ನರಹಂತಕ ಕಾಡಾನೆ ಸೆರೆಗೆ ನಾಳೆಯಿಂದ ಕಾರ್ಯಾಚರಣೆ


Team Udayavani, Jul 28, 2019, 2:06 PM IST

hasan-tdy-2

ಹಾಸನ: ನರಹಂತಕ ಕಾಡಾನೆಯ ಸೆರೆಗೆ ಜು.29ರಿಂದ ಕಾರ್ಯಾಚರಣೆ ಆರಂಭಿಸಲು ಅರಣ್ಯ ಇಲಾಖೆ ಸಿದ್ಧತೆ ನಡೆಸಿದ್ದು, ಐದು ಪಳಗಿದ ಆನೆಗಳು ಸೀಗೆಗುಡ್ಡ ಕಾವಲಿನ ವೀರಾಪುರದ ಬಳಿಯ ಕಾರ್ಯಾಚರಣೆಯ ಶಿಬಿರಕ್ಕೆ ಬಂದಿಳಿದಿವೆ.

ಕಳೆದ ಒಂದು ತಿಂಗಳನಿಂದ ಹಾಸನದ ಸುತ್ತಮುತ್ತ ಸಂಚರಿಸುತ್ತಿರುವ ಒಂಟಿ ಸಲಗವು ಜು.22 ರಾತ್ರಿ ಹಾಸನದ ಜವೇನಹಳ್ಳಿ ಮಠದ ಕೆರೆಯಲ್ಲಿ ಕಾಣಿಸಿ ಕೊಂಡಿತ್ತು. ಅದನ್ನು ಅರಣ್ಯ ಇಲಾಖೆ ಅಧಿಕಾರಿಗಗಳು ಮತ್ತು ಸಿಬ್ಬಂದಿ ಜು.23 ರಂದು ಮುಂಜಾನೆ ಸೀಗೆಗುಡ್ಡದ ಅರಣ್ಯಕ್ಕೆ ಓಡಿಸಿದ್ದರು. ಕಾಡಾನೆಯು ಅದೇ ದಿನ ಸಂಜೆ ಅರಣ್ಯ ಇಲಾಖೆಯ ಕಾವಲುಗಾರ ಲಿಂಗರಸನಹಳ್ಳಿಯ ಅಣ್ಣೇಗೌಡ (50) ಎಂಬವರನ್ನು ತುಳಿದು ಸಾಯಿಸಿತ್ತು.

ಸೀಗೆಗುಡ್ಡ ಅರಣ್ಯದಲ್ಲಿ ಕಾಡಾನೆ: ಸೀಗೆಗುಡ್ಡ ಪರಿಸರ ದಲ್ಲಿಯೇ ಸಂಚರಿಸುತ್ತಿರುವ ನರಹಂತಕ ಆನೆ ಮತ್ತಷ್ಟು ಅನಾಹುತ ಉಂಟುಮಾಡುವ ಮೊದಲು ಅದನ್ನು ಹಿಡಿಯಲು ಅರಣ್ಯ ಇಲಾಖೆ ಸೀಗೆಗುಡ್ಡ ಅರಣ್ಯ ಪರಿಸರದಲ್ಲಿರುವ ವೀರಾಪುರ ಬಳಿ ಕಾರ್ಯಾ ಚರಣೆಯ ಶಿಬಿರ ನಿರ್ಮಿಸಿದ್ದು, ಕಾಡಾನೆ ಹಿಡಿಯಲು ಸಿದ್ಧತೆ ಮಾಡಿಕೊಂಡಿದ್ದು, ಕೊಡಗು ಜಿಲ್ಲೆ ಕುಶಾಲ ನಗರ ಸಮೀಪದ ದುಬಾರೆ ಆನೆ ಶಿಬಿರದಿಂದ ಮೂರು, ಮತ್ತಿಗೋಡು ಆನೆ ಶಿಬಿರದಿಂದ ಎರಡು ಪಳಗಿದ ಆನೆಗಳು ಶನಿವಾರ ಐದು ಲಾರಿಗಳಲ್ಲಿ ಬಂದಿಳಿದವು.

