ಮಳೆ ಕೊಯ್ಲು ಅಳವಡಿಕೆಗೆ ಆಗ್ರಹ


Team Udayavani, Jul 31, 2019, 3:00 AM IST

male-koyllu

ನೆಲಮಂಗಲ: ತಾಲೂಕಿನ ಖಾಸಗಿ ಕಂಪನಿಗಳು ಕಡ್ಡಾಯವಾಗಿ ಮಳೆನೀರು ಕೊಯ್ಲು ಅಳವಡಿಸಿಕೊಳ್ಳಬೇಕು ಎಂಬ ಆದೇಶ ಪಾಲಿಸದ ಕಂಪನಿಗಳ ವಿರುದ್ದ ಜಿಲ್ಲಾಧಿಕಾರಿ ಕರೀಗೌಡ ಕೆಂಡಮಂಡಲವಾಗಿ ನೋಟಿಸ್‌ ನೀಡುವಂತೆ ಆದೇಶ ನೀಡಿದ್ದಾರೆ. ಪಟ್ಟಣ ಸಮೀಪದ ವಿಶ್ವೇಶ್ವರಪುರದಲ್ಲಿರುವ ಟಿಬೆಟಿಯನ್‌ ವಸತಿ ನಿಲಯಗಳ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಖಾಸಗಿ ಕಂಪನಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಳೆ ನೀರು ಕೊಯ್ಲು ಕಡ್ಡಾಯ: ಅಂತರ್ಜಲದ ಸಂಪೂರ್ಣ ಕುಸಿದಿದೆ. ಮುಂದಿನ ದಿನಗಳಲ್ಲಿ ನೀರಿನ ತೊಂದರೆ ಎದುರಾಗಲಿದೆ. ಹೀಗಾಗಿ ಮಳೆ ನೀರು ಕೊಯ್ಲು ಅನಿವಾರ್ಯವಾಗಿದೆ. ಆದ್ದರಿಂದ ತಾಲೂಕಿನ ಎಲ್ಲಾ ಕಂಪನಿಗಳು, ಗೋಡೋನ್‌, ಪಾರ್ಮ್ ಹೌಸ್‌ಗಳಲ್ಲಿ ಕಡ್ಡಾಯವಾಗಿ ಮಳೆ ನೀರು ಸಂಗ್ರಹಣೆ ಮಾಡುವ ಮೂಲಕ ಅದೇ ನೀರನ್ನು ಕಂಪನಿಗಳಿಗೆ ಬಳಸಬೇಕು. ಸಮಾಜದಿಂದ ಅನುಕೂಲ ಪಡೆಯುವ ಕಂಪನಿಗಳು ಸಮಾಜಕ್ಕೆ ಕೊಡುಗೆ ನೀಡುವುದು ಅನಿವಾರ್ಯ. ಮಳೆನೀರು ಕೊಯ್ಲು ಮೂಲಕ ಪರಿಸರಕ್ಕೆ ಸಹಾಯ ಮಾಡಲಿ. ಈಗಾಗಲೇ ಮಳೆನೀರು ಕೊಯ್ಲು ಮಾಡುವಂತೆ ಕಂಪನಿಗಳ ಗಮನಕ್ಕೆ ತರಲಾಗಿದ್ದರೂ, ಆದೇಶ ಪಾಲಿಸದ ಕಂಪನಿಗಳಿಗೆ ನೋಟಿಸ್‌ ನೀಡಲಾಗುತ್ತಿದೆ ಎಂದರು.

ಕಂಪನಿಗಳ ವಿರುದ್ಧ ಕೆಂಡಾ ಮಂಡಲ: ತಾಲೂಕಿನ ಖಾಸಗಿ ಕಂಪನಿಗಳಿಗೆ ನಾಲ್ಕು ಬಾರಿ ಮಳೆನೀರು ಕೊಯ್ಲು ಮಾಡುವಂತೆ ತಿಳಿಸಿದ್ದೇವೆ. ಆದರೂ ಕೆಲ ಕಂಪನಿಗಳು ಆದೇಶ ಪಾಲಿಸಿಲ್ಲ ಎಂಬುದು ತಿಳಿಯಿತು. ಇದರಿಂದಾಗಿ ಕೆಂಡಾಮಂಡಲವಾದ ಜಿಲ್ಲಾಧಿಕಾರಿ ಕರೀಗೌಡರು, ಆದೇಶ ಪಾಲಿಸದ ಕಂಪನಿಗಳಿಗೆ ತಕ್ಷಣ ನೋಟಿಸ್‌ ನೀಡುವಂತೆ ಆದೇಶ ನೀಡಿ ಸಭೆಯಿಂದ ಅರ್ಧಕ್ಕೆ ಹೊರನಡೆದರು.

