ನವಲಿ ಜಡೆಶಂಕರಲಿಂಗ ದೇವಸ್ಥಾನ ಪ್ರಗತಿ ನಿಧಾನ


Team Udayavani, Jul 29, 2019, 10:40 AM IST

29-July-9

ಲಿಂಗಸುಗೂರು: ಉದ್ಯೋಗ ಖಾತ್ರಿ ಯೋಜನೆಯಡಿ ಕಾರ್ಮಿಕರು ಪುಷ್ಕರ್ಣಿಯಲ್ಲಿ ಹೂಳೆ ತೆಗೆದರು.

ಲಿಂಗಸುಗೂರು: ಒಂಬತ್ತನೇ ಶತಮಾನದಲ್ಲಿ ನಿರ್ಮಿಸಿದ್ದು ಎನ್ನಲಾದ ತಾಲೂಕಿನ ನವಲಿ ಗ್ರಾಮದ ಐತಿಹಾಸಿಕ ಜಡೆಶಂಕರಲಿಂಗ ದೇವಸ್ಥಾನದ ಅಭಿವೃದ್ಧಿ ಕೆಲಸ ಮಂದಗತಿಯಲ್ಲಿ ಸಾಗಿದೆ.

ಬಸವಸಾಗರ ಜಲಾಶಯದ ಹಿನ್ನೀರಿನ ಹೊಡೆತಕ್ಕೆ ನಲುಗಿರುವ ನವಲಿ ಜಡೆಶಂಕರಲಿಂಗ ದೇವಸ್ಥಾನವನ್ನು ಚಾಲುಕ್ಯ ವಾಸ್ತು ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದೆ. ಈ ದೇವಸ್ಥಾನವು ಕೆಲ ಶಾಸನಗಳ ಮೂಲಕ ಗತ ವೈಭವದ ಇತಿಹಾಸ ಸಾರಿ ಹೇಳುತ್ತಿದೆ. ಕರಡಿಕಲ್ ಕದಂಬ ಅರಸನಾದ ನಾಗವರ್ಮ ಕ್ರಿಶ 1066ರಲ್ಲಿ ಜಡೆಶಂಕರಲಿಂಗ ದೇವಸ್ಥಾನಕ್ಕೆ ದತ್ತಿ ದಾನ ನೀಡಿದ್ದಾನೆ ಹಾಗೂ ಕ್ರಿಶ 1077ರಲ್ಲಿ ಭೂತರಸ ಗೋಪುರಕ್ಕೆ ಬಂಗಾರದ ಕಳಸ ನೀಡಿದ್ದಾನೆ. ಹಲವು ಶಾಸನಗಳಲ್ಲಿ ಉಲ್ಲೇಖವಾಗಿದೆ ಎಂಬುದು ಸಂಶೋಧಕರ ಸಂಶೋಧನೆಯಿಂದ ತಿಳಿದು ಬಂದಿದೆ.

ಪಕ್ಕದ ಹುನಗುಂದ ತಾಲೂಕು ಕಂದಗಲ್ಲ ಗ್ರಾಮದ ಬ್ರಾಹ್ಮಣ ಸಮುದಾಯದ ಗೋವಿಂದಭಟ್ರು ಜಡೆಶಂಕರಲಿಂಗ ದೇವರ ದರ್ಶನ ಪಡೆದು ಪ್ರಭಾವಿತರಾಗಿ ಇಲ್ಲಿಯೇ ನೆಲಸಿ ಶೈವ ದೀಕ್ಷೆ ಪಡೆದು ಶಂಕರದಾಸೀಮಯ್ಯ ಎಂಬ ಹೆಸರನಿಂದ ಖ್ಯಾತಿಯಾಗಿದ್ದು, ಇವರು ಪೂರ್ವ ವಚನಕಾರರಾಗಿದ್ದು ಅನೇಕ ವಚನ ರಚಿಸಿ ನವಲಿ ಗ್ರಾಮವನ್ನು ತನ್ನ ಕರ್ಮಭೂಮಿಯನ್ನಾಗಿ ಮಾಡಿಕೊಂಡಿದ್ದರೆ ಎಂದು ಇತಿಹಾಸ ಮೂಲಕ ತಿಳಿದು ಬರುತ್ತದೆ.

