ಹುಲಿಗಣತಿಯಲ್ಲಿ ಕರ್ನಾಟಕಕ್ಕಿಲ್ಲ ಮೊದಲ ಸ್ಥಾನ
Team Udayavani, Jul 30, 2019, 3:07 AM IST
ಬೆಂಗಳೂರು: ಹುಲಿಗಳ ಆವಾಸ ಸ್ಥಾನಗಳಲ್ಲಿ ಈ ಬಾರಿ ಕರ್ನಾಟಕಕ್ಕೆ ಮೊದಲ ಸ್ಥಾನ ಕೈತಪ್ಪಿದ್ದು, ಕಳೆದ ಸಮೀಕ್ಷೆಯಲ್ಲಿ ಸುಮಾರು 100 ಹುಲಿಗಳ ಅಂತರದಲ್ಲಿ ಎರಡನೇ ಸ್ಥಾನ ಪಡೆದಿದ್ದ ಮಧ್ಯಪ್ರದೇಶ ಮೊದಲ ಸ್ಥಾನವನ್ನು ಮುಡಿಗೇರಿಸಿಕೊಂಡಿದೆ. ಇದಕ್ಕೆ ಪ್ರಮುಖ ಕಾರಣ ಈ ಬಾರಿ ರಾಜ್ಯದಲ್ಲಿ ವನ್ಯಜೀವಿಗಳ ಪ್ರಕರಣಗಳ ಉತ್ಕೃಷ್ಟ ತನಿಖೆ ಹಾಗೂ ಮಧ್ಯಪ್ರದೇಶದಲ್ಲಿ ಹೆಚ್ಚಿದ ಮೀಸಲು ಅರಣ್ಯ ಪ್ರದೇಶ ಎನ್ನಲಾಗುತ್ತಿದೆ. ಇನ್ನೊಂದೆಡೆ ಗಣತಿ ವರದಿ ಕುರಿತು ಅನುಮಾನವು ವ್ಯಕ್ತವಾಗಿದೆ.
ಪರಿಸರ ಮತ್ತು ಅರಣ್ಯ ಸಚಿವಾಲಯದ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ (ಎನ್‌ಟಿಸಿಎ) 2018ರ ಹುಲಿ ಗಣತಿ ವರದಿ ಸೋಮವಾರ ಬಿಡುಗಡೆ ಮಾಡಿದ್ದು, ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ದೇಶದಲ್ಲಿ ಹುಲಿಗಳ ಸಂತತಿ ಗಣನೀಯವಾಗಿ ಏರಿಕೆಯಾಗಿದೆ. ಒಟ್ಟಾರೆ ನಾಲ್ಕು ವರ್ಷಗಳಲ್ಲಿ 741 ಹುಲಿಗಳು ಹೆಚ್ಚಾಗಿವೆ. ಅಂತೆಯೇ ಕರ್ನಾಟಕದಲ್ಲೂ ವಾರ್ಷಿಕ ಶೇ.7 (ಒಟ್ಟು ಶೇ.28) ಹುಲಿಗಳ ಸಂಖ್ಯೆ (118)ಹೆಚ್ಚಳವಾಗಿ ಸದ್ಯ 524 ಹುಲಿಗಳಿವೆ. ಮಧ್ಯಪ್ರದೇಶದಲ್ಲಿ ವಾರ್ಷಿಕ ಶೇ.17.5 (ಶೇ.70) ಏರಿಕೆಯಾಗಿದೆ. ಈ ಎರಡು ರಾಜ್ಯಗಳ ನಡುವೆ ದಶಕಗಳ ಹಿಂದೆ ಪ್ರಬಲ ಪೈಪೋಟಿ ಇದ್ದು, 2006ರಲ್ಲಿ ನಡೆದ ಗಣತಿಯಲ್ಲಿ 10 ಹುಲಿಗಳ ಅಂತರದಲ್ಲಿ ಮಧ್ಯಪ್ರದೇಶ ಮೊದಲ ಸ್ಥಾನ ಪಡೆದಿತ್ತು. ಈ ಬಾರಿ ಗಣತಿಯಲ್ಲಿ ಮಧ್ಯಪದೇಶದಲ್ಲಿ 218 ಹುಲಿಗಳು ಹೆಚ್ಚಳವಾಗಿ ಮೊದಲ ಸ್ಥಾನಕ್ಕೇರಿದೆ.
