ಚಂದ್ರಯಾನ-2 ಫಲಿತಾಂಶಕ್ಕೆ ಕಾಯುತ್ತಿರುವ ರಾಜೀವ್
Team Udayavani, Jul 29, 2019, 6:06 AM IST
ಹೊಸದಿಲ್ಲಿ: ಚಂದ್ರಯಾನ-2 ಯೋಜನೆಯ ಯಶಸ್ವಿ ಉಡಾವಣೆ ಭಾರತೀಯ ವಿಜ್ಞಾನಿಗಳಿಗೆ ಖುಷಿ ಕೊಟ್ಟಿರುವುದು ಮಾತ್ರವಲ್ಲ, ದೂರದ ನ್ಯೂಯಾರ್ಕ್‌ನಲ್ಲಿರುವ ಭಾರತ ಮೂಲದ ರಾಜೀವ್ ವಿ. ಬಾಗ್ಡಿ ಎಂಬವರಲ್ಲೂ ರೋಮಾಂಚನ ತಂದಿದೆ.
ಅದಕ್ಕೆ ಕಾರಣ, ಚಂದ್ರನಲ್ಲಿ 2003ರಲ್ಲಿ ಅವರು ಸೈಟು ಕೊಂಡಿರುವುದು! ಅಚ್ಚರಿ ಯಾ ದರೂ ಇದು ನಿಜ. ಬಾಲ್ಯದಿಂದಲೇ ಚಂದ್ರನ ಮೇಲಿನ ಸಂಶೋಧನೆಗಳಿಂದ ಆಕರ್ಷಿತವಾ ಗಿದ್ದ ಅವರು, 2003ರಲ್ಲಿ ನ್ಯೂಯಾರ್ಕ್‌ನ ಲೂನಾರ್ ಸೊಸೈಟಿ ಇಂಟರ್‌ನ್ಯಾಷನಲ್ ಎಂಬ ಸಂಸ್ಥೆಯಲ್ಲಿ ಹೆಸರು ನೋಂದಾಯಿಸಿ, 140 ಡಾಲರ್ ನೀಡಿ ಚಂದ್ರನಲ್ಲಿ ಸೈಟು ಕೊಂಡಿದ್ದರು.
ಹಾಗಾಗಿ, ಚಂದ್ರಯಾನ-2 ಸಂಶೋಧನೆಯಲ್ಲಿ ಚಂದ್ರನ ಮೇಲೆ ನೀರಿನ ನಿಕ್ಷೇಪ ಪತ್ತೆಯಾದರೆ 2030ರ ಹೊತ್ತಿಗೆ ಅಲ್ಲಿಗೆ ಸ್ಥಳಾಂತರಗೊಳ್ಳಲು ಅವರು ಕಾಯುತ್ತಿದ್ದಾರೆ!
ಆರ್ಬಿಟರ್ ಅವಧಿ ವಿಸ್ತರಣೆ?
ಚಂದ್ರಯಾನ-2 ಅಡಿಯಲ್ಲಿ ಚಂದ್ರನನ್ನು 1 ವರ್ಷ ದವರೆಗೆ ಸುತ್ತಲಿರುವ ಆರ್ಬಿಟರ್‌ನ ಕಾಲಾವಧಿ 2 ವರ್ಷಕ್ಕೆ ಹೆಚ್ಚಾಗುವ ಸಾಧ್ಯತೆಗಳಿವೆ. ಉಡಾವಣೆ ವೇಳೆ ಆರ್ಬಿಟರ್‌ನಲ್ಲಿ 1,697 ಕೆ.ಜಿ. ಇಂಧನದ ಜತೆಗೆ ಹೆಚ್ಚುವರಿಯಾಗಿ 40 ಕೆ.ಜಿ. ಇಂಧನ ತುಂಬ ಲಾಗಿತ್ತು. ಈಗ, ನಿರೀಕ್ಷಿತ ದಿನದಂದೇ ಆರ್ಬಿಟರ್, ಚಂದ್ರನ ಕಕ್ಷೆ ತಲುಪಲಿದ್ದು, ಅದರಲ್ಲಿನ ಹೆಚ್ಚುವರಿ ಇಂಧನ ಹಾಗೆಯೇ ಉಳಿಯುತ್ತದೆ. ಅದನ್ನು ಬಳಸಿಕೊಂಡು ಆರ್ಬಿಟರ್ ಅನ್ನು ಮತ್ತೂಂದು ವರ್ಷದವರೆಗೆ ಚಂದ್ರನನ್ನು ಸುತ್ತುವಂತೆ ಮಾಡುವ ಬಗ್ಗೆ ಇಸ್ರೋ ಚಿಂತನೆ ನಡೆಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
MUST WATCH
ಹೊಸ ಸೇರ್ಪಡೆ
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.