ಕೊಹ್ಲಿ ನಾಯಕತ್ವದ ತಾಕತ್ತಿಗೆ ಇವು ಸಾಕ್ಷಿ
ಇವು ಸಾಕ್ಷಿ ನಾಯಕನಾಗಿ ಅತ್ಯುತ್ತಮ ಸಾಧನೆ ಮಾಡಿದ್ದರೂ ವಿಫಲ ಎಂಬ ದೂರುಗಳೇಕೆ?
Team Udayavani, Jul 31, 2019, 3:22 PM IST
ಸಮಕಾಲೀನ ವಿಶ್ವ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಸರ್ವಶ್ರೇಷ್ಠ ಬ್ಯಾಟ್ಸ್‌ಮನ್ ಎಂದು ಹೆಸರು ಗಳಿಸಿದ್ದಾರೆ. ಇದನ್ನು ಪ್ರಶ್ನೆ ಮಾಡುವುದು ಕಷ್ಟ. ಟೆಸ್ಟ್‌ನಲ್ಲಿ 25, ಏಕದಿನದಲ್ಲಿ 41 ಶತಕ ಗಳಿಸಿರುವ ಅವರು ಹೀಗೆ ಆಡಿಕೊಂಡು ಹೋದರೆ, ಸಚಿನ್ ತೆಂಡುಲ್ಕರ್ ಅವರ ಎಲ್ಲ ದಾಖಲೆಗಳನ್ನು ನಿರ್ನಾಮ ಮಾಡುವುದು ಖಚಿತ. ಆದರೆ ಅವರು ಉತ್ತಮ ನಾಯಕ ಹೌದೋ, ಅಲ್ಲವೋ ಎಂಬ ಪ್ರಶ್ನೆ ಮಾತ್ರ ಈಗ ಎಲ್ಲ ಕಡೆ ಚರ್ಚೆಯಾಗುತ್ತಿದೆ. ಕೆಲವರಂತೂ ಅವರು ನಾಯಕತ್ವವನ್ನು ರೋಹಿತ್ ಶರ್ಮಗೆ ಬಿಟ್ಟುಕೊಡಬೇಕೆಂದು ವಾದಿಸುತ್ತಿದ್ದಾರೆ. ಆದರೆ ನಾಯಕನಾಗಿ ಕೊಹ್ಲಿ ವಿಫಲ ಆಟಗಾರನೇನಲ್ಲ. ಅವರ ಸಾಧನೆ ಗಣನೀಯವಾಗಿಯೇ ಇದೆ. ಹಾಗಿದ್ದರೆ ಕೊಹ್ಲಿ ವಿರುದ್ಧದ ವಾದಗಳೇನು?ಹುಳುಕುಗಳೇನು?
ಕೊಹ್ಲಿಗೆ ಸಿಟ್ಟು ಜಾಸ್ತಿ!:
ನಾಯಕನಾಗಿರುವ ಕೊಹ್ಲಿಗೆ ಸಿಟ್ಟು ಜಾಸ್ತಿ, ಎಲ್ಲರನ್ನೂ ಜೊತೆಗೆ ತೆಗೆದುಕೊಂಡು ಹೋಗುವ ಗುಣವಿಲ್ಲ ಎಂದು ಹೇಳಲಾಗುತ್ತದೆ. ಮೈದಾನದಲ್ಲಿ ಅವರ ವರ್ತನೆಯನ್ನು ನೋಡಿ ಇಂತಹ ಅಪಖ್ಯಾತಿ ಬಂದಿದೆ. ಜೊತೆಗೆ ಎದುರಾಳಿ ಆಟಗಾರರೊಂದಿಗೆ ಕಾಲು ಕೆರೆದುಕೊಂಡ ಜಗಳಕ್ಕೆ ಹೋಗುತ್ತಾರೆ, ಬಹಳ ದುರಹಂಕಾರಿ ಎಂದು ಸ್ವದೇಶಿ, ವಿದೇಶಿ ಆಟಗಾರರಿಂದ ಬೈಸಿಕೊಂಡಿದ್ದಾರೆ.
ತಂಡದ ಆಯ್ಕೆಯಲ್ಲಿ ಸ್ಥಿರತೆಯಿಲ್ಲ:
ಕೊಹ್ಲಿ ನಾಯಕತ್ವದ ಒಂದು ಮಹತ್ವದ ದೋಷವೆಂದರೆ ಪದೇ ಪದೇ ತಂಡದ ಆಟಗಾರರನ್ನು ಬದಲಿಸುವುದು. ಒಮ್ಮೆಯಂತೂ ಆಟಗಾರರನ್ನು ಬದಲಿಸದ ಪಂದ್ಯಗಳೇ ಇಲ್ಲ ಎನ್ನುವಂತಾಗಿತ್ತು. ಇದರಿಂದ ಆಟಗಾರರ ಮೇಲೆ ಬಹಳ ಒತ್ತಡವಾಗುತ್ತಿದೆ ಎನ್ನುವುದು ಹಲವರ ಅಭಿಪ್ರಾಯ.
