ಸುಳ್ಳು ವೀಡಿಯೋ ಟ್ವೀಟ್ ಮಾಡಿದ ಪಾಕ್ ಸೇನೆ ವಕ್ತಾರ
Team Udayavani, Jul 29, 2019, 6:08 AM IST
ಇಸ್ಲಾಮಾಬಾದ್: ಬಾಲಕೋಟ್ ದಾಳಿ ವೀಡಿಯೋ ಎಂಬುದಾಗಿ ಇನ್ಯಾವುದೋ ವೀಡಿಯೋವನ್ನು ಟ್ವಿಟರ್ನಲ್ಲಿ ಹಂಚಿಕೊಳ್ಳುವ ಮೂಲಕ ಪಾಕಿಸ್ಥಾನದ ಸೇನಾ ವಕ್ತಾರ ಆಸಿಫ್ ಗಫೂರ್ ಸುಳ್ಳು ಸುದ್ದಿ ಹರಡಿದ ಪ್ರಸಂಗ ನಡೆದಿದೆ. ವಾಯು ಪಡೆಯ ನಿವೃತ್ತ ಏರ್ ಮಾರ್ಷಲ್ ಡೆಂಜಿಲ್ ಕೀಲೊರ್ ಅವರ ವಿಡಿಯೋವನ್ನು ಆಸಿಫ್ ಗಫೂರ್ ಟ್ವೀಟ್ ಮಾಡಿದ್ದು, ಇದು ಫೆಬ್ರವರಿ 27 ರಂದು ಭಾರತವು ಪಾಕಿಸ್ಥಾನದ ಮೇಲೆ ದಾಳಿ ನಡೆಸುವ ವಿಫಲ ಯತ್ನ ಎಂಬುದಾಗಿ ಹೇಳಿಕೊಂಡಿದ್ದರು.
ಆದರೆ ಇದು 2015ರಲ್ಲೇ ರೆಕಾರ್ಡ್ ಆಗಿರುವ ವೀಡಿಯೋ ಎಂಬುದನ್ನು ನೆಟ್ಟಿಗರು ಕಂಡುಕೊಂಡಿದ್ದಾರೆ. ಅಷ್ಟೇ ಅಲ್ಲ, ಇದು 1965ರ ಯುದ್ಧದ ಬಗ್ಗೆ ಕೀಲೊರ್ ಮಾತನಾಡಿದ ವೀಡಿಯೋ ಎಂದೂ ನಂತರ ತಿಳಿದುಬಂದಿದೆ. ಆದರೆ ಗಫೂರ್ ತಮ್ಮ ಟ್ವಿಟರ್ನಲ್ಲಿ ಪ್ರಕಟಿಸಿದ ವೀಡಿಯೋದಲ್ಲಿ ಅಭಿನಂದನ್ ವರ್ಧಮಾನ್ ವಿಡಿಯೋವನ್ನೂ ಸೇರಿಸಲಾಗಿದ್ದು, ಮೂಲ ವೀಡಿಯೋವನ್ನು ಎಡಿಟ್ ಮಾಡಿರುವುದು ಸ್ಪಷ್ಟವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.