ಸಂಪೂರ್ಣ ವಸ್ತ್ರ ಭೂಷಣ
ವರಮಹಾಲಕ್ಷ್ಮಿ ಹಬ್ಬಕ್ಕೆ ಶಾಪಿಂಗ್ ವ್ರತ
Team Udayavani, Aug 3, 2019, 5:30 AM IST
ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಶಾಪಿಂಗ್ ಮಾಡುವ ಯೋಚನೆಯಲ್ಲಿದ್ದೀರಾ? ಹಾಗಾದ್ರೆ, ನಿಮಗಿದೋ ಸಿಹಿ ಸುದ್ದಿ. ಸಂಪೂರ್ಣ ಸಂಘದ ವತಿಯಿಂದ, “ವಸ್ತ್ರಭೂಷಣ’ ಕರಕುಶಲ ವಸ್ತುಗಳ ಪ್ರದರ್ಶನ ನಡೆಯುತ್ತಿದೆ. ಐದು ದಿನಗಳ ಈ ಮೇಳದಲ್ಲಿ, ವೈವಿಧ್ಯಮಯ ಕರಕುಶಲ ಸೀರೆಗಳು ಹಾಗೂ ವಸ್ತ್ರಗಳು, ಕೈಮಗ್ಗದ ಹಾಗೂ ಕರಕುಶಲ ವಸ್ತುಗಳು ಪ್ರದರ್ಶನಗೊಳ್ಳಲಿವೆ.
“ಪದ್ಮಶ್ರೀ’ ಸೀರೆ
ಒಡಿಶಾದ ಕೊಟಾ³ಡ್ ಜಿಲ್ಲೆಯ ಪದ್ಮಶ್ರೀ ಪ್ರಶಸ್ತಿ ವಿಜೇತ ಗೋವರ್ಧನ್ ಪಣಿಕಾ, ವಿನ್ಯಾಸಗೊಳಿಸಿರುವ ಕೊಟಾ³ಡ್ ನೇಯ್ಗೆಯ ಬಟ್ಟೆಗಳು ಮೇಳದಲ್ಲಿವೆ. ಸಾಂಪ್ರದಾಯಿಕ ಬುಡಕಟ್ಟು ವಿನ್ಯಾಸ ಹೊಂದಿರುವ ಪಣಿಕಾ ಅವರ ಉತ್ಪನ್ನಗಳು, ಶೇ.100ರಷ್ಟು ಹತ್ತಿ ಹಾಗೂ ನೈಸರ್ಗಿಕ ನೂಲುಗಳಿಂದ ತಯಾರಿಸಲ್ಪಟ್ಟಿವೆ.
ಏನೆಲ್ಲಾ ಸಿಗುತ್ತೆ?
ಒಡಿಶಾದ ಕೊಟಾಡ್ ನೇಯ್ಗೆ, ವಾರಾಣಸಿಯ ನೇಯ್ಗೆ ಬಟ್ಟೆಗಳು, ರಾಜಸ್ಥಾನದ ಅಜರಾಕ್, ಪಟೋಲಾ ಹಾಗೂ ಅಕೋಲ, ಚೆಟ್ಟಿನಾಡ್ ಕಾಟನ್, ಕಾಂಜೀವರಂ ಹಾಗೂ ಬ್ಲಾಕ್‌ಪ್ರಿಂಟ್ ಸೀರೆಗಳು ಮೇಳದಲ್ಲಿ ಇರಲಿವೆ. ಅಷ್ಟೇ ಅಲ್ಲದೆ,ಪಾಟರ್ ಪಾಪ್ ಅಪ್ ಹಾಗೂ ಸ್ಟುಡಿಯೊ ಡಿಸೈನರ್ ಪಾಟರ್‌ಗಳು, ಪಿಂಗಾಣಿ ಬಟ್ಟಲುಗಳು, ಅಲಂಕಾರಿಕ ಪಾತ್ರೆಗಳು ಸಿಗುತ್ತವೆ.
ನಾಲ್ಕು ಕೃತಿಗಳ ಅನಾವರಣ
ತುಮಕೂರಿನ ಗೋಮಿನಿ ಪ್ರಕಾಶನದ ವತಿಯಿಂದ ನಾಲ್ಕು ಪುಸ್ತಕಗಳು ಬಿಡುಗಡೆಯಾಗುತ್ತಿವೆ. ಧರ್ಮೇಂದ್ರ ಕುಮಾರ್ ಅರೇನಹಳ್ಳಿ ಅವರ “ಮರೆತು ಹೋದ ಮೈಸೂರಿನ ಪುಟಗಳು’ (ಲೇಖನಗಳು), ವಿ. ಗೋಪಕುಮಾರ್ ಅವರ “ಎರಡು ಹನಿ ಮಳೆಯ ಮೋಡ’ (ನ್ಯಾನೊ ಕಥೆಗಳ ಸಂಕಲನ) ಹಾಗೂ ವಿಜಯೀಭವ ಗೆಲ್ಲಲು ಸಿದ್ಧರಾಗಿ (ವ್ಯಕ್ತಿತ್ವ ವಿಕಸನದ ಲೇಖನ), ಸದಾಶಿವ್ ಸೊರಟೂರು ಅವರ “ಲೈಫ್ನಲ್ಲಿ ಏನಿದೆ ಸಾರ್?’ (ವ್ಯಕ್ತಿತ್ವ ವಿಕಸನದ ಲೇಖನ)- ಬಿಡುಗಡೆಯಾಗುತ್ತಿರುವ ಪುಸ್ತಕಗಳು. ಲೇಖಕಿ ಪಿ. ಚಂದ್ರಿಕಾ, ಪುಸ್ತಕ ಬಿಡುಗಡೆ ಮಾಡಲಿದ್ದಾರೆ.
ಎಲ್ಲಿ?: ಗಾಂಧಿ ಭವನ,
ಕುಮಾರ ಪಾರ್ಕ್ ಪೂರ್ವ
ಯಾವಾಗ?: ಆ.4, ಭಾನುವಾರ ಮಧ್ಯಾಹ್ನ 3.30
ಯಾವಾಗ?: ಆ. 3- ಆ. 6, ಬೆಳಗ್ಗೆ 11ರಿಂದ 7
ಎಲ್ಲಿ? ನಂ. 63, ಯುನೈಟೆಡ್ ಥಿಯಾಲಾಜಿಕಲ್ ಕಾಲೇಜು, ಕಂಟೋನ್ಮೆಂಟ್ ರೈಲು ನಿಲ್ದಾಣದ ಬಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್
Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ
Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ
Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್ ಗೋಯಲ್
Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.