ಅತೃಪ್ತ ಶಾಸಕರು ನನ್ನ ಜತೆ ಚರ್ಚಿಸಿದ್ದರು
Team Udayavani, Jul 29, 2019, 5:17 AM IST
ಕಲಬುರಗಿ: ‘ಕಾಂಗ್ರೆಸ್-ಜೆಡಿಎಸ್ನ ಅತೃಪ್ತ ಶಾಸಕರು ಮುಂಬೈಗೆ ಹೋಗುವ ಮುನ್ನ ನನ್ನೊಂದಿಗೆ ಚರ್ಚೆ ನಡೆಸಿದ್ದರು. ಆದರೆ, ಅಲ್ಲಿಗೆ ಹೋದ ನಂತರ ನನ್ನನ್ನು ಯಾರೂ ಸಂಪರ್ಕಿಸಿಲ್ಲ. ಅತೃಪ್ತರು ಸರ್ಕಾರ ಬೀಳಿಸುವ ಕುರಿತು ನಿರ್ಧಾರ ಕೈಗೊಂಡಿದ್ದೂ ನನಗೆ ಗೊತ್ತಾಗಲಿಲ್ಲ’ ಎಂದು ಜೇವರ್ಗಿಯ ಕಾಂಗ್ರೆಸ್ ಶಾಸಕ ಡಾ| ಅಜಯಸಿಂಗ್ ಹೇಳಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಸಚಿವರಾಗುವ ಹಂಬಲ ಎಲ್ಲ ಶಾಸಕರಿಗೆ ಇದ್ದೇ ಇರುತ್ತದೆ. ನಾನೂ ಸಹ ಸಚಿವನಾಗಿ ಸೇವೆ ಸಲ್ಲಿಸಬೇಕು ಎಂದುಕೊಂಡಿದ್ದೆ. ಮುಂಬೈಗೆ ತೆರಳಿರುವ ಅತೃಪ್ತ ಶಾಸಕರು ಸಚಿವ ಸ್ಥಾನಕ್ಕಾಗಿ ಒತ್ತಾಯಿಸೋಣ ಎಂದು ನನಗೂ ಹೇಳಿದ್ದರು. ಈಗ ರಾಜಕೀಯ ವಾತಾವರಣ ಬದಲಾಗಿದ್ದು, ನಾನು ಸೋಮವಾರ ಸದನಕ್ಕೆ ಹಾಜರಾಗುತ್ತೇನೆ. ಸಿಎಂ ಯಡಿಯೂರಪ್ಪ ಸದನದಲ್ಲಿ ವಿಶ್ವಾಸಮತ ಸಾಬೀತು ಪಡಿಸಲಿದ್ದಾರೆ. ನಾವು ಪ್ರತಿಪಕ್ಷದಲ್ಲಿ ಕೂರಲು ಸಿದ್ಧರಿದ್ದೇವೆ. ಮಧ್ಯಂತರ ಚುನಾವಣೆ ಬಂದರೆ ಎದುರಿಸಲೂ ಸಿದ್ಧ’ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ದ.ಕ.ದ ವೈಭವಿ, ಉಡುಪಿಯ ಧೀರಜ್ ಐತಾಳ್ ; ಸಾಹಸ ಮೆರೆದ ಮಕ್ಕಳಿಗೆ ಶೌರ್ಯ ಪ್ರಶಸ್ತಿ
D.K. Shivakumar: ಬೆಳಗಾವಿ ಕಾಂಗ್ರೆಸ್ ಅಧಿವೇಶನ ಬಗ್ಗೆ ಚರ್ಚೆ
KEA: ಎಂಎಸ್ಸಿ ನರ್ಸಿಂಗ್: ಅರ್ಜಿ ಸಲ್ಲಿಕೆಗೆ ಡಿ. 2 ಕೊನೆ ದಿನ
Karnataka: ಪಠ್ಯಪುಸ್ತಕಕ್ಕೆ ಬೇಡಿಕೆ ಸಲ್ಲಿಸಲು ಡಿ. 9 ಕಡೇ ದಿನ
ಸಾಹಿತ್ಯ ಸಮ್ಮೇಳನನ ಖರ್ಚು ಕಡಿತಗೊಳಿಸಿ ಹಂಪಿ ಕನ್ನಡ ವಿ.ವಿ.ಗೆ ನೆರವು: ಜೋಶಿ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.