ಕೊಯ್ಲು, ಬೋರ್ಡೋ ದ್ರಾವಣ ಸಿಂಪಡಿಕೆಗೆ ಹೈಟೆಕ್‌ ದೋಟಿ

ಇನ್ನು ಅಡಿಕೆ ಮರವನ್ನೇರಬೇಕಾಗಿಲ್ಲ; ಮಳೆಗಾಲದಲ್ಲಿಯೂ ಬೆಳೆಗಾರ ನಿರಾಳ

Team Udayavani, Jul 30, 2019, 5:40 AM IST

a 4

ವಿಟ್ಲ: ಅಡಿಕೆ ಮರವನ್ನೇರದೆ ಫಸಲು ಕೊಯ್ಲು ಮಾಡುವ ಅಥವಾ ಔಷಧ ಸಿಂಪಡಿಸುವ ಆವಿಷ್ಕಾರಗಳಿರಲಿಲ್ಲ. ಅದಕ್ಕೆ ಇತರರನ್ನು ಅವಲಂಬಿಸಲೇಬೇಕಾದ ಪರಿಸ್ಥಿತಿಯಿತ್ತು. ಇದೀಗ ಅಡಿಕೆ ಬೆಳೆಗಾರರು ನಿಟ್ಟುಸಿರು ಬಿಡುವ ಕಾಲ ಸನ್ನಿಹಿತವಾಗಿದೆ. ಅಡಿಕೆ ಮರವನ್ನೇರದೆ ಅಡಿಕೆ ಕೊಯ್ಲು ಮಾಡುವುದಕ್ಕೆ, ಬೋರ್ಡೋ ದ್ರಾವಣ ಸಿಂಪಡಿಸುವಿಕೆಗೆ ಹೈಟೆಕ್‌ ದೋಟಿ ಬಂದಿದೆ!

ಹೈಟೆಕ್‌ ದೋಟಿ ಭಾರವಿಲ್ಲ
ಈ ಹೈಟೆಕ್‌ ದೋಟಿ ಬಾಗುವುದಿಲ್ಲ, ಬಳುಕು ವುದಿಲ್ಲ. ಹೆಚ್ಚು ಭಾರವಿಲ್ಲ. ಸಾಮಾನ್ಯವಾಗಿ ಕೂಲಿ ಕಾರ್ಮಿಕರು ಬಿದಿರಿನ ದೋಟಿ ಬಳಸುತ್ತಾರೆ. 40 ಅಡಿ ಉದ್ದದ ಬಿದಿರಿನ ದೋಟಿ 20 ಕೆ.ಜಿ.ಗೂ ಹೆಚ್ಚು ತೂಕ ಇರುತ್ತದೆ. ಆದರೆ 60 ಅಡಿ ಉದ್ದದ ಈ ದೋಟಿಯ ಭಾರ 4 ಕೆ.ಜಿ., 80 ಅಡಿಗೇರಿದರೆ 6 ಕೆ.ಜಿ. 8ರಿಂದ 80 ಅಡಿ ವರೆಗಿನ ಅಡಿಕೆ ಮರಕ್ಕೆ ದೋಟಿ ತಲುಪುತ್ತದೆ. ಆದುದರಿಂದ ಮನೆಯವರೇ ಈ ದೋಟಿ ಹಿಡಿದುಕೊಂಡು ತೋಟಕ್ಕೆ ಹೋಗಿ ಅಡಿಕೆ ಕೊಯ್ಲು ಮಾಡಬಹುದು. ಕುತ್ತಿಗೆ ನೋವು, ಬೆನ್ನು ನೋವು, ಭುಜನೋವು ಬರದಂತೆ ಈ ದೋಟಿಯನ್ನು ವಿನ್ಯಾಸಗೊಳಿಸಲಾಗಿದೆ.