ಗರ್ಭಗುಡಿ ಮಧ್ಯದಲ್ಲಿ ದೊಡ್ಡ ಪೀಠದ ಮೇಲೆ ಶಿವಲಿಂಗ ಇದ್ದು, ತಲೆ ಮೇಲೆ ಕೂದಲುಗಳು ಇಳಿದಂತೆ ಕಾಣುವ ಇದನ್ನು ಜಡೆಶಂಕರಲಿಂಗ ಎಂದು ಕರೆಯಲಾಗುತ್ತದೆ. ಗರ್ಭಗುಡಿ ಬಾಗಿಲು ಹಾಗೂ ಚೌಕಟ್ಟು ಸುಂದರ ಕುಸರಿ ಕಲೆಯಲ್ಲಿ ಕೆತ್ತನೆ ಮಾಡಲಾಗಿದೆ. ದೇವಸ್ಥಾನದ ಆವರಣದಲ್ಲಿ ಸುಂದರ ಕೆತ್ತನೆ ಕಂಬ, ಬಂಡೆಗಳು ಹಾಗೂ ವಿಗ್ನವಾದ ಮೂರ್ತಿಗಳು, ಶಾಸನ ಕಲ್ಲು ಎಲ್ಲೆಂದರಲ್ಲಿ ಅನಾಥವಾಗಿ ಬಿದ್ದಿವೆ. ಇದನ್ನು ರಕ್ಷಣೆ ಮಾಡಬೇಕಾದ ಇಲಾಖೆ ಗಾಢ ನಿದ್ರೆಯಲ್ಲಿ ಹೋಗಿದೆ. ದೇವಸ್ಥಾನಕ್ಕೆ ಸಮರ್ಪಕ ರಸ್ತೆಯಿಲ್ಲ. ಮಾರ್ಗಸೂಚಿ ಫಲಕವಂತಲೂ ಇಲ್ಲವೇ ಇಲ್ಲ. ವಿದ್ಯುತ್‌ ಸೇರಿದಂತೆ ಯಾವ ಸೌಲಭ್ಯ ಇಲ್ಲ. ಈ ದೇವಸ್ಥಾನ ಐತಿಹಾಸಿಕ ಹಿನ್ನಲೆಯಿದ್ದರೂ ಮುಳ್ಳಿನ ಗಿಡಗಳೇ ಸ್ವಾಗತಕಾರಾಗಿವೆ. ಬಸವಸಾಗರ ಜಲಾಶಯ ನಿರ್ಮಾಣ ವೇಳೆ ಮುಳಗಡೆಯಾಗಿದ್ದ ನವಲಿ ಗ್ರಾಮವನ್ನು ಸ್ಥಳಾಂತರಿಸಲಾಗಿದೆ. ಜಲಾಶಯದಲ್ಲಿ ನೀರಿನ ಮಟ್ಟ ಅಧಿಕ ಇದ್ದಾಗ ದೇವಸ್ಥಾನ ಮುಳಗಡೆಯಾಗುತ್ತಿತ್ತು. ಮತ್ತೇ ಬೇಸಿಗೆ ದಿನಗಳಲ್ಲಿ ದೇವಸ್ಥಾನ ಪ್ರತ್ಯಕ್ಷವಾಗುತ್ತಿತ್ತು. ಈ ಹಿಂದೆ ಜಗದೀಶ ಶೆಟ್ಟರ ಕಂದಾಯ ಸಚಿವರಾಗಿದ್ದ ವೇಳೆಯಲ್ಲಿ ಇಲ್ಲಿಗೆ ಬೇಟಿ ನೀಡಿ ದೇವಸ್ಥಾನದ ಸುತ್ತಲೂ ತಡೆಗೋಡೆ ನಿರ್ಮಾಣಕ್ಕೆ 1.73 ಕೋಟಿ ರೂ. ಬಿಡುಗಡೆ ಮಾಡಿದ್ದರು. ಅದರಂತೆ ಕಾಮಗಾರಿ ಪೂರ್ಣಗೊಂಡರೂ ಜಲಾಶಯದ ಹಿನ್ನೀರು ಅನುಭವಿಸುತ್ತಿರುವ ತಾಪತ್ರಯ ನಿಲ್ಲದಾಗಿದೆ. ಬೇಸಿಗೆ ಸಮಯದಲ್ಲಿ ಮಾತ್ರ ದರ್ಶನ. ಇನ್ನುಳಿದ ದಿನಗಳಲ್ಲಿ ಇಲ್ಲಿ ಬರುವುದಕ್ಕೆ ಆಗದಂತಹ ಸ್ಥಿತಿ ನಿರ್ಮಾಣವಾಗಿದೆ.

