ಒಡಿಶಾಗೆ ಸಿಹಿ ಸುದ್ದಿ ರಸಗುಲ್ಲಾಗೆ ಜಿಐ ಮಾನ್ಯತೆ
Team Udayavani, Jul 30, 2019, 5:02 AM IST
ಭುವನೇಶ್ವರ: ಹಲವು ವರ್ಷಗಳ ಹೋರಾಟ ಹಾಗೂ ಕಾತರದ ನಂತರ ಕೊನೆಗೂ ಒಡಿಶಾಗೆ ‘ಸಿಹಿ’ಯಾದ ಗೆಲುವು ಸಿಕ್ಕಿದೆ. ಒಡಿಶಾದ ಖ್ಯಾತ ಸಿಹಿತಿನಿಸಾದ ರಸಗುಲ್ಲಾಗೆ ಸೋಮವಾರ ಜಿಐ(ಜಿಯಾಗ್ರಾಫಿಕಲ್ ಇಂಡಿಕೇಷನ್) ಮಾನ್ಯತೆ ಪ್ರಾಪ್ತಿಯಾಗಿದೆ.
ಚೆನ್ನೈನ ರಿಜಿಸ್ಟ್ರಾರ್ ಆಫ್ ಜಿಯಾಗ್ರಾಫಿಕಲ್ ಇಂಡಿಕೇಷನ್ ಕಾಟೇಜ್ ಚೀಸ್ನಿಂದ ತಯಾರಿಸಲಾಗುವ ರಸಗುಲ್ಲಾವನ್ನು ಸರಕುಗಳ ಭೌಗೋಳಿಕ ಮಾನ್ಯತೆ (ನೋಂದಣಿ ಮತ್ತು ಸಂರಕ್ಷಣೆ) ಕಾಯ್ದೆ, 1999ರ ಅನ್ವಯ ‘ಒಡಿಶಾ ರಸಗುಲ್ಲಾ’ ಎಂದು ಘೋಷಿಸಿದೆ. ಈ ಮಾನ್ಯತೆಯು 2028ರ ಫೆಬ್ರವರಿ 22ರವರೆಗೂ ಚಾಲ್ತಿಯಲ್ಲಿರುತ್ತದೆ. 2015ರಿಂದಲೂ ರಸಗುಲ್ಲಾದ ಮೂಲದ ಕುರಿತು ಪಶ್ಚಿಮ ಬಂಗಾಳ ಮತ್ತು ಒಡಿಶಾ ನಡುವೆ ಭಾರೀ ಪೈಪೋಟಿ ಏರ್ಪಟ್ಟಿತ್ತು. 2017ರಲ್ಲಿ ಪಶ್ಚಿಮ ಬಂಗಾಳವು ‘ಬಂಗಾಳದ ರಸಗುಲ್ಲಾ’ಗೆ ಜಿಐ ಮಾನ್ಯತೆ ಪಡೆಯುವಲ್ಲಿ ಯಶಸ್ವಿಯಾಗಿತ್ತು. ಮಾರನೇ ವರ್ಷವೇ ಒಡಿಶಾ ಸಣ್ಣ ಉದ್ಯಮ ನಿಗಮವು ಜಿಐ ಮಾನ್ಯತೆಗೆ ಅರ್ಜಿ ಸಲ್ಲಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್ ಕ್ಷಮೆಗೆ ವೈದ್ಯರ ಪಟ್ಟು
Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್ ವಿರುದ್ಧ ತಾಬ್ಡೆ 100 ಕೋಟಿ ದಾವೆ!
Adani: ಲಂಚ ಕೇಸ್; ಜಗನ್ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ
Supreme Court: ದಿಲ್ಲಿಯ 113 ಚೆಕ್ಪೋಸ್ಟ್ನಲ್ಲಿ ಪೊಲೀಸರನ್ನು ನೇಮಿಸಿ
Delhi Elections: ಆಪ್ನಿಂದ 7 ಉಚಿತ ಯೋಜನೆ ಘೋಷಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.