ಬಾವಿಗಳೇ ಆಧಾರ; ನೀರಿಂಗಿಸುವುದೇ ಪರಿಹಾರ
Team Udayavani, Jul 29, 2019, 5:27 AM IST
ಉಡುಪಿ: ಉಡುಪಿ ನಗರಕ್ಕೆ ಹೊಂದಿಕೊಂಡ, ಉಡುಪಿ-ಮಣಿಪಾಲ ಹೆದ್ದಾರಿ ಪಕ್ಕ ಇರುವ ಮಹಾತ್ಮಾಗಾಂಧಿ ಮೆಮೋರಿಯಲ್ ಕಾಲೇಜು(ಎಂಜಿಎಂ) ತನ್ನ ಕ್ಯಾಂಪಸ್‌ನಲ್ಲಿ 5 ಜಲಕೊಯ್ಲು (ಬಾವಿ ಮರುಪೂರಣ) ವ್ಯವಸ್ಥೆ ಅಳವಡಿಸಿ ಮಾದರಿಯೆನಿಸಿದೆ. ಪ.ಪೂ. ಕಾಲೇಜು ಕಟ್ಟಡ, ನೂತನ ರವೀಂದ್ರ ಮಂಟಪ ಸಭಾಂಗಣ, ಕಂಪ್ಯೂಟರ್ ಸಾಯನ್ಸ್ ಸೆಂಟರ್, ಮಹಿಳೆಯರ ಹಾಸ್ಟೆಲ್ ಮತ್ತು ಪ್ರೌಢಶಾಲೆ ಕಟ್ಟಡ- ಹೀಗೆ ಇಲ್ಲಿನ ಕಟ್ಟಡಗಳ ನೀರನ್ನು ಭೂಮಿಗೆ ಇಂಗಿಸಿ ಕಾಲೇಜಿನ ಆವರಣದಲ್ಲಿರುವ 4 ಬಾವಿಗಳಲ್ಲಿ ಜಲಸಂಪತ್ತು ವೃದ್ಧಿಸುವಂತೆ ಮಾಡಲು ಕಾಲೇಜು ಹೆಜ್ಜೆ ಇಟ್ಟಿದೆ.
ಬಾವಿ ನೀರೇ ಬೇಕು
ಪದವಿ, ಪ.ಪೂ. ಕಾಲೇಜುಗಳು, ಪ್ರೌಢಶಾಲೆ, ಹಾಸ್ಟೆಲ್, ಕ್ಯಾಂಟೀನ್ ಹೀಗೆ ಕ್ಯಾಂಪಸ್‌ನ ಒಳಗೆ ಎಲ್ಲೆಡೆಯೂ ಬಾವಿ ನೀರನ್ನು ಬಳಕೆ ಮಾಡುವುದು ಇಲ್ಲಿನ ವಿಶೇಷ. ಕಾಲೇಜು ಕ್ಯಾಂಪಸ್‌ನಲ್ಲಿ ಒಂದೇ ಒಂದು ಕೊಳವೆ ಬಾವಿ ಇಲ್ಲ. ಒಂದು ಬೃಹತ್ ಬಾವಿ ಸೇರಿದಂತೆ ಒಟ್ಟು 4 ಬಾವಿಗಳು ಇವೆ. ಆದರೆ ಕಳೆದ ಬೇಸಗೆಯಲ್ಲಿ ಬಾವಿಗಳಲ್ಲಿಯೂ ನೀರಿನ ಕೊರತೆಯುಂಟಾಯಿತು. ಬೇಸಗೆಯ ಕೊನೆಯ ಒಂದು ತಿಂಗಳು ಟ್ಯಾಂಕರ್ ಮೂಲಕ ನೀರು ತರಿಸಿಕೊಳ್ಳಬೇಕಾಯಿತು. ಇದು ಮಳೆಕೊಯ್ಲಿನ ಕಡೆಗೆ ಯೋಚಿಸುವಂತೆ ಮಾಡಿತು. ಪ್ರಾಂಶುಪಾಲ ಡಾ| ಎಂ.ಜಿ.ವಿಜಯ್ ಅವರು ಸ್ವತಃ ಆಸಕ್ತಿ ವಹಿಸಿ ಆಡಳಿತ ಮಂಡಳಿಯ ಒಪ್ಪಿಗೆ ಪಡೆದು ಜಲಕೊಯ್ಲು ವ್ಯವಸ್ಥೆಯನ್ನು ಅಳವಡಿಸಿಬಿಟ್ಟರು. ಮಣಿಪಾಲ ಎಂಐಟಿಯ ಭೂಗರ್ಭಶಾಸ್ತ್ರಜ್ಞ ಉದಯ ಶಂಕರ್ ಅವರ ಮಾರ್ಗದರ್ಶನದಲ್ಲಿ ಜಲಕೊಯ್ಲು ಘಟಕ ಅಳವಡಿಸಲಾಗಿದೆ.
