ಕಲ್ಲಡ್ಕದಲ್ಲಿ ಫ್ಲೆಓವರ್ ತೀರ್ಮಾನ; ಭೂಮೌಲ್ಯ ನಿಗದಿಗೆ ಆಕ್ಷೇಪ
ಬಿ.ಸಿ. ರೋಡ್ - ಅಡ್ಡಹೊಳೆ