ಚನ್ನಪಟ್ಟಣದಲ್ಲಿ ಫ್ಲೆಕ್ಸ್‌, ಬ್ಯಾನರ್‌ಗಳ ಹಾವಳಿ

ಮಿತಿಮೀರಿದೆ ನೋ ಪಾರ್ಕಿಂಗ್‌ ಫಲಕಗಳ ಕಾಟ • ಎಲ್ಲೆಂದರಲ್ಲಿ ಜಾಹೀರಾತು ಪ್ರದರ್ಶನ

Team Udayavani, Jul 28, 2019, 3:06 PM IST

rn-tdy-2

ಚನ್ನಪಟ್ಟಣದ ಮನೆಗಳ ಮುಂದೆ ಖಾಸಗಿ ಮೊಬೈಲ್, ಚಿನ್ನಾಭರಣ ಸಾಲ ಸಂಸ್ಥೆಗಳು ನೋ ಪಾರ್ಕಿಂಗ್‌ ಫಲಕ ಅಳವಡಿಸಿರುವುದು.

ಚನ್ನಪಟ್ಟಣ: ಎಲ್ಲೆಂದರಲ್ಲಿ ರಾರಾಜಿಸುವ ಫ್ಲೆಕ್ಸ್‌, ಬ್ಯಾನರ್‌ಗಳು ಪಟ್ಟಣದ ಸೌಂದರ್ಯ ಹಾಳು ಮಾಡುತ್ತಿರುವುದು ಒಂದೆಡೆಯಾದರೆ, ತಮ್ಮ ವ್ಯವಹಾರ ಉನ್ನತಿಗಾಗಿ ಮೊಬೈಲ್, ಚಿನ್ನಾಭರಣ ಸಾಲ ಸಂಸ್ಥೆಗಳು ಸೇರಿದಂತೆ ಹಲವು ಖಾಸಗಿ ಉದ್ಯಮಗಳು ಪ್ರತಿ ಮನೆಗಳ ಗೇಟ್‌ಗಳಿಗೆ ನೋ ಪಾರ್ಕಿಂಗ್‌ ಬೋರ್ಡ್‌ ಪ್ರದರ್ಶಿಸಿ ಅಂದವನ್ನು ಇನ್ನಷ್ಟು ಹಾಳು ಮಾಡುತ್ತಿವೆ.

ಹೌದು, ಪಟ್ಟಣ ಪ್ರದೇಶದ ಪ್ರತಿ ಬೀದಿ, ಗಲ್ಲಿಗಳ ಪ್ರತಿ ಮನೆಗಳ ಗೇಟ್‌ಗಳ ಮುಂದೆ ನೋ ಪಾರ್ಕಿಂಗ್‌ ಫಲಕಗಳ ಹಾವಳಿ ಮಿತಿಮೀರಿದೆ. ಎಲ್ಲಿ ಹೋದರೂ ಈ ಕಂಪನಿಗಳ ಬಿಟ್ಟಿ ಜಾಹೀರಾತು ಕಿರಿಕಿರಿಯುಂಟು ಮಾಡುತ್ತಿದೆ. ಗಲ್ಲಿಯಲ್ಲಿ ಸಣ್ಣ ವಾಹನಗಳು ಹೋಗಲೂ ಸಹ ಜಾಗವಿಲ್ಲದಿದ್ದರೂ ಅಲ್ಲಿಯೂ ನೋ ಪಾರ್ಕಿಂಗ್‌ ಬೋರ್ಡ್‌ ತಗುಲಿಸಲಾಗುತ್ತಿದೆ. ರಸ್ತೆಯ ಎರಡೂ ಬದಿಯಲ್ಲಿ ನೋ ಪಾರ್ಕಿಂಗ್‌ ಬೋರ್ಡ್‌ಗಳನ್ನು ಹಾಕಲಾಗಿದ್ದು, ಎಲ್ಲಿ ವಾಹನ ನಿಲ್ಲಿಸಬೇಕೆಂದು ಸಣ್ಣ ವಾಹನ ಸವಾರರು ತಲೆಕೆಡಿಸಿಕೊಂಡಿದ್ದಾರೆ.