ಉತ್ಕೃಷ್ಟ ಗಣತಿ ಕಾರಣ: ಕಳೆದ ಗಣತಿಗಳಿಗೆ ಹೋಲಿಸಿದರೆ ಎನ್‌ಟಿಸಿಎ ಪ್ರಸಕ್ತ ಗಣತಿಯನ್ನು ಉತ್ಕೃಷ್ಟ ಮಟ್ಟದ ತಂತ್ರಜ್ಞಾನ ಆಧಾರಿತ ಗಣತಿ ನಡೆದಿದೆ. ಈ ಬಾರಿ 2 ಚ.ಕಿ.ಮೀಗೆ ಒಂದು ಕ್ಯಾಮರಾ ಟ್ಯಾಪ್ ಬಳಸಿದ್ದು, ನಿಖರ ಮಾಹಿತಿಯನ್ನು ಪಡೆಯಲು ಸಾಧ್ಯವಾಗಿದೆ. ಹಿಂದೆಲ್ಲ ಹುಲಿ ಗಣತಿ ಸಂರಕ್ಷಿತ ಪ್ರದೇಶದಲ್ಲಿ ಮಾತ್ರ ನಡೆಯುತ್ತಿತ್ತು. ಆದರೆ, ಈ ಬಾರಿ ಎಲ್ಲಾ ಅರಣ್ಯ ಪ್ರದೇಶದಲ್ಲಿಯೂ ಗಣತಿ ನಡೆದಿದೆ. ಮಧ್ಯಪ್ರದೇಶದಲ್ಲಿ ಕರ್ನಾಟಕಕ್ಕಿಂತಲೂ ಹೆಚ್ಚಿನ ಅರಣ್ಯ ಪ್ರದೇಶವಿದ್ದು, ಇತರೆ ಅರಣ್ಯಭಾಗದಲ್ಲಿದ್ದ ಹುಲಿಗಳು ಪತ್ತೆಯಾಗಿದೆ. ಹೀಗಾಗಿ ನೈಜ ಫಲಿತಾಂಶದ ಕಾರಣ ಮಧ್ಯಪ್ರದೇಶ ಪ್ರಥಮ ಸ್ಥಾನಕ್ಕೇರಿದೆ ಎನ್ನಲಾಗುತ್ತಿದೆ.
ಅರಣ್ಯ ಪ್ರದೇಶ ಹೆಚ್ಚು: ಮಧ್ಯಪ್ರದೇಶದ ಒಟ್ಟು ಭೂಪ್ರದೇಶದಲ್ಲಿ 94,689 ಚ.ಕಿ.ಮೀ(ಶೇ.30) ಅರಣ್ಯ ವಿದೆ. ಕರ್ನಾಟಕವು 43,427 ಚ.ಕಿ.ಮೀ ಮಾತ್ರ ಅರಣ್ಯ ಪ್ರದೇಶ ಹೊಂದಿದೆ. ಮಧ್ಯಪ್ರದೇಶದಲ್ಲಿ ಮೀಸಲು ಅರಣ್ಯ 60 ಸಾವಿರದಷ್ಟಿದ್ದರೆ, ಕರ್ನಾಟಕದಲ್ಲಿ ಅದರ ಅರ್ಧದಷ್ಟಿದೆ. ಇನ್ನು ರಾಜ್ಯದಲ್ಲಿ ಹುಲಿ ಸಂರಕ್ಷಿತ ಪ್ರದೇಶ ಐದು ಇದ್ದು, ಮಧ್ಯಪ್ರದೇಶದಲ್ಲಿ ಆರು ಇವೆ. ಕರ್ನಾಟಕದಲ್ಲಿ ಬಂಡೀಪುರ, ನಾಗರಹೊಳೆಯಿಂದ ಹೊರಗೆ ಬಂದರೆ ಅರಣ್ಯ ಪ್ರಮಾಣ ತೀರ ಕಡಿಮೆ. ಮಧ್ಯಪ್ರದೇಶ ಹುಲಿಗಳ ವಾಸಕ್ಕೆ ಸಾಕಷ್ಟು ಅವಕಾಶವಿದ್ದು, ಹೀಗಾಗಿ ಸಂತತಿ ಹೆಚ್ಚಿದೆ. ಎಂದು ವನ್ಯಜೀವಿ ತಜ್ಞರು ಅಭಿಮತವಾಗಿದೆ.
