ಸರ್ಫಾರಾಜ್ ನಾಯಕತ್ವಕ್ಕೆ ಬಂತೇ ಸಂಚಕಾರ?
ಶಾನ್ ಮಸೂದ್ ನೂತನ ಟೆಸ್ಟ್ ನಾಯಕ?
Team Udayavani, Jul 29, 2019, 10:55 AM IST
ಲಾಹೋರ್: ಸರ್ಫಾರಾಜ್ ಅಹ್ಮದ್ ಅವರನ್ನು ಪಾಕಿಸ್ಥಾನ ಕ್ರಿಕೆಟ್ ತಂಡದ ನಾಯಕತ್ವದಿಂದ ಕೆಳಗಿಳಿಸುವ ಬಗ್ಗೆ ಪಿಸಿಬಿ ಗಂಭೀರವಾಗಿ ಯೋಚಿಸುತ್ತಿದೆ. ವಿಶ್ವಕಪ್ ವೈಫಲ್ಯ, ಅದರಲ್ಲೂ ಭಾರತದೆದುರು ಅನುಭವಿಸಿದ ಸತತ 7ನೇ ಸೋಲಿ ನಿಂದ ಸರ್ಫಾರಾಜ್ ನಾಯಕತ್ವ ಎಲ್ಲ ದಿಕ್ಕುಗಳಿಂದಲೂ ಟೀಕೆಗೊಳಗಾದ ಬಳಿಕ ಇಂಥದೊಂದು ನಿರ್ಧಾರಕ್ಕೆ ಬರುವ ಸಾಧ್ಯತೆ ಇದೆ.
32ರ ಹರೆಯದ ಸರ್ಫಾರಾಜ್, ನಾಯಕತ್ವದಿಂದ ಕೆಳಗಿಳಿಯುವ ಬಗ್ಗೆ ಯಾವುದೇ ಯೋಜನೆ ತನ್ನಲ್ಲಿಲ್ಲ ಎಂದು ಹೇಳಿಕೆ ನೀಡಿದ ಬಳಿಕ ಪಿಸಿಬಿ ಬದಲಾವಣೆಯ ಸೂಚನೆ ನೀಡಿರುವುದು ಗಮನಾರ್ಹ.
ಆ. 2ರ ಪಿಸಿಬಿ ಸಭೆಯಲ್ಲಿ ನಿರ್ಧಾರ
“ಜಿಯೋ ನ್ಯೂಸ್’ ವರದಿ ಪ್ರಕಾರ ಮುಂಬರುವ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್‌ಗ್ೂ ಮೊದಲು ಪಾಕಿಸ್ಥಾನ ಟೆಸ್ಟ್ ತಂಡದ ನಾಯಕತ್ವವನ್ನು ಬದಲಿಸಲಿದೆ. ಪಾಕ್ ಕ್ರಿಕೆಟ್ ಮಂಡಳಿಯ ಸಭೆ ಆ. 2ರಂದು ಲಾಹೋರ್‌ನಲ್ಲಿ ನಡೆಯಲಿದ್ದು, ಇಲ್ಲಿ ನಾಯಕತ್ವದ ಬದಲಾವಣೆಯೇ ಮುಖ್ಯ ಅಜೆಂಡಾ ಆಗಿರಲಿದೆ. ಸಫìರಾಜ್ ಅವರನ್ನು ಕೆಳಗಿಳಿಸಿ 29ರ ಹರೆಯದ ಎಡಗೈ ಬ್ಯಾಟ್ಸ್‌ಮನ್ ಶಾನ್ ಮಸೂದ್ ಅವರಿಗೆ ಟೆಸ್ಟ್ ನಾಯಕತ್ವ ವಹಿಸುವ ಸಾಧ್ಯತೆ ಇದೆ.
ಖಾಯಂ ಸ್ಥಾನ ಪಡೆಯದ ಮಸೂದ್
ಆದರೆ ಶಾನ್ ಮಸೂದ್ ಪಾಕ್ ಟೆಸ್ಟ್ ತಂಡದಲ್ಲಿ ಖಾಯಂ ಸ್ಥಾನ ಸಂಪಾದಿಸುವಲ್ಲಿ ವಿಫಲರಾದ್ದರಿಂದ ಅವರಿಗೆ ನಾಯಕತ್ವ ನೀಡುವ ಬಗ್ಗೆ ಕೆಲವರಿಗೆ ಅಸಮಾಧಾನ ಇದೆ ಎನ್ನಲಾಗಿದೆ. ಮಸೂದ್ 2013ರಲ್ಲೇ ಟೆಸ್ಟ್ ಪದಾರ್ಪಣೆ ಮಾಡಿದರೂ ಆಡಿದ್ದು 15 ಪಂದ್ಯಗಳನ್ನು ಮಾತ್ರ. 26.42ರ ಸರಾಸರಿಯಲ್ಲಿ 797 ರನ್ ಗಳಿಸಿದ್ದು ಇವರ ಸಾಧನೆ. ಆದರೆ ಪಾಕಿಸ್ಥಾನ ದೇಶಿ ಕ್ರಿಕೆಟ್‌ನಲ್ಲಿ ಶಾನ್ ಮಸೂದ್ “ನ್ಯಾಶನಲ್ ಬ್ಯಾಂಕ್’ ತಂಡದ ನಾಯಕತ್ವ ವಹಿಸಿ ಸಾಕಷ್ಟು ಯಶಸ್ಸು ಕಂಡಿದ್ದಾರೆ.
ಸರ್ಫಾರಾಜ್ ವೈಫಲ್ಯ
ಸರ್ಫಾರಾಜ್ ಅಹ್ಮದ್ 13 ಟೆಸ್ಟ್‌ಗಳಲ್ಲಿ ಪಾಕಿಸ್ಥಾನವನ್ನು ಮುನ್ನಡೆಸಿದ್ದು, ನಾಲ್ಕರಲ್ಲಿ ಜಯ ಕಂಡಿದ್ದಾರೆ. 8 ಟೆಸ್ಟ್‌ಗಳಲ್ಲಿ ಸೋಲು ಎದುರಾಗಿದೆ. ಸರ್ಫಾರಾಜ್ ಅವರ ಒಟ್ಟು ಬ್ಯಾಟಿಂಗ್ ಸರಾಸರಿ 36.39 ಆಗಿದ್ದರೆ, ನಾಯಕನಾಗಿ 25.81ರಷ್ಟು ಕೆಳ ಮಟ್ಟದ ಎವರೇಜ್ ಹೊಂದಿದ್ದಾರೆ. ಹಾಗೆಯೇ ಐಸಿಸಿ ಟೆಸ್ಟ್ ರ್‍ಯಾಂಕಿಂಗ್‌ನಲ್ಲಿ ಪಾಕ್ ಏಳರಷ್ಟು ಕೆಳಸ್ಥಾನದಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ
Eden Gardens; ‘ಬಿ’ ಬ್ಲಾಕ್‌ಗೆ ಜೂಲನ್ ಗೋಸ್ವಾಮಿ ಹೆಸರಿಡಲು ನಿರ್ಧಾರ
MUST WATCH
ಹೊಸ ಸೇರ್ಪಡೆ
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.