ಈ ದೋಟಿಯ ತುದಿಗೆ ಕತ್ತಿ ಅಳವಡಿಸಿದರೆ ಅಡಿಕೆ ಕೊಯ್ಲಿಗೆ ಬಳಸಲಾಗುತ್ತದೆ. ತುದಿಯಿಂದ ಕತ್ತಿ ತೆಗೆದು, ಔಷಧ ಸಿಂಪಡಿಸುವ ಉಪಕರಣ ಪೈಪ್‌ ಮತ್ತು ನಾಝಿಲ್‌ ಅಳವಡಿಸಿದರೆ ಬೋಡೋì ದ್ರಾವಣ ಮಿಶ್ರಣ ಸಿಂಪಡಿಸಲಾಗುತ್ತದೆ. ಇದರಲ್ಲೇ ಅಡಿಕೆ, ತೆಂಗು ಕೊಯ್ಲು ಮಾಡಬಹುದು. ನಿಂತಲ್ಲೇ 360 ಡಿಗ್ರಿ ಸುತ್ತು ತಿರುಗಿಕೊಂಡು 30ಕ್ಕೂ ಹೆಚ್ಚು ಮರಗಳಿಂದ ಅಡಿಕೆ ಕೊಯ್ಲು ಮಾಡಬಹುದು, ಔಷಧ ಸಿಂಪಡಿಸಬಹುದು. ಔಷಧ ಸಿಂಪಡಿಸಲು ಅವಶ್ಯವಿರುವ ಪಂಪ್‌ ಹಾಗೂ ಪೈಪ್‌ ಅನ್ನು ಈ ದೋಟಿಗೆ ಸೇರಿಸಿಕೊಳ್ಳಬೇಕು.

ಪುತ್ತೂರಲ್ಲಿದೆ
ದ.ಕ. ಜಿಲ್ಲೆಯ ಪುತ್ತೂರು ತಾಲೂಕಿನಲ್ಲೂ ಈ ದೋಟಿ ಕಾರ್ಯನಿರ್ವಹಿಸಲು ಆರಂಭಿಸಿದೆ. ಇದರ ಕಾರ್ಯವೈಖರಿ ಗಮನಿಸಿದ ಬೆಳೆಗಾರ ಇದನ್ನು ಖರೀದಿಸಲು ಯೋಚಿಸುವ ಆವಶ್ಯಕತೆಯಿಲ್ಲ.

ಇದನ್ನು ಬಾಲಸುಬ್ರಹ್ಮಣ್ಯ ಎಂಬುವವರು ತಯಾರಿಸಿ, ಬೆಳೆಗಾರರಿಗೆ ನೀಡುತ್ತಾರೆ. ಮಾರುಕಟ್ಟೆಗೆ ಈ ದೋಟಿ ಬಂದಿಲ್ಲ. ಅವಶ್ಯವಾಗಿ ಬೇಕೆಂದಾದಲ್ಲಿ ಅವರು ತಯಾರಿಸಿ, ನೀಡುತ್ತಾರೆ. ಸುಮಾರು 30 ಅಡಿಯ ದೋಟಿಗೆ 30 ಸಾವಿರ ರೂ. ಬೇಕಾಗುತ್ತದೆ. 80 ಅಡಿಯ ದೋಟಿಗೆ 80 ಸಾವಿರ ರೂ. ಬೇಕಾಗುತ್ತದೆ. ಇದು ಒಂದೆರಡು ವರ್ಷಗಳಲ್ಲೇ ಲಾಭ ನೀಡಲಾರಂಭಿಸುತ್ತದೆ.

