ಸುಸ್ಥಿರ ಕೃಷಿ ಯೋಜನೆ ಇಲ್ಲಿ ಅಸ್ಥಿರ

•ಈಡೇರದ ಉದ್ದೇಶ•ಕಾಟಾಚಾರಕ್ಕಾಗಿ ಫಲಾನುಭವಿಗಳ ಆಯ್ಕೆ-ಯೋಜನೆ ಅನುಷ್ಠಾನ

Team Udayavani, Jul 31, 2019, 4:28 PM IST

kopala-tdy-5

ಕುಷ್ಟಗಿ: ಅಸಮರ್ಪಕ ಮಳೆಯಿಂದ ಕೃಷಿಯಲ್ಲಿ ಸುಸ್ಥಿರತೆ ಕಾಯ್ದುಕೊಳ್ಳುವ ಉದ್ದೇಶದಿಂದ ಅನುಷ್ಠಾನಗೊಂಡ ಕೇಂದ್ರ ಸರ್ಕಾರದ ರಾಷ್ಟ್ರೀಯ ಸುಸ್ಥಿರ ಕೃಷಿ ಯೋಜನೆ(ಎನ್‌ಎಂಎಸ್‌ಎ-ಆರ್‌ಎಡಿ)ಅನುಷ್ಠಾನ ಸಮರ್ಪಕವಾಗಿಲ್ಲ.

ಕೆಲ ವರ್ಷಗಳಿಂದ ಮಳೆ ಕೊರತೆಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ದೇಶದ ಶೇ. 60 ಕೃಷಿ ಭೂಮಿಯಲ್ಲಿ ಮಾತ್ರ ಬಿತ್ತನೆ ಮಾಡಲಾಗುತ್ತಿದ್ದು, ಒಟ್ಟು ಆಹಾರ ಉತ್ಪಾದನೆ ಶೇ. 40ರಷ್ಟಾಗಿದೆ. ಮಳೆಯಾಧಾರಿತ ಕೃಷಿ ಅಭಿವದ್ಧಿಯೊಂದಿಗೆ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ, ಬೇಡಿಕೆಗಳ ಅನುಗುಣವಾಗಿ ಆಹಾರ ಪೂರೈಸುವ, ಉತ್ಪಾದಿಸುವ ಉದ್ದೇಶದಿಂದ ರಾಷ್ಟ್ರೀಯ ಸುಸ್ಥಿರ ಕೃಷಿ ಯೋಜನೆ (ನ್ಯಾಶನಲ್ ಮಿಷನ್‌ ಫಾರ್‌ ಸ್ಟೈನಬಲ್ ಅಗ್ರಿಕಲ್ಚರ್‌)ತಾಲೂಕಿನಲ್ಲಿ ದಾಖಲೆಯಲ್ಲಿ ಮಾತ್ರ ಪ್ರಗತಿಯಲ್ಲಿದೆ.

49 ಲಕ್ಷ ರೂ.: 2018-19ನೇ ಸಾಲಿನಲ್ಲಿ ತಾಲೂಕಿನ ಕೆ. ಬೋದೂರು ತಾಂಡಾ, ವಣಗೇರಾ ಹಾಗೂ ಟಕ್ಕಳಕಿ ಗ್ರಾಮಗಳ ವ್ಯಾಪ್ತಿಯಲ್ಲಿ ಮೊದಲ ಹಂತದಲ್ಲಿ 44 ಫಲಾನುಭವಿಗಳನ್ನು ಆಯ್ಕೆ ಮಾಡಿ 49 ಲಕ್ಷ ರೂ. ವೆಚ್ಚ ತೋರಿಸಲಾಗಿದೆ. ನಿಗದಿತ 2 ಹೆಕ್ಟೇರ್‌ ಗರಿಷ್ಠ ಮಿತಿಯಲ್ಲಿ ಎಸ್‌ಸಿ, ಎಸ್‌ಟಿ ವರ್ಗದ ಕೊಳವೆಬಾವಿ ನೀರಾವರಿ ಆಶ್ರಿತ ಹಿಡುವಳಿದಾರರನ್ನು ಯೋಜನಾ ವ್ಯಾಪ್ತಿಗೆ ಸೇರಿಸಲಾಗಿದೆ. ಇದರಲ್ಲಿ ಹಣ್ಣಿನ ಗಿಡಗಳನ್ನು ನೆಟ್ಟು ಡ್ರಿಪ್‌ ವ್ಯವಸ್ಥೆ ಮಾಡಿಕೊಡುವುದು, ಹಸು, ಜೇನು ಸಾಕಾಣಿಕೆಗೆ ಪ್ರೋತ್ಸಾಹಿಸಿ ರೈತರ ಆದಾಯ ವರ್ಷಪೂರ್ತಿ ಆದಾಯ ಸ್ಥಿರೀಕರಿಸುವುದು ಯೋಜನೆಯ ಉದ್ದೇಶವಾಗಿದೆ.