ಬೋರ್ಡ್‌ ಸಾರ್ವಜನಿಕ ಹಿತಾಸಕ್ತಿಗಲ್ಲ: ಪ್ರತಿ ಮನೆಗಳ ಮುಂದೆ ಈ ಬೋರ್ಡ್‌ ಹಾಕಿರುವುದು ಸಾರ್ವಜನಿಕ ಹಿತಾಸಕ್ತಿಗಲ್ಲ. ಬದಲಾಗಿ ಕೇವಲ ಅವರ ಉದ್ದಿಮೆಯನ್ನು ಉನ್ನತಕ್ಕೇರಿಸುವುದಕ್ಕಾಗಿ ಎನ್ನುವುದು ತಿಳಿದಿದ್ದರೂ ಮನೆಗಳ ಮಾಲೀಕರು ಸುಮ್ಮನಾಗಿದ್ದಾರೆ. ಇನ್ನು ಆ ಮನೆಗಳ ಮುಂದೆ ಒಂದು ವಾಹನವಿರಲಿ, ಒಂದು ನಾಯಿಯೂ ನಿಲ್ಲುವುದಿಲ್ಲ. ನಿತ್ಯ ಅಲ್ಲಿ ವಾಹನಗಳ ಸಂಚಾರವೇ ವಿರಳವಾಗಿದೆ ಎನ್ನುವ ಸನ್ನಿವೇಶ ಇರುವ ಕಡೆಗಳಲ್ಲಿಯೂ ನೋ ಪಾರ್ಕಿಂಗ್‌ ಬೋರ್ಡ್‌ ರಾರಾಜಿಸುತ್ತಿವೆ. ಇದು ಇಡೀ ಪರಿಸರದ ಅಂದಗೆಡಲು ಕಾರಣವಾಗುತ್ತಿದೆ.

ವಾಹನ ಎಲ್ಲಿ ನಿಲ್ಲಿಸಬೇಕೆಂಬ ಆತಂಕ: ಯಾವುದೇ ಒಂದು ರಸ್ತೆಯ ಒಂದು ಬದಿಯಲ್ಲಿ ವಾಹನ ನಿಲುಗಡೆಗೆ ಅವಕಾಶ ಇರುತ್ತದೆ ಎಂಬುದು ಸಾಮಾನ್ಯ ಸಂಗತಿ. ಆದರೆ, ಈ ವ್ಯಕ್ತಿಗಳ ಪ್ರಕಾರ ಎರಡೂ ಕಡೆ ನಿಲುಗಡೆ ಮಾಡುವಂತಿಲ್ಲ. ಬೀದಿಯಲ್ಲಿ ಹೇಳಿಕೇಳಿ ಜಾಗವೇ ಇಲ್ಲದಂತೆ ಸಾಲುಸಾಲಾಗಿ ಮನೆಗಳಿವೆ. ಎಲ್ಲಾ ಮನೆಗಳ ಗೇಟಿಗೂ ಬೋರ್ಡ್‌ ತಗುಲಿಸಿದರೆ, ವಾಹನಗಳನ್ನು ಎಲ್ಲಿ ನಿಲ್ಲಿಸಬೇಕು ಎನ್ನುವುದು ಯಕ್ಷಪ್ರಶ್ನೆಯಾಗಿದೆ.

