ತಿಪ್ಪೆಯಾದ ಕೃಷಿ ಮಾರುಕಟ್ಟೆ
Team Udayavani, Jul 29, 2019, 10:31 AM IST
ಸಿಂದಗಿ: ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿನ ಹರಾಜು ಕಟ್ಟೆ ಬಳಿ ಬಿದ್ದ ಮದ್ಯದ ಪೌಚ್‌ಗಳು ಮತ್ತು ಬೀರ್ ಬಾಟಲಿಗಳು. ಹಾಗೂ ಕೊಳಚೆ ಗುಂಡಿಗಳಾದ ಖಾಲಿ ನಿವೇಶಗಳು.
ಸಿಂದಗಿ: ಸಿಂದಗಿ ತಾಲೂಕು ಕೃಷಿ ಉತ್ಪನ್ನ ಮಾರಕಟ್ಟೆಗೆ 23 ವರ್ಷ ತುಂಬಿದರೂ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯದಿಂದ ಅಭಿವೃದ್ಧಿಯಾಗಿಲ್ಲ. ಸುಸಜ್ಜಿತ ಕಾಂಪೌಂಡಿಲ್ಲ. ಬೆಳಗ್ಗೆ ಸಾರ್ವಜನಿಕ ಶೌಚಾಲಯ ಪ್ರದೇಶವಾದರೆ ಕತ್ತಲಾಗುತ್ತಿದ್ದಂತೆ ಮದ್ಯವ್ಯಸನಿಗಳ ಕೇಂದ್ರವಾಗಿ ಮಾರ್ಪಡುತ್ತದೆ. ಇಲ್ಲಿ ಹೇಳುವವರು ಕೇಳುವವರು ಯಾರು ಇಲ್ಲದಂತಾಗಿದೆ.
1996ರಲ್ಲಿ ಅಸ್ತಿತ್ವಕ್ಕೆ ಬಂದ ಸಿಂದಗಿ ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆಗೆ 2017-18ನೇ ವರ್ಷ ವಾರ್ಷಿಕ 2 ಕೋಟಿ ರೂ. ಬಂದರೆ 2017-18ರಲ್ಲಿ ಬರಗಾಲದ ನಿಮಿತ್ತ ಕೇವಲ 48 ಲಕ್ಷ ರೂ. ಆದಾಯ ಬಂದಿದೆ. ಆದರೆ ಅಭಿವೃದ್ಧಿ ಮಾತ್ರ ಶೂನ್ಯವಾಗಿದೆ. ಮಾರುಕಟ್ಟೆಯ ಆಸ್ತಿಗಳು ಪ್ರತಿ ವರ್ಷ ಹಾಳಾಗುತ್ತ ಹೊರಟಿವೆ. ಕೃಷಿ ಉತ್ಪನ್ನ ಮಾರುಟಕಟ್ಟೆಗೆ ಪರ ಊರಿನಿಂದ ಬಂದ ರೈತರಿಗೆ ತಂಗಲು ರೈತ ಭವನ ಮತ್ತು ಉಪಾಹಾರ ಗೃಹ ಪ್ರಾರಂಭದಿಂದಲೂ ಇದೇ ಆದರೆ ಅದು ರೈತರಿಗೆ ಉಪಯೋಗವಾಗಿಲ್ಲ. ರೈತ ಭವನ ಋತುಮಾನಕ್ಕೆ ತಕ್ಕಂತೆ ಬದಲಾಗುತ್ತದೆ. ತೊಗರಿ ಖರೀದಿ ಸಮಯ ಬಂದಾಗ ತೊಗರಿ ಸಂಗ್ರಹ ಗೋಡಾವನ್ನಾಗಿ ಪರಿವರ್ತನೆಯಾಗುತ್ತದೆ. ಇನ್ನುಳಿದ ಸಂದರ್ಭದಲ್ಲಿ ಭವನಕ್ಕೆ ಕೀಲಿ ಹಾಕುತ್ತಾರೆ. ಏಕೆಂದರೆ ಅಲ್ಲಿ ವಾಸ ಮಾಡಲಿಕ್ಕೂ ಯೋಗ್ಯ ವಾತಾವರಣವಿಲ್ಲ. ಹೀಗಾದಲ್ಲಿ ರೈತರು ಹೇಗೆ ರೈತ ಭವನ ಉಪಯೋಗಿಸುತ್ತಾರೆ?