ಶಾಪ್‌ ಶೂಟರ್‌ ಆಗಮಿಸುವ ನಿರೀಕ್ಷೆ: ಕಾಡಾನೆಯು ಸೀಗೆಗುಡ್ಡ ಅರಣ್ಯದಿಂದ ಹೊರ ಹೋಗದಂತೆ ಕಳೆದ ನಾಲ್ಕು ದಿನಗಳಿಂದಲೂ ಅರಣ್ಯ ಇಲಾಖೆ ಸಿಬ್ಬಂದಿ ಕಾವಲು ಕಾಯುತ್ತಿದ್ದು, ಭಾನುವಾರ ಶಾರ್ಪ್‌ ಶೂಟರ್‌ ಮತ್ತು ವನ್ಯಜೀವಿ ವೈದ್ಯರು ಕಾರ್ಯಾಚರಣೆ ಶಿಬಿರಕ್ಕೆ ಆಗಮಿಸುವ ನಿರೀಕ್ಷೆಯಿದೆ. ಮುಖ್ಯವಾಗಿ ಆನೆಯನ್ನು ಹಿಡಿಯಲು ಅರಿವಳಿಕೆ ಚುಚ್ಚುಮದ್ದು ಇನ್ನೂ ಬಂದಿಲ್ಲ. ಭಾನುವಾರ ಸಂಜೆ ವೇಳೆಗೆ ಚುಚ್ಚುಮದ್ದು ಬರಬಹುದು. ಇಲ್ಲದಿದ್ದರೆ ಒಂಡೆರೆಡು ದಿನ ಕಾರ್ಯಾಚರಣೆ ಮುಂದೆ ಹೋಗಬಹುದು. ಭಾನುವಾರ ಬೆಳಗ್ಗೆ ವೇಳೆಗೆ ಅರಿವಳಿಕೆ ಚುಚ್ಚುಮದ್ದು ಲಭ್ಯವಾದರೆ ಭಾನುವಾರವೇ ಕಾಡಾನೆಯನ್ನು ಸೆರೆ ಹಿಡಿಯಲಾಗುವುದು ಎಂದೂ ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹಿಂಡಿನಿಂದ ಬೇರ್ಪಟ್ಟ ಸಲಗ: ಹಿಂಡಿನಿಂದ ಬೇರ್ಪ ಟ್ಟಿರುವ ಒಂಟಿ ಸಲಗವು ಒಂದು ತಿಂಗಳಿನಿಂದ ಹಾಸನ ತಾಲೂಕಿನಲ್ಲೇ ಸಂಚರಿಸುತ್ತಿದೆ. ಒಂದು ತಿಂಗಳ ಹಿಂದೆ ಹಾಸನದ ಹುಣಸಿನಕೆರೆಯಲ್ಲಿ ಕಾಣಿಸಿಕೊಂಡಿದ್ದ ಸಲಗ ಹಾಸನ ನಗರದ ಜವೇನಹಳ್ಳಿ ಮಠದ ಬಳಿ ಇರುವ ಪೆನ್‌ಷನ್‌ ಮೊಹಲ್ಲಾದ ಕೆರೆಯಲ್ಲಿ ಜು.22 ರಾತ್ರಿ ಕಾಣಿಸಿಕೊಂಡಿತ್ತು. ಮಾಹಿತಿ ಪಡೆದ ಆರಣ್ಯಾ ಧಿಕಾರಿಗಳು ತಕ್ಷಣವೇ ಕಾರ್ಯೋನ್ಮುಖರಾಗಿ ರಾತ್ರಿ 3.30 ರ ವೇಗೆಗೆ ಅಗತ್ಯ ಸಿಬ್ಬಂದಿಯೊಂದಿಗೆ ಆಗಮಿಸಿ ಆನೆಯನ್ನು ಬೆಳಗಾಗುವುದರೊಳಗೆ ಹಾಸನ ನಗರ ದಿಂದ ಹೊರಕ್ಕೆ ಓಡಿಸಿದರು.

