ವ್ಯಾಘ್ರನ ರಕ್ಷಣೆಗಿಲ್ಲ ಉಗ್ರ ಕ್ರಮ
ಮಧ್ಯಪ್ರದೇಶ, ಮಹಾರಾಷ್ಟ್ರ ಬಳಿಕ ಕರ್ನಾಟಕದಲ್ಲೇ ಹುಲಿಗಳ ಸಾವು ಹೆಚ್ಚು
Team Udayavani, Jul 29, 2019, 8:00 AM IST
ಸಾಂದರ್ಭಿಕ ಚಿತ್ರ
ಬೆಂಗಳೂರು: ಇಂದು ವಿಶ್ವ ಹುಲಿ ದಿನ. ಒಂದೆಡೆ ರಾಜ್ಯದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಾಗಿದೆ ಎಂದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ) ಗಣತಿ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದರೆ, ಮತ್ತೂಂದೆಡೆ ಹುಲಿಗಳ ಸಾವಿನ ಸಂಖ್ಯೆಯೂ ನಿರಂತರವಾಗಿ ಹೆಚ್ಚಳವಾಗುತ್ತಿದೆ.
ಪ್ರಸ್ತಕ ವರ್ಷದಲ್ಲಿ ಏಳು ತಿಂಗಳಲ್ಲಿಯೇ 10 ಹುಲಿಗಳು ಸಾವಿಗೀಡಾಗಿವೆ. ಕಳೆದ ವರ್ಷ 13 ಹುಲಿಗಳು ಹಾಗೂ ಕಳೆದ 7 ವರ್ಷಗಳಲ್ಲಿ 109 ಹುಲಿಗಳು ಸಾವಿಗೀಡಾಗಿದ್ದವು. ಇದಕ್ಕೆ ಕಾರಣ ಹುಲಿ ಸಂರಕ್ಷಣೆಗೆ ಕೇಂದ್ರ ಸರ್ಕಾರ ಯಾವುದೇ ಕಾರ್ಯಕ್ರಮ ಜಾರಿ ಮಾಡಿದರೂ ಅದನ್ನು ಯಶಸ್ವಿಯಾಗಿ ಜಾರಿಗೊಳಿಸದಿರುವುದು ಎಂದು ಅರಣ್ಯ ಇಲಾಖೆ ವಿರುದ್ಧ ಆರೋಪ ಕೇಳಿಬಂದಿದೆ. ಇವುಗಳ ಜತೆಗೆ ಸಂರಕ್ಷಿತ ಪ್ರದೇಶದ ಕೊರತೆ ಹಾಗೂ ಮಾನವ ಪ್ರಾಣಿ ಸಂಘರ್ಷ ಹೆಚ್ಚಳ ಎಂದು ಹೇಳಲಾಗುತ್ತಿದೆ.
2014ರ ಎನ್‌ಟಿಸಿಎ ಗಣತಿಯ ಪ್ರಕಾರ ರಾಜ್ಯದಲ್ಲಿ 406 ಹುಲಿಗಳಿವೆ. ಈ ಬಾರಿ ಗಣತಿ ಮುಕ್ತಾಯ ಗೊಂಡಿದ್ದು, ಸೋಮವಾರ ವರದಿ ಬಿಡುಗಡೆಯಾಗಬೇಕಿದೆ. ಅರಣ್ಯ ಇಲಾಖೆ ಅಧಿಕಾರಿಗಳ ಸಮೀಕ್ಷೆ ಪ್ರಕಾರ ರಾಜ್ಯದಲ್ಲಿ 500ಕ್ಕೂ ಹೆಚ್ಚು ಹುಲಿಗಳಿವೆ ಎಂದು ಹೇಳಲಾಗುತ್ತಿದೆ. ಈ ಮೂಲಕ ಹುಲಿಗಳ ಸಂಖ್ಯೆ ಜಾಸ್ತಿಯಾಗುತ್ತಿದೆ. ಆದರೆ, ಅದಕ್ಕೆ ಪೂರಕವಾಗಿ ಅದರ ವಾಸದ ಪ್ರದೇಶ ಮಾತ್ರ ಹೆಚ್ಚುತ್ತಿಲ್ಲ. ವಾಸ ಸ್ಥಾನ ಕೊರತೆಯಿಂದ ಹುಲಿಗಳ ನಡುವೆ ಸಂಗಾತಿಗಳಿಗಾಗಿ ಕಾದಾಟ, ಜಾಗಕ್ಕಾಗಿ ಕಾದಾಟ ನಡೆಯುವುದು ಸಾಮಾನ್ಯವಾಗಿದೆ. ಎನ್‌ಟಿಸಿಎ ವರದಿ ಪ್ರಕಾರ ಕರ್ನಾಟಕ ಹುಲಿಗಳ ಸಾವಿನ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದೆ. ಮೊದಲನೇ ಸ್ಥಾನದಲ್ಲಿ ಮಧ್ಯಪ್ರದೇಶ ಎರಡನೇ ಸ್ಥಾನದಲ್ಲಿ ಮಹಾರಾಷ್ಟ್ರವಿದೆ.
ಹುಲಿ ದಿನದ ವಿಶೇಷವೇನು?:
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.