ಕಾಮನ್ವೆಲ್ತ್ ಗೇಮ್ಸ್ ಬಹಿಷ್ಕಾರದ ಧ್ವನಿ ಇನ್ನಷ್ಟು ಗಟ್ಟಿ
ಐಒಎ ಪ್ರಸ್ತಾವಕ್ಕೆ ಬಾಕ್ಸಿಂಗ್, ವೇಟ್ಲಿಫ್ಟಿಂಗ್ ಒಕ್ಕೂಟ ಬೆಂಬಲ
Team Udayavani, Aug 2, 2019, 5:37 AM IST
ಹೊಸದಿಲ್ಲಿ: ಶೂಟಿಂಗ್ ಕ್ರೀಡೆಯನ್ನು ಕಿತ್ತು ಹಾಕಿರುವುದಕ್ಕೆ 2022ರ ಬರ್ಮಿಂಗ್‌ಹ್ಯಾಮ್ ಕಾಮನ್ವೆಲ್ತ್ ಗೇಮ್ಸ್ ಬಹಿಷ್ಕರಿಸಲು ಭಾರತ ಒಲಿಂಪಿಕ್ಸ್ ಸಂಸ್ಥೆ (ಐಒಎ) ಚಿಂತಿಸಿದೆ. ಪೂರಕವಾಗಿ ಕೇಂದ್ರ ಸರಕಾರಕ್ಕೂ ಪತ್ರ ಬರೆದಿದೆ. ಹೊಸ ಬೆಳವಣಿಗೆಯಲ್ಲಿ ಭಾರತ ವೇಟ್ಲಿಫ್ಟಿಂಗ್ ಸಂಸ್ಥೆ, ಬಾಕ್ಸಿಂಗ್ ಸಂಸ್ಥೆಗಳು ಬೆಂಬಲ ಸೂಚಿಸಿವೆ. ಇದರಿಂದ ಕಾಮನ್ವೆಲ್ತ್ ಗೇಮ್ಸ್ ಸಂಘಟಕರ ಮೇಲೆ ಶೂಟಿಂಗ್ ಉಳಿಸಿಕೊಳ್ಳಬೇಕಾದ ಒತ್ತಡ ಜಾಸ್ತಿಯಾಗಿದೆ.
ಭಾರತಕ್ಕೆ ಗರಿಷ್ಠ ಪದಕ ಬರುವ ಕ್ರೀಡೆ ಶೂಟಿಂಗ್, ಅದನ್ನೇ ಕಿತ್ತು ಹಾಕಿರುವುದರ ಹಿಂದೆ ಭಾರತವನ್ನು ಕುಗ್ಗಿಸುವ ಹುನ್ನಾರವಿದೆ ಎನ್ನುವುದು ಐಒಎ ಮುಖ್ಯಸ್ಥ ನರೇಂದ್ರ ಬಾತ್ರಾ ಅಭಿಮತ. ಇದಕ್ಕೆ ಪೂರಕವಾಗಿ, ಸೆಪ್ಟೆಂಬರ್ ತಿಂಗಳು ರುವಾಂಡದಲ್ಲಿ ನಡೆಯುವ ಕಾಮನ್ವೆಲ್ತ್ ಗೇಮ್ಸ್ ಒಕ್ಕೂಟದ ಸಭೆಯನ್ನು ಐಒಎ ಬಹಿಷ್ಕರಿಸಿದೆ. ಅದರ ಚುನಾವಣೆಯಿಂದ ಭಾರತೀಯರ ನಾಮಪತ್ರವನ್ನೂ ಹಿಂಪಡೆದಿದೆ. ಇದರ ಬೆನ್ನಲ್ಲೇ ಕಂಗೆಟ್ಟಿರುವ ಕಾಮನ್ವೆಲ್ತ್ ಗೇಮ್ಸ್ ಒಕ್ಕೂಟ, ‘ಇಂತ ಹ ನಿರ್ಧಾರ ಮಾಡಬೇಡಿ, ಮಾತುಕತೆ ನಡೆಸಿ ನಿರ್ಧರಿಸೋಣ’ ಎಂದು ಮನವಿ ಮಾಡಿದೆ.
