ದೇಶಸೇವೆಯ ಆಸಕ್ತಿ ಅಗತ್ಯ

ವಿದ್ಯಾರ್ಥಿಗಳು ವ್ಯಾಸಂಗಕ್ಕೆ ಗಮನ ನೀಡಲಿ: ಎಸ್ಪಿ ಡಾ| ಅಶ್ವಿ‌ನಿ ಕರೆ

Team Udayavani, Jul 29, 2019, 3:36 PM IST

29-July-34

ಶಿವಮೊಗ್ಗ: ಸಹ್ಯಾದ್ರಿ ಕಾಲೇಜಿನಲ್ಲಿ ನಡೆದ ಕಾರ್ಗಿಲ್ ವಿಜಯ್‌ ದಿವಸ್‌ ಕಾರ್ಯಕ್ರಮದಲ್ಲಿ ನಿವೃತ್ತ ಯೋಧರನ್ನು ಸನ್ಮಾನಿಸಲಾಯಿತು.

ಶಿವಮೊಗ್ಗ: ಕೇವಲ ಡಾಕ್ಟರ್‌, ಇಂಜಿನಿಯರ್‌ ಆಗುವ ಕನಸು ಕಾಣದೇ ದೇಶಸೇವೆ ಮಾಡುವಲ್ಲಿ ಕೂಡ ನಾವು ಆಸಕ್ತಿ ತಾಳಬೇಕು. ನಮ್ಮಲ್ಲಿ ಕೇವಲ ಕೆಲವು ಪ್ರಾದೇಶಿಕ ಜನತೆ ಮಾತ್ರ ಸೈನ್ಯ ಸೇರುವ ಆಶಯ ರೂಢಿಸಿಕೊಂಡಿದ್ದಾರೆ. ಹಾಗಾಗದೇ ದೇಶದ ಎಲ್ಲೆಡೆಯ ಜನತೆಯೂ ಈ ಬಗ್ಗೆ ಮುಂದಾಗಬೇಕು ಎಂದು ಶಿವಮೊಗ್ಗ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ| ಎಂ. ಅಶ್ವಿ‌ನಿ ಕರೆ ನೀಡಿದರು.

ಅವರು ಸಿಹಿಮೊಗೆ ಸಂಯುಕ್ತ ವಿಶ್ರಾಂತ ನೌಕರರ ಸಂಘ, ಸಹ್ಯಾದ್ರಿ ಕಲಾ ಕಾಲೇಜು ಆಶ್ರಯದಲ್ಲಿ ಏರ್ಪಡಿಸಿದ್ದ ‘ಕಾರ್ಗಿಲ್ ವಿಜಯ ದಿವಸ್‌’ ಆಚರಣಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ತಮ್ಮ ವ್ಯಾಸಂಗದ ಅವಧಿಯಲ್ಲಿ ಸಮಯಕ್ಕೆ ಬಹಳ ಮಹತ್ವ ನೀಡಬೇಕು. ಕಳೆದ ಕಾಲ ಮತ್ತೆ ಬರುವುದಿಲ್ಲ. ಮುಂದೆ ಭವಿಷ್ಯದಲ್ಲಿ ತಾನೇನಾಗಬೇಕು ಎಂಬುದನ್ನ ನಿರ್ಧರಿಸಬೇಕು. ಸಮಾಜದಲ್ಲಿ ಯಾವುದೇ ವೃತ್ತಿಯಾಗಲೀ ಕೇವಲ ತಾನು ಮಾತ್ರ ಬದುಕಬೇಕೆಂಬುದಲ್ಲ. ಸಮಾಜಕ್ಕೆ ತಾನೇನು ಕೊಡುಗೆಯನ್ನ ನೀಡಬಲ್ಲೆ ಎಂಬ ಬಗ್ಗೆ ವಿವೇಚಿಸಬೇಕು. ವೃತ್ತಿಯಾರಂಭಿಸಿದಾಗ ಸಂಗಡವೇ ಸಾಮಾಜಿಕ ಹೊಣೆಯೂ ನಮ್ಮದಾಗುತ್ತದೆ.ಅದೇ ದೇಶಸೇವೆಯಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನುಡಿದರು.

ಸಹ್ಯಾದ್ರಿ ಕಲಾ ಕಾಲೇಜಿನ ಪ್ರಾಂಶುಪಾಲ ಡಾ| ಧನಂಜಯ ಮಾತನಾಡಿ, ಸೈನಿಕರ ದೇಶಸೇವೆಯ ಫಲವಾಗಿ ನಾವೆಲ್ಲರೂ ಇಂದು ನಮ್ಮ ಬಾಳನ್ನು ನೆಮ್ಮದಿಯಿಂದ ಸಾಗಿಸುತ್ತಿದ್ದೇವೆ. ನಿಜಕ್ಕೂ ಯುದ್ಧದಲ್ಲಿ ಹೊರಾಡುವ ಯೋಧರ ಜೀವನ ತ್ಯಾಗಮಯ. ನಮ್ಮ ಯುವಜನ ಯೋಧರ ಸೇವೆಯನ್ನ ಸ್ಮರಿಸಬೇಕು. ಸಮಾಜದಲ್ಲಿ ವಿವಿಧ ಉನ್ನತ ಹುದ್ದೆಗಳನ್ನ ನಿರ್ವಹಿಸುವ ಮೂಲಕ ದೇಶೋಪಕಾರಿಯಾದ ಕೆಲಸ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಹಿತ ನುಡಿದರು.