ಮೆಕ್ಯಾನಿಕಲ್‌ ಎಂಜಿನಿಯರ್‌ ಬಾಲಸುಬ್ರಹ್ಮಣ್ಯ
ಹೈಟೆಕ್‌ ದೋಟಿ ಸಂಶೋಧಿಸಿದವರು ಅಮೆರಿಕಾದಲ್ಲಿರುವ ಮೆಕ್ಯಾನಿಕಲ್‌ ಎಂಜಿನಿಯರ್‌ ಬಾಲಸುಬ್ರಹ್ಮಣ್ಯ. ಅವರು ಹಾಸನ ಜಿಲ್ಲೆಯ ಅರಕಲಗೂಡು ತಾಲೂಕು ಹಾನಗಲ್ಲು ಗ್ರಾಮದ ಕೃಷಿ ಕುಟುಂಬದಿಂದಲೇ ಬಂದವರು. 5 ವರ್ಷಗಳ ಹಿಂದೆ ಅವರಿಗೆ ತನ್ನ ತೋಟದಲ್ಲಿ ಕೃಷಿ ಕಾಮಗಾರಿಗೆ ಕಾರ್ಮಿಕರ ಅಭಾವ ಉಂಟಾಯಿತು. ಈ ಸಂದರ್ಭ ಅವರು ತನ್ನ ಸಂಶೋಧನೆ ಆರಂಭಿಸಿದರು. ಅದರ ಫಲವೇ ಹೈಟೆಕ್‌ ದೋಟಿ. ಕಳೆದ ಎರಡು ವರ್ಷಗಳಲ್ಲಿ ಅಡಿಕೆ ಬೆಳೆಯುವ ಪ್ರದೇಶಗಳಲ್ಲಿ ಈ ದೋಟಿ ಜನಪ್ರಿಯವಾಗುತ್ತಿದೆ. ಉತ್ತರ ಕನ್ನಡ, ಹಾಸನ ಜಿಲ್ಲೆ ಸಹಿತ ಒಟ್ಟು 14 ತಾಲೂಕುಗಳಲ್ಲಿ ಈ ದೋಟಿ ಬಳಸಲಾರಂಭಿಸಿದ್ದಾರೆ.

ಅದ್ಭುತ ಉಪಕರಣ
ಅಡಿಕೆ ಬೆಳೆಗಾರರಿಗೆ ಇದು ವರದಾನವೇ ಹೌದು. ಅದ್ಭುತ ಉಪಕರಣ. ಕೂಲಿ ಕಾರ್ಮಿಕರಿಲ್ಲದೇ ನಾನು ಔಷಧ ಸಿಂಪಡಿಸುತ್ತಿದ್ದೇನೆ. ದೋಟಿಯಲ್ಲಿರುವ ಕ್ಲ್ಯಾಪ್‌ ಬಳಸಿ, ದೋಟಿಯ ಉದ್ದ ಹೆಚ್ಚು-ಕಡಿಮೆ ಮಾಡಲು ಸಾಧ್ಯವಾಗುತ್ತದೆ. ಸಣ್ಣ ಸಣ್ಣ ದೋಟಿಗಳನ್ನು ಬತ್ತಳಿಕೆಯಿಂದ ತೆಗೆಯುವಂತೆ ಇದರ ಪ್ರಕ್ರಿಯೆ ನಡೆಯುತ್ತದೆ. ಪ್ರತಿಯೊಂದು ಸಣ್ಣ ದೋಟಿಯು 5ರಿಂದ 7 ಅಡಿ ಉದ್ದವಿರುತ್ತದೆ. ದೊಡ್ಡ ಅಡಿಕೆ ಮರಕ್ಕೆ ಮತ್ತು ಸಣ್ಣ ಅಡಿಕೆ ಮರಕ್ಕೆ ಅವಶ್ಯವಿರುವಷ್ಟೇ ಉದ್ದ ನಿಯಂತ್ರಿಸಲು ಸಾಧ್ಯವಾಗುತ್ತದೆ. ಅಡಿಕೆ ಗೊನೆಯ ಸಮೀಪಕ್ಕೆ ದೋಟಿ ತಲುಪುತ್ತದೆ. ಬೋರ್ಡೋ ದ್ರಾವಣ ಪ್ರತಿಯೊಂದು ಅಡಿಕೆಗೂ ಸಿಂಪಡಿಸಿದಂತಾಗುತ್ತದೆ. ಆದುದರಿಂದ ಕೊಳೆರೋಗ ಸಂಭವಿಸುವುದಿಲ್ಲ. ಈ ಹಿಂದೆ ಒಂದು ಬಾರಿ ಔಷಧ ಸಿಂಪಡಿಕೆಗೆ 15,000 ರೂ. ಬೇಕಾಗುತ್ತಿತ್ತು. ಈ ಬಾರಿ ಎಲ್ಲವನ್ನೂ ನಾನೊಬ್ಬನೇ ನಿಭಾಯಿಸಿದ್ದೇನೆ. ಸಂಪೂರ್ಣ ಮೊತ್ತ ಉಳಿತಾಯವಾಗಿದೆ.
 - ಗಣೇಶ್‌ ಭಟ್‌ ಮೈಕೆ, ಇಡ್ಕಿದು ಅಡಿಕೆ ಬೆಳೆಗಾರರು