1998-99ರಲ್ಲಿ ದನಗಳ ಬಜಾರ ಪ್ರಾರಂಭದ ವರ್ಷದಲ್ಲಿಯೇ ಯಶಸ್ವಿಯಾಗಲಿಲ್ಲ. ಈಗ ದನಗಳ ಬಜಾರ್ ತಾಲೂಕಿನ ದೇವರಹಿಪ್ಪರಗಿ ಮತ್ತು ಆಲಮೇಲ ಪಟ್ಟಣದಲ್ಲಿ ಜರಗುತ್ತಿವೆ. ಈಗ ಇಲ್ಲಿ ಕುರಿಗಳ ಬಜಾರ್ ಮಾತ್ರ ನಡೆಯುತ್ತದೆ. ರವಿವಾರಕ್ಕೊಮ್ಮೆ ನಡೆಯುವ ಕುರಿ ಬಜಾರ್ ಅವ್ಯವಸ್ಥಿತವಾಗಿ ನಡೆಯುತ್ತಿದೆ. ಕುರಿ ಮತ್ತು ಮೇಕೆ ಮಾರಾಟ ಮಾಡಲು ಅನಕೂಲಕರವಾಗಲಿ ಎಂದು 50 ಲಕ್ಷ ರೂ. ವೆಚ್ಚದಲ್ಲಿ ಕುರಿ ಮತ್ತು ಮೇಕೆ ಮಾರುಕಟ್ಟೆ ನಿರ್ಮಾಣವಾಗಿದೆ. ಇನ್ನು ಅದು ಉದ್ಘಾಟನೆಯಾಗಿಲ್ಲ. ಉದ್ಘಾಟನೆ ಮುಂಚೆನೆ ಈ ಮಾರುಕಟ್ಟೆ ಹಾಳಾಗುತ್ತಿದೆ.
ರೈತರಿಗೆ ತೂಕದಲ್ಲಿ ಮೋಸ ಆಗಬಾರದು ಎಂದು ಸುಮಾರು 16 ಲಕ್ಷ ರೂ. ವೆಚ್ಚದಲ್ಲಿ ವೇ ಬ್ರೀಜ್ 2014-15ನೇ ಸಾಲಿನಲ್ಲಿ ಸ್ಥಾಪಿಸಲಾಗಿದೆ. ಆದರೆ ವೇ ಬ್ರೀಜ್ ಪ್ರಾರಂಭವಾಗಿಲ್ಲ. ವೇ ಬ್ರೀಜ್ ಪ್ರಾರಂಭಿಸಲು 4 ಸಲ ಟೆಂಡರ್ ಕರೆದರೂ ಯಾರು ಮುಂದಾಗುತ್ತಿಲ್ಲ ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧಿಕಾರಿಗಳು ಹೇಳುತ್ತಾರೆ. ಈ ವೇ ಬ್ರೀಜ್ ನಡೆಸುವವರು 21 ಸಾವಿರ ಮಾಸಿಕ ಹಣ ಸಮಿತಿಗೆ ತುಂಬಬೇಕು. ತಿಂಗಳಿಗೆ 21 ಸಾವಿರ ಮಾಸಿಕ ಹಣ ತುಂಬುವಷ್ಟು ವ್ಯಾಪಾರವಾಗುವುದಿಲ್ಲ ಎಂದು ಯಾರು ವೇ ಬ್ರೀಜ್ ಟೆಂಡರ್‌ನಲ್ಲಿ ಭಾಗವಹಿಸುತ್ತಿಲ್ಲ.
