![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Jul 31, 2019, 2:54 PM IST
ಹುಬ್ಬಳ್ಳಿ: ವಾಣಿಜ್ಯರತ್ನ ಹಾಗೂ ಯುವ ಪುರಸ್ಕಾರಕ್ಕೆ ಭಾಜನರಾದವರು.
ಹುಬ್ಬಳ್ಳಿ: ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ 91ನೇ ಸಂಸ್ಥಾಪಕರ ದಿನಾಚರಣೆ ಹಾಗೂ ವಾಣಿಜ್ಯ ರತ್ನ ಪ್ರಶಸ್ತಿ ಪ್ರದಾನ ಆ. 1 ರಂದು ಮಧ್ಯಾಹ್ನ 3:30 ಗಂಟೆಗೆ ಇಲ್ಲಿನ ವಾಣಿಜ್ಯೋದ್ಯಮ ಸಂಸ್ಥೆಯ ಚಂದ್ರವದನ ದೇಸಾಯಿ ಸಭಾಗೃಹದಲ್ಲಿ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಅಧ್ಯಕ್ಷ ವಿ.ಪಿ. ಲಿಂಗನಗೌಡರ ಮಾತನಾಡಿ, ಕಾರ್ಯಕ್ರಮದಲ್ಲಿ ಹಾವೇರಿಯ ಹುಕ್ಕೇರಿಮಠದ ಶ್ರೀ ಸದಾಶಿವ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಮೆ| ಸಂಜಯ ಗೋಡಾವತ್ ಗ್ರೂಪ್‌ನ ಚೇರ್ಮನ್ ಹಾಗೂ ವ್ಯವಸ್ಥಾಪಕ ನಿರ್ದೇಶಕ ಸಂಜಯ ಗೋಡಾವತ್ ಆಗಮಿಸುವರು. ಸಂಸ್ಥೆ ಅಧ್ಯಕ್ಷ ವಿ.ಪಿ. ಲಿಂಗನೌಡರ ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದರು.
ಉದ್ಯಮಿಗಳಿಗೆ ಪ್ರಶಸ್ತಿ: ಸಂಸ್ಥಾಪನಾ ದಿನಾಚರಣೆ ಪ್ರಯುಕ್ತ ಯಶಸ್ವಿ ಉದ್ದಿಮೆದಾರರನ್ನು ಗುರುತಿಸಿ ವಾಣಿಜ್ಯ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದ್ದು, ಎಲ್ಲ ಪ್ರದೇಶಗಳಿಗೆ ಪ್ರಾತಿನಿಧ್ಯ ನೀಡುವ ಉದ್ದೇಶದಿಂದ ಹುಬ್ಬಳ್ಳಿಯ ಮೆ| ಮೈಕ್ರೋಫಿನಿಷ್ ಗ್ರೂಪ್ ಆಫ್ ಕಂಪನೀಸ್ ಚೇರ್ಮನ್ ತಿಲಕ ವಿಕಮಶಿ, ಲಕ್ಷ್ಮೇಶ್ವರದ ಮೆ| ಮಹಾವೀರ ಕುಮಾರ ಅಶೋಕಕುಮಾರ ಜಿನ್ನಂಗ್ ಆ್ಯಂಡ್ ಪ್ರಸ್ಸಿಂಗ್ ಫ್ಯಾಕ್ಟರಿಯ ಸಂಸ್ಥಾಪಕ ಓಂ ಪ್ರಕಾಶ ಜೈನ್, ಹುಬ್ಬಳ್ಳಿಯ ಮೆ| ಕೆನ್ ಅಗ್ರಿಟೆಕ್ ಪ್ರೈವೇಟ್ ಲಿಮಿಟೆಡ್ ಸಂಸ್ಥಾಪಕ ವಿವೇಕ ನಾಯಕ, ಮೆ| ದಾಸನೂರ ಅಗ್ರೋ ಇಂಡಿಸ್ಟ್ರೀಸ್ ಸಂಸ್ಥಾಪಕ ಪ್ರಕಾಶ ದಾಸನೂರ, ಕಾರವಾರದ ಮೆ.ಗೋವಿಂದರಾವ್ ಮಾಂಜ್ರೇಕರ್ ಕಂಪನಿಯ ಸತೀಶ ಮಾಂಜ್ರೇಕರ ಅವರಿಗೆ ವಾಣಿಜ್ಯ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.
ಯುವ ಉದ್ಯಮಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಇಬ್ಬರು ಯುವ ಉದ್ಯಮಿಗಳಿಗೆ ಸನ್ಮಾನ ಮಾಡಲಾಗುತ್ತಿದ್ದು, ಹುಬ್ಬಳ್ಳಿಯ ಮೆ| ಪಾಟೀಲ ಎಲೆಕ್ಟ್ರಿಕ್ ವಕ್ಸರ್ ಪ್ರೈ.ಲಿಮಿಟೆಡ್‌ನ ಪ್ರಸಾದ ಪಾಟೀಲ ಹಾಗೂ ಬೆಳಗಾವಿಯ ಮೆ| ನಿರ್ನಲ್ ವಾಟರ್ ಫಿಲ್ಟರ್ನ ನಿರಂಜನ ಕಾರ್ಗಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ವಿ.ಪಿ.ಲಿಂಗನಗೌಡರ ತಿಳಿಸಿದರು.
ಸುದ್ದಿಗೊಷ್ಠಿಯಲ್ಲಿ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಸಮಿತಿ ಚೇರ್ಮನ್ ಸುಭಾಸ ಬಾಗಲಕೋಟೆ, ಸಂಸ್ಥೆಯ ಉಪಾಧ್ಯಕ್ಷರಾದ ಮಹೇಂದ್ರ ಲದ್ದಡ, ಅಶೋಕ ತೋಳನವರ, ಗೌರವ ಕಾರ್ಯದರ್ಶಿ ವಿನಯ ಜವಳಿ, ಜೊತೆ ಗೌರವ ಕಾರ್ಯದರ್ಶಿ ಅಶೋಕ ಗಡಾದ, ಅಚ್ಯುತ ಲಿಮೆ ಹಾಗೂ ಅಂದಾನಪ್ಪ ಸಜ್ಜನರ ಇದ್ದರು.
Train: ರೈಲು ಢಿಕ್ಕಿ ತಡೆಯಲು ಉಪಕ್ರಮ: ನೈಋತ್ಯ ರೈಲ್ವೇಗೆ ಮೊದಲ ಬಾರಿ “ಕವಚ’
ಮೂವರು ಲೇಖಕಿಯರಿಗೆ ಕವಿಸಂ ಮಾತೃಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಬಹುಮಾನಕ್ಕೆ ಆಯ್ಕೆ
Dharwad: ಪಂ.ಮನಸೂರ ಸಂಗೀತ ಪಾಠ ಶಾಲೆ ಮತ್ತೆ ಆರಂಭ; ಜಿಲ್ಲಾಧಿಕಾರಿ ದಿವ್ಯ ಪ್ರಭು
Hubli: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89.99 ಲಕ್ಷ ರೂ ಪೊಲೀಸ್ ವಶಕ್ಕೆ
ED summons: ಸಿದ್ದರಾಮಯ್ಯ ಪತ್ನಿ ಪಾರ್ವತಿ, ಬೈರತಿ ಸುರೇಶಗೆ ತಾತ್ಕಾಲಿಕ ರಿಲೀಫ್
You seem to have an Ad Blocker on.
To continue reading, please turn it off or whitelist Udayavani.