ವಿಶೇಷತೆಗಳು
· ಅಡಿಕೆ ಮರ ಏರಬೇಕಾಗಿಲ್ಲ. ಕೆಳಗೆ ನಿಂತು ಅಡಿಕೆ ಕೊಯ್ಲು ಮಾಡಬಹುದು, ಔಷಧ ಸಿಂಪಡಿಕೆ ಸಾಧ್ಯ.
· ತೂಕ ಕಡಿಮೆ. 60 ಅಡಿ ಎತ್ತರದ ವರೆಗೆ 4 ಕೆ.ಜಿ., 80 ಅಡಿ ಎತ್ತರಕ್ಕೆ 6 ಕೆ.ಜಿ. ತೂಗುತ್ತದೆ.
· ತೂಕ ಕಡಿಮೆ ಇರುವುದರಿಂದ ಸುಲಭವಾಗಿ ಸಾಗಾಟ ಸಾಧ್ಯ.
· ದೋಟಿಯನ್ನು ಅವಶ್ಯವಿರುವಷ್ಟೇ ಎತ್ತರಕ್ಕೇರಿಸಿ, ಲಾಕ್‌ ಮಾಡಲು ಸಾಧ್ಯವಾಗುತ್ತದೆ.
ಲಾಭಾಂಶಗಳು
· ಮನೆಯವರೇ ಈ ಕೆಲಸ ಮಾಡಬಹುದು.
· ಕಾರ್ಮಿಕರಿಗೆ ದಿನಕ್ಕೆ ನೀಡುವ 1,000ಕ್ಕೂ ಹೆಚ್ಚು ವೇತನದ ಉಳಿತಾಯ.
· ಈ ಸಲಕರಣೆ ಬಳಕೆಯಲ್ಲಿ ಯಾವುದೇ ಅಪಾಯಕಾರಿ ಸನ್ನಿವೇಶ ಉದ್ಭವಿಸುವುದಿಲ್ಲ.
· ಹಗುರವಾಗಿರುವುದರಿಂದ 8ರಿಂದ 12 ಗಂಟೆ ಕೆಲಸ ಮಾಡಬಹುದು.
· ಮರಗಳ ಕೊಂಬೆ ಸವರಲು ಇದನ್ನು ಬಳಸಬಹುದು.
· ಅಡಿಕೆ, ತೆಂಗಿನಕಾಯಿ, ಕಾಳುಮೆಣಸು, ಇನ್ನಾವುದೇ ಮರವನ್ನೇರಬೇಕಾದ ಸಂದರ್ಭ ಇದ್ದಾಗ ಈ ದೋಟಿಯನ್ನು ಬಳಸಿದರಾಯಿತು.

-  ಉದಯಶಂಕರ್‌ ನೀರ್ಪಾಜೆ

ಟಾಪ್ ನ್ಯೂಸ್

mohammed shami

‌Team India: ವೇಗಿ ಮೊಹಮ್ಮದ್ ಶಮಿಗೆ ಕಟ್ಟುನಿಟ್ಟಿನ ಗಡುವು ನೀಡಿದ ಬಿಸಿಸಿಐ!

