ದೈಹಿಕ ಶಿಕ್ಷಕರಿಲ್ಲದೆ ಪ್ರತಿಭೆ ಗೌಣ
•ಸೈದಾಪುರ, ಬಳಿಚಕ್ರ, ಕೊಂಕಲ್ ಹೋಬಳಿ ಮಟ್ಟದ ಸರಕಾರಿ ಶಾಲೆಗಳಲ್ಲಿ ದೈಹಿಕ ಶಿಕ್ಷಕರ ಕೊರತೆ
Team Udayavani, Jul 30, 2019, 1:03 PM IST
ಸೈದಾಪುರ: ಬೆಳಗುಂದಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದೈಹಿಕ ಶಿಕ್ಷಕರಿಲ್ಲದೆ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ತೊಡಗಿರುವುದು.
ಸೈದಾಪುರ: ಶಾಲಾ ಮಕ್ಕಳು ಕಲಿಕೆ ಜತೆ ಕ್ರೀಡೆಗಳಲ್ಲಿ ಭಾಗವಹಿಸಬೇಕು ಎಂಬ ಉದ್ದೇಶದಿಂದ ಪ್ರತಿಭೆಯನ್ನು ಹೊರತೆಗೆಯಲು ಸರಕಾರ ಹೋಬಳಿ, ತಾಲೂಕು, ಜಿಲ್ಲಾ, ಮತ್ತು ರಾಜ್ಯ ಮಟ್ಟದ ಕ್ರೀಡಾಕೂಟ ಏರ್ಪಡಿಸುತ್ತಿದೆ. ಇದಕ್ಕೆ ತದ್ದವಿರುದ್ಧವೆಂಬತೆ ತಾಲೂಕಿನ ಬಹುತೇಕ ಸರಕಾರಿ ಶಾಲೆಗಳಲ್ಲಿ ದೈಹಿಕ ಶಿಕ್ಷಕರೇ ಇಲ್ಲ.
ಸೈದಾಪುರ ಹೋಬಳಿಯಲ್ಲಿ 20 ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿದ್ದು, ಅವುಗಳ ಪೈಕಿ ಕೇವಲ ಎರಡು ಶಾಲೆಗಳಿಗೆ ಮತ್ತು ಬಳಿಚಕ್ರ ಹೋಬಳಿಯಲ್ಲಿ 20 ಶಾಲೆಗಳಿದ್ದು, ಅವುಗಳ ಪೈಕಿ ಕೇವಲ 4 ಜನ ಹಾಗೂ ಕೊಂಕಲ್ ಹೋಬಳಿಯ 20 ಶಾಲೆಗಳಲ್ಲಿ ಇಬ್ಬರು ಮಾತ್ರ ದೈಹಿಕ ಶಿಕ್ಷಕರಿದ್ದಾರೆ.
ಮಕ್ಕಳು ದಿನದ ಬಹುತೇಕ ಸಮಯ ಶಾಲೆಯಲ್ಲಿ ಕಳೆಯುತ್ತಾರೆ. ವಿದ್ಯಾರ್ಥಿಗಳಿಗೆ ಕಲಿಕೆ ಜತೆ ಕ್ರೀಡೆಗಳಲ್ಲಿ ಭಾಗವಹಿಸಲು ಅನೂಕೂಲ ಮಾಡಿಕೊಡಬೇಕಾದ ದೈಹಿಕ ಶಿಕ್ಷಕರ ಇಲ್ಲದೆ ಈ ಭಾಗದ ವಿದ್ಯಾರ್ಥಿಗಳು ಕ್ರೀಡೆಯಿಂದ ವಂಚಿತರಾಗತ್ತಿದ್ದಾರೆ. ಅಲ್ಲದೇ ಗ್ರಾಮೀಣ ಭಾಗದ ಕ್ರೀಡಾ ಪ್ರತಿಭೆಗಳಿಗೆ ಸೂಕ್ತ ಮಾರ್ಗದರ್ಶನ ಇಲ್ಲದೆ ರಾಜ್ಯ ಮಟ್ಟದಲ್ಲಿ ಯಶಸ್ವಿಯಾಗಲು ವಿಫಲವಾಗುತ್ತಿದ್ದಾರೆ. ದೈಹಿಕ ಶಿಕ್ಷಕರ ಕೊರತೆಯಿಂದಾಗಿ ವಿದ್ಯಾರ್ಥಿಗಳ ಬಾಲ್ಯ ಜೀವನದ ಕ್ರೀಡೆಗಳನ್ನು ಕಸಿದುಕೊಳ್ಳುವ ಜತೆ ಗ್ರಾಮೀಣ ಭಾಗದ ಕ್ರೀಡಾ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಹಿಂದೇಟು ಹಾಕುತ್ತಿವೆ. ಮತ್ತು ಇದರಿಂದಾಗಿ ನಮ್ಮ ಭಾಗದ ಪ್ರತಿಭವಂತ ಕ್ರೀಡಾಪಟುಗಳನ್ನು ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಭಾಗವಹಿಸಲು ತೊಂದರೆಯಾಗುತ್ತಿದೆ ಎಂಬುವುದು ಇಲ್ಲಿನ ಶಿಕ್ಷಣ ಪ್ರೇಮಿಗಳ ಅಭಿಪ್ರಾಯವಾಗಿದೆ.