ಒಂದು ಘಟಕದ ಪೈಪ್‌ಲೈನ್ ಮಾತ್ರ ಬಾಕಿ ಇದೆ. ಉಳಿದಂತೆ ಎಲ್ಲ ಘಟಕಗಳು ಜೂನ್ ಆರಂಭದಲ್ಲೇ ಸಿದ್ಧಗೊಂಡು ಈಗ ಮಳೆ ನೀರನ್ನು ನೆಲದಡಿಗೆ ಸಾಗಿಸಿ ಹತ್ತಿರದ ಬಾವಿಗಳ ನೀರು ಎತ್ತರಿಸುವ ಖಾತರಿ ನೀಡುತ್ತಿವೆ.
ನೂತನ ರವೀಂದ್ರ ಮಂಟಪದ ಸಮೀಪವಿರುವ ಜಲಕೊಯ್ಲು ಘಟಕಕ್ಕೆ ರಾಷ್ಟ್ರಕವಿ ಗೋವಿಂದ ಸಂಶೋಧನಾ ಕೇಂದ್ರ, ನೂತನ ರವೀಂದ್ರ ಮಂಟಪ ಮತ್ತು ಪಕ್ಕದ ಸಿಂಡಿಕೇಟ್ ಬ್ಯಾಂಕ್ ಕಟ್ಟಡದ ನೀರನ್ನು ಪೈಪ್ ಮೂಲಕ ಹಾಯಿಸಲಾಗುತ್ತಿದೆ. ಈ ಎಲ್ಲ ಕಟ್ಟಡಗಳಿಗೆ ತಲಾ 3 ಇಂಚುಗಳ ಪೈಪ್‌ಗ್ಳನ್ನು ಅಳವಡಿಸಿ ಅಲ್ಲಿಂದ 6 ಇಂಚಿನ ಒಂದು ಪೈಪ್ ಮುಖಾಂತರ ನೆಲದಡಿ ಇಂಗಿಸಲಾಗುತ್ತಿದೆ. ಇಲ್ಲಿಂದ ಸುಮಾರು 10 ಮೀಟರ್ ದೂರದಲ್ಲಿರುವ ತೆರೆದ ಬಾವಿಗೆ ಇದರಿಂದ ಪ್ರಯೋಜನವಾಗಲಿದೆ ಎನ್ನುತ್ತಾರೆ ಪ್ರಾಂಶುಪಾಲರು.
ಮರಳು, ಜಲ್ಲಿಕಲ್ಲು ಬಳಸಿ ಶುದ್ಧೀಕರಿಸಿಯೇ ಇಂಗಿಸಲಾಗುತ್ತಿದೆ. ಇದೇ ರೀತಿ ಸೈನ್ಸ್ ಬ್ಲಾಕ್‌ನ ಎದುರಿನ ಬೃಹತ್ ಬಾವಿಯ ಸನಿಹ ಕೂಡ 2 ಘಟಕ ಗಳನ್ನು ಮಾಡಲಾಗಿದೆ. ಇಂತಹ ಘಟಕಗಳಿಗೆ ಪ್ರತ್ಯೇಕ ಮತ್ತೂಂದು ಶುದ್ಧೀಕರಣ ವ್ಯವಸ್ಥೆಗೂ ಸ್ಥಳವಾಕಾಶ ಮೀಸಲಿಡಲಾಗಿದೆ. ಅಲ್ಲಿಂದ ಮುಂದಕ್ಕೆ ಪಿಯುಸಿ ಬ್ಲಾಕ್, ಹಾಸ್ಟೆಲ್ ಮತ್ತು ಕ್ವಾರ್ಟರ್ಸ್ ಸಮೀಪದ ಬಾವಿಗಳಿಗೂ ಅನುಕೂಲವಾಗುವಂತೆ ಜಲಕೊಯ್ಲು ವ್ಯವಸ್ಥೆ ಅಳವಡಿಸಲಾಗಿದೆ.
