ರಾಮಚಂದ್ರಭಟ್‌ಗೆ ಯಕ್ಷಲಹರಿ ಪ್ರಶಸ್ತಿ
Team Udayavani, Aug 2, 2019, 5:00 AM IST
ಯಕ್ಷಲಹರಿ ಸಂಸ್ಥೆ 28 ವರ್ಷಗಳ ಹಿಂದೆ ಯಕ್ಷಗಾನದ ಸಮಾನ ಆಸಕ್ತರ ಕೆಲವು ಮಂದಿಗಳ ಜೊತೆಗೂಡುವಿಕೆಯಿಂದ ದಿ| ಇ. ಶ್ರೀನಿವಾಸ ಭಟ್‌ರವರ ಮುಂದಾಳುತ್ವದಲ್ಲಿ ಪ್ರಾರಂಭವಾಯಿತು. ಇದೀಗ 29 ನೇ ವರ್ಷದಲ್ಲಿ ಜು. 29 ರಿಂದ ಆರಂಭಗೊಂಡ ತಾಳಮದ್ದಳೆ ಆ. 4ರತನಕ ಧರ್ಮಸಂಹಿತಂ ಪರುಷ ವಾಕ್ಯಂ ಎಂಬ ಶೀರ್ಷಿಕೆಯಡಿಯಲ್ಲಿ ನಡೆಯಲಿದೆ. ಹಿರಿಯ ಯಕ್ಷಗಾನ ಕಲಾವಿದ ರಾಮಚಂದ್ರ ಭಟ್ ತೋಕೂರು ಅವರನ್ನು ಈ ಸಂದರ್ಭದಲ್ಲಿ ಯಕ್ಷಲಹರಿ ಪ್ರಶಸ್ತಿ ಪ್ರದಾನಿಸಿ ಗೌರವಿಸಲಾಗುವುದು.
ಹವ್ಯಾಸಿ ಅರ್ಥದಾರಿ ರಾಮಚಂದ್ರ ಭಟ್ ತೋಕೂರು ಯಕ್ಷಗಾನ ಕಂಡ ಅಪರೂಪದ ಹಿರಿಯ ತಲೆಮಾರಿನ ಕೊಂಡಿ. ಇವರು ಸಂಸ್ಕೃತ, ನ್ಯಾಯಶಾಸ್ತ್ರ, ಧರ್ಮಶಾಸ್ತ್ರ ಪಾರಂಗತರು. ಸಂಸ್ಕೃತ , ಕನ್ನಡ ಸ್ನಾತಕೋತ್ತರ ಪದವಿ ಪಡೆದು ಅಧ್ಯಾಪನ ವೃತ್ತಿಯಲ್ಲಿದ್ದರು. ಈ ಸಂದರ್ಭದಲ್ಲಿ ಯಕ್ಷಗಾನ ಹಾಗೂ ನಾಟಕದ ಬಗ್ಗೆ ಅಪಾರವಾದ ಸೆಳತದಿಂದ ಆಟ- ಕೂಟಗಳಲ್ಲಿ ಭಾಗವಹಿಸುತ್ತಿದ್ದರು. ದಿ. ಕೊರ್ಗಿ ವೆಂಕಟೇಶ ಉಪಾಧ್ಯಯರ ಗೆಳತನ , ಪ್ರಭಾಕರ ಜೋಷಿಯವರ , ಎಂ. ಎಲ್ ಸಾಮಗರ ಒಡನಾಟದಿಂದ ತಾಳಮದ್ದಲೆಯಲ್ಲಿ ಭಾಗವಹಿಸುವಿಕೆ, ಶಂಕರನಾರಾಯಣ ಸಾಮಗ, ರಾಮದಾಸ ಸಾಮಗರ ಜೊತೆಗೆ ತಾಳಮದ್ದಲೆ ಕೂಟದಲ್ಲಿ ಅರ್ಥಗಾರಿಕೆ ಮಾಡಿದ್ದಾರೆ. ವಾಸುದೇವ ಸಾಮಗರ ಸಂಯಮಂನಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಮೂಲ್ಕಿ, ಬಪ್ಪನಾಡು, ಕಾರ್ನಾಡು, ಸುರತ್ಕಲ್, ಹೊಸಬೆಟ್ಟು ವಿನಲ್ಲಿ ನಡೆಯುವ ವಾರದ ಕೂಟ, ತಿಂಗಳ ಕೂಟಗಳಲ್ಲಿ ಭಾಗವಹಿಸಿಸುತ್ತಿದ್ದಾರೆ.
ರಘುನಾಥ ಕಾಮತ್ ಕೆಂಚನಕೆರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ
ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ
Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್ ಜೈಕಾರ !
Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ
Idu Entha Lokavayya: “ಕೋಸ್ಟಲ್” ನಿಂದ ಕರುನಾಡು!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru: ನೇತ್ರಾವತಿ ಸೇತುವೆ ಮೇಲಿನ ಸಿಸಿ ಕೆಮರಾಗಳಿಗಿಲ್ಲ ನಿರ್ವಹಣೆ ಭಾಗ್ಯ
Asaram Bapu: ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಸಾರಾಂ ಬಾಪುಗೆ ಮಧ್ಯಂತರ ಜಾಮೀನು
ಕೌಟುಂಬಿಕ ದೌರ್ಜನ್ಯ ಆರೋಪ: ʼಬಿಂದಾಸ್ʼ ನಟಿ ಹನ್ಸಿಕಾ, ಸಹೋದರ, ತಾಯಿ ವಿರುದ್ಧ FIR ದಾಖಲು
Saudi Arabia: ಮೆಕ್ಕಾ-ಮದೀನಾ ಸೇರಿ ಹಲವೆಡೆ ದಾಖಲೆಯ ಧಾರಾಕಾರ ಮಳೆ; ಜನಜೀವನ ಅಸ್ತವ್ಯಸ್ತ
Gadag: 12 ತಿಂಗಳಾದರೂ ಪಾವತಿಯಾಗದ ಬಾಕಿ ಹಣ… ಕಡಲೆ ಬೆಳೆಗಾರರಿಂದ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.