ಗೋಪ್ರೇಮಿಗಳ ವಿಶೇಷ ಕಾರ್ಯಾಚರಣೆ : 5 ಓಂಗೋಲ್ ಹೋರಿಗಳ ರಕ್ಷಣೆ
Team Udayavani, Aug 1, 2019, 6:37 AM IST
ಕಾಸರಗೋಡು: ಕಸಾಯಿಖಾನೆಯಲ್ಲಿ ಕೊನೆಯ ಕ್ಷಣಗಳನ್ನು ಎಣಿಸುತ್ತಿದ್ದ ಓಂಗೋಲ್ ತಳಿಯ ಐದು ಹೋರಿಗಳನ್ನು ಗೋಭಕ್ತರು ರಕ್ಷಿಸಿದ್ದಾರೆ. ಇದಕ್ಕಾಗಿ ಗೋ ಭಕ್ತರು 3,20,000 ರೂ.ಗಳನ್ನು ಕಸಾಯಿ ಖಾನೆಗೆ ಪಾವತಿಸಿದ್ದು, ಪ್ರಸ್ತುತ ಈ ಹೋರಿಗಳನ್ನು ಪೆರಿಯದ ಗೋ ಲೋಕಕ್ಕೆ ಸಾಗಿಸಲಾಗಿದೆ.
ಸ್ವಲ್ಪ ವಿಳಂಬವಾಗುತ್ತಿದ್ದರೂ ಈ ಹೋರಿಗಳು ಕೊನೆ ಉಸಿರೆಳೆಯುತ್ತಿದ್ದವು. ಗೋಭಕ್ತರ ಸುಪ್ತ ಮನಸ್ಸು ಎಚ್ಚೆತ್ತುಕೊಂಡದ್ದರಿಂದ ಬಲಿಯಾಗುತ್ತಿದ್ದ ಹೋರಿಯನ್ನು 3,20,000 ರೂ. ನೀಡಿ ತಮ್ಮ ವಶಕ್ಕೆ ಪಡೆದುಕೊಂಡು ರಕ್ಷಿಸುವಲ್ಲಿ ಸಾಧ್ಯವಾಯಿತು. ಈ ಹೋರಿ ಪೆರಿಯದ ಗೋ ಲೋಕಕ್ಕೆ ಹೊಸ ಅತಿಥಿಯಾಗಿ ತೆರಳಿದೆ.
ಬುಧವಾರ ಬೆಳಗ್ಗೆ ಪೆರಿಯ ಬಳಿ ಕಸಾಯಿಖಾನೆಯಲ್ಲಿ ಬೃಹತ್ ಗಾತ್ರದ
ಐದು ಓಂಗೋಲ್ ಹೋರಿಗಳು ಇರುವುದು ಪೆರಿಯದ ಸುಬ್ರಹ್ಮಣ್ಯ ಅವರಿಗೆ ಕಾಣಿಸಿತು. ಅಪೂರ್ವ ತಳಿಯ ಆ ಗೋವುಗಳನ್ನು ಹೇಗಾದರೂ ರಕ್ಷಿಸಬೇಕೆಂದುಕೊಂಡ ಅವರು ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿ ಪೆರಿಯದಲ್ಲಿ ಕಾರ್ಯಾಚರಿಸುತ್ತಿರುವ ಗೋಲೋಕ ಗೋಶಾಲೆಯ ಸಂಚಾಲಕ ವಿಷ್ಣು ಹೆಬ್ಟಾರ್ ಮೊದಲಾದವರಿಗೆ ಮಾಹಿತಿ ನೀಡಿದರು. ಈಗಾಗಲೇ ಗೋರûಾ ವಿಚಾರದಲ್ಲಿ ದೇಶದಲ್ಲಿ ಕ್ರಾಂತಿಯೆಬ್ಬಿಸಿರುವ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಗಮನಕ್ಕೂ ಈ ವಿಚಾರ ಬಂತು. ತತ್‌ಕ್ಷಣ ಶ್ರೀ ಮಠದ ಕಾಮದುಘಾ ಗೋರûಾ ವಿಭಾಗ ಸಂಚಾಲಕ ಡಾ| ವೈ.ವಿ. ಕೃಷ್ಣಮೂರ್ತಿ ಅವರ ಮೂಲಕ ರಕ್ಷಣಾ ಜಾಲ ಕಾರ್ಯಪ್ರವೃತ್ತವಾಯಿತು.
ತಂಡದಲ್ಲಿ ತಿರುಮಲೇಶ್ವರ ಪ್ರಸನ್ನ, ಡಾ| ಜಯಪ್ರಕಾಶ್ ಲಾಡ, ಶ್ರೀಕೃಷ್ಣ ಭಟ್ ಮೀನಗದ್ದೆ, ಮುರಳಿ ಮೊಗ್ರಾಲ್, ಪೆರಿಯ ಗೋಲೋಕದ ಕಾರ್ಯಕರ್ತರು ಇದ್ದರು.