ರೈತ ಭವನ ಹತ್ತಿರದ ಹರಾಜು ಮಾರುಕಟ್ಟೆ ಹಗಲು ಮತ್ತು ರಾತ್ರಿ ವೇಳೆಯಲ್ಲಿ ಮದ್ಯ ವ್ಯಸನಿಗಳಿಗೆ ಸೂಕ್ತ ಸ್ಥಳವಾಗಿದೆ. ಅವರಿಗೆ ಹೇಳಿ ಮಾಡಿಸಿದ ಸ್ಥಳವಾಗಿದೆ. ಅಲ್ಲಿ ಮದ್ಯದ ಪೌಚ್‌ಗಳು, ಬೀರ್ ಬಾಟಲಿಗಳು ಬಿದ್ದಿವೆ. ಹೀಗೆ ಇಲ್ಲಿ ಅವ್ಯವಸ್ಥೆ ಆಗರವಾಗಿದೆ.
ಕೃಷಿ ಉತ್ಪನ್ನ ಮಾಟುಕಟ್ಟೆಯವರು ಪುರಸಭೆಗೆ ತೆರೆಗೆ ತುಂಬಬೇಕು ಎಂದು ನೋಟಿಸ್ ಕೋಡುತ್ತಾರೆ. ಆದರೆ ಕೃಷಿ ಉತ್ಪನ್ನ ಮಾರುಕಟ್ಟೆಯ ಅಭಿವೃದ್ಧಿ ಮತ್ತು ನಿರ್ವಹಣೆ ಕಾರ್ಯದಲ್ಲಿ ಪುರಸಭೆ ಕೆಲಸ ಶೂನ್ಯವಿದೆ. ಆದರೂ ತೆರಿಗೆ ಕಟ್ಟಬೇಕು ಎಂದು ಹೇಳುತ್ತಾರೆ. 2008-08ರಲ್ಲಿ 69.75 ಸಾವಿರ, 2018-19 ರಲ್ಲಿ 9 ಲಕ್ಷ ರೂ. ಹೆಚ್ಚು ತೆರಿಗೆ ಕಟ್ಟಿದ್ದಾರೆ. ಆದರೆ ಪುರಸಭೆಯವರು ಯಾವುದೇ ಅಭಿವೃದ್ಧಿ ಕೆಲಸ ಮಾಡುವುದಿರಲಿ ಸ್ವಚ್ಛತೆ ಮಾಡಿಲ್ಲ ಎಂದು ಅಧಿಕಾರಿಗಳು ದೂರುತ್ತಾರೆ.
ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ 62 ನಿವೇಶನಗಳಿಗೆ ಈಗಾಗಲೆ ಎಲ್ಲವನ್ನೂ ಹಂಚಿಕೆ ಮಾಡಲಾಗಿದೆ. ಆದರೆ ಈ ಮಾರುಕಟ್ಟೆಯಲ್ಲಿ ಕೃಷಿ ಉತ್ಪನ್ನಗಳಿಗೆ ಸಂಬಂಧಿಸಿದ ವ್ಯಾಪಾರ ಮಾಡುವವರ ಸಂಖ್ಯೆ ಕಡಿಮೆಯಿದೆ. ಇಲ್ಲಿ ರಾಜಕೀಯ ಪಕ್ಷಗಳ ಕಚೇರಿಗಳಿಗೆ, ಜಿಮ್ (ವ್ಯಾಯಾಮ ಶಾಲೆ) ಇದೆ. ಈ ಕುರಿತು ಅಧಿಕಾರಿಗಳಿಗೆ ಕೇಳಿದಾಗೊಮ್ಮೆ ಇಲ್ಲಿ ಕೃಷಿ ಉತ್ಪನ್ನ ಮಾರಾಟ ಮಾಡುವ ಸಂಖ್ಯೆ ಕಡಿಮೆಯಿದೆ. ಈ ಕುರಿತು ಮೇಲಧಿಕಾರಿಗಳಿಗೆ ತಿಳಿಸಲಾಗಿದೆ. ಅವರಿಗೆ ನೋಟಿಸ್ ನೀಡಲಾಗುವುದು ಎಂದು ಉತ್ತರ ನೀಡುವುದು ಸಾಮಾನ್ಯವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
MUST WATCH
ಹೊಸ ಸೇರ್ಪಡೆ
BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್
Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್’ ರಾಜಕೀಯ!
Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ
Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.