ಶಿಥಿಲವಾಯಿತು 15 ವರ್ಷ ಹಳೆಯ ಯುಜಿಡಿ ಪೈಪ್‌ಲೈನ್‌

ನಗರವೆಲ್ಲ ಗಬ್ಬೆದ್ದು ನಾರುತ್ತಿದೆ: ಬೇಕಿದೆ ಶಾಶ್ವತ ಪರಿಹಾರ

Team Udayavani, Aug 3, 2019, 5:01 AM IST

IMG-20190802-WA0003

ಉಡುಪಿ: ಅಡ್ಕದಕಟ್ಟೆ ಮಾರ್ಗ ಹಾಗೂ ಮೂಡು ತೋಟ ಮಧ್ಯದಿಂದ ನಿಟ್ಟೂರು ಕೊಳಚೆ ನೀರು ಶುದ್ಧೀಕರಣ ಘಟಕಕ್ಕೆ (ಎಸ್‌ಟಿಪಿ) ಹಾದು ಹೋಗುವ ಒಳಚರಂಡಿ ಪೈಪ್‌ಲೈನ್‌ ಸ್ಥಳೀಯರ ಪಾಲಿಗೆ ಶಾಪವಾಗಿ ಪರಿಣಮಿಸಿದೆ. ಈ ಮಾರ್ಗದ ಒಳಚರಂಡಿ ಪೈಪ್‌ ಒಡೆದು ಹೊರಗೆ ಹರಿಯುತ್ತಿರುವ ಕೊಳಚೆ ನೀರು ಸ್ಥಳೀಯರ ನಿ¨ªೆಗೆಡಿಸಿದೆ.

ದುರಸ್ತಿ ಭಾಗ್ಯ ದೊರಕಿಲ್ಲ
ನಗರದ ವಿವಿಧ ಭಾಗಗಳ‌ ಕೊಳಚೆ ನೀರು ಒಳಚರಂಡಿ (ಯುಜಿಡಿ) ನಿಟ್ಟೂರು ಅರ್ಕದ ಕಟ್ಟೆ ಹಾಗೂ ಮೂಡು ತೋಟದ ಮೂಲಕ ನಿಟ್ಟೂರು ಶುದ್ಧೀಕರಣ ಘಟಕಕ್ಕೆ ಹರಿದು ಹೋಗುತ್ತದೆ. ಇದೀಗ ವಿಷ್ಣು ಮೂರ್ತಿ ದೇವಸ್ಥಾನ ಹಾಗೂ ಮೂಡುತೋಟದಿಂದ ಎಸ್‌ಟಿಪಿಗೆ ಹೋಗುವ ಪೈಪ್‌ ಲೈನ್‌ ಒಡೆದು ಹೋಗಿ 10 ದಿನ ಕಳೆದರೂ ನಗರಸಭೆ ಅಧಿಕಾರಿಗಳಿಂದ ದುರಸ್ತಿ ಭಾಗ್ಯ ದೊರಕಿಲ್ಲ.

ಸಾಂಕ್ರಾಮಿಕ ರೋಗದ ಭೀತಿ
ನಿಟ್ಟೂರು ಎಸ್‌ಟಿಪಿಗೆ ಪೈಪ್‌ಲೈನ್‌ ಮೂಲಕ ಹಾದು ಹೋಗಬೇಕಾದ ಕೊಳಚೆ ನೀರು ಹಾಗೂ ಮಲಮೂತ್ರ ಒಡೆದ ಪಿಟ್‌ನಿಂದ ಹೊರಕ್ಕೆ ಹರಿಯುತ್ತಿದೆ. ಇದರಿಂದಾಗಿ ಪರಿಸರದ ನೈರ್ಮಲ್ಯ ಹಾಳಾಗಿದ್ದು, ಸ್ಥಳೀಯರಲ್ಲಿ ಸಾಂಕ್ರಾಮಿಕ ರೋಗ ಭೀತಿ ಮನೆ ಮಾಡಿದೆ. ಈಗಾಗಲೇ ಹಲವರು ಕಾಯಿಲೆಗೆ ತುತ್ತಾಗಿ ಆಸ್ಪತ್ರೆ ಸೇರಿದ್ದಾರೆ. ಅಲ್ಲದೇ, ಪೈಪ್‌ ಲೈನ್‌ ಸಮೀಪದ ನಿವಾಸಿಗಳು ಮನೆ ಖಾಲಿ ಮಾಡಿ ಬೇರೆ ಪ್ರದೇಶಕ್ಕೆ ಹೋಗುವ ಯೋಚನೆಯಲ್ಲಿದ್ದಾರೆ. ಖಾಲಿಯಾಗಿರುವ ಮನೆಗಳಿಗೆ ಬರಲು ಬಾಡಿಗೆದಾರರು ಹಿಂದೇಟು ಹಾಕುತ್ತಿದ್ದು, ಇದರಿಂದ ಮನೆ ಮಾಲಿಕರು ಚಿಂತೆಗೀಡಾಗಿದ್ದಾರೆ.