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

1-horoscope

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ

Puttur: ಇದು ಅಜಿತರ ಸಾಹಸ : ರಬ್ಬರ್‌ ತೋಟದಲ್ಲಿ ಕಾಫಿ ಘಮ ಘಮ

Puttur: ಇದು ಅಜಿತರ ಸಾಹಸ : ರಬ್ಬರ್‌ ತೋಟದಲ್ಲಿ ಕಾಫಿ ಘಮ ಘಮ

Kasaragod: ನಿದ್ದೆಯಲ್ಲಿದ್ದ ಗಂಡು ಮಗು ಸಾ*ವು

Kasaragod: ನಿದ್ದೆಯಲ್ಲಿದ್ದ ಗಂಡು ಮಗು ಸಾ*ವು

Kundapura: ಕಾಂತಾರ ಸಿನೆಮಾದೊಂದಿಗೆ ಪ್ರಸಿದ್ಧಿ ಪಡೆದ ಕೆರಾಡಿ ಕಂಬಳ

Kundapura: ಕಾಂತಾರ ಸಿನೆಮಾದೊಂದಿಗೆ ಪ್ರಸಿದ್ಧಿ ಪಡೆದ ಕೆರಾಡಿ ಕಂಬಳ

Train: ಮುರುಡೇಶ್ವರ ಎಕ್ಸ್‌ಪ್ರೆಸ್‌ ಸಮಯ ಬದಲಾವಣೆ ಬೇಡ

Train: ಮುರುಡೇಶ್ವರ ಎಕ್ಸ್‌ಪ್ರೆಸ್‌ ಸಮಯ ಬದಲಾವಣೆ ಬೇಡ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Puttur: ಇದು ಅಜಿತರ ಸಾಹಸ : ರಬ್ಬರ್‌ ತೋಟದಲ್ಲಿ ಕಾಫಿ ಘಮ ಘಮ

Puttur: ಇದು ಅಜಿತರ ಸಾಹಸ : ರಬ್ಬರ್‌ ತೋಟದಲ್ಲಿ ಕಾಫಿ ಘಮ ಘಮ

Court-1

Puttur: ಮಹಿಳೆಗೆ ಬೈಕ್‌ ಢಿಕ್ಕಿ; ಸವಾರನಿಗೆ ಶಿಕ್ಷೆ

Dharmasthala: ಎರಡನೇ ದಿನದ ಕೆರೆಕಟ್ಟೆ ಉತ್ಸವ ಸಂಪನ್ನ

Dharmasthala: ಎರಡನೇ ದಿನದ ಕೆರೆಕಟ್ಟೆ ಉತ್ಸವ ಸಂಪನ್ನ

Belthangady: ಗೋ ಅಕ್ರಮ ಸಾಗಾಟ ತಡೆದ ಬಜರಂಗ ದಳ ಕಾರ್ಯಕರ್ತರು

Belthangady: ಗೋ ಅಕ್ರಮ ಸಾಗಾಟ ತಡೆದ ಬಜರಂಗ ದಳ ಕಾರ್ಯಕರ್ತರು

Sullia: ಬೈಕ್‌ ಮೇಲೆ ಜಿಗಿದ ಕಡವೆ; ಸವಾರರಿಗೆ ಗಾಯ

Sullia: ಬೈಕ್‌ ಮೇಲೆ ಜಿಗಿದ ಕಡವೆ; ಸವಾರರಿಗೆ ಗಾಯ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

mohammed shami

‌Team India: ವೇಗಿ ಮೊಹಮ್ಮದ್ ಶಮಿಗೆ ಕಟ್ಟುನಿಟ್ಟಿನ ಗಡುವು ನೀಡಿದ ಬಿಸಿಸಿಐ!

SPB: ತಿರುವಳ್ಳೂರ್ ನಲ್ಲಿ ಎಸ್.ಪಿ. ಬಾಲಸುಬ್ರಹ್ಮಣ್ಯಂ ಸ್ಮಾರಕ ನಿರ್ಮಾಣ

SPB: ಎಸ್‌ಪಿಬಿ ಸ್ಮಾರಕ ನಿರ್ಮಾಣಕ್ಕಾಗಿ ಡಿ.8ರಂದು ಸಂಗೀತ ಕಛೇರಿ

naa ninna bidalare movie releasing today

Sandalwood: ನಿಮ್ಮ ನಿರೀಕ್ಷೆಗೆ ನಾವು ಜವಾಬ್ದಾರರು: ʼನಾ ನಿನ್ನ ಬಿಡಲಾರೆ’ ಇಂದು ತೆರೆಗೆ

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

1

Pension Fraud: ಕಲ್ಯಾಣ ಪಿಂಚಣಿ ಲಪಟಾವಣೆ; ಸಿಕ್ಕಿ ಬಿದ್ದ 1,458 ಸರಕಾರಿ ಸಿಬಂದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.