ಗಣತಿ ಕುರಿತು ಅನುಮಾನ: ಎನ್‌ಟಿಸಿಎ ಹುಲಿ ಗಣತಿಯಲ್ಲಿ ಕರ್ನಾಟಕ, ಉತ್ತರಖಾಂಡ, ಉತ್ತರ ಪ್ರದೇಶ, ಮಹಾರಾಷ್ಟ್ರದಲ್ಲಿ ಹುಲಿಗಳ ಸಂಖ್ಯೆ ವಾರ್ಷಿಕ ಶೇ.8ಕ್ಕಿಂತಲೂ ಕಡಿಮೆ ಏರಿಕೆಯಾಗಿದೆ. ಆದರೆ ಮಧ್ಯಪ್ರದೇಶದಲ್ಲಿ ವಾರ್ಷಿಕ 17.5 ರಷ್ಟು ಏರಿಕೆಯಾಗಿ ಒಟ್ಟು ಹುಲಿಗಳ ಸಂಖ್ಯೆ 218 ಏರಿಕೆಯಾಗಿರುವುದು ಅನುಮಾನಕ್ಕೆ ಕಾರಣವಾಗಿದೆ. ಪ್ರವಾಸೋದ್ಯಮ ಹೆಚ್ಚಿಸಿಕೊಳ್ಳುವ ದೃಷ್ಟಿಯಿಂದ ಅಲ್ಲಿನ ಸರ್ಕಾರ ಗಣತಿ ವರದಿಯಲ್ಲಿ ಮಧ್ಯಪ್ರವೇಶಿಸಿದೆ ಎಂದು ಆರೋಪಿಸಲಾಗುತ್ತಿದೆ. ಗಣತಿ ವೇಳೆ ಕ್ಯಾಮರಾಗೆ ಟ್ರಾಪ್ ಸಮಸ್ಯೆ, ಹುಲಿಗಳು ವಿಸರ್ಜಿಸಿದ ಮಲದ ಆಧಾರಲ್ಲಿ ಗಣತಿಯಾಗಿರಬಹುದು. ಹೀಗಾಗಿ, ಹುಲಿಗಳ ಸಂಖ್ಯೆ ಶೇ.70ರಷ್ಟು ಹೆಚ್ಚಳವಾಗಿರಬಹುದು ಎಂದು ಹೆಸರು ಹೇಳಲಿಚ್ಚಿಸದ ಅರಣ್ಯ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.
ಈ ಬಾರಿ ಗಣತಿ ಪ್ರಕಾರ ನಮ್ಮ ರಾಜ್ಯದಲ್ಲಿ ಹುಲಿಗಳ ಸಂಖ್ಯೆ ಉತ್ತಮ ಪ್ರಮಾಣದಲ್ಲಿದೆ. ಮುಂದಿನ ದಿನಗಳಲ್ಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯನ್ನು ಹೆಚ್ಚಿಸಿಕೊಂಡು ಇನ್ನಷ್ಟು ಪ್ರಮಾಣದಲ್ಲಿ ಹುಲಿಗಳ ಸಂತತಿ ಹೆಚ್ಚಳಕ್ಕೆ ಕ್ರಮಕೈಗೊಳ್ಳುತ್ತೇವೆ. ಗಣತಿ ಉತ್ಕೃಷ್ಟ ಮಟ್ಟದಲ್ಲಿ ನಡೆದಿರುವುದರಿಂದ ಮಧ್ಯಪ್ರದೇಶಲ್ಲಿ ಪ್ರಥಮ ಸ್ಥಾನಕ್ಕೇರಿರಬಹುದು. ಶೇ.70 ಏರಿಕೆ ಅಚ್ಚರಿ ಮೂಡಿಸಿದೆ.
-ಸಂಜಯ್ ಮೋಹನ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ
* ಜಯಪ್ರಕಾಶ್ ಬಿರಾದಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Renukaswamy Case: ದರ್ಶನ್ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ
Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್
Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು
By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು
Siddaramaiah ಸಂಪುಟ ಸೇರಲು ಭರ್ಜರಿ ಲಾಬಿ: ಆಕಾಂಕ್ಷಿಗಳು ಯಾರು? ಕೆಲವರಿಗೆ ಕೊಕ್?
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Udupi: ಬಿಎಸ್ಸೆನ್ನೆಲ್ ಟವರ್ ನಿರ್ವಹಣೆ ಹೊಣೆ ಪಂಚಾಯತ್ ಹೆಗಲಿಗೆ
Rapper Badshah: ಗಾಯಕ ಬಾದ್‌ಶಾ ಒಡೆತನದ ಬಾರ್ & ಕ್ಲಬ್ ಹೊರಗೆ ಬಾಂ*ಬ್ ಸ್ಪೋ*ಟ
Hampankatte: ಸಿಟಿ ಮಾರ್ಕೆಟ್ ರಸ್ತೆಗೆ ಬೇಕಿದೆ ಕಾಯಕಲ್ಪ
Mangaluru: ಪಿ.ಎಂ. ರಾವ್ ರಸ್ತೆಯಲ್ಲಿ ಮತ್ತೆ ಎಲ್ಲೆಂದರಲ್ಲಿ ವಾಹನ ನಿಲುಗಡೆ
Thirthahalli: ತುಂಗಾ ಕಮಾನು ಸೇತುವೆ ಬಳಿ ಪತ್ತೆಯಾಗಿದ್ದ ಅಸ್ತಿ ಪಂಜರ ತಂದು ಹಾಕಿದ್ಯಾರು!!?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.