ಶಿಕ್ಷಕರ ನೇಮಕಾತಿ ಯಾವಾಗ?:
ಸರಕಾರ ವಿದ್ಯಾರ್ಥಿಗಳ ಕಲಿಕೆಗೆ ತೊಂದರೆಯಾಗದಂತೆ ವಿಷಯ ಶಿಕ್ಷಕರು ಕಡಿಮೆ ಇರುವ ಶಾಲೆಗಳಿಗೆ ಅತಿಥಿ ಶಿಕ್ಷಕರನ್ನು ನೆಮಿಸಿಕೊಳ್ಳುತ್ತಿದೆ. ಆದರೆ ಈ ಸೈದಾಪುರ, ಬಳಿಚಕ್ರ ಮತ್ತು ಕೊಂಕಲ್ ಹೋಬಳಿಯಲ್ಲಿ ಸುಮಾರು 60 ಶಾಲೆಗಳಿವೆ. ಅದರಲ್ಲಿ ಕೇವಲ 8 ಶಾಲೆಗಳಿಗೆ ಮಾತ್ರ ದೈಹಿಕ ಶಿಕ್ಷಕರಿದ್ದಾರೆ. ಈ ಮೂಲಕ ವಿಷಯ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿ, ದೈಹಿಕ ಶಿಕ್ಷಣವನ್ನು ನಿರ್ಲಕ್ಷ್ಯ ವಹಿಸಿದ್ದಾರೆ. ಈ ಸಮಸ್ಯೆಯನ್ನು ನಮ್ಮ ಭಾಗದ ಜನಪ್ರತಿನಿಧಿಗಳು ಮತ್ತು ಶಿಕ್ಷಣಾಧಿಕಾರಿಗಳು ಸರಕಾರಕ್ಕೆ ಮಾಹಿತಿ ನೀಡಿ ಕನಿಷ್ಠ ಅತಿಥಿ ದೈಹಿಕ ಶಿಕ್ಷಣ ಶಿಕ್ಷಕರನ್ನು ನೇಮಿಸಿಕೊಳ್ಳಬೇಕು.•ಆಂಜನೇಯ ಸೈದಾಪುರ, ಬಿ.ಪಿ.ಎಡ್ ಪದವೀಧರ
ಈ ಭಾಗದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ದೈಹಿಕ ಶಿಕ್ಷಕರ ಕೊರೆತ ಇದೆ. ಆದರೆ ಸರಕಾರವು ರಾಜ್ಯ ಮಟ್ಟದಲ್ಲಿ ನೇಮಕಾತಿ ಮತ್ತು ವರ್ಗವಣೆಯ ಮೂಲಕ ಭರ್ತಿ ಮಾಡಿಕೊಳಬಹುದು. ಆದರೆ ಅತಿಥಿ ಶಿಕ್ಷಕರ ನೇಮಕಾತಿ ಮಾಡಲು ಅವಕಾಶವಿಲ್ಲ.•ಶ್ರೀಶೈಲ ಬಿರಾದರ, ಉಪನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ ಯಾದಗಿರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.