ಬಾಂಬೆ ಐಐಟಿ ಕ್ಲಾಸ್ ರೂಮ್ ಗೆ ನುಗ್ಗಿದ ಬೀದಿ ದನ…ವೀಡಿಯೋ ವೈರಲ್!
Team Udayavani, Jul 29, 2019, 7:25 PM IST
ಮುಂಬೈ: ಇತ್ತೀಚೆಗಷ್ಟೇ ಬಾಂಬೆಯ ಪ್ರತಿಷ್ಠಿತ ಐಐಟಿಯ ಆವರಣದೊಳಕ್ಕೆ ಜೋಡಿ ಗೂಳಿಗಳು ನುಗ್ಗಿ ರಂಪಾಟ ನಡೆಸಿದ್ದವು. ಅದರ ಮುಂದುವರಿದ ಭಾಗ ಎಂಬಂತೆ ಶನಿವಾರ ಬೀದಿ ದನವೊಂದು ನೇರ ಐಐಟಿಯ ಲೆಕ್ಚರ್ ಹಾಲ್ ಹಾಗೂ ಕ್ಲಾಸ್ ರೂಂನೊಳಗೆ ನುಗ್ಗಿರುವ ವಿಡಿಯೋ ತುಂಬಾ ವೈರಲ್ ಆಗಿದೆ.
ಏಕಾಏಕಿ ಕ್ಲಾಸ್ ರೂಂಗೆ ನುಗ್ಗಿದ ದನ ವಿದ್ಯಾರ್ಥಿಗಳನ್ನು ನೋಡುತ್ತ ಇಡೀ ತರಗತಿಗೆ ಸುತ್ತು ಹೊಡೆಯುತ್ತಿರುವುದನ್ನು ವಿದ್ಯಾರ್ಥಿಗಳು ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಆದರೆ ಇದು ನಿಜವಾಗಿಯೂ ಎಲ್ಲಿ ಮತ್ತು ಯಾವಾಗ ನಡೆದ ಘಟನೆಯ ಈ ವಿಡಿಯೋವಾಗಿದೆ ಎಂಬುದು ಸ್ಪಷ್ಟವಾಗಿಲ್ಲ ಎಂದು ಐಎಎನ್ ಎಸ್ ವರದಿ ಮಾಡಿದೆ.
Cow entering IIT BOMBAY without clearing JEE Advanced?? ???. A cow entering an IIT Bombay classroom ? pic.twitter.com/i7taJ2TPOd
— Mayur Borkar (@imayurborkar) July 29, 2019
ಜೆಇಇ(Joint entrance Examination)ಯನ್ನು ಪಾಸ್ ಮಾಡದೇ ದನ ಬಾಂಬೆ ಐಐಟಿ ಕ್ಲಾಸ್ ರೂಂ ಪ್ರವೇಶಿಸಿದೆ ಎಂದು ಟ್ವೀಟರ್ ಬಳಕೆದಾರರೊಬ್ಬರು ಕಾಲೆಳೆದಿದ್ದಾರೆ. 20ಸೆಕೆಂಡುಗಳ ವೀಡಿಯೋ ಕ್ಲಿಪ್ ನಲ್ಲಿ ದನ ಬಾಂಬೆ ಐಐಟಿಯ ಲೆಕ್ಚರ್ ಹಾಲ್ ನೊಳಗೆ ಹಾಗೂ ಕ್ಲಾಸ್ ರೂಂನೊಳಗೆ ನುಗ್ಗಿ ತಿರುಗಾಡುತ್ತಿರುವುದು ಸೆರೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
MUST WATCH
ಹೊಸ ಸೇರ್ಪಡೆ
IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
ಬೆಳಗಾವಿ-ಐಫೋನ್ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.