ಕ್ಯಾಂಪಸ್‌ನಲ್ಲೇ ಇರುವ ಇಂದ್ರಾಳಿ ಪ್ರೌಢಶಾಲೆಯ ಹಿಂಭಾಗದಲ್ಲಿರುವ ಬಾವಿಗೆ ಕಳೆದ ವರ್ಷ ನೇರವಾಗಿ ಮಳೆ ನೀರು ಹಾಯಿಸುವ ಪ್ರಯತ್ನ ನಡೆಸಲಾಗಿತ್ತು. ಆದರೆ ಅದು ಅಷ್ಟು ಸೂಕ್ತವಲ್ಲ ಎಂಬ ಕಾರಣಕ್ಕೆ ಅದನ್ನು ಕೈಬಿಟ್ಟು ಈ ಬಾರಿ ವ್ಯವಸ್ಥಿತವಾಗಿ ಘಟಕ ಅಳವಡಿಸಲಾಗಿದೆ.
ಇಂಗುಗುಂಡಿ 20 ಅಡಿ ಆಳವಿದೆ. 4 ಅಡಿ ವ್ಯಾಸವಿದೆ. ಸರಳವಾಗಿಯೇ ಮಾಡಿದ್ದೇವೆ. ಆದರೆ ನೀರು ಇಂಗಿಸುವ ಗುಂಡಿಗೆ ಸಿಮೆಂಟ್ ರಿಂಗ್‌ಗಳನ್ನು ಹಾಕಿದ್ದೇವೆ. ಇದರಿಂದ ನೀರು ಪಕ್ಕದಲ್ಲೇ ಇಂಗಿ ಬಾವಿಗೆ ಹೆಚ್ಚು ಪ್ರಯೋಜನವಾಗಲಿದೆ ಎಂದು ತಜ್ಞರು ತಿಳಿಸಿದ್ದಾರೆ. ಪೈಪ್ ಕೂಡ ತುಂಬ ಉದ್ದಕ್ಕೆ ಬಳಸಿದ್ದೇವೆ. ಮುಂದಿನ ವರ್ಷ ಜಲಕ್ಷಾಮ ಬಾರದು ಎಂಬ ವಿಶ್ವಾಸ ಪ್ರಾಂಶುಪಾಲರದ್ದು.
ಮಕ್ಕಳಿಗೂ ಜಲಪಾಠ
ಕಾಲೇಜು ಕ್ಯಾಂಪಸ್‌ನಲ್ಲೇ ಅಳವಡಿಸಿರುವ ಜಲಕೊಯ್ಲು ಘಟಕ ಕಾಲೇಜಿನ ವಿದ್ಯಾರ್ಥಿಗಳಿಗೂ ಜಲಪಾಠ ಹೇಳುತ್ತಿದೆ.
ಪ್ರಾಂಶುಪಾಲರು ಖುದ್ದಾಗಿ ಆಸಕ್ತಿ ವಹಿಸಿ ಮಕ್ಕಳಲ್ಲಿ ಜಲಜಾಗೃತಿಯ ಪ್ರಯತ್ನ ನಡೆಸಿದ್ದಾರೆ. ಕೆಲವು ಮಕ್ಕಳು ತಮ್ಮ ಮನೆಗಳಲ್ಲಿಯೂ ಜಲಕೊಯ್ಲು ಮಾಡುವ ಉತ್ಸಾಹ ತೋರಿಸಿದ್ದಾರೆ.
