ಚೆಲುವನಹಳ್ಳಿ ಬಸ್ ತಂಗುದಾಣ ನಿರ್ಮಾಣಕ್ಕೆ ಚಾಲನೆ
ಸರ್ಕಾರದ ಅನುದಾನ ಸಮರ್ಪಕ ಬಳಕೆಯಿಂದ ಗ್ರಾಮದ ಅಭಿವೃದ್ಧಿ ಸಾಧ್ಯ: ಶಾಸಕ ಶ್ರೀನಿವಾಸಗೌಡ
Team Udayavani, Jul 29, 2019, 4:07 PM IST
ಕೋಲಾರ ತಾಲೂಕಿನ ಚೆಲುವನಹಳ್ಳಿಯಲ್ಲಿ ಶಾಸಕ ಕೆ.ಶ್ರೀನಿವಾಸಗೌಡ ಬಸ್ ತಂಗುದಾಣಕ್ಕೆ ಭೂಮಿ ಪೂಜೆ ನೆರವೇರಿಸಿದರು.
ಕೋಲಾರ: ಸರ್ಕಾರದ ಅನುದಾನವನ್ನು ಗ್ರಾಮ ಪಂಚಾಯ್ತಿಗಳ ಸಮರ್ಪಕವಾಗಿ ಬಳಸಿಕೊಂಡಾಗ ಮಾತ್ರವೇ ಗ್ರಾಮಗಳ ಅಭಿ ವೃದ್ಧಿ ಸಾಧ್ಯ ಎಂದು ಶಾಸಕ ಕೆ.ಶ್ರೀನಿವಾಸಗೌಡ ತಿಳಿಸಿದರು.ತಾಲೂಕಿನ ಚೆಲುವನಹಳ್ಳಿಯಲ್ಲಿ ಹೆದ್ದಾರಿಯಲ್ಲಿ ಎಂಎಲ್ಸಿ ಮನೋಹರ್ ಅನುದಾನದಲ್ಲಿ ಬಸ್ ತಂಗುದಾಣಕ್ಕೆ ಭೂಮಿ ಪೂಜೆ ಹಾಗೂ ತಾಪಂ ಸದಸ್ಯೆ ರತ್ನಮ್ಮ ನಂಜುಂಡಗೌಡರ ಅನುದಾನದಲ್ಲಿ ಹೆದ್ದಾರಿ ಯಿಂದ ಗ್ರಾಮಕ್ಕೆ ಬೀದಿದೀಪ ಅಳವಡಿಕೆಗೆ ಚಾಲನೆ ನೀಡಿ ಮಾತನಾಡಿದರು.
ಉದ್ಯೋಗ ಖಾತ್ರಿ ಗ್ರಾಮೀಣಾಭಿವೃದ್ಧಿಗೆ ವರದಾನವಾಗಿದೆ. ಗ್ರಾಪಂಗೆ ಇದೀಗ ಅನು ದಾನ ಬಳಕೆಗೆ ಹೆಚ್ಚಿನ ಅಧಿಕಾರ ನೀಡಿರುವು ದರಿಂದ ಇಂತಹ ಯೋಜನೆಗಳನ್ನು ಬಳಸಿ ಕೊಂಡು ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಕಿವಿಮಾತು ಹೇಳಿದರು.
ಉದ್ಯೋಗ ಖಾತ್ರಿಯಿಂದ ರೈತರು ತಮ್ಮ ತೋಟದ ಕೆಲಸಗಳನ್ನು ನಿರ್ವಹಿಸಿಕೊಳ್ಳಲು ನೆರವಾಗುತ್ತಿದೆ, ಗ್ರಾಮಗಳಲ್ಲಿ ಹಿರಿಯರು ದೂರದೃಷ್ಟಿಯಿಂದ ನಿರ್ಮಿಸಿದ ಕೆರೆ, ಕಲ್ಯಾಣಿ, ಕುಂಟೆಗಳ ರಕ್ಷಣೆಗೆ ಉದ್ಯೋಗ ಖಾತ್ರ ಬಳಕೆ ಯಾಗಲಿ ಎಂದರು.