ಬಸ್‌ ನಿಲ್ದಾಣದಲ್ಲೂ ಬಿಟ್ಟಿ ಪ್ರಚಾರ: ಪ್ರತಿ ಮನೆಗಳ ಗೇಟಿಗೆ ಫಲಕ ತಗುಲಿಸಿ, ವ್ಯವಹಾರ ಹೆಚ್ಚಿಸುವ ಗಿಮಿಕ್‌ನಲ್ಲಿ ಯಶಸ್ವಿಯಾಗಿರುವವರನ್ನು ಮಾದರಿಯಾಗಿಸಿಕೊಂಡು ಇನ್ನೂ ಕೆಲವರು ಬಸ್‌ ನಿಲ್ದಾಣಗಳ ಬಳಿಯೂ ತಮ್ಮ ಫಲಕ ತಗುಲಿಸುವ ಮೂಲಕ ನಗರಸಭೆ ಆಡಳಿತ ವ್ಯವಸ್ಥೆ ನಾಚುವಂತೆ ಮಾಡಿದ್ದಾರೆ. ತಮ್ಮ ಸಂಸ್ಥೆಯ ಇಡೀ ವಿವರಗಳನ್ನು ದೊಡ್ಡದಾಗಿ ನಮೂದಿಸಿ, ಬಸ್‌ ನಿಲ್ದಾಣದ ವಿವರವನ್ನು ಸಣ್ಣದಾಗಿ ನಮೂದಿಸಿ ಫಲಕ ನೆಟ್ಟು ಗೆಲುವಿನ ನಗೆ ಬೀರುತ್ತಿದ್ದಾರೆ.

ಅಕ್ರಮ ನಾಮ ಫಲಕ ಅಳವಡಿಕೆ: ಯಾವುದೇ ಅನುಮತಿ ಪಡೆಯದೆ, ಶುಲ್ಕವನ್ನೂ ಪಾವತಿಸದೇ ಅಕ್ರಮವಾಗಿ ನಾಮ ಫಲಕಗಳು ನಗರ ಪ್ರದೇಶದ ಎಲ್ಲೆಡೆ ಕಾಣುತ್ತಿದ್ದರೂ, ಸಂಬಂಧಪಟ್ಟ ನಗರಸಭೆ ಅಧಿಕಾರಿಗಳು ಮಾತ್ರ ತಮಗೂ ಇದಕ್ಕೂ ಸಂಬಂಧವೇ ಇಲ್ಲ ಎನ್ನುವಂತೆ ಸುಮ್ಮನಿದ್ದಾರೆ.

ಕೇವಲ ಹೆದ್ದಾರಿಯಲ್ಲಿ ಕಾಣುವ ಫ್ಲೆಕ್ಸ್‌ ತೆರವು ಮಾಡುವುದಷ್ಟೇ ನಮ್ಮ ಕೆಲಸ ಎಂದುಕೊಂಡಿರುವ ಪರಿಸರ ವಿಭಾಗದ ಅಧಿಕಾರಿಗಳು, ಪಟ್ಟಣದ ಸೌದರ್ಯವನ್ನು ಹಾಳು ಮಾಡುವ ಅನಧಿಕೃತ ಬೋರ್ಡ್‌ಗಳನ್ನು ಏಕೆ ತೆರವುಗೊಳಿಸಿಲ್ಲ. ಅಕ್ರಮವಾಗಿ ಹಾಕಿರುವವರ ವಿರುದ್ಧ ಏಕೆ ಕ್ರಮ ಕೈಗೊಳ್ಳುತ್ತಿಲ್ಲ ಎನ್ನುವುದು ನಾಗರಿಕರ ಪ್ರಶ್ನೆಯಾಗಿದೆ.

ಅನುಮತಿಯೇ ಪಡೆದಿಲ್ಲ: ಇನ್ನು ಪಟ್ಟಣ ವ್ಯಾಪ್ತಿಯಲ್ಲಿ ಯಾವುದೇ ಉದ್ಯಮವಿರಲಿ, ಖಾಸಗಿ ವ್ಯಕ್ತಿಗಳಿರಲಿ ತಮ್ಮ ಸಂಸ್ಥೆಗೆ ಸಂಬಂಧಿಸಿದ ಅಥವಾ ವೈಯಕ್ತಿಕ ಫಲಕಗಳನ್ನು, ಫ್ಲೆಕ್ಸ್‌, ಬ್ಯಾನರ್‌ಗಳನ್ನು ಹಾಕುವ ಮುಂಚೆ ಸಂಬಂಧಪಟ್ಟ ನಗರಸಭೆಯ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಆದರೆ, ಇಲ್ಲಿ ಆ ನಿಯಮವನ್ನು ಗಾಳಿಗೆ ತೂರಲಾಗಿದೆ. ನೋ ಪಾರ್ಕಿಂಗ್‌ ಅಥವಾ ಬಸ್‌ ನಿಲ್ದಾಣದ ಮಾಹಿತಿಯನ್ನು ಹಾಕಲು ಇವರಿಗೆ ಅನುಮತಿ ನೀಡಿದವರು ಯಾರು? ಸಂಬಂಧಪಟ್ಟ ಮನೆಯವರ ಅನುಮತಿ ಪಡೆದಿದ್ದಾರಾ ಅಥವಾ ಹೆದ್ದಾರಿ ಪ್ರಾಧಿಕಾರದ ಅನುಮತಿ ಪಡೆದಿದ್ದಾರಾ ಎಂಬುದು ಜಿಜ್ಞಾಸೆ ಮೂಡಿಸಿದೆ.