ಮಂದಗತಿಯಲ್ಲಿ ಕಾಮಗಾರಿ: ದೇವಸ್ಥಾನಕ್ಕೆ ರಕ್ಷಣಾ ಗೋಡೆ ಇದ್ದರೂ ನದಿಯಲ್ಲಿ ಪ್ರವಾಹ ಹೆಚ್ಚಾದಾಗ ತಡೆಗೋಡೆಯೊಳಗೆ ಬಸಿ ನೀರು ಸಂಗ್ರಹವಾಗುತ್ತಿದ್ದರಿಂದ ದೇವಸ್ಥಾನ ಜಲಾವೃತವಾಗುತ್ತದೆ. ಈ ಬಗ್ಗೆ ಕೂಡಲಸಂಗಮ ಪ್ರಾಧಿಕಾರದ ತಾಂತ್ರಿಕ ಸಲಹೆಗಾರರ ಸಲಹೆ ಪಡೆದು ಕೂಡಲಸಂಗಮ ಮಾದರಿಯಲ್ಲಿ ದೇವಸ್ಥಾನ ನಿರ್ಮಿಸುವ ಉದ್ದೇಶದಿಂದ ಗರ್ಭಗುಡಿ ಸುತ್ತಲೂ ತಡೆಗೋಡೆ ನಿರ್ಮಾಣ ಮಾಡಲಾಗುತ್ತಿದೆ. ದೇವಸ್ಥಾನದ ಗರ್ಭಗುಡಿ ಗೋಪುರ ನಿರ್ಮಾಣಕ್ಕಾಗಿ ಮೂಲ ಗರ್ಭಗುಡಿ ಗೋಪುರ ಕೆಡವಲಾಗಿದೆ. ಇದಲ್ಲದೆ 4.60 ಕೋಟಿ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆಯಾದರೂ ಅದು ಮಂದಗತಿಯಲ್ಲಿ ಸಾಗಿದ್ದರಿಂದ ಭಕ್ತ ಸಮೂಹಕ್ಕೆ ಬೇಸರ ತಂದಿದೆ.

ಟಾಪ್ ನ್ಯೂಸ್

Bengal

Filmmaker Died: ಖ್ಯಾತ ಸಿನಿಮಾ ನಿರ್ದೇಶಕ ಶ್ಯಾಂ ಬೆನಗಲ್‌ ವಿಧಿವಶ

Mangaluru: ವಿಎ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

Mangaluru: ವಿಎ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

CTR-Wife-pallavi

ಸುಮ್ನೆ ಬ್ಯಾಂಡೇಜ್‌ ಹಾಕಿಕೊಳ್ಳಲು ಯಾರಿಗೂ ತಲೆ ಕೆಟ್ಟಿಲ್ಲ: ಸಿ.ಟಿ.ರವಿ ಪತ್ನಿ ಪಲ್ಲವಿ

CKM-CTR

ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

police crime

Gangolli, Ajekaru; ಮಹಿಳೆಯರಿಗೆ ಜೀವ ಬೆದರಿಕೆ

death

Belthangady : ಸೊಪ್ಪು ತರಲು ಹೋಗಿದ್ದ ವ್ಯಕ್ತಿ ಆಕಸ್ಮಿಕ ಸಾ*ವು

baby

Sullia: ಒಂಟಿಯಾಗಿ ಪತ್ತೆಯಾದ ಮಗು ಪೋಷಕರ ಮಡಿಲಿಗೆ

Mangaluru: ವಿಎ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

Mangaluru: ವಿಎ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

suicide (2)

Manipal: ಬಾವಿಗೆ ಬಿದ್ದು ಕಾರ್ಮಿಕ ಸಾ*ವು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

police crime

Gangolli, Ajekaru; ಮಹಿಳೆಯರಿಗೆ ಜೀವ ಬೆದರಿಕೆ

Bengal

Filmmaker Died: ಖ್ಯಾತ ಸಿನಿಮಾ ನಿರ್ದೇಶಕ ಶ್ಯಾಂ ಬೆನಗಲ್‌ ವಿಧಿವಶ

death

Belthangady : ಸೊಪ್ಪು ತರಲು ಹೋಗಿದ್ದ ವ್ಯಕ್ತಿ ಆಕಸ್ಮಿಕ ಸಾ*ವು

baby

Sullia: ಒಂಟಿಯಾಗಿ ಪತ್ತೆಯಾದ ಮಗು ಪೋಷಕರ ಮಡಿಲಿಗೆ

Mangaluru: ವಿಎ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

Mangaluru: ವಿಎ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.