ಪೂರ್ಣ ಸಹಕಾರದಿಂದ ಸಾಧ್ಯ
ಕಳೆದ ವರ್ಷದ ಬೇಸಗೆಯಲ್ಲಿ ಉಂಟಾದ ಜಲಕ್ಷಾಮ ನಮ್ಮಲ್ಲಿ ಜಾಗೃತಿ ಮೂಡಿಸಿತು. ನಮ್ಮ ಬಾವಿಗಳಲ್ಲಿ ಮುಂದಿನ ಬೇಸಗೆಯಲ್ಲಿಯೂ ನೀರಿನ ಮಟ್ಟ ಉಳಿಸಿಕೊಳ್ಳಬೇಕು ಎಂಬ ಉದ್ದೇಶ ನಮ್ಮದು. ಕಾಲೇಜಿನ ಆಡಳಿತ ಮಂಡಳಿಯ ಪೂರ್ಣ ಸಹಕಾರದಿಂದ ಇದು ಸಾಧ್ಯವಾಗಿದೆ.
– ಡಾ| ಎಂ.ಜಿ.ವಿಜಯ್, ಪ್ರಾಂಶುಪಾಲರು, ಎಂಜಿಎಂ ಕಾಲೇಜು ಉಡುಪಿ
ನೀವೂ ಅಳವಡಿಸಿ, ವಾಟ್ಸಪ್ ಮಾಡಿ
ಉದಯವಾಣಿಯ ಅಭಿಯಾನ ದಿಂದ ಪ್ರೇರಣೆಗೊಂಡು ಕಾರ್ಯಾ ಗಾರದಲ್ಲಿ ಭಾಗವಹಿಸಿದವರು ಮಳೆ ನೀರು ಕೊಯ್ಲು ಪದ್ಧತಿಯನ್ನು ತಮ್ಮ ಮನೆಗಳಲ್ಲಿ ಅಳವಡಿಸಲು ಮುಂದಾಗಿದ್ದಾರೆ. ಜತೆಗೆ ತಮ್ಮ ಖುಷಿಯನ್ನು ಉಳಿದವರೊಂದಿಗೂ ಹಂಚಿಕೊಳ್ಳುತ್ತಿದ್ದಾರೆ. ಹೀಗಿರುವಾಗ, “ಮನೆ ಮನೆಗೆ ಮಳೆಕೊಯ್ಲು’ ಅಭಿಯಾನದಿಂದ ಪ್ರೇರಿತರಾಗಿ ನೀವೂ ನಿಮ್ಮ ಮನೆಗಳಲ್ಲಿ ಮಳೆ ಕೊಯ್ಲು ಪದ್ಧತಿ ಅಳವಡಿಸಿಕೊಂಡಿದ್ದರೆ ಫೋಟೋ ಸಮೇತ ನಮಗೆ ವಿವರವನ್ನು ವಾಟ್ಸಪ್ ಮಾಡಿ. ಅವುಗಳನ್ನು ಪತ್ರಿಕೆಯಲ್ಲಿ ಪ್ರಕಟಿಸಿ ಮತ್ತಷ್ಟು ಜನರನ್ನು ಉತ್ತೇಜಿಸೋಣ.
– 7618774529
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಆದಿ ಉಡುಪಿ: ಜುಗಾರಿ ಅಡ್ಡೆಗೆ ಪೊಲೀಸ್ ದಾಳಿ
Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Udupi:ಗೀತಾರ್ಥ ಚಿಂತನೆ 103: ಪಂಡಿತರೆಂದರೇನು?ಅಥವ ಪಂಡಿತರೆಂದರೆ ಯಾರು?
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
IPL Auction: ಕೇನ್, ಮಯಾಂಕ್, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ
Andaman: ಕೋಸ್ಟ್ ಗಾರ್ಡ್ ಕಾರ್ಯಾಚರಣೆ… ಮೀನುಗಾರಿಕಾ ದೋಣಿಯಲ್ಲಿದ್ದ 5ಟನ್ ಮಾದಕ ವಸ್ತು ವಶ
Kundapura: ಮೋಜಿನ ತಾಣಗಳಾಗುತ್ತಿರುವ ಬೀಚ್‌ಗಳು-ಕಡಲಾಮೆಗೆ ಅಪಾಯ!
Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್ ಸುಖಾಂತ್ಯ
BBK11: ಧರ್ಮ ಬಿಗ್ ಬಾಸ್ ಆಟಕ್ಕೆ ತೊಡಕಾದ ಅಂಶಗಳೇನು? ʼಚಾಕ್ಲೇಟ್ ಹೀರೋʼ ಎಡವಿದ್ದೆಲ್ಲಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.