ಅಧಿಕಾರಿಗಳು ಜೋಕರ್‌ಗಳೇ?: ಅಧಿಕಾರಿಗಳು ನಿಮಗೆ ಜೋಕರ್‌ಗಂತೆ ಕಾಣಿಸುತ್ತಾರೆಯೇ? ನಾಲ್ಕು ಬಾರಿ ಸೂಚಿಸಿದರೂ ಆದೇಶ ಪಾಲಿಸದೆ ಮತ್ತದೇ ತಪ್ಪು ಮಾಡಿದ್ದೀರಲ್ಲ ಎಂದು ಮಳೆ ನೀರು ಕೊಯ್ಲು ಅನುಷ್ಠಾನ ಗೊಳಿಸದ ಕಂಪನಿಗಳನ್ನು ಜಿಲ್ಲಾಧಿಕಾರಿಗಳು ತರಾಟೆಗೆ ತೆಗೆದುಕೊಂಡರು. ಜತೆಗೆ ನಿಯಮ ಪಾಲಿಸದ ಕಂಪನಿಗಳಿಗೆ ತಕ್ಷಣ ನೋಟಿಸ್‌ ನೀಡಿ, ಕಾನೂನಿನ ಪ್ರಕಾರ ಸೂಕ್ತ ಕ್ರಮಕೈಗೊಳ್ಳಲು ಆದೇಶ ನೀಡಿ ಸಭೆಯನ್ನು ಮಟಕುಗೊಳಿಸುತ್ತಿದ್ದಂತೆ ಕಂಪನಿ ಅಧಿಕಾರಿಗಳು ವಿಚಲಿತರಾದರು.

ರಾಜೀಯ ಪ್ರಶ್ನೆಯೇ ಇಲ್ಲ: ತಾಲೂಕಿನ ಖಾಸಗಿ ಕಂಪನಿಗಳು ಹಾಗೂ ಗೋಡಾನ್‌ಗಳು ಶೀಘ್ರವಾಗಿ ಮಳೆನೀರುಕೊಯ್ಲು ಪ್ರಾರಂಭಿಸುವಂತೆ ರಾಜಸ್ವನಿರೀಕ್ಷಕರು ಹಾಗೂ ಲೆಕ್ಕಾಧಿಕಾರಿಗಳ ಪರಿಶೀಲನೆ ನಡೆಸಿ ಮಾಹಿತಿ ತಿಳಿಸುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು. ಅಂತರ್ಜಲ ಹೆಚ್ಚಿಸಿ ನೀರಿನ ಉಳಿತಾಯದ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅದರಂತೆ ಮಳೆನೀರು ಕೊಯ್ಲು ಯೋಜನೆ ಪ್ರಾರಂಭಿಸುವಂತೆ ಎಲ್ಲಾ ಕಂಪನಿ ಹಾಗೂ ಗೋಡಾನ್‌ಗಳಿಗೆ ತಿಳಿಸಲಾಗಿದೆ. ಇದರಲ್ಲಿ ರಾಜೀ ಪ್ರಶ್ನೆಯೇ ಇಲಜ. ಕಡ್ಡಾಯವಾಗಿ ಮಳೆ ನೀರು ಕೊಯ್ಲಿ ಮಾಡಬೇಕು ಎಂದು ಆಗ್ರಹಿಸಿದರು.

ಪುರಸಭೆಯಿಂದ ಮನವಿ: ಪಟ್ಟಣ ಪುರಸಭೆಯಲ್ಲಿ ಘನತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸುವ ವಾಹನಗಳ ಡ್ರೆçವರ್‌, ಹೆಲ್ಪರ್‌, ಯಂತ್ರೋಪಕರಣಗಳ ಆಪರೇಟರ್‌ಗಳನ್ನು ನೇಮಕಾತಿ ಮಾಡಲು ಆಡಳಿತಮಂಡಳಿ ರಚನೆಯಾಗದ ಹಿನ್ನಲೆ ನೇರ ಪಾವತಿ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ತಾಂತ್ರಿಕ ಅನುಮೋದನೆ ನೀಡುವಂತೆ ಜಿಲ್ಲಾಧಿಕಾರಿ ಕರೀಗೌರಲ್ಲಿ ಪುರಸಭೆ ನೂತನ ಸದಸ್ಯರು ಮನವಿ ಸಲ್ಲಿಸಿದರು.

