ಮಕ್ಕಳಿಗೆ ಶುಚಿ, ರುಚಿ ಬಿಸಿಯೂಟ ನೀಡಿ


Team Udayavani, Jul 31, 2019, 3:00 AM IST

makkaige

ಹುಣಸೂರು: ತಾಲೂಕಿನ ಬನ್ನಿಕುಪ್ಪೆ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯ ಹಗರನಹಳ್ಳಿ ಮತ್ತು ಕೆಬ್ಬೆಕೊಪ್ಪಲು ಸರ್ಕಾರಿ ಶಾಲೆಗಳಿಗೆ ರಾಜ್ಯ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆಯಾದ ಬನ್ನಿಕುಪ್ಪೆ ಜಿಪಂ ಸದಸ್ಯೆ ಡಾ.ಪುಷ್ಪಾ ಅಮರ್‌ನಾಥ್‌ ದಿಢೀರ್‌ ಭೇಟಿ ನೀಡಿ ಬಿಸಿಯೂಟ ಹಾಗೂ ಶಾಲೆಯ ನಿರ್ವಹಣೆ ಬಗ್ಗೆ ಪರಿಶೀಲಿಸಿದರು.

ಬಿಳಿಕೆರೆ ಹೋಬಳಿಯ ಹಗರನಹಳ್ಳಿ ಪ್ರೌಢಶಾಲೆ ಹಾಗೂ ಕೆಬ್ಬೆಕೊಪ್ಪಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಭೇಟಿ ನೀಡಿ, ಅಡುಗೆಗೆ ಬಳಸುವ ಅಕ್ಕಿಯ ಗುಣಮಟ್ಟ, ಸಾಂಬಾರಿಗೆ ಹಾಕುವ ಸೊಪ್ಪು ಮತ್ತು ತರಕಾರಿಯ ಬಗ್ಗೆ ಬಿಸಿಯೂಟದ ಸಿಬ್ಬಂದಿಯಿಂದ ಮಾಹಿತಿ ಪಡೆದುಕೊಂಡರು.

ಮಕ್ಕಳ ಜತೆ ಬಿಸಿಯೂಟ: ಮಕ್ಕಳಿಗೆ ಶುಚಿ ಮತ್ತು ರುಚಿಯಾದ ಅಡುಗೆ ತಯಾರಿಸಿ ಬಡಿಸಬೇಕು ಎಂದು ಶಿಕ್ಷಕರಿಗೂ ಹಾಗೂ ಅಡುಗೆ ಸಿಬ್ಬಂದಿಗೆ ತಾಕೀತು ಮಾಡಿದ ಅವರು, ವಿದ್ಯಾರ್ಥಿಗಳ ಹಾಜರಾತಿಯನ್ನು ಪರಿಶೀಲಿಸಿದರು. ಬಳಿಕ ಬಿಸಿಯೂಟ ರುಚಿಯ ಬಗ್ಗೆ ವಿದ್ಯಾರ್ಥಿಗಳಿಂದ ಮಾಹಿತಿ ಪಡೆದು ಮಕ್ಕಳೊಂದಿಗೆ ಬಿಸಿಯೂಟ ಸವಿದರು.

ಮನವಿ: ಹಗರನಹಳ್ಳಿ ಪ್ರೌಢಶಾಲಾ ಮುಖ್ಯ ಶಿಕ್ಷಕ ಪುಟ್ಟಬಸವೇಗೌಡ, ಶಾಲೆಯ ಆವರಣದಲ್ಲಿ ಶೌಚಾಲಯ, ಅಡುಗೆ ಮನೆ, ಶಾಲೆಗೆ ಕಾಪೌಂಡು ನಿರ್ಮಾಣ ಹಾಗೂ ಶಾಲೆಗೆ ಸುಣ್ಣ-ಬಣ್ಣ ಹಾಕಿಸಿಕೊಡುವಂತೆ ಮನವಿ ಮಾಡಿದರು.

ಮೂಲಭೂತ ಸೌಲಭ್ಯ: ಈ ಮಧ್ಯೆ, ಬೀಜಗನಹಳ್ಳಿ, ರತ್ನಪುರಿ, ಚಿಕ್ಕ ಹುಣಸೂರು ಸರ್ಕಾರಿ ಶಾಲೆಗಳಿಗೆ ಡಾ.ಪುಷ್ಪಾ ಅಮರ್‌ನಾಥ್‌ ಭೇಟಿ ನೀಡಿ ಪರಿಶೀಲಿಸಿದರು. ಬನ್ನಿಕುಪ್ಪೆ ಜಿಪಂ ವ್ಯಾಪ್ತಿಗೆ ಬರುವ ಸರ್ಕಾರಿ ಶಾಲೆಗಳ ಸಮಸ್ಯೆಗಳ ಬಗ್ಗೆ ಸಿಆರ್‌ಪಿಗಳಿಗೆ ಮಾಹಿತಿ ನೀಡಿ, ನಂತರದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಿಂದ ಪಟ್ಟಿ ತರಿಸಿಕೊಂಡು ಹಂತಹಂತವಾಗಿ ಆದ್ಯತೆ ಮೇರೆಗೆ ಸೌಲಭ್ಯ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಇಸಿಒ ಸಂತೋಷ್‌ಕುಮಾರ್‌, ಸಿಆರ್‌ಪಿಗಳಾದ ಸೋಮಸುಂದರ್‌, ಅನಿಲ್‌, ಮುಖ್ಯ ಶಿಕ್ಷಕರಾದ ಬಿ.ಎಂ. ಸತೀಶ್‌ಕುಮಾರ್‌ ಮತ್ತಿತರರು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mysore Dasara: ಮರದ ಅಂಬಾರಿ ಹೊತ್ತು ಅಭಿಮನ್ಯು ತಾಲೀಮು

Mysore Dasara: ಮರದ ಅಂಬಾರಿ ಹೊತ್ತು ಅಭಿಮನ್ಯು ತಾಲೀಮು

Hunasur: ಸಾವಿನಲ್ಲೂ ಒಂದಾದ ಅಕ್ಕ- ತಮ್ಮ

Hunasur: ಸಾವಿನಲ್ಲೂ ಒಂದಾದ ಅಕ್ಕ- ತಮ್ಮ

Mysuru; ಟಿಕೆಟ್‌ ಆಕಾಂಕ್ಷಿಗಳು ಸಕ್ರಿಯವಾಗಿರಬೇಕು: ಸಾ.ರಾ

Mysuru; ಟಿಕೆಟ್‌ ಆಕಾಂಕ್ಷಿಗಳು ಸಕ್ರಿಯವಾಗಿರಬೇಕು: ಸಾ.ರಾ ಮಹೇಶ್‌

Mysuru: ಮುನಿರತ್ನ ಪರ ಬಿಜೆಪಿ ಬ್ಯಾಟಿಂಗ್‌ ಸಲ್ಲದು: ಎಂಎಲ್‌ಸಿ ವಿಶ್ವನಾಥ್‌

Mysuru: ಮುನಿರತ್ನ ಪರ ಬಿಜೆಪಿ ಬ್ಯಾಟಿಂಗ್‌ ಸಲ್ಲದು: ಎಂಎಲ್‌ಸಿ ವಿಶ್ವನಾಥ್‌

22-hunsur-1

Hunsur: ಕಾರು ಪಲ್ಟಿಯಾಗಿ ಎಳನೀರು ವ್ಯಾಪಾರಿ ಸಾವು

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.