![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jul 31, 2019, 7:31 PM IST
ಮಣಿಪಾಲ: 2014ರ ಅಂಕಿ ಅಂಶಗಳ ಆಧಾರದಲ್ಲಿ ನೋಡುವುದಾದರೆ ಹುಲಿಗಳ ಸಂಖ್ಯೆಯಲ್ಲಿ 33 ಶೇ. ಹೆಚ್ಚಳ ಕಂಡು ಬಂದಿದೆ. ಆದರೆ ಇವುಗಳ ಜತೆಗೆ ಅಸ್ವಾಭಾವಿಕವಾಗಿ ಅವುಗಳ ಸಾವಿನ ಪ್ರಮಾಣವೂ ಹೆಚ್ಚಾಗುತ್ತಿದೆ ಎಂಬುದನ್ನು ನಾವು ನಂಬಲೇಬೇಕು. ಹುಲಿಗಳ ಸಂಖ್ಯೆ 33% ಹೆಚ್ಚಾಗಿದೆ ಎಂದು ನಾವು ಹೆಮ್ಮೆ ಪಡುವಂತಹ ವಿಷಯ ಅಲ್ಲ ಎಂಬ ಸಂಗತಿ ಬಯಲಾಗಿದೆ.
ಅಸ್ವಾಭಾವಿಕ ಸಾವು
ಅಸ್ವಾಭಾವಿಕವಾಗಿ ಹುಲಿಗಳು ಸಾವನ್ನಪುತ್ತಿರುವುದು ತಮಾಷೆಯ ಸಂಗತಿ ಅಲ್ಲ. 2018ರ ವರೆಗೆ 5 ವರ್ಷಗಳ ಅವಧಿಯಲ್ಲಿ ಸುಮಾರು 175 ಹುಲಿಗಳು ದೇಶಾದ್ಯಂತ ಸಾವನ್ನಪ್ಪಿದೆ. ಇವುಗಳಲ್ಲಿ ಸುಮಾರು 87 ಚಿರತೆಗಳ ಸಾವಿನ ತನಿಖೆಗಳು ಪ್ರಗತಿಯಲ್ಲಿವೆ. ಇದು ನ್ಯಾಶನಲ್ ಟೈಗರ್ ಕನ್ಸರ್ವೆಶನ್ ಅಥಾರಿಟಿಯ ವರದಿಯಾಗಿದೆ. ಅಸ್ವಾಭಾವಿಕ ಸಾವುಗಳಲ್ಲಿ ಅಪಾಘತಗಳು, ಮನುಷ್ಯರೊಂದಿಗೆ ಕಾದಾಟಗಳು, ಚರ್ಮಕ್ಕಾಗಿ ನಡೆದ ಹತ್ಯೆಗಳಲ್ಲಿಯೂ ಇದು ಸೇರಿದೆ.
ನೈಸರ್ಗಿಕ ಕಾರಣ
501 ಹುಲಿಗಳು 2014ರ ಬಳಿಕ ಸ್ವಾಭಾವಿಕವಾಗಿ ಸಾವನ್ನಪ್ಪಿದ ಕುರಿತು ವರದಿಯಾಗಿದೆ. ಇದು ಬರೀ ಬೆಳಕಿಗೆ ಬಂದ ಪ್ರಕರಣಗಳಾಗಿವೆ. ಆದರೆ ಸಾವಿನ ಸಂಖ್ಯೆ ಸುಮಾರು 700ರ ಆಸುಪಾಸಿನಲ್ಲಿರುವ ಸಾಧ್ಯತೆ ಇದೆ.
ಹುಲಿಯ ದೇಹದ ಭಾಗಗಳಿಗೆ ಭಾರೀ ಬೇಡಿಕೆ
2016 ಹುಲಿಗಳ ಪಾಲಿಗೆ ಕೆಟ್ಟ ದಿನವಾಗಿದೆ. ಈ ಅವಧಿಯಲ್ಲಿ 111 ಹುಲಿಗಳು ಸಾವಿಗೀಡಾಗಿದೆ. ಇದು ದಾಖಲೆಯ ಸಂಖ್ಯೆಯೂ ಹೌದು. ಇದರಲ್ಲಿ 51 ಅಸಹಜ ಮತ್ತು 60 ಸಹಜ ಸಾವುಗಳಾಗಿವೆ. ಅಸಹಜ ಸಾವುಗಳಿಗೆ ಅವುಗಳ ಚರ್ಮ ಮತ್ತು ದೇಹದ ಇತರ ಭಾಗಗಳಿಗಿರುವ ಬೇಡಿಕೆಯೇ ಕಾರಣ ಎಂದು ಹೇಳಾಗಿದೆ. ಕಾನೂನು ಎಷ್ಟೇ ಬಿಗಿಯಾಗಿದ್ದರೂ ಅಸಹಜ ಸಾವುಗಳಿಗೆ ಕಡಿವಾಣ ಬೀಳುತ್ತಿಲ್ಲ. ಈ ವರ್ಷದ 7 ತಿಂಗಳುಗಳಲ್ಲಿ 12 ಹಲಿಗಳು ಸಾವನ್ನಪ್ಪಿವೆ.
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.