ಮಧ್ಯವರ್ತಿಯೊಬ್ಬ ಆಂಧ್ರ ಪ್ರದೇಶದಿಂದ ಈ ಅಪೂರ್ವ ಹಸುಗಳನ್ನು ತರಿಸಿ ಕಸಾಯಿಖಾನೆಗೆ ಪೂರೈಸಿದ್ದ. ರಸ್ತೆ ಬದಿಯಲ್ಲಿ ಕಟ್ಟಿ ಹಾಕಿದ್ದ ಕಾರಣ ಅವುಗಳ ಗೋಪ್ರೇಮಿಗಳ ಕಣ್ಣಿಗೆ ಬಿದ್ದಿದ್ದು, ರಕ್ಷಿಸುವಂತಾಗಿದೆ ಎಂದು ಕಾರ್ಯಕರ್ತರು ತಿಳಿಸಿದ್ದಾರೆ.
ಹೀಗೆ ನಡೆಯಿತು ಕಾರ್ಯಾಚರಣೆ
ಮಠದ ಗೋ ಸಂಜೀವಿನಿ ವಿಭಾಗವು ಕಸಾಯಿಯವರ ಜತೆ ಚರ್ಚಿಸಿದಾಗ ಒಂದೊಂದು ಹೋರಿಗೂ 70ರಿಂದ 80 ಸಾವಿರ ರೂ. ಬೆಲೆ ಇದೆ. ಪೂರ್ವಾಹ್ನ 11.30ರ ಒಳಗೆ ಅಷ್ಟು ಹಣವನ್ನು ಕೊಟ್ಟಲ್ಲಿ ಎಲ್ಲ ಹೋರಿಗಳನ್ನು ಬಿಟ್ಟು ಕಳುಹಿಸುತ್ತೇವೆ; ವಿಳಂಬವಾದರೆ ಅವುಗಳನ್ನು ಕಸಾಯಿ ಮಾಡುವುದು ಅನಿವಾರ್ಯವಾಗುತ್ತದೆ ಎಂದರು. ಸಾಮಾಜಿಕ ಜಾಲತಾಣಗಳಲ್ಲೂ ಈ ವಿಷಯ ಹರಿದಾಡಿತು.
ಗಂಭೀರತೆಯನ್ನರಿತ ಗುರು ಗೋ ಭಕ್ತರು ಗೋ ಸಂಜೀವಿ ನಿಧಿಗೆ ದೇಣಿಗೆ ನೀಡಲಾರಂಭಿಸಿದರು. ಶ್ರೀ ರಾಮಚಂದ್ರಾಪುರ ಮಠದ ಕಾರ್ಯಕರ್ತರು ಕಸಾಯಿಖಾನೆಗೆ ಧಾವಿಸಿ ಅವರಲ್ಲಿ ಸಮಾಲೋಚನೆ ಮಾಡಿ ಒಟ್ಟು 3,20,000 ರೂ. ಪಾವತಿಸಿ ಐದೂ ಓಂಗೋಲ್ ಹೋರಿಗಳನ್ನು ತಮ್ಮ ವಶಕ್ಕೆ ಪಡೆದು ಕಾಲ್ನಡೆಯ ಮೂಲಕ ಪೆರಿಯದ ಗೋಲೋಕದಲ್ಲಿ ರಕ್ಷಣೆ ನೀಡಿದರು.
ಎರಡನೇ ಪ್ರಕರಣ
ಮೊದಲೊಮ್ಮೆ ಇದೇ ರೀತಿಯ ಘಟನೆಗೆ ಸಾಕ್ಷಿಯಾಗಿ ಮುರಳಿ ಮೊಗ್ರಾಲ್ ಅವರ ಮೂಲಕ ವಿಷಯ ಪ್ರಸ್ತಾವನೆಯಾಗಿ ರಕ್ಷಣೆಯಾಗಿ ಬಂದ ಇದೇ ತಳಿಯ ಬೃಹತ್ ಹೋರಿಯೊಂದು ಶ್ರೀಗಳಿಂದ ಮಹದೇಶ್ವರ ಎಂದು ನಾಮಕರಣಗೊಂಡು ಈಗ ಗೋಲಕದಲ್ಲಿ ವಿಹರಿಸುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ
Kinnigoli: ಪಕ್ಷಿಕೆರೆ; ಕೊಲೆ ಪ್ರಕರಣ ಮತ್ತಷ್ಟು ಸಂಗತಿಗಳು ಬೆಳಕಿಗೆ?
Media powerhouse: ರಿಲಯನ್ಸ್- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.