ಭಕ್ತರಿಗೆ ಕಿರಿಕಿರಿ
ಅರ್ಕದ ಕಟ್ಟೆಯಲ್ಲಿ ಪೈಪ್‌ ಹೊಡೆದು ಹೋಗಿರುವ ಜಾಗದಿಂದ ಕೂಗಳತೆ ದೂರದಲ್ಲಿ ವಿಷ್ಣುಮೂರ್ತಿ ದೇವಸ್ಥಾನ ಇದೆ. ದೇವಸ್ಥಾನಕ್ಕೆ ಬರುವ ಭಕ್ತರು ಕೊಳಚೆ ನೀರಿನ ದುರ್ನಾತದಿಂದ ಪ್ರತಿನಿತ್ಯ ಕಿರಿಕಿರಿ ಅನುಭವಿಸುವಂತಾಗಿದೆ. ಭಕ್ತರು ಹಾಗೂ ಸ್ಥಳೀಯರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಜಲಕ್ಷಾಮ
ಒಳಚರಂಡಿಯಿಂದ ಸೊರಿಕೆಯಿಂದ ವಿಷ್ಣು ಮೂರ್ತಿನಗರ ಹಾಗೂ ಮುಡುತೋಟ ಸಮೀಪದ 20ಕ್ಕಿಂತ ಹೆಚ್ಚಿನ ಬಾವಿ ನೀರು ಹಾಳಾಗಿದೆ. ಹೀಗಾಗಿ ಈ ಪ್ರದೇಶದ ಜನರು ಬಾವಿ ಕೊರೆಸಲು ಹಿಂದೇಟು ಹಾಕುತ್ತಿದ್ದಾರೆ.

ಪೈಪ್‌ ಲೈನ್‌ ಶಿಥಿಲಗೊಂಡಿದೆ
ನಗರದಿಂದ ನಿಟ್ಟೂರು ಕೊಳಚೆ ನೀರು ಶುದ್ಧೀಕರಣ ಘಟಕ್ಕೆ ಹೋಗುವ ಪೈಪ್‌ ಅಲ್ಲಲ್ಲಿ ಒಡೆದು ಹೋಗುತ್ತಿದೆ. 2005ರಲ್ಲಿ ಒಳಚರಂಡಿ ಪೈಪ್‌ಲೈನ್‌ಗಳನ್ನು ಆಳವಡಿಸಲಾಗಿತ್ತು. ಈ ಪೈಪ್‌ ಆಳವಡಿಸಿ ಸುಮಾರು 15 ವರ್ಷಗಳು ಕಳೆದಿದ್ದು, ಇದೀಗಾ ಪೈಪ್‌ಗ್ಳು ಶಿಥಿಲಾವಸ್ಥೆಗೆ ತಲುಪಿದೆ.

ಬೇಕಿದೆ ಶಾಶ್ವತ ಪರಿಹಾರ!
ನಗರದಿಂದ ನೀರು ಶುದ್ಧೀಕರಣ ಘಟಕಕ್ಕೆ ಹೋಗುವ ಎಲ್ಲ ಒಳಚರಂಡಿ ಪೈಪ್‌ ಲೈನ್‌ಗಳನ್ನು ಬದಲಾಯಿಸಿದರೆ ಮಾತ್ರ ಸಮಸ್ಯೆ ಮುಕ್ತಿ ಸಿಗಲು ಸಾಧ್ಯ. ಕಳೆದ ಹಲವು ತಿಂಗಳಿನಿಂದ ನಗರ ಸಭೆ ಅಧಿಕಾರಿಗಳು ನಗರದ ವಿವಿಧ ಕಡೆ ಯುಜಿಡಿ ಪೈಪ್‌ ಲೈನ್‌ ದುರಸ್ತಿ ಮಾಡಿದರೂ ತಿಂಗಳಾಗುವುದರ ಒಳಗಾಗಿ ಮತ್ತೆ ಹಾಳಾಗುತ್ತಿದೆ.

2ತಿಂಗಳುಗಳಲ್ಲಿ
6 ಬಾರಿ ದುರಸ್ತಿ
ವಿಷ್ಣುಮೂರ್ತಿ ದೇವಸ್ಥಾನ ಸಮೀಪದ ಯುಜಿಡಿ ಪೈಪ್‌ಲೈನ್‌ ಒಡೆದು ಹೋಗಿದೆ. 2 ತಿಂಗಳುಗಳಲ್ಲಿ 6 ಬಾರಿ ದುರಸ್ತಿ ಮಾಡಲಾಗಿದೆ. ನಗರಸಭೆ ಸಮಸ್ಯೆ ಮರುಕಳಿಸದಂತೆ ಶಾಶ್ವತ ಪರಿಹಾರ ಕಲ್ಪಿಸಬೇಕಾಗಿದೆ.
-ಸಂತೋಷ್‌ ನಿಟ್ಟೂರು, ವಾರ್ಡ್‌ ಸದಸ್ಯ, ನಗರಸಭೆ ಉಡುಪಿ.