ಸಂಬಂಧಪಟ್ಟ ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಂಡು ನಗರದ ಸೌಂದರ್ಯಕ್ಕೆ ಧಕ್ಕೆಯುಂಟುಮಾಡುತ್ತಿರುವ ಫಲಕಗಳನ್ನು ಕೂಡಲೇ ತೆರವುಗೊಳಿಸಬೇಕಿದೆ. ಹಾಗೆಯೇ ಬಿಟ್ಟಿ ಪ್ರಚಾರ ಪಡೆಯುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿದೆ.

 

● ಎಂ.ಶಿವಮಾದು

ಟಾಪ್ ನ್ಯೂಸ್

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

Kharge

Adani ಕುಟುಂಬ ವಶಕ್ಕೆ ಪಡೆದು ತನಿಖೆ ನಡೆಸಲಿ : ಖರ್ಗೆ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚUdupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

ಬೈಡೆನ್‌ “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು

Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

venkatesh-gowda

Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ

Fraud: “ವಿಡಿಯೋಗೆ ಲೈಕ್‌ ನೀಡಿ’ 13.97 ಲಕ್ಷ ಕಳೆದುಕೊಂಡರು!

Fraud: “ವಿಡಿಯೋಗೆ ಲೈಕ್‌ ನೀಡಿ’ 13.97 ಲಕ್ಷ ಕಳೆದುಕೊಂಡರು!

Yogeshwar

C.P.Yogeshwara; ಜಮೀರ್ ಹೇಳಿಕೆ ಪರಿಣಾಮ…: ಸೋಲಿನ ಆತಂಕ ಹೊರ ಹಾಕಿದ ಸೈನಿಕ?!

CM-Ramanagara

By Election: ದೇವೇಗೌಡರನ್ನು 1994ರಲ್ಲಿ ಮುಖ್ಯಮಂತ್ರಿ ಮಾಡಿದ್ದೇ ನಾನು: ಸಿಎಂ ಸಿದ್ದರಾಮಯ್ಯ

Ramanagara: ಆರು ಟ್ರಾನ್ಸ್‌‌ ಫಾರ್ಮರ್ ಗಳ ಕಳವು

Ramanagara: ಆರು ಟ್ರಾನ್ಸ್‌‌ ಫಾರ್ಮರ್ ಗಳ ಕಳವು

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Suside-Boy

Karkala: ಬೋಳ ಗ್ರಾಮದ ವ್ಯಕ್ತಿ ಆತ್ಮಹತ್ಯೆ

Suside-Boy

Mudubidre: ಅಂತಿಮ ಬಿಬಿಎಂ ವಿದ್ಯಾರ್ಥಿ ಆತ್ಮಹತ್ಯೆ

Suside-Boy

Belthangady: ಕಲ್ಮಂಜ: ರಿಕ್ಷಾ ಚಾಲಕ ಆತ್ಮಹತ್ಯೆ

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

Suside-Boy

Punjalakatte: ಕೊಯಿಲದ ವ್ಯಕ್ತಿ ಹಾಸನದಲ್ಲಿ ನಿಗೂಢ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.