ಮಾಜಿ ಯೋಧರಾದ ಸರ್ವಶ್ರೀ ಮಾಲತೇಶ್‌, ಹನುಮಂತಪ್ಪ, ಸ್ಟ್ಯಾನ್ಲೀ ಮುಂತಾದವರನ್ನು ಕಾರ್ಗಿಲ್ ವಿಜಯೋತ್ಸವ ದಿವಸ್‌ನ ನಿಮಿತ್ತ ಆದರ ಪೂರ್ವಕವಾಗಿ ಸನ್ಮಾನಿಸಲಾಯಿತು. ಕರ್ನಲ್ ಕೆ.ಎ.ರಾಮಚಂದ್ರ ಅವರು ರಾಷ್ಟ್ರರಕ್ಷಣೆಯಲ್ಲಿ ‘ಯುವಜನರ ಪಾತ್ರ’ ವಿಷಯ ಕುರಿತು ವಿಡಿಯೋ ಕ್ಲಿಪಿಂಗ್‌ ಆಧರಿತ ಉಪನ್ಯಾಸ ನೀಡಿ, ಅವಿಭಜಿತ ಭಾರತದ ಪರಿಸ್ಥಿತಿ ಮತ್ತು ಸ್ವಾತಂತ್ರ್ಯಾ ನಂತರ ಭಾರತದ ಸಮಗ್ರ ಸೇನಾ ವ್ಯವಸ್ಥೆ, ಯೋಧರು ಸಮರ ಸನ್ನಿವೇಶದಲ್ಲಿ ಎದುರಿಸುವ ಸವಾಲುಗಳನ್ನ ರೋಮಾಂಚನಕಾರಿಯಾಗಿ ವಿವರಿಸಿದರು.

ಇದೇ ಸಂದರ್ಭದಲ್ಲಿ ಕಾಲೇಜಿನ ಯುವ ರೆಡ್‌ಕ್ರಾಸ್‌ ವಿಭಾಗದ ಉದ್ಘಾಟನೆಯನ್ನೂ ಹಮ್ಮಿಕೊಳ್ಳಲಾಗಿತ್ತು. ಭಾವಗಾನ ತಂಡದ ಸದಸ್ಯರು ಸುಶ್ರಾವ್ಯ ದೇಶಭಕ್ತಿಗೀತೆಗಳ ಗಾಯನ ಪ್ರಸ್ತುತಪಡಿಸಿದರು. ರಂಗಕರ್ಮಿ ಕಾಂತೇಶ್‌ ಕದರಮಂಡಗಿ ಕಾರ್ಯಕ್ರಮ ನಿರೂಪಿಸಿದರು. ವಿಶ್ರಾಂತ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಟಿ ಶ್ರೀನಿವಾಸ ರಾವ್‌ ಸ್ವಾಗತಿಸಿದರು. ಕಾಲೇಜಿನ ರೆಡ್‌ಕ್ರಾಸ್‌ ವಿಭಾಗದ ಅಧಿಕಾರಿ ಫ್ರೂ| ಮಂಜುನಾಥ್‌ ವಂದಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ನೌಕರರ ಸಂಘದ ಅಧ್ಯಕ್ಷ ಪಿ.ಒ.ಶಿವಕುಮಾರ್‌ ವಹಿಸಿದ್ದರು.

ಟಾಪ್ ನ್ಯೂಸ್

Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ

Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ

yathanal-jarakiholi

Waqf Notice: ಬಸನಗೌಡ ಪಾಟೀಲ್‌ ಯತ್ನಾಳ್‌ ತಂಡದಿಂದ 1 ತಿಂಗಳು ಜನ ಜಾಗೃತಿ

BYV-yathnal

Waqf Issue: ಕಾಂಗ್ರೆಸ್‌ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ

IT employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

HD-Kumaraswmy

Black Days: ಜಮೀರ್‌+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್‌.ಡಿ.ಕುಮಾರಸ್ವಾಮಿ

Delhi-Air

Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!

north

Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್‌ ಪರೀಕ್ಷೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

HD-Kumaraswmy

Black Days: ಜಮೀರ್‌+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್‌.ಡಿ.ಕುಮಾರಸ್ವಾಮಿ

Puturu-Crime

Puttur: ‘ಕಾಡಿನೊಳಗಿದ್ದೇನೆ ದಾರಿ ಸಿಗುತ್ತಿಲ್ಲ’ ಎಂದಾತ 7 ತಿಂಗಳ ಬಳಿಕವೂ ಪತ್ತೆಯಾಗಿಲ್ಲ!

Agri

State Government Programme: ರೈತರಿಂದ ದೂರ ಸರಿದ ಕೃಷಿ ಯಂತ್ರಧಾರೆ

Byndoor-Vahical

Byndoor: ಮೀನು ಸಾಗಿಸುವ ವಾಹನದಲ್ಲಿ ಜಾನುವಾರು ಸಾಗಾಟ!

Digi-Arrest

Mangaluru: ಡಿಜಿಟಲ್‌ ಅರೆಸ್ಟ್‌, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ

Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ

yathanal-jarakiholi

Waqf Notice: ಬಸನಗೌಡ ಪಾಟೀಲ್‌ ಯತ್ನಾಳ್‌ ತಂಡದಿಂದ 1 ತಿಂಗಳು ಜನ ಜಾಗೃತಿ

BYV-yathnal

Waqf Issue: ಕಾಂಗ್ರೆಸ್‌ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ

IT employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

HD-Kumaraswmy

Black Days: ಜಮೀರ್‌+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್‌.ಡಿ.ಕುಮಾರಸ್ವಾಮಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.