್ನಬಸವರಾಜ ಕತ್ತಿ, ಎನ್.ಎ. ಸಜ್ಜನ ಸೇರಿದಂತೆ ಪ್ರಶಿಕ್ಷಣಾರ್ಥಿಗಳು ಪಾಲ್ಗೊಂಡಿದ್ದರು.
ವಿವಿಧೆಡೆ ಆಚರಣೆ: ಪಟ್ಟಣದ ಜಿ.ಪಿ. ಪೋರವಾಲ ಕಲಾ, ವಾಣಿಜ್ಯ ಹಾಗೂ ವಿ.ವಿ. ಸಾಲಿಮಠ ವಿಜ್ಞಾನ ಮಹಾವಿದ್ಯಾಲಯ ಮತ್ತು ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್ ಸಹಯೋಗದಲ್ಲಿ ಕಾರ್ಗಿಲ್ ವಿಜಯೋತ್ಸವ ಆಚರಿಸಲಾಯಿತು.
ವಾಣಿಜ್ಯ ಶಾಸ್ತ್ರ ಪ್ರಾಧ್ಯಾಪಕ ಡಾ| ಆರ್.ಎಂ. ಪಾಟೀಲ ಮಾತನಾಡಿದರು. ಎಬಿವಿಪಿ ಸಂಚಾಲಕ ಭಾಗಣ್ಣ ಹೂಗಾರ, ಡಿ.ಎಂ. ಪಾಟೀಲ, ಡಾ| ಸುಮಾ ನಿರ್ಣಿ ವೇದಿಕೆಯಲ್ಲಿದ್ದರು. ಪಟ್ಟಣದ ಗುರುಕುಲ ಶಿಕ್ಷಣ ಸಂಸ್ಥೆಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಕಾರ್ಗಿಲ್ ವಿಜಯೋತ್ಸವ ಆಚರಿಸಲಾಯಿತು.
ಪುರಸಭೆ ಮುಖ್ಯಾಧಿಕಾರಿ ಸಯೀದ್ ಅಹ್ಮದ್ ದಖನಿ, ಮಾಜಿ ಯೋಧ ಎಸ್.ಎಂ. ಯಳಮೇಲಿ, ಕಸಾಪ ಅಧ್ಯಕ್ಷ ಸಿದ್ದಲಿಂಗ ಚೌಧರಿ, ಕಾನಿಪ ಅಧ್ಯಕ್ಷ ಆನಂದ ಶಾಬಾದಿ ಮಾತನಾಡಿದರು. ಮಾಜಿ ಯೋಧರಾದ ಶಬ್ಬಿರಪಟೇಲ್ ಬಿರಾದಾರ, ಬಸವರಾಜ ಕೋಟರಗಸ್ತಿ, ಗುರುಕುಲ ಶಿಕ್ಷಣ ಸಂಸ್ಥೆ ಅಧ್ಯಕ್ಷ ಚಂದ್ರಶೇಖರ ಪೂಜಾರಿ, ಪ್ರಾಚಾರ್ಯ ಸತೀಶ ಚೌಧರಿ ಹಾಗೂ ಮಲ್ಲಿಕಾರ್ಜುನ ಅಲ್ಲಾಪುರ ವೇದಿಕೆಯಲ್ಲಿದ್ದರು.
ಮುತ್ತುರಾಜ ಬ್ಯಾಕೋಡ, ಜ್ಞಾನೇಶ ಗುರವ, ಚಂದ್ರಶೇಖರ ಮಾವೂರ, ಆಸ್ಪಾಕ ಕರ್ಜಗಿ, ಸಿದ್ದು ಪೂಜಾರಿ, ರಾಹುಲ್ ಯಂಪುರೆ, ಶಾಂತು ರಾಣಾಗೋಳ, ಮಹಾಂತೇಶ ಕಲಶೆಟ್ಟಿ, ಶಿವಕುಮಾರ ಕುಕನೂರ ಇದ್ದರು. ಅಶೋಕ ಬಿರಾದಾರ ನಿರೂಪಿಸಿದರು. ಪಂಡಿತ್ ಯಂಪುರೆ ವಂದಿಸಿದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್.ಡಿ.ದೇವೇಗೌಡ
High Court: ʼಅಪರಾಧಿ ಪತಿಯೊಂದಿಗೆ ನೆಲೆಸಿದ ಮಾತ್ರಕ್ಕೆ ಪತ್ನಿಯನ್ನೂ ಅಪರಾಧಿ ಮಾಡಲಾಗದುʼ
Mangaluru: ಮಾರುಕಟ್ಟೆಯಲ್ಲೀಗ ಬಂಗುಡೆ ಬಲು ಅಗ್ಗ! ವಿದೇಶದಲ್ಲಿ ಬೇಡಿಕೆ ಇಳಿಕೆ
Kambala: ಕೋಣಗಳ ಸಂಖ್ಯೆ ದುಪ್ಪಟ್ಟು-ಕಂಬಳ ಆಸಕ್ತಿ ಮೂರುಪಟ್ಟು!
Waqf Notice: ಒಂದಿಂಚು ಜಮೀನು ವಕ್ಫ್‌ಗೆ ಹೋಗಲು ಬಿಡಲ್ಲ: ಸಚಿವ ಎಂ.ಬಿ.ಪಾಟೀಲ್
MUST WATCH
ಹೊಸ ಸೇರ್ಪಡೆ
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
Golden Jubliee: ಪತ್ರಿಕೆಯ ಓದು ಪ್ರತಿಯೊಬ್ಬರಿಗೂ ಆಹಾ! ಎನಿಸುವಂತಿರಲಿ
By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್.ಡಿ.ದೇವೇಗೌಡ
High Court: ʼಅಪರಾಧಿ ಪತಿಯೊಂದಿಗೆ ನೆಲೆಸಿದ ಮಾತ್ರಕ್ಕೆ ಪತ್ನಿಯನ್ನೂ ಅಪರಾಧಿ ಮಾಡಲಾಗದುʼ
Karnataka: ಅರಣ್ಯದಲ್ಲಿ ನಿರಂತರ ಗಣಿ ಚಟುವಟಿಕೆಗೆ ಅನುಮತಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.