ಪೆನ್ಸಿಲ್ ಮುರಿಯುವ ನೋಟು
Team Udayavani, Aug 1, 2019, 5:00 AM IST
ಈಗಿನ ಕಾಲದಲ್ಲಿ ಐದು ರೂಪಾಯಿಗೆ ಏನೇನೂ ಬೆಲೆ ಇಲ್ಲ ಎಂದು ಜನ ಗೊಣಗಾಡುವುದನ್ನು ಕೇಳುತ್ತಲೇ ಇರುವಿರಲ್ಲಾ. ಅದು ಸರಿಯೋ ತಪ್ಪೋ, ಆದರೆ ಯಕ್ಷಿಣಿಗಾರರಾದ ನಿಮಗಂತೂ ಐದು ರೂಪಾಯಿ ನೋಟು ಬಹಳ ಉಪಯುಕ್ತವಾದ ವಸ್ತು. ಸಮಯ ಬಂದಾಗ ಅದನ್ನು ಒಂದು ಚಾಕುವಿನಂತೆಯೂ ಉಪಯೋಗಿಸಿ ಪೆನ್ಸಿಲ್
ತುಂಡರಿಸಬಲ್ಲಿರಿ. ಇದೇನು ಬರೀ ಬಡಾಯಿಯಲ್ಲ, ಪ್ರೇಕ್ಷಕರ ಎದುರೇ ಮಾಡಿ ತೋರಿಸುವಿರಿ.
ಯಕ್ಷಿಣಿಯ ಆರಂಭದಲ್ಲಿ ಅಗ್ಗದ ಬೆಲೆಯ ಒಂದು ಪೆನ್ಸಿಲನ್ನು ಪ್ರೇಕ್ಷಕರಿಗೆ ಕೊಟ್ಟು ಅದನ್ನು ಚೆನ್ನಾಗಿ ಪರೀಕ್ಷಿಸುವಂತೆ ಹೇಳಿ. ಅನಂತರ ಅವರಲ್ಲಿ ಯಾರಾದರೂ ಒಬ್ಬರನ್ನು ಕರೆದು
ಪೆನ್ಸಿಲನ್ನು ಎರಡೂ ಕೈಗಳಲ್ಲೂ ಹಿಡಿಯುವಂತೆ ಹೇಳಿ. ಈಗ ಗರಿಗರಿಯಾದ ಒಂದು ಐದು ರೂಪಾಯಿ ನೋಟನ್ನು ಎಲ್ಲರಿಗೂ ಕಾಣಿಸುವಂತೆ ಹಿಡಿಯಿರಿ. ಮಚ್ಚಿನಿಂದ ಕಬ್ಬನ್ನು
ಕತ್ತರಿಸುವಂತೆ ನೋಟಿನಿಂದ ಎರಡು ಬಾರಿ ಪೆನ್ಸಿಲಿನ ಮೇಲೆ ಹೊಡೆಯಿರಿ. ಏನಾಶ್ಚರ್ಯ; ನೋಟಿನಿಂದ ಮೂರನೇ ಏಟು ಬೀಳುತ್ತಿದ್ದಂತೆ ಪೆನ್ಸಿಲ್ ತುಂಡಾಗುತ್ತದೆ. ಆಗ ಬೆರಗಿನಿಂದ – ಈ ನೋಟು ಬ್ಲೇಡ್ ಆಗಿ ಬಿಡ್ತಲ್ಲಾ ಎಂದು ಉದ್ಗಾರ ತೆಗೆಯಿರಿ! ಗುಟ್ಟು ಏನೆಂದರೆ, ಪೆನ್ಸಿಲ್ಗೆ ಮೊದಲು ಎರಡು ಬಾರಿ ನೋಟನಿಂದ ಹೊಡೆದದ್ದು ನಿಜ. ಆದರೆ
ಮೂರನೆಯ ಬಾರಿ ಮಾತ್ರ, ಥಟ್ಟನೆ ತೋರು ಬೆರಳನ್ನು ನೋಟಿನ ಹಿಂದೆ ನೆಟ್ಟಗೆ
ಮಾಡಿಕೊಂಡು ಪೆನ್ಸಿಲ್ ಮೇಲೆ ಹೊಡೆಯಿರಿ. ಪೆನ್ಸಿಲ್ ಎರಡು ತುಂಡಾಗುವುದು. ಅದಕ್ಕೆ
ಏಟು ಬಿದ್ದಿರುವುದು ತೋರು ಬೆರಳಿನಿಂದ. ಆದರೆ ಜನ ತಿಳಿಯುವುದು ನೋಟಿನಿಂದ
ಎಂದು.
ಉದಯ್ ಜಾದೂಗಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.