ಉದ್ಧೂರು, ಶಂಖ, ಅತ್ತಿಹಳ್ಳಿ, ಚಿನ್ನೇನಹಳ್ಳಿ, ಇಬ್ದಾ ಣೆಯ ಹೊರವಲಯದಲ್ಲಿ ಹಿಡುವಳಿ ಜಮೀನಿನ ಮೂಲಕ ಸೀಗೆಗುಡ್ಡ ಅರಣ್ಯಕ್ಕೆ ಅಟ್ಟಿ ನಿಟ್ಟುಸಿರು ಬಿಟ್ಟಿ ದ್ದರು. ಆದರೆ ಸಂಜೆ ವೇಳೆಗೆ ಕಾಡಾ ನೆಯು ಫಾರೆಸ್ಟ್‌ ವಾಚರ್‌ ಅಣ್ಣೇಗೌಡ ಎಂಬವರನ್ನು ಬಲಿ ತೆಗೆದು ಕೊಂಡಿತ್ತು. ಇದಕ್ಕೂ ಮೊದಲು ಈ ಕಾಡಾನೆಯು ಇಬ್ಬರನ್ನು ಬಲಿತೆಗೆದುಕೊಂಡಿತ್ತು. ಹಾಗಾಗಿ ಈ ನರ ಹಂತಕ ಆನೆಯನ್ನು ಹಿಡಿಯುವುದು ಅನಿವಾರ್ಯ ಎಂದು ಜಿಲ್ಲೆಯ ಅರಣ್ಯಾಧಿಕಾರಿಗಳು ಹಿರಿಯ ಅರಣ್ಯಾಧಿಕಾರಿಗಳಿಗೆ ವರದಿ ಸಲ್ಲಿಸಿ ಮನವರಿಕೆ ಮಾಡಿಕೊಟ್ಟಿದ್ದರಿಂದ ಆನೆ ಹಿಡಿಯಲು ಅನುಮತಿ ನೀಡಿದ್ದಾರೆ.

ಟಾಪ್ ನ್ಯೂಸ್

Madikeri: ಮನೆಯ ಆವರಣದಲ್ಲಿ ಗಾಂಜಾ ಬೆಳೆದ ಆರೋಪಿಯ ಬಂಧನ

Madikeri: ಮನೆಯ ಆವರಣದಲ್ಲಿ ಗಾಂಜಾ ಬೆಳೆದ ಆರೋಪಿಯ ಬಂಧನ

1-aaa

PM Modi ಭೇಟಿಯಾಗಿ ವಿಶೇಷ ಮನವಿ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ

Haveri: ಮುಖ್ಯಮಂತ್ರಿಯಾಗುವ ಆಸೆಯಿದೆ, ಆದರೆ…: ಸತೀಶ್‌ ಜಾರಕಿಹೊಳಿ

Haveri: ಮುಖ್ಯಮಂತ್ರಿಯಾಗುವ ಆಸೆಯಿದೆ, ಆದರೆ…: ಸತೀಶ್‌ ಜಾರಕಿಹೊಳಿ

18-bng

Bengaluru: ಕಂಕಣ ಕಾಲ-2 ಅರಮನೆ ಮೈದಾನದಲ್ಲೂ ಬಜೆಟ್‌ ವಿವಾಹ ಸಾಧ್ಯ!