ಐಒಎ ಹೇಳುವುದೇನು?
ಐಒಎ ಮುಖ್ಯಸ್ಥ ನರೇಂದ್ರ ಬಾತ್ರಾ, ಶೂಟಿಂಗ್ ರದ್ದು ಪಡಿಸುವುದಕ್ಕೆ ನೀಡುವ ಕಾರಣ ಬೇರೆಯೇ ಇದೆ. ಭಾರತ ಶೂಟಿಂಗ್‌ನಲ್ಲಿ ಪ್ರಾಬಲ್ಯ ಸಾಧಿಸಿದೆ. ಭಾರತದ ಪದಕ ಪಟ್ಟಿಯಲ್ಲಿ ಶೂಟಿಂಗ್ ಪಾಲು ಬಹುದೊಡ್ಡದು. ಶೂಟಿಂಗ್ ರದ್ದಾದರೆ ಭಾರತದ ಪದಕಗಳ ಸಂಖ್ಯೆ ತಗ್ಗುತ್ತದೆ. ಈ ಉದ್ದೇಶದಿಂದಲೇ ಶೂಟಿಂಗ್ ಕೈಬಿಡುವ ಕ್ರಮ ತೆಗೆದುಕೊಳ್ಳಲಾಗಿದೆ. ಯಾವುದೇ ಕ್ರೀಡೆಯಲ್ಲಿ ಭಾರತ ಪ್ರಾಬಲ್ಯ ಸಾಧಿಸಿದರೇ ಹೀಗೆ ಏನಾದರೂ ಮಾಡುತ್ತಾರೆ. ಒಂದೋ ರದ್ದು ಮಾಡುತ್ತಾರೆ, ಇಲ್ಲವೇ ನಿಯಮ ಬದಲಾಯಿಸುತ್ತಾರೆ. ಈಗ ಭಾರತ ಯಾವುದೇ ರಾಷ್ಟ್ರದ ವಸಾಹತು ಅಲ್ಲ. ನಾವೀಗ ಕಠಿನ ಪ್ರಶ್ನೆಗಳನ್ನು ಕೇಳುವ ಸಮಯ ಬಂದಿದೆ ಎಂದು ಬಾತ್ರಾ ಹೇಳುತ್ತಾರೆ.
ಏಕಪಕ್ಷೀಯ ನಿರ್ಧಾರ ಅಸಾಧ್ಯ
ಜೂನ್ ತಿಂಗಳಲ್ಲಿ ಕಾಮನ್ವೆವೆಲ್ತ್ ಬಹಿಷ್ಕರಿಸುವ ಕುರಿತು ಬಾತ್ರಾ ಹೇಳಿಕೆ ನೀಡಿದ ಕೂಡಲೇ ಕೇಂದ್ರ ಕ್ರೀಡಾ ಸಚಿವಾಲಯ ಪ್ರತಿಕ್ರಿಯಿಸಿತು. ‘ಹಾಗೆಲ್ಲ ಐಒಎ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ಇದರಲ್ಲಿ ನೂರಾರು ಕ್ರೀಡಾಪಟುಗಳ ಭವಿಷ್ಯ ಅಡಗಿದೆ. ಆದ್ದರಿಂದ ಈ ಬಗ್ಗೆ ಐಒಎ ಸರಕಾರದೊಂದಿಗೆ ಕೂತು ಚರ್ಚಿಸಬೇಕು’ ಎಂದು ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.
ಇದಕ್ಕೆ ಪ್ರತಿಯಾಗಿ ಬಾತ್ರಾ ಕೇಂದ್ರ ಸರಕಾರಕ್ಕೆ ಪತ್ರ ಬರೆದು, 2022ರ ಕೂಟವನ್ನು ರದ್ದುಪಡಿಸಬೇಕೆಂದು ಕೋರಿದ್ದಾರೆ. ಈಗ ಚೆಂಡು ಸರಕಾರದ ಅಂಗಳದಲ್ಲಿದೆ!