ಧೋನಿಯನ್ನೇ ಅವಲಂಬಿಸುತ್ತಾರೆ:
ಕೊಹ್ಲಿ ನಾಯಕನಾಗಿ ಸಂಪೂರ್ಣ ಧೋನಿಯನ್ನು ಅವಲಂಬಿಸುತ್ತಾರೆ. ಸೀಮಿತ ಓವರ್‌ಗಳಲ್ಲಿ ಅನಿವಾರ್ಯವಿದ್ದಾಗಲೆಲ್ಲ ಕೊಹ್ಲಿಯನ್ನು ಮೈದಾನದಲ್ಲಿ ಕಾಪಾಡುವುದೇ ಧೋನಿ ಎಂಬ ವಾದವೊಂದು ಬೆಳೆದುಬಂದಿದೆ.
ಐಪಿಎಲ್ನಲ್ಲಿ ವಿಫಲ ನಾಯಕತ್ವ:
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ದೀರ್ಘಕಾಲ ಐಪಿಎಲ್ನಲ್ಲಿ ನಾಯಕತ್ವ ವಹಿಸಿದ್ದರೂ ಕೊಹ್ಲಿ ಒಮ್ಮೆಯೂ ಪ್ರಶಸ್ತಿ ಗೆದ್ದಿಲ್ಲ. ಆದರೆ ರೋಹಿತ್ ಶರ್ಮ ನಾಲ್ಕು ಬಾರಿ ಮುಂಬೈ ಇಂಡಿಯನ್ಸ್ ತಂಡವನ್ನು ಗೆಲ್ಲಿಸಿದ್ದಾರೆ.
ಕೊಹ್ಲಿಯ ವೈಫಲ್ಯಗಳೇನು?:
2017 ಏಕದಿನ ಚಾಂಪಿಯನ್ಸ್ ಟ್ರೋಫಿ ಫೈನಲ್ನಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಹೀನಾಯ ಸೋಲನುಭವಿಸಿತ್ತು.
ವಿರಾಟ್ ಕೊಹ್ಲಿ ಯಶಸ್ಸುಗಳು ಇವು!:
2015ರ ಆರಂಭದಲ್ಲಿ ಕೊಹ್ಲಿ ಭಾರತ ಟೆಸ್ಟ್ ತಂಡದ ನಾಯಕರಾಗಿ ಆಯ್ಕೆಯಾದರು. 2017ರ ಆರಂಭದಲ್ಲಿ ಎಲ್ಲ ಮಾದರಿಗೂ ನಾಯಕರಾದರು. ಅಲ್ಲಿಂದ ಇಲ್ಲಿಯವರೆಗೆ ಅವರು ನಾಯಕನಾಗಿ ಯಶಸ್ವಿಯೇ ಆಗಿದ್ದಾರೆ. ಅವರ ಮೇಲಿನ ಆರೋಪಗಳು ಏನೇ ಇದ್ದರೂ ನಾಯಕರಾಗಿ ಅವರು ಮಾಡಿರುವ ಸಾಧನೆಗಳು ಅತ್ಯಂತ ಮಹತ್ವದ್ದು.
2019 ಏಕದಿನ ವಿಶ್ವಕಪ್ ಸೆಮಿಫೈನಲ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ಆಘಾತಕಾರಿ ಸೋಲನುಭವಿಸಿದ್ದು.ರೋಹಿತ್‌ರನ್ನು ನಾಯಕನಾಗಿ ನೇಮಿಸಿ ಎಂದು ಹಲವರ ವಾದ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2025: ಮೆಗಾ ಹರಾಜಿನ ಬಳಿಕ ಎಲ್ಲಾ ಹತ್ತು ತಂಡಗಳು ಹೀಗಿವೆ ನೋಡಿ
IPL: ಗೊಂದಲದಲ್ಲಿ ಮರಿ ಸೆಹ್ವಾಗ್ ನನ್ನು ಖರೀದಿಸಿದ ಆರ್ ಸಿಬಿ; ಯಾರು ಈ ಸ್ವಸ್ತಿಕ್ ಚಿಕಾರ
Mohammed Siraj: ಬಿಟೌನ್‌ನ ಈ ಹಾಟ್ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್ ಡೇಟಿಂಗ್?
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Gundlupete: ವಿದ್ಯುತ್ ತಂತಿಗೆ ಸಿಲುಕಿ ಮರಿಯಾನೆ ಸಾವು
Constitution: ಕಾಂಗ್ರೆಸ್ಸಿಗರಿಂದ ಸಂವಿಧಾನದ ರಕ್ಷಕರಂತೆ ಕಪಟ ನಾಟಕ: ಬಿ.ವೈ.ವಿಜಯೇಂದ್ರ
Sirsi: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ಪರಾರಿ; ಆರೋಪಿ ಬಂಧನ
EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್ ಟೀಕೆ
Sirsi: ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾದ ಸಂಸದ ಕಾಗೇರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.