ಹಣ ಕೇಳಿಲ್ಲ, ರೈತರು ಕೊಟ್ಟಿಲ್ಲ: ಈ ಯೋಜನೆ ಫಲಾನುಭವಿಗಳಾಗಲು ಶೇ. 50 ಖರ್ಚು ಭರಿಸಬೇಕು. ಆದರೆ ಕೃಷಿ ಇಲಾಖೆ ಸದರಿ ಫಲಾನುಭವಿಗಳಿಂದ ಜಮೀನಿನ ಪಹಣಿ, ಆಧಾರ್‌ ಕಾರ್ಡ್‌, ಬ್ಯಾಂಕ್‌ ಪಾಸ್‌ಪುಸ್ತಕ ಮಾತ್ರ ಪಡೆದಿದ್ದು, ಯೋಜನೆಯ ಸವಿಸ್ತಾರದ ಮಾಹಿತಿ ನೀಡಿಲ್ಲ. ತಾನೇ ಖಾಸಗಿ ಏಜೆನ್ಸಿಗೆ ವಹಿಸಿದೆ. ಫಲಾನುಭವಿಗಳ ಜಮೀನಿನಲ್ಲಿ ಬೇಕಾಬಿಟ್ಟಿ ಗೇಣುದ್ದದ ಗುಂಡಿ ಅಗೆದು, ನಿಂಬೆ, ಮಾವು ಇನ್ನಿತರ ಸಸಿಗಳನ್ನು ನೆಡಲಾಗಿದೆ. ಆದರೆ ಸಕಾಲಿಕವಾಗಿ ಡ್ರಿಪ್‌ ವ್ಯವಸ್ಥೆ ಇಲ್ಲದೇ ನಾಟಿ ಮಾಡಿದ ಗಿಡಗಳು ಒಣಗಿವೆ. ರೈತರು ಸುಸ್ಥಿರ ಕೃಷಿ ಕೈ ಬಿಟ್ಟು, ಯಥಾಸ್ಥಿತಿ ಸಾಂಪ್ರದಾಯಿಕ ಕೃಷಿಯಲ್ಲಿ ತೊಡಗಿದ್ದಾರೆ.

ಡ್ರಿಪ್‌ ಸೆಟ್ ಕೊಟ್ಟಿಲ್ಲ: ರೈತರ ಜಮೀನಿನಲ್ಲಿ ತೋಟಗಾರಿಕೆ ಸಸಿ ನಾಟಿ ಮಾಡಿದ ನಂತರ ಏಜೆನ್ಸಿ ಡ್ರಿಪ್‌ ವ್ಯವಸ್ಥೆ ಮಾಡಿಲ್ಲ.

ರೈತರಾದ ಯಮನಪ್ಪ ಪೀರಾ ನಾಯಕ, ನಾಗಪ್ಪ ಲಚಮಪ್ಪ ರಾಠೊಡ್‌, ಲಲಿತಾ ಲಮಾಣಿ, ಕೃಷ್ಣಪ್ಪ ವಚಡಿ, ಲಚಮಪ್ಪ ಶಿವಪ್ಪ ರಾಠೊಡ್‌, ದೊಡ್ಡಪ್ಪ ಮೇಘಪ್ಪ ರಾಠೊಡ್‌, ಯಮನಪ್ಪ ರಾಠೊಡ್‌, ಫಕೀರವ್ವ ರಾಠೊಡ್‌, ರಾಮಪ್ಪ ತವರಪ್ಪ ರಾಠೊಡ್‌ ಇವರ ಜಮೀನಿನಲ್ಲಿ ಡ್ರಿಪ್‌ ವ್ಯವಸ್ಥೆಯೂ ಇಲ್ಲ.

ಕೆ. ಬೋದೂರು ತಾಂಡಾದ ಯಂಕಪ್ಪ ಪತ್ತಾರ ಅವರ ಒಂದು ಎಕರೆ ಜಮೀನಿನಲ್ಲಿ ಕೊಳವೆಬಾವಿ ನೀರಾವರಿ ವ್ಯವಸ್ಥೆ ಇಲ್ಲ. ತೋಟಗಾರಿಕೆ ಸಸಿಗಳನ್ನು ನಾಟಿ ಮಾಡಿಲ್ಲ. ಇವರಿಗೆ ಮಾತ್ರ ಡ್ರಿಪ್‌ ಪೈಪ್‌ ನೀಡಲಾಗಿದೆ.

ಬೇಕಾಬಿಟ್ಟಿ ನಿರ್ವಹಣೆ, ಕಾಟಾಚಾರಕ್ಕೆ ಕೆಲಸ ನಿರ್ವಹಿಸಲಾಗಿದೆ. ದಾಖಲೆ ಪ್ರಕಾರ ಕೆ. ಬೋದೂರು ತಾಂಡಾ, ವಣಗೇರಾ ಹಾಗೂ ಟಕ್ಕಳಕಿ ಗ್ರಾಮಗಳ 44 ಫಲಾನುಭವಿಗಳು ಸುಸ್ಥಿರ ಕೃಷಿ ಅಳವಡಿಸಿಕೊಂಡಿದ್ದಾರೆ. ಕೃಷಿ ಇಲಾಖೆ ಅಸಮರ್ಪಕ ನಿರ್ವಹಣೆ ಹಿನ್ನೆಲೆಯಲ್ಲಿ ಫಲಾನುಭವಿಗಳ ಕೃಷಿ ಬದುಕು ಅಸ್ಥಿರವಾಗಿದೆ.