ಬದಲಿಸುವ ನಿರ್ಧಾರವಾಗಿಲ್ಲ
ನಗರದಲ್ಲಿ ಒಡೆದು ಹೋದ ಯುಜಿಡಿ ಪೈಪ್‌ಲೈನ್‌ ದುರಸ್ತಿ ನಗರಸಭೆಯಿಂದ ಮಾಡಲಾಗುತ್ತಿದೆ. ಇಲ್ಲಿಯವರೆಗೆ ಪೈಪ್‌ ಲೈನ್‌ ಬದಲಿಸುವ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ.
-ಆನಂದ ಕೊಲ್ಲೋಳಿಕರ್‌, ಪೌರಾಯುಕ್ತರು, ನಗರಸಭೆ ಉಡುಪಿ

ಟಾಪ್ ನ್ಯೂಸ್

Delhi: ಪ್ರಶಾಂತ್ ವಿಹಾರ್ ಪ್ರದೇಶದಲ್ಲಿ ಸ್ಫೋಟ… ಪೊಲೀಸ್, ಅಗ್ನಿಶಾಮಕ ದಳ ದೌಡು

Delhi: ಒಂದು ತಿಂಗಳ ಅಂತರದಲ್ಲಿ ಪ್ರಶಾಂತ್ ವಿಹಾರ್ ಪ್ರದೇಶದಲ್ಲಿ ಎರಡನೇ ಸ್ಫೋಟ

Belagavi: ಸಿಪಿಐ ಕಿರುಕುಳ ಆರೋಪ, ಆತ್ಮಹತ್ಯೆಗೆ ಯತ್ನಿಸಿದ್ದ ಪೊಲೀಸ್ ಪೇದೆ ರಕ್ಷಣೆ

Belagavi: ಸಿಪಿಐ ಕಿರುಕುಳ ಆರೋಪ; ಆತ್ಮಹತ್ಯೆಗೆ ಯತ್ನಿಸಿದ್ದ ಪೊಲೀಸ್ ಪೇದೆ ರಕ್ಷಣೆ

11

BBK11: ಮಂಜುವನ್ನು ರೋಗಿಷ್ಠ ರಾಜ ಎಂದ ರಜತ್; ಜೋರಾಗಿ ನಕ್ಕ ಶಿಶಿರ್, ಐಶ್ವರ್ಯಾ

Bangladesh:ಇಸ್ಕಾನ್‌ ನಿಷೇಧಿಸಲು ನಿರಾಕರಿಸಿದ ಬಾಂಗ್ಲಾದೇಶ ಹೈಕೋರ್ಟ್‌,ಸರ್ಕಾರಕ್ಕೆ ಮುಖಭಂಗ

Bangladesh:ಇಸ್ಕಾನ್‌ ನಿಷೇಧಿಸಲು ನಿರಾಕರಿಸಿದ ಬಾಂಗ್ಲಾದೇಶ ಹೈಕೋರ್ಟ್‌,ಸರ್ಕಾರಕ್ಕೆ ಮುಖಭಂಗ

bellad

Hubli: ಸಮಾಜದಹಿತಕ್ಕಾಗಿ ಪಕ್ಷ ಮರೆತು ಹೋರಾಡಬೇಕು: ಕಾಶನ್ನ‌ಪ್ಪನವರ ವಿರುದ್ದ ಬೆಲ್ಲದ್‌ ಟೀಕೆ

Bengaluru ಭಯೋ*ತ್ಪಾದಕ ಚಟುವಟಿಕೆ ಆರೋಪಿ, ಉ*ಗ್ರ ಖಾನ್‌ ರುವಾಂಡದಿಂದ ಭಾರತಕ್ಕೆ ಗಡಿಪಾರು!

Bengaluru ಭಯೋ*ತ್ಪಾದಕ ಚಟುವಟಿಕೆ ಆರೋಪಿ, ಉ*ಗ್ರ ಖಾನ್‌ ರುವಾಂಡದಿಂದ ಭಾರತಕ್ಕೆ ಗಡಿಪಾರು!