ಗ್ರಾಮದಲ್ಲಿ ರಸ್ತೆ, ಚರಂಡಿ ಶಾಲಾ ಕಾಂಪೌಂಡ್, ಆಟದ ಮೈದಾನದ ಅಭಿವೃದ್ಧಿ ಯನ್ನು ನರೇಗಾದಿಂದ ಮಾಡಬಹುದಾಗಿದ್ದು, ಇದನ್ನು ಸಮರ್ಪಕವಾಗಿ ಬಳಸಿಕೊಂಡರೆ ಗ್ರಾಮಗಳು ನಗರವನ್ನು ಮೀರಿ ಬೆಳೆಯಲಿವೆ. ಜನತೆ ನಗರಗಳ ಕಡೆ ವಲಸೆ ಹೋಗುವುದನ್ನು ಬಿಡಬೇಕು, ಗ್ರಾಮದಲ್ಲೇ ಆರ್ಥಿಕಾಭಿವೃದ್ಧಿಗೆ ದಾರಿಗಳನ್ನು ಹುಡುಕಿಕೊಳ್ಳಬೇಕು ಎಂದ ಅವರು, ಮಕ್ಕಳಿಗೆ ಮೊದಲು ಶಿಕ್ಷಣ ನೀಡಿ ಎಂದರು.
ಜನತೆ ಬಸ್‌ಗಾಗಿ ಗೇಟ್‌ಗೆ ಬಂದಾಗ ಮಳೆ,ನೆರಳಿನಿಂದ ರಕ್ಷಣೆ ಅಗತ್ಯವಿದೆ, ಈ ನಿಟ್ಟಿನಲ್ಲಿ ಬಸ್ ತಂಗುದಾಣವನ್ನು ಸುಂದರವಾಗಿ ಮತ್ತು ಕಳಪೆ ಕಾಮಗಾರಿಗೆ ಅವಕಾಶವಿಲ್ಲದಂತೆ ನಿರ್ಮಿಸಿ ಎಂದು ಕಿವಿಮಾತು ಹೇಳಿದರು. ಕಾರ್ಯಕ್ರಮದಲ್ಲಿ ಆರ್.ದಯಾ ನಂದ್, ಕೋಚಿಮುಲ್ ನಿರ್ದೇಶಕ ಡಿ.ವಿ. ಹರೀಶ್, ವಕ್ಕಲೇರಿ ರಾಮು, ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಚೆಲುವನಹಳ್ಳಿ ನಾಗರಾಜ್, ಜಿಪಂ ಮಾಜಿ ಅಧ್ಯಕ್ಷೆ ಮಂಗಮ್ಮ ಮುನಿಸ್ವಾಮಿ, ಮುಂರಾಂಡಹಳ್ಳಿ ಗೋಪಾಲ್, ತಾಪಂ ಸದಸ್ಯರಾದ ರತ್ನಮ್ಮ ನಂಜುಂಡಗೌಡ, ಗ್ರಾಪಂ ಸದಸ್ಯರಾದ ಗೋವಿಂದಪ್ಪ, ಸರಿತಾ, ಮುಖಂ ಡರಾದ ಜಯರಾಮೇಗೌಡ, ತಿಮ್ಮೇಗೌಡ, ಚಿಕ್ಕೇಗೌಡ, ಮುನೇಗೌಡ, ರಾಮೇಗೌಡ, ನಾಗೇಶ್, ಉದ್ಯಮಿ ಶಂಕರರೆಡ್ಡಿ, ಪ್ರೊ.ಶ್ರೀ ರಾಮ್, ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಮುರಳಿ ಗೌಡ, ಪ್ರಧಾನ ಕಾರ್ಯದರ್ಶಿ ಮುರಳಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.