 

•ಮಂಜುನಾಥ ಮಹಾಲಿಂಗಪುರ

ಟಾಪ್ ನ್ಯೂಸ್

prahlad jo shi

Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು‌ ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ

ಈಶ್ವರಪ್ಪ

Shimoga; ಕಾಂಗ್ರೆಸ್ ಸರಕಾರ ಹಿಂದೂ ಸಮಾಜದ ತಾಳ್ಮೆ ಪರೀಕ್ಷೆ ಮಾಡುತ್ತಿದೆ: ಈಶ್ವರಪ್ಪ

Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು

Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು

Rohit Sharma; ಮುಗಿಯಿತಾ ರೋಹಿತ್‌ ಕ್ರಿಕೆಟ್‌ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?

Rohit Sharma; ಮುಗಿಯಿತಾ ರೋಹಿತ್‌ ಕ್ರಿಕೆಟ್‌ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?

Channapatna; ನ್ಯೂಇಯರ್‌ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು

Channapatna; ನ್ಯೂಇಯರ್‌ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು

Sydney Test; ಬದಲಾದ ನಾಯಕ; ಮುಂದುವರಿದ ಬ್ಯಾಟಿಂಗ್‌ ಪರದಾಟ

Sydney Test; ಬದಲಾದ ನಾಯಕ; ಮುಂದುವರಿದ ಬ್ಯಾಟಿಂಗ್‌ ಪರದಾಟ

Adani Case: ಅದಾನಿ ವಿರುದ್ಧದ 3 ಪ್ರಕರಣಗಳ ಜಂಟಿ ವಿಚಾರಣೆಗೆ ನ್ಯೂಯಾರ್ಕ್‌ ಕೋರ್ಟ್‌ ಆದೇಶ

Adani Case: ಅದಾನಿ ವಿರುದ್ಧದ 3 ಪ್ರಕರಣಗಳ ಜಂಟಿ ವಿಚಾರಣೆಗೆ ನ್ಯೂಯಾರ್ಕ್‌ ಕೋರ್ಟ್‌ ಆದೇಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kushtagi-patte

Kushtagi: ವಸತಿ ಶಾಲೆಯಿಂದ ಪರಾರಿಯಾಗಿದ್ದ ನಾಲ್ವರು ವಿದ್ಯಾರ್ಥಿಗಳು ಪತ್ತೆ!

Koppala–women

Tragedy: ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲೂ ಬಾಣಂತಿ, ಶಿಶು ಸಾವು: ಕುಟುಂಬಸ್ಥರ ಆಕ್ರೋಶ

kushtagi-School

Kushtagi: ವಸತಿ ಶಾಲೆ ಆವರಣ ಗೋಡೆ ಜಿಗಿದು ಕಾಲ್ಕಿತ್ತ 4 ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು

doctor

ಕೊಪ್ಪಳದಲ್ಲಿ ಕ್ಯಾನ್ಸರ್‌ ಖಾಯಿಲೆಗಿಲ್ಲ ಚಿಕಿತ್ಸೆ -114 ಜನರಲ್ಲಿ ಕ್ಯಾನ್ಸರ್‌ ಪತ್ತೆ!

watermelon:ಕಲ್ಲಂಗಡಿ ಬೆಳೆ ಯಾವಾಗ ಉತ್ತಮ ಇಳುವರಿ ಕೊಡುತ್ತೆ…ಕೃಷಿ ವಿಜ್ಞಾನಿಗಳ ಸಲಹೆ ಏನು?

watermelon:ಕಲ್ಲಂಗಡಿ ಬೆಳೆ ಯಾವಾಗ ಉತ್ತಮ ಇಳುವರಿ ಕೊಡುತ್ತೆ…ಕೃಷಿ ವಿಜ್ಞಾನಿಗಳ ಸಲಹೆ ಏನು?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

prahlad jo shi

Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು‌ ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ

7

Mangaluru: ಪಿಎಂ ಸ್ವನಿಧಿ ಯೋಜನೆ; ನಗರದಲ್ಲಿ 17.87 ಕೋ.ರೂ. ಸಾಲ ವಿತರಣೆ

ಈಶ್ವರಪ್ಪ

Shimoga; ಕಾಂಗ್ರೆಸ್ ಸರಕಾರ ಹಿಂದೂ ಸಮಾಜದ ತಾಳ್ಮೆ ಪರೀಕ್ಷೆ ಮಾಡುತ್ತಿದೆ: ಈಶ್ವರಪ್ಪ

Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್‌ ಹಂಚಿಕೆ; ಡಾ.ಸರ್ಜಿ

Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್‌ ಹಂಚಿಕೆ; ಡಾ.ಸರ್ಜಿ

7-dhaka

Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್‌!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.