ಪುರುಷನ ನೆರಳಿಲ್ಲದೆ ವಿದೇಶಕ್ಕೆ!
ಮಹಿಳಾ ಸಬಲೀಕರಣ ಸಂಬಂಧ ಸೌದಿ ಅರೇಬಿಯಾ ಘೋಷಣೆ
Team Udayavani, Aug 3, 2019, 5:06 AM IST
ರಿಯಾದ್: ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಚರ್ಚೆಗೀಡಾಗಿದ್ದ ಮತ್ತು ಟೀಕೆಗೆ ಒಳಗಾಗಿದ್ದ ನಿಯಮವೊಂದನ್ನು ಸೌದಿ ಅರೇಬಿಯಾ ಬದಲಿಸಿದ್ದು, ಇದು ಗಲ್ಫ್ ದೇಶಗಳ ಸಾಮಾಜಿಕ ಸ್ಥಿತಿಗತಿಯಲ್ಲಿ ಮಹತ್ವದ ರೂಪಾಂತರಕ್ಕೆ ಕಾರಣವಾಗುವ ಸಾಧ್ಯತೆಯಿದೆ. ಮಹಿಳೆ ವಿದೇಶಕ್ಕೆ ಪ್ರಯಾಣಿಸುವುದಿದ್ದರೆ ಪುರುಷರ ಅನುಮತಿ ಇರಲೇಬೇಕು ಎಂಬ ನಿಯಮವನ್ನು ಸೌದಿ ಅರೇಬಿಯಾ ತೆಗೆದುಹಾಕಿದೆ.
ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುವ ದೇಶದ ಯಾವುದೇ ವ್ಯಕ್ತಿಗೂ ಇನ್ನು ಪಾಸ್‌ಪೋರ್ಟ್ ನೀಡಲಾಗುತ್ತದೆ ಎಂದು ಸೌದಿ ಅರೇಬಿಯಾ ಸರಕಾರದ ಮುಖವಾಣಿ ಉಮ್ ಅಲ್ ಖುರಾದಲ್ಲಿ ಪ್ರಕಟಿಸಲಾಗಿದೆ. ಇದರಿಂದಾಗಿ 21 ವರ್ಷಕ್ಕಿಂತ ಮೇಲ್ಪಟ್ಟ ಯಾವುದೇ ಮಹಿಳೆಯೂ ಪಾಸ್‌ಪೋರ್ಟ್ ಪಡೆದು ವಿದೇಶಕ್ಕೆ ಪ್ರಯಾಣಿಸಬಹುದು.
ಈ ಹಿಂದೆ ವಿದೇಶಕ್ಕೆ ತೆರಳಲು ಪುರುಷರ ಅನುಮತಿ, ಅಂದರೆ ತಂದೆ, ಪತಿ ಅಥವಾ ಇತರ ಪುರುಷ ಸಂಬಂಧಿಗಳ ಅನುಮತಿ ಇರಬೇಕು ಎಂಬ ನಿಯಮವನ್ನು ಉಲ್ಲಂಘಿಸಿ ಹಲವರು ಪ್ರತಿಭಟನೆ ನಡೆಸಿದ್ದಾರೆ. ಈ ಬಗ್ಗೆ ಹಲವು ಸಂಘಟನೆಗಳೂ ಹೋರಾಟ ನಡೆಸಿವೆ. ಇದೇ ಹೋರಾಟದಲ್ಲಿ ಇನ್ನೂ ಲೌಜೈನ್ ಅಲ್ ಹತ್ಲೌಲ್ ಎಂಬ ಮಹಿಳೆ ಈಗಲೂ ಜೈಲುವಾಸ ಅನುಭವಿಸುತ್ತಿದ್ದಾರೆ.
ಕೆಲವು ವರ್ಷಗಳ ಹಿಂದಷ್ಟೇ ಮಹಿಳೆಯರಿಗೆ ವಾಹನ ಚಾಲನೆಗೆ ಅನುಮತಿ ನೀಡುವ ಮೂಲಕ ಸೌದಿ ಮಹತ್ವದ ಹೆಜ್ಜೆ ಇಟ್ಟಿತ್ತು. ಸೌದಿ ಅರೇಬಿಯಾವನ್ನು ಆಧುನಿಕತೆ ಕಡೆಗೆ ಕೊಂಡೊಯ್ಯುತ್ತಿರುವ ಭಾವಿ ದೊರೆ ಮೊಹಮ್ಮದ್ ಬಿನ್ ಸಲ್ಮಾನ್‌ರ ಈ ನಿರ್ಧಾರಗಳು ವಿಶ್ವ ಮಟ್ಟದಲ್ಲಿ ಮಹತ್ವದ್ದಾಗಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kannada Cinema: ‘ನಾ ನಿನ್ನ ಬಿಡಲಾರೆ’ ಟ್ರೇಲರ್ ಬಂತು: ನ.29ಕ್ಕೆ ಸಿನಿಮಾ ತೆರೆಗೆ
Sagara: ಕರವೇ ತಾಲೂಕು ಅಧ್ಯಕ್ಷರ ಮನೆ ಮೇಲೆ ಅರಣ್ಯಾಧಿಕಾರಿಗಳಿಂದ ದಾಳಿ; ಜಿಂಕೆ ಮಾಂಸ ವಶ
BGT Series: ವಿರಾಟ್ ಕೊಹ್ಲಿ ಜತೆ ವೈಯಕ್ತಿಕ ಪೈಪೋಟಿಗೆ ಇಳಿದಿದ್ದೆ: ಮಿಚೆಲ್ ಜಾನ್ಸನ್
Congress ಶಾಸಕರಿಗೆ ಬಿಜೆಪಿ ಆಫರ್; ರವಿ ಗಣಿಗ ಆರೋಪಕ್ಕೆ ಶಾಸಕ ತಮ್ಮಯ್ಯ ಸ್ಪಷ್ಟನೆ
BGT 2024: ಗಾಯಗೊಂಡ ಗಿಲ್: ಮೂರನೇ ಕ್ರಮಾಂಕದಲ್ಲಿ ಕನ್ನಡಿಗನಿಗೆ ಒಲಿದ ಅದೃಷ್ಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.