ತಹಶೀಲ್ದಾರ್‌ ಕೆ.ಎನ್‌.ರಾಜಶೇಖರ್‌, ಪರಿಸರ ಅಧಿಕಾರಿ ರಮೇಶ್‌, ರಾಜಸ್ವ ನಿರೀಕ್ಷಕರು, ತಾಲೂಕಿನ ಗ್ರಾಮ ಲೆಕ್ಕಾಧಿಕಾರಿಗಳು, 40ಕ್ಕೂ ಹೆಚ್ಚು ಕಂಪನಿಯ ವಿವಿಧ ಹಂತದ ಅಧಿಕಾರಿಗಳು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

Udupi: “ವಕ್ಫ್ ‘ ಸಮಸ್ಯೆ ಶೀರ್ಘ‌ ಪರಿಹಾರಕ್ಕೆ ಪುತ್ತಿಗೆ ಶೀ ಆಗ್ರಹ

Udupi: “ವಕ್ಫ್ ‘ ಸಮಸ್ಯೆ ಶೀರ್ಘ‌ ಪರಿಹಾರಕ್ಕೆ ಪುತ್ತಿಗೆ ಶೀ ಆಗ್ರಹ

1-CJI-BG

Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ

BSY-Ballari

By Election: ಸಿದ್ದರಾಮಯ್ಯ ಜೈಲಿಗೆ ಹೋಗುವುದು ನಿಶ್ಚಿತ: ಬಿ.ಎಸ್‌.ಯಡಿಯೂರಪ್ಪ ಭವಿಷ್ಯ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Stock-market-Exchange

NSE, BSE; ಷೇರು ಮಾರುಕಟ್ಟೆಗೆ ನವೆಂಬರ್‌ 20 ರಂದು ರಜೆ ಘೋಷಣೆ

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Women-Mesure

Proposes: ಪುರುಷ ಟೈಲರ್‌ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Market: ಬೆಲೆ ಕುಸಿತ; ಬೂದು ಕುಂಬಳ ಬೀದಿಪಾಲು!

Market: ಬೆಲೆ ಕುಸಿತ; ಬೂದು ಕುಂಬಳ ಬೀದಿಪಾಲು!

Crime: ಪಂಚೆ ಧರಿಸು ಎಂದಿದ್ದಕ್ಕೆ ಅಪ್ಪನನ್ನೇ ಕೊಂದ ಮಗ!

Crime: ಪಂಚೆ ಧರಿಸು ಎಂದಿದ್ದಕ್ಕೆ ಅಪ್ಪನನ್ನೇ ಕೊಂದ ಮಗ!

9-bng

Channapatna: ಸಾಲಕ್ಕೆ ಹೆದರಿ ದಂಪತಿ ನೇಣಿಗೆ ಶರಣು

7

Arrested: ಪಾಕ್‌ ಪ್ರಜೆಗಳಿಗೆ ಸಹಕಾರ; ಪೊಲೀಸರಿಂದ ಕಿಂಗ್‌ಪಿನ್‌ ಸೆರೆ

Road Mishap ಬೈಕ್‌ ಡಿಕ್ಕಿ: ಪಾದಚಾರಿ ಸಾವು

Road Mishap ಬೈಕ್‌ ಡಿಕ್ಕಿ: ಪಾದಚಾರಿ ಸಾವು

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Udupi: “ವಕ್ಫ್ ‘ ಸಮಸ್ಯೆ ಶೀರ್ಘ‌ ಪರಿಹಾರಕ್ಕೆ ಪುತ್ತಿಗೆ ಶೀ ಆಗ್ರಹ

Udupi: “ವಕ್ಫ್ ‘ ಸಮಸ್ಯೆ ಶೀರ್ಘ‌ ಪರಿಹಾರಕ್ಕೆ ಪುತ್ತಿಗೆ ಶೀ ಆಗ್ರಹ

4

Mangaluru: ಗಾಂಜಾ ಮಾರಾಟ; ಇಬ್ಬರು ಯುವಕರ ಬಂಧನ

3

Uppinangady: ಕಬ್ಬಿಣದ ರಾಡಿನಿಂದ ಹಲ್ಲೆ; ದೂರು ದಾಖಲು

1-CJI-BG

Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ

BSY-Ballari

By Election: ಸಿದ್ದರಾಮಯ್ಯ ಜೈಲಿಗೆ ಹೋಗುವುದು ನಿಶ್ಚಿತ: ಬಿ.ಎಸ್‌.ಯಡಿಯೂರಪ್ಪ ಭವಿಷ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.