ನನಗೆ ಪ್ರೀತಿ ಗೌರವ ಕೊಡಿ ಸಾಕು..: ಡೆಲ್ಲಿ ಮಾಲಿಕರ ಮುಂದೆ ರಾಹುಲ್‌ ಬೇಡಿಕೆ

IPL 2024: ನನಗೆ ಪ್ರೀತಿ ಗೌರವ ಕೊಡಿ ಸಾಕು..: ಡೆಲ್ಲಿ ಮಾಲಿಕರ ಮುಂದೆ ರಾಹುಲ್‌ ಬೇಡಿಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Labor Card: ಅವಿಭಜಿತ ದ.ಕ. ಜಿಲ್ಲೆ: 1,286 ಕಾರ್ಮಿಕರ ಕಾರ್ಡ್‌ ಅಮಾನತು

Labor Card: ಅವಿಭಜಿತ ದ.ಕ. ಜಿಲ್ಲೆ: 1,286 ಕಾರ್ಮಿಕರ ಕಾರ್ಡ್‌ ಅಮಾನತು

Udupi: ಮರಳುಗಾರಿಕೆ ಆರಂಭವಾದರೂ ಅಕ್ರಮ ದಂಧೆ ಅವ್ಯಾಹತ

Udupi: ಮರಳುಗಾರಿಕೆ ಆರಂಭವಾದರೂ ಅಕ್ರಮ ದಂಧೆ ಅವ್ಯಾಹತ

1

Udupi: ಪೊಲೀಸ್‌ ಅಧಿಕಾರಿಯೆಂದು ನಂಬಿಸಿ ಮಹಿಳೆಗೆ ಲಕ್ಷಾಂತರ ರೂ. ವಂಚನೆ

Udupi: ನ. 29 ರಿಂದ ಡಿ. 1 ಎಂಜಿಎಂ ಕಾಲೇಜಿಗೆ ಅಮೃತ ಮಹೋತ್ಸವ ಸಂಭ್ರಮ

Udupi: ನ. 29 ರಿಂದ ಡಿ. 1 ಎಂಜಿಎಂ ಕಾಲೇಜಿಗೆ ಅಮೃತ ಮಹೋತ್ಸವ ಸಂಭ್ರಮ

Udupi: ಗೀತಾರ್ಥ ಚಿಂತನೆ-107: ಮರಣವೂ- ನಾಟಕದ ಅಲಂಕಾರವೂ…

Udupi: ಗೀತಾರ್ಥ ಚಿಂತನೆ-107: ಮರಣವೂ- ನಾಟಕದ ಅಲಂಕಾರವೂ…

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Delhi: ಪ್ರಶಾಂತ್ ವಿಹಾರ್ ಪ್ರದೇಶದಲ್ಲಿ ಸ್ಫೋಟ… ಪೊಲೀಸ್, ಅಗ್ನಿಶಾಮಕ ದಳ ದೌಡು

Delhi: ಒಂದು ತಿಂಗಳ ಅಂತರದಲ್ಲಿ ಪ್ರಶಾಂತ್ ವಿಹಾರ್ ಪ್ರದೇಶದಲ್ಲಿ ಎರಡನೇ ಸ್ಫೋಟ

Belagavi: ಸಿಪಿಐ ಕಿರುಕುಳ ಆರೋಪ, ಆತ್ಮಹತ್ಯೆಗೆ ಯತ್ನಿಸಿದ್ದ ಪೊಲೀಸ್ ಪೇದೆ ರಕ್ಷಣೆ

Belagavi: ಸಿಪಿಐ ಕಿರುಕುಳ ಆರೋಪ; ಆತ್ಮಹತ್ಯೆಗೆ ಯತ್ನಿಸಿದ್ದ ಪೊಲೀಸ್ ಪೇದೆ ರಕ್ಷಣೆ

11

BBK11: ಮಂಜುವನ್ನು ರೋಗಿಷ್ಠ ರಾಜ ಎಂದ ರಜತ್; ಜೋರಾಗಿ ನಕ್ಕ ಶಿಶಿರ್, ಐಶ್ವರ್ಯಾ

Bangladesh:ಇಸ್ಕಾನ್‌ ನಿಷೇಧಿಸಲು ನಿರಾಕರಿಸಿದ ಬಾಂಗ್ಲಾದೇಶ ಹೈಕೋರ್ಟ್‌,ಸರ್ಕಾರಕ್ಕೆ ಮುಖಭಂಗ

Bangladesh:ಇಸ್ಕಾನ್‌ ನಿಷೇಧಿಸಲು ನಿರಾಕರಿಸಿದ ಬಾಂಗ್ಲಾದೇಶ ಹೈಕೋರ್ಟ್‌,ಸರ್ಕಾರಕ್ಕೆ ಮುಖಭಂಗ

8(1

Kota: ರಾಷ್ಟ್ರೀಯ ಹೆದ್ದಾರಿಯಲ್ಲಿ ಸೌಲಭ್ಯ ಕೊರತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.