Maharstra: ಬೈಕ್‌ಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಬಸ್ ಪಲ್ಟಿ: 10ಮಂದಿ ಮೃತ್ಯು

Maharashtra: ಬೈಕ್ ಸವಾರನನ್ನು ತಪ್ಪಿಸಲು ಹೋಗಿ ಬಸ್ ಪಲ್ಟಿ… 10 ಮಂದಿ ಮೃತ್ಯು

ಯತ್ನಾಳ್‌

Vijayapura: ಸಿದ್ದರಾಮಯ್ಯ ಈಗ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ: ಯತ್ನಾಳ್‌ ಟೀಕೆ

Karnataka ಸೇರಿ 4ರಾಜ್ಯಗಳಿಗೆ ಬೇಕಿದ್ದ ಹಂತಕ ಅರೆಸ್ಟ್, 2000 CCTV ಪರಿಶೀಲಿಸಿದ್ದ ಪೊಲೀಸರು

Karnataka ಸೇರಿ 4ರಾಜ್ಯಗಳಿಗೆ ಬೇಕಿದ್ದ ಹಂತಕ ಅರೆಸ್ಟ್, 2000 CCTV ಪರಿಶೀಲಿಸಿದ್ದ ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-alur

Alur: ವಿದ್ಯುತ್ ಶಾರ್ಟ್ ಸರ್ಕ್ಯೂಟ್- ಆಕಸ್ಮಿಕ ಬೆಂಕಿ; ಗೃಹೋಪಯೋಗಿ ವಸ್ತುಗಳು ಬೆಂಕಿಗಾಹುತಿ

Hassan: ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕ್ಯ ಮೆರೆದ ಕಾರ್ಮಿಕನ ಕುಟುಂಬ

Hassan: ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕ್ಯ ಮೆರೆದ ಕಾರ್ಮಿಕನ ಕುಟುಂಬ

Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!

Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!

Hassan: ಗರ್ಭಿಣಿ ಪತ್ನಿಯ ಹತ್ಯೆಗೈದು ಆತ್ಮಹ*ತ್ಯೆಗೆ ಯತ್ನಿಸಿದ ಪತಿ

Hassan: ಗರ್ಭಿಣಿ ಪತ್ನಿಯ ಹತ್ಯೆಗೈದು ಆತ್ಮಹ*ತ್ಯೆಗೆ ಯತ್ನಿಸಿದ ಪತಿ

1-hale-beed

Halebeedu; ನ. 29-ಡಿ. 4: ಜೈನರ ಗುತ್ತಿ ಕ್ಷೇತ್ರದಲ್ಲಿ ಪಂಚಕಲ್ಯಾಣ ಮಹೋತ್ಸವ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Madikeri: ಮನೆಯ ಆವರಣದಲ್ಲಿ ಗಾಂಜಾ ಬೆಳೆದ ಆರೋಪಿಯ ಬಂಧನ

Madikeri: ಮನೆಯ ಆವರಣದಲ್ಲಿ ಗಾಂಜಾ ಬೆಳೆದ ಆರೋಪಿಯ ಬಂಧನ

1-aaa

PM Modi ಭೇಟಿಯಾಗಿ ವಿಶೇಷ ಮನವಿ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ

Haveri: ಮುಖ್ಯಮಂತ್ರಿಯಾಗುವ ಆಸೆಯಿದೆ, ಆದರೆ…: ಸತೀಶ್‌ ಜಾರಕಿಹೊಳಿ

Haveri: ಮುಖ್ಯಮಂತ್ರಿಯಾಗುವ ಆಸೆಯಿದೆ, ಆದರೆ…: ಸತೀಶ್‌ ಜಾರಕಿಹೊಳಿ

18-bng

Bengaluru: ಕಂಕಣ ಕಾಲ-2 ಅರಮನೆ ಮೈದಾನದಲ್ಲೂ ಬಜೆಟ್‌ ವಿವಾಹ ಸಾಧ್ಯ!

Yuva rajkumar’s Ekka movie muhurtha

Ekka: ಯುವ ರಾಜಕುಮಾರ್‌ ಹೊಸ ಸಿನಿಮಾ ʼಎಕ್ಕʼ ಮುಹೂರ್ತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.