![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Aug 2, 2019, 5:57 PM IST
ಗೋಲ್ಡನ್ ಸ್ಟಾರ್ ಗಣೇಶ್ ಅವರ ಪುತ್ರ ವಿಹಾನ್ ಗಣೇಶ್ ಇದೀಗ ಚಿತ್ರವೊಂದಕ್ಕೆ ತಮ್ಮ ಧ್ವನಿಯನ್ನು ನೀಡುವ ಮೂಲಕ ಸುದ್ದಿ ಮಾಡಿದ್ದಾರೆ. ಗಣೇಶ್ ಅವರ ಮುಂಬರುವ ಚಿತ್ರ ‘ಗೀತಾ’ದಲ್ಲಿ ವಿಹಾನ್ ಗಣೇಶ್ ನಟಿಸುವ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದ್ದರು.
ಇದೀಗ ತಮ್ಮ ಪಾತ್ರಕ್ಕೆ ತಾವೇ ಡಬ್ಬಿಂಗ್ ಮಾಡುವ ಮೂಲಕ ವಿಹಾನ್ ಸುದ್ದಿಯಾಗಿದ್ದಾರೆ. ಅಪ್ಪನ ಜೊತೆ ವಿಹಾನ್ ಡಬ್ಬಿಂಗ್ ಕೋಣೆಯಲ್ಲಿ ಧ್ವನಿ ನೀಡುತ್ತಿರುವ ಸಂದರ್ಭದ ಚಿತ್ರವೊಂದನ್ನು ಗಣೇಶ್ ಅಭಿಮಾನಗಳ ಟ್ವಿಟ್ಟರ್ ಪುಟದಲ್ಲಿ ಪೋಸ್ಟ್ ಮಾಡಲಾಗಿದೆ. ಡಬ್ಬಿಂಗ್ ಸಂದರ್ಭದಲ್ಲಿ ಗಣೇಶ್ ಅವರು ತಮ್ಮ ಮಗನನ್ನು ಎತ್ತಿಕೊಂಡಿದ್ದಾರೆ.
‘ಗೀತಾ’ ಚಿತ್ರ ಗಣೇಶ್ ಅವರ ಸ್ವಂತ ಬ್ಯಾನರ್ ನಲ್ಲಿ ನಿರ್ಮಾಣವಾಗುತ್ತಿದೆ. ಈ ಚಿತ್ರದ ಟೀಸರ್ ಈಗಾಗಲೇ ಯೂ-ಟ್ಯೂಬ್ ನಲ್ಲಿ ಬಿಡುಗಡೆಗೊಂಡಿದೆ.
ವಿಜಯನಾಗೇಂದ್ರ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗೆ ಸಾನ್ವಿ ಶ್ರೀವಾಸ್ತವ್ ಅವರು ನಾಯಕಿಯಾಗಿದ್ದಾರೆ. ಅನೂಪ್ ರೂಬೆನ್ಸ್ ಅವರ ಸಂಗೀತ ‘ಗೀತಾ’ ಚಿತ್ರಕ್ಕಿದೆ.
ಕರಾಟೆ ಕಿಂಗ್ ಶಂಕರ್ ನಾಗ್ ಅವರ ಮ್ಯೂಸಿಕಲ್ ಹಿಟ್ ಚಿತ್ರ ‘ಗೀತಾ’ಗೂ ಇದಕ್ಕೂ ಏನಾದರೂ ಲಿಂಕ್ ಇದೆಯೇ ಎಂದು ಸೆಂಪ್ಟಂಬರ್ 6ಕ್ಕೆ ಗೊತ್ತಾಗಲಿದೆ.
Vihaan Ganesh, Little Golden Star on his dubbing for GEETHA @Official_Ganesh @VijayNaagendra @ShilpaaGanesh @SSFILMSOFFICIAL #VihaanGanesh #Debut #Ganesh #Geetha #GaneshFollower pic.twitter.com/ZOT1wIKzC3
— Golden Star Ganesh Followers (@GaneshFollower) August 2, 2019
Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್
Mallu Jamkhandi: ʼವಿದ್ಯಾ ಗಣೇಶʼ ನಂಬಿ ಬಂದವರು
Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನಂಜಯ – ಧನ್ಯತಾ: ಮದುವೆ ಬಳಿಕ ನವ ಜೋಡಿ ಹೇಳಿದ್ದೇನು?
Devil Teaser: ಚಾಲೆಂಜ್.. ಹೂಂ.. ಟೀಸರ್‌ನಲ್ಲೇ ʼಡೆವಿಲ್’ ಲುಕ್ ಕೊಟ್ಟ ʼದಾಸʼ
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.