ಬೇಕಲ: ಮಧುರ ಪ್ರಭಾತ ಯೋಜನೆ ಧನ ಸಹಾಯ ಚೆಕ್ ಹಸ್ತಾಂತರ
Team Udayavani, Aug 2, 2019, 5:50 AM IST
ಕಾಸರಗೋಡು: ಬೆಳಗ್ಗಿನ ಭೋಜನ ಸೇವಿಸಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಬೆಳಗ್ಗಿನ ಉಪಾಹಾರ ನೀಡುವ ಉದ್ದೇಶದೊಂದಿಗೆ ಜಿಲ್ಲಾ ಆಡಳಿತ ಕೂಟ ಹಾಗೂ ಜಿಲ್ಲಾ ಶಿಶು ಕಲ್ಯಾಣ ಸಮಿತಿಯ ಸಂಯುಕ್ತಾಶ್ರಯದಲ್ಲಿ ಜಾರಿಗೊಳಿಸುವ ಮಧುರ ಪ್ರಭಾತ ಯೋಜನೆಯಲ್ಲಿ ಬೇಕಲ ಸರಕಾರಿ ಫಿಶರೀಸ್ ಹೈಯರ್ ಸೆಕೆಂಡರಿ ಶಾಲೆಯ ಒಬ್ಬ ವಿದ್ಯಾರ್ಥಿಗೆ ಒಂದು ವರ್ಷಕ್ಕೆ ಬೆಳಗ್ಗಿನ ಉಪಾಹಾರವನ್ನು ಶಾಲೆಯ ಎಸ್ಎಸ್ಎಲ್ಸಿ 1992-93ರ ಬ್ಯಾಚ್ ಆದ ಸತೀರ್ಥ್ಯರ್ ನೀಡಲಿದೆ.
ಧನಸಹಾಯದ ಚೆಕ್ನ್ನು ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ಸತೀರ್ಥ್ಯರ್ನ ಅಧ್ಯಕ್ಷ ರಾಜೇಂದ್ರನ್ ಮುದಿಯಕ್ಕಾಲ್ ಅವರು ಜಿಲ್ಲಾಧಿಕಾರಿ ಡಾ| ಡಿ. ಸಜಿತ್ಬಾಬು ಅವರಿಗೆ ಹಸ್ತಾಂತರಿಸಿದರು.
ಅನಿಲ್ ಕೆ. ಉಮ್ಮನ್ ಅಧ್ಯಕ್ಷತೆ ವಹಿಸಿದ್ದರು. ಶಿಶು ಕಲ್ಯಾಣ ಸಮಿತಿ ಜಿಲ್ಲಾ ಕಾರ್ಯದರ್ಶಿ ಮಧು ಮುದಿಯಕ್ಕಾಲ್, ಶಿಶು ಸಂರಕ್ಷಣಾ ಅಧಿಕಾರಿ ಪಿ.ಬಿಜು, ಸತೀರ್ಥ್ಯರ್ ಅಧ್ಯಕ್ಷ ದಿನೇಶನ್ ಪಳ್ಳಿಕ್ಕೆರೆ, ಕಾರ್ಯದರ್ಶಿ ವಿಶ್ವಂಭರನ್ ಕಡಂಬಜಾಲ್, ಅಜಿತ್ ಮುದಿಯಕ್ಕಾಲ್, ಖಲೀಲ್ ಪೆರಿಯಾಟಡ್ಕ, ರತೀಶನ್ ಬೇಕಲ, ಉಣ್ಣಿಕೃಷ್ಣನ್ ಕುದಿರಕ್ಕೋಡು ಉಪಸ್ಥಿತರಿದ್ದರು. ಬ್ಯಾಚ್ನ ಬೆಳ್ಳಿಹಬ್ಬ ಆಚರಣೆಯ ಅಂಗವಾಗಿ ಸತೀರ್ಥ್ಯರ್ ಮೂರು ಲಕ್ಷ ರೂ.ಗಳಿಗೂ ಹೆಚ್ಚು ವೆಚ್ಚದಲ್ಲಿ ಶಾಲೆಗೆ ಪ್ರವೇಶ ದ್ವಾರ ನಿರ್ಮಿಸಿ ನೀಡಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.