ಬಾಲಕನ ಬಾಯಲ್ಲಿ 526 ಹಲ್ಲುಗಳು ಪತ್ತೆ !
ವಿಶ್ವದಲ್ಲೇ ಮೊದಲ ಪ್ರಕರಣಕ್ಕೆ ಸಾಕ್ಷಿಯಾದ ಚೆನ್ನೈನ ಬಾಲಕ
Team Udayavani, Jul 31, 2019, 9:45 PM IST
ಮಣಿಪಾಲ: ನಗರದ ಸವಿತಾ ದಂತ ಆಸ್ಪತ್ರೆಯಲ್ಲಿ ಒಂದು ಅಚ್ಚರಿ ಸಂಭವಿಸಿದೆ. 7 ವರ್ಷದ ಬಾಲಕ ರವೀಂದ್ರನಾಥ್‌ನ ಬಾಯಿಯಲ್ಲಿದ್ದ ಬರೊಬ್ಬರಿ 526 ಹಲ್ಲುಗಳು ಕಂಡು ಬಂದಿದೆ. ಇದನ್ನು ವೈದ್ಯರು ಆಪರೇಷನ್ ಮೂಲಕ ಹೊರ ತೆಗೆದಿದ್ದು, ಬಾಲಕ ಚೇತರಿಸಿಕೊಂಡಿದ್ದಾನೆ. ವಿಶ್ವದಲ್ಲೇ ದಾಖಲಾದ ಮೊದಲ ಪ್ರಕರಣ ಇದಾಗಿದೆ.
ಹುಡುಗನ ಬಲ ಬದಿಯ ದವಡೆ ಊದಿಕೊಂಡಿತ್ತು. ತೀವ್ರವಾದ ನೋವಿನಿಂದಲೂ ಬಳಲುತ್ತಿದ್ದ. ಕೊನೆಗೆ ಆಸ್ಪತ್ರೆಗೆ ತೆರಳಿ ನೋವಿನ ಪರೀಕ್ಷೆ ನಡೆಸಿದಾಗ ಬಾಯಿಯಲ್ಲಿ 526 ಹಲ್ಲುಗಳು ಇರುವ ಸಂಗತಿ ಬೆಳಕಿಗೆ ಬಂದಿದ್ದು, ಇದು ನೋವಿಗೆ ಕಾರಣ ಎಂದು ತಿಳಿದುಬಂದಿದೆ. “ಕಾಂಪೌಂಡ್ ಕಾಂಪೋಸಿಟ್ ಒಂಡೊಂಟೊಮ…’ ಎಂಬ ಅಪರೂಪದ ಖಾಯಿಲೆ ಇದಾಗಿದೆ.
3 ವರ್ಷದಲ್ಲೇ ಇತ್ತು ಖಾಯಿಲೆ
ಹುಡುಗ ಮೂರು ವರ್ಷದವನಿರುವಾಗಲೇ ಬಾಯಿ ಊದಿಕೊಂಡಿತ್ತು. ಆದರೆ ಬಾಲಕನ ಪೋಷಕರು ಬಾಲಕನ ಬಾಯಿಯ ಬಾವಿನ ಕುರಿತಾಗಿ ಅಷ್ಟೊಂದು ತಲೆ ಕಡೆಸಿಕೊಂಡಿರಲಿಲ್ಲ. ಬಾಯಿಯನ್ನು ಪರೀಕ್ಷಿಸಲು ಮುಂದಾದಾಗ ಪುಟ್ಟ ಬಾಲಕ ನೋವಿನಿಂದ ಜೋರಾಗಿ ಅಳುತ್ತಿದ್ದ. ಹೀಗಾಗಿ ಪೋಷಕರು ಅದನ್ನು ಗುಣ ಪಡಿಸುವತ್ತ ಮನಸ್ಸು ಮಾಡಲಿಲ್ಲ. ಆದರೆ ಕ್ರಮೆಣ ಬಾವು ಹೆಚ್ಚಾಗುತ್ತಿದ್ದಂತೆ ಪೋಷಕರು ಎಚ್ಚೆತ್ತುಕೊಂಡಿದ್ದಾರೆ.
ಎಕ್ಸ್ ಎಕ್ಸ್ ರೇ ಬಳಿಕ ಪತ್ತೆ
ಎಕ್ಸ್ ರೇ ಮತ್ತು ಸಿಟಿ ಸ್ಕ್ಯಾನ್ ಮಾಡಿದಾಗ ಕೆಳಭಾಗದ ಬಲ ದವಡೆಯಲ್ಲಿ ಹಲ್ಲುಗಳು ಹೆಚ್ಚಿರುವುದು ಪತ್ತೆಯಾಗಿದೆ. ಬಾಲಕನಿಗೆ ಅರಿವಳಿಕೆ (ಅನಸ್ತೇಶಿಯಾ) ನೀಡಿ ದವಡೆಯನ್ನು ತೆರೆಯಲಾಯಿತು. ಅಲ್ಲಿ ಸುಮಾರು 200 ಗ್ರಾಂ. ತೂಕವಿರುವ ಒಂದು ಹಲ್ಲಿನ ಬ್ಯಾಗ್ ಪತ್ತೆಯಾಗಿತ್ತು. ಬಳಿಕ ಅವುಗಳನ್ನು ಹೊರ ತೆಗೆಯಲಾಗಿದೆ. ಸಣ್ಣ, ಮಧ್ಯಮ ಹಾಗೂ ದೊಡ್ಡ ಗಾತ್ರದ 526 ಹಲ್ಲುಗಳು ಅದರಲ್ಲಿದ್ದವು.
Tamil Nadu: 526 teeth were removed from the lower jaw of a 7-year-old boy at a hospital in Chennai. Dr Senthilnathan says, “A 4×3 cm tumour was removed from the lower right side of his jaw, after that, we came to know that 526 teeth were present there.” pic.twitter.com/yBGohNBa7r
— ANI (@ANI) July 31, 2019
ಮುತ್ತಿನಾಕಾರದ ಹಲ್ಲುಗಳು
ಅಪರೇಶನ್ ಮೂಲಕ ಹಲ್ಲುಗಳನ್ನು ಹೊರ ತೆಗೆಯಲು ಸುಮಾರು 5 ಗಂಟೆಯನ್ನು ಡಾ| ಪಿ. ಸೆಂದಿಲ್ನಾಥನ್ ಮತ್ತು ತಂಡ ತೆಗೆದುಕೊಂಡಿದೆ. ಹೊರತೆಗೆಯಾದ ಹಲ್ಲುಗಳು ಮುತ್ತಿನ ಆಕಾರದಲ್ಲಿದ್ದವು. ಬಾಲಕ ಈಗ ಸಹಜಸ್ಥಿಗೆ ಮರಳಿದ್ದಾನೆ. ವೈದ್ಯರು ಯಾವುದೇ ಶುಲ್ಕವಿಲ್ಲದೆ 7 ವರ್ಷದ ಬಾಲಕ ರವೀಂದ್ರನಾಥ್ ಮತ್ತು ಅವರ ಕುಟುಂಬವನ್ನು ಮನೆಗೆ ಕಳುಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Canada-India Row: ಕೆನಡಾದ ಆಂತರಿಕ ವಿಚಾರದಲ್ಲಿ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.