ಸಂಘಟಕರ ಹಾಸ್ಯಾಸ್ಪದ ಕಾರಣ
2022ರ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಶೂಟಿಂಗನ್ನು ಯಾಕೆ ರದ್ದು ಮಾಡಲಾಗಿದೆ ಎನ್ನುವುದಕ್ಕೆ ಬರ್ಮಿಂಗ್‌ಹ್ಯಾಮ್ ಸಂಘಟಕರು ಹಾಸ್ಯಾಸ್ಪದ ಕಾರಣ ನೀಡಿದ್ದಾರೆ. ಬರ್ಮಿಂಗ್‌ಹ್ಯಾಮ್‌ನಲ್ಲಿ ಶೂಟಿಂಗ್ ಕ್ರೀಡೆ ನಡೆಸುವುದಕ್ಕೆ ಸೂಕ್ತವಾದ ತಾಣವಿಲ್ಲ ಎಂಬುದು ಅದರ ಹೇಳಿಕೆ. ಸಾವಿರಾರು ಕೋಟಿ ರೂ. ವೆಚ್ಚದಲ್ಲಿ ನಡೆಸುವ ಗೇಮ್ಸ್ ತಾಣದಲ್ಲಿ ಶೂಟಿಂಗ್ ರೇಂಜ್ ನಿರ್ಮಿಸುವುದಕ್ಕೆ ಏಕೆ ಸಾಧ್ಯವಿಲ್ಲ ಎನ್ನುವುದು ಇಲ್ಲಿನ ಪ್ರಶ್ನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ICC World Rankings: ಟೆಸ್ಟ್ ಬೌಲಿಂಗ್ ರ್‍ಯಾಂಕಿಂಗ್ ಬುಮ್ರಾ ಮರಳಿ ನಂ.1
Brand Value: ಬಾಲಿವುಡ್ ತಾರೆಯರನ್ನು ಮೀರಿಸಿದ ಕ್ರಿಕೆಟಿಗರ ಬ್ರ್ಯಾಂಡ್ ಮೌಲ್ಯ!
IPL Auction: 27 ಕೋ. ರೂ. ಒಡೆಯ ರಿಷಭ್ ಪಂತ್‌ಗೆ ಸಿಗುವುದು 18.90 ಕೋಟಿ ಮಾತ್ರ!
IPL Auction: ಗುಜರಾತ್ ಟೈಟಾನ್ಸ್ ಪಾಲಾದ ಸಿರಾಜ್; ಆರ್‌ಸಿಬಿಗೆ ಹೃದಯಸ್ಪರ್ಶಿ ಸಂದೇಶ
Pro Kabbaddi: ಅಗ್ರಸ್ಥಾನಿ ಹರಿಯಾಣ 11ನೇ ವಿಕ್ರಮ; ಪುಣೇರಿ ಪಲ್ಟಾನ್‌ಗೆ ಸೋಲು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Labor Card: ಅವಿಭಜಿತ ದ.ಕ. ಜಿಲ್ಲೆ: 1,286 ಕಾರ್ಮಿಕರ ಕಾರ್ಡ್ ಅಮಾನತು
Udupi: ಮರಳುಗಾರಿಕೆ ಆರಂಭವಾದರೂ ಅಕ್ರಮ ದಂಧೆ ಅವ್ಯಾಹತ
ICC World Rankings: ಟೆಸ್ಟ್ ಬೌಲಿಂಗ್ ರ್‍ಯಾಂಕಿಂಗ್ ಬುಮ್ರಾ ಮರಳಿ ನಂ.1
Daily Horoscope: ವೆಚ್ಚಗಳು ಎಣಿಸದೆ ಬಂದರೂ ಅಪವ್ಯಯ ಇಲ್ಲ, ಎಲ್ಲದರಲ್ಲೂ ಎಚ್ಚರವಿರಲಿ
Udupi: ಪೊಲೀಸ್ ಅಧಿಕಾರಿಯೆಂದು ನಂಬಿಸಿ ಮಹಿಳೆಗೆ ಲಕ್ಷಾಂತರ ರೂ. ವಂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.