ಉದ್ದೇಶಿತ ಐ.ಟಿ. ಪಾರ್ಕ್ ಸಾಕಾರಗೊಳ್ಳಬಹುದೇ?
ಕೋಟ್ಯಂತರ ರೂ. ಮೌಲ್ಯದ ಕಟ್ಟಡ, ಸ್ಥಳ ನಾಶದತ್ತ
Team Udayavani, Jul 30, 2019, 4:56 AM IST
ಆಸ್ಟ್ರಲ್ ವಾಚಸ್ ಕಂಪೆನಿಯ ಸ್ಥಳ ಮತ್ತು ಕಟ್ಟಡದ ಸುತ್ತ ಕಾಡು ಬೆಳೆದು ನಾಶದತ್ತ ಸರಿದಿದೆ.
ಕಾಸರಗೋಡು: ಜಿಲ್ಲೆಯಲ್ಲಿದ್ದ ಏಕ ಮಾತ್ರ ಸಾರ್ವಜನಿಕ ಸಂಸ್ಥೆಯಾದ ಆಸ್ಟ್ರಲ್ ವಾಚಸ್ ಕಂಪೆನಿಯ ಸ್ಥಳ ಮತ್ತು ಕಟ್ಟಡ ಕಾಡು ಪೊದೆ ಬೆಳೆದು ನಾಶದ ಅಂಚಿನಲ್ಲಿದೆ.
ಕೇರಳ ಸ್ಟೇಟ್ ಇಂಡಸ್ಟ್ರಿಯಲ್ ಡೆವಲಪ್‌ಮೆಂಟ್ ಕಾರ್ಪೊರೇಶನ್‌ನ ಸ್ವಾಧೀನದಲ್ಲಿರುವ ಈ ಸಂಸ್ಥೆ ಮುಚ್ಚುಗಡೆಗೊಂಡು ಹಲವು ವರ್ಷಗಳೇ ಸಂದಿದ್ದು, ಗಟ್ಟಿಮುಟ್ಟಾಗಿದ್ದ ಕಟ್ಟಡ ಮತ್ತು ಸ್ಥಳದಲ್ಲಿ ಕಾಡು ಬೆಳೆದು ನಾಶವಾಗುತ್ತಿದೆ. ನಗರದಿಂದ ಕಾಸರಗೋಡು ಸಮುದ್ರ ಕಿನಾರೆಗೆ ಹೋಗುವ ಬೀಚ್ ರೋಡ್‌ನ ನೆಲ್ಲಿಕುಂಜೆಯಲ್ಲಿರುವ ಆಸ್ಟ್ರಲ್ ವಾಚ್ ಕಂಪೆನಿಯ ಸ್ಥಳ ಮತ್ತು ಕಟ್ಟಡ ಕೋಟ್ಯಂತರ ರೂಪಾಯಿ ಮೌಲ್ಯವಿದ್ದು ದಿನದಿಂದ ದಿನಕ್ಕೆ ತುಕ್ಕು ಹಿಡಿಯುತ್ತಿದೆ. ಈ ಕಟ್ಟಡದಲ್ಲಿ ಆಸ್ಟ್ರಲ್ ವಾಚಸ್‌ನ ಎಸೆಂಬ್ಲಿಂಗ್ ಪ್ರಕ್ರಿಯೆ ನಡೆಯುತ್ತಿತ್ತು. 2006ರಲ್ಲಿ ಆಸ್ಟ್ರಲ್ ವಾಚಸ್ ಕಂಪೆನಿ ಮುಚ್ಚಲಾಗಿತ್ತು.
1980ರಲ್ಲಿ ಅಂದಿನ ಕೈಗಾರಿಕಾ ಸಚಿವರಾಗಿದ್ದ ಪಿ.ಸಿ. ಚಾಕೋ ಆಸ್ಟ್ರಲ್ ವಾಚಸ್ ಕಂಪೆನಿಯನ್ನು ಉದ್ಘಾಟಿಸಿದ್ದರು. ಎಚ್.ಎಂ.ಟಿ. ವಾಚ್ ಬಿಡಿ ಭಾಗಗಳನ್ನು ಜೋಡಿಸಿ ವಾಚ್ ನಿರ್ಮಾಣ ವಾಗುತ್ತಿತ್ತು. ಅಂತಾರಾಷ್ಟ್ರೀಯ ಮಟ್ಟದಲ್ಲೂ ಈ ಕಂಪೆನಿ ಗಮನ ಸೆಳದಿತ್ತು. ಈ ಮೂಲಕ ಕಾಸರಗೋಡಿನ ಹೆಸರು ವಿಶ್ವಮಟ್ಟಕ್ಕೆ ತಲುಪಿತ್ತು. ಆದರೆ ಪದೇ ಪದೆ ಈ ಕಂಪೆನಿಯಲ್ಲಿ ಕಾರ್ಮಿಕರ ನಿರಂತರ ಮುಷ್ಕರದಿಂದಾಗಿ ಕಂಪೆನಿ ಮುಚ್ಚಬೇಕಾಯಿತು. ಈ ಕಾರಣದಿಂದ ನೂರಕ್ಕೂ ಅಧಿಕ ಕಾರ್ಮಿಕರು ಉದ್ಯೋಗ ಕಳೆದುಕೊಂಡಿದ್ದರು. ಈ ಕಂಪೆನಿಯಲ್ಲಿ ಅಧಿಕಾರಿ ಮಟ್ಟದ ಉದ್ಯೋಗ ಬಿಟ್ಟರೆ ಉಳಿದ ಎಲ್ಲ ಕೆಲಸಗಳಿಗೆ ಮಹಿಳೆಯರನ್ನೇ ನೇಮಿಸಲಾಗಿತ್ತು. ಕಾರ್ಮಿಕ ಸಂಘಟನೆಗಳ ಒತ್ತಡದಿಂದ ಪದೇ ಪದೆ ಇಲ್ಲಿ ಮುಷ್ಕರ ನಡೆಯುತ್ತಿತ್ತು. ಮುಷ್ಕರದ ಹಿನ್ನೆಲೆಯಲ್ಲಿ ಕಂಪೆನಿಯನ್ನು ವಹಿಸಿಕೊಂಡವರಿಗೆ ಇದನ್ನು ಮುಂದಕ್ಕೆ ಸಾಗಿಸಲು ಸಾಧ್ಯವಾಗದೆ 2006 ರಲ್ಲಿ ಮುಚ್ಚಿದ್ದರು.
ಹೀಗೆ ಪ್ರಸಿದ್ಧಿಗೆ ಬರುತ್ತಿದ್ದ ಆಸ್ಟ್ರಲ್ ವಾಚಸ್ ಕಂಪೆನಿಯ ಸ್ಥಳ ಮತ್ತು ಕಟ್ಟಡದ ಸುತ್ತ ಕಾಡು ಬೆಳೆದು ನಾಶದತ್ತ ಸರಿದಿದೆ. ಹೀಗಿರುವಂತೆ ಹಿಂದಿನ ಎಡರಂಗ ಸರಕಾರದಲ್ಲಿ ಕೈಗಾರಿಕಾ ಸಚಿವರಾಗಿದ್ದ ಎಳಮರಂ ಕರೀಂ ಅವರು ಈ ಸ್ಥಳದಲ್ಲಿ ಐ.ಟಿ. ಪಾರ್ಕ್ ಸ್ಥಾಪಿಸುವ ಬಗ್ಗೆ ಭರವಸೆ ನೀಡಿದ್ದರು. ಆದರೆ ಹಿಂದಿನ ಸರಕಾರ ಆಡಳಿತಾವಧಿ ಕಳೆದು ಹೊಸ ಸರಕಾರ (ಯುಡಿಎಫ್) ಬಂತು. ಆದರೆ ಈ ಸರಕಾರವೂ ಈ ಸಂಸ್ಥೆಯನ್ನು ಉಳಿಸಿಕೊಳ್ಳುವ ಬಗ್ಗೆ ಯಾವುದೇ ಸೂಕ್ತ ಕ್ರಮ ತೆಗೆದುಕೊಂಡಿರಲಿಲ್ಲ. ಈಗ ಮತ್ತೆ ಎಡರಂಗ ಸರಕಾರ ಅಧಿಕಾರಕ್ಕೆ ಬಂದಿದೆ. ಎಡರಂಗ ಸರಕಾರದಲ್ಲಿ
ಕುಸಿಯುವ ಸಾಧ್ಯತೆ?
ಆಸ್ಟ್ರಲ್ ವಾಚಸ್ ಕಂಪೆನಿಯ ಕಟ್ಟಡದ ಕಿಟಿಕಿ ಬಾಗಿಲುಗಳು ಮುರಿದು ಬಿದ್ದಿವೆ. ಕಿಟಿಕಿ ಗಾಜು ಪುಡಿಯಾಗಿದೆ. ಕಟ್ಟಡಕ್ಕೆ ಬಳಸಿದ ಕಬ್ಬಿಣ ತುಕ್ಕು ಹಿಡಿದು ಕಾಂಕ್ರೀಟ್ ಹೀನಾಯ ಸ್ಥಿತಿಯಲ್ಲಿದೆ. ಕಟ್ಟಡದ ಅಲ್ಲಲ್ಲಿ ಬಿರುಕು ಬಿಟ್ಟಿದ್ದು, ಯಾವುದೇ ಕ್ಷಣದಲ್ಲೂ ಕುಸಿದು ಬೀಳುವ ಸಾಧ್ಯತೆಯಿದೆ. ಕಂಪೆನಿಯ ಸುತ್ತ ಗೋಡೆ ಅಲ್ಲಲ್ಲಿ ಕುಸಿದು ಬಿದ್ದಿದೆ. ಇದರಿಂದಾಗಿ ಸಮಾಜ ದ್ರೋಹಿಗಳ ಕೇಂದ್ರವಾಗಿ ಮಾರ್ಪಾಡುಗೊಳ್ಳುತ್ತಿದೆ. ಆಸ್ಟ್ರಲ್ ವಾಚಸ್ ಕಂಪೆನಿಯ ಸ್ಥಳ ಅನ್ಯರ ಪಾಲಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಈ ಹಿನ್ನೆಲೆಯಲ್ಲಿ ಶೀಘ್ರವೇ ಸಂಬಂಧಪಟ್ಟವರು ಇತ್ತ ಗಮನಹರಿಸಿ ಶಿಥಿಲಗೊಂಡಿರುವ ಕಟ್ಟಡವನ್ನು ರಕ್ಷಿಸಲು ಕ್ರಮ ತೆಗೆದುಕೊಳ್ಳಬೇಕಾಗಿದ್ದು, ಉದ್ದೇಶಿತ ಐ.ಟಿ.ಪಾರ್ಕ್ ಸ್ಥಾಪಿಸಿ ಕೆಲವು ಮಂದಿ ಗಾದರೂ ಉದ್ಯೋಗ ನೀಡುವಂತಾಗಬೇಕು.
ಕೈಗಾರಿಕ ಸಚಿವರಾಗಿದ್ದ ಎಳಮರಂ ಕರೀಂ ಐ.ಟಿ. ಪಾರ್ಕ್ ಆರಂಭಿಸುವ ಬಗ್ಗೆ ಭರವಸೆ ನೀಡಿದ್ದರು. ಇದೀಗ ಈ ಸಚಿವರು ಪ್ರತಿನಿಧಿಸಿದ್ದ ಎಡರಂಗ ಅಧಿಕಾರದಲ್ಲಿರುವುದರಿಂದ ಇಲ್ಲಿ ಯಾವುದಾ ದರೂ ಕೈಗಾರಿಕೆಯನ್ನು ಸ್ಥಾಪಿಸ ಬಹುದು. ಐ.ಟಿ.ಪಾರ್ಕ್‌ನ್ನೂ ಸ್ಥಾಪಿಸ ಬಹದು.ಆದರೆ ಈ ವರೆಗೂ ಯಾವುದೇ ಕ್ರಮ ನಡೆಯಲಿಲ್ಲ.ಐ.ಟಿ.ಪಾರ್ಕ್ ಭರವಸೆ ಕಡತದಲ್ಲೇ ಉಳಿದುಕೊಂಡಿದೆ.
ಐ.ಟಿ.ಪಾರ್ಕ್ ಮುಖಾಂತರ ನೂರಾರು ಮಂದಿಗೆ ಉದ್ಯೋಗ ನೀಡುವ ಸಂಕಲ್ಪದೊಂದಿಗೆ ಯೋಜನೆಯನ್ನು ಆರಂಭಿಸುವುದಾಗಿ ಭರವಸೆ ನೀಡಲಾಗಿತ್ತು. ಆದರೆ ಕಾಸರಗೋಡು ಹಿಂದಿ ನಿಂದಲೂ ಅವಗಣನೆಗೆ ತುತ್ತಾದ ಜಿಲ್ಲೆ. ಆಸ್ಟ್ರಲ್ ವಾಚಸ್ ಕಂಪೆನಿಗೂ ಇದೇ ಅನುಭವವಾಯಿತು.ಐ.ಟಿ.ಪಾರ್ಕ್ ಎಂಬ ಮಹತ್ವಾಕಾಂಕ್ಷೆಯ ಯೋಜನೆ ಸಾಕಾರ ಗೊಳ್ಳದೆ ಇಲ್ಲಿದ್ದ ಕಟ್ಟಡ ಶಿಥಿಲಗೊಳ್ಳುತ್ತಿದೆ.
-ಪ್ರದೀಪ್ ಬೇಕಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು
8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ
Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ
Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’
ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್ ಮಾದರಿಯಲ್ಲಿ ವಿಶೇಷ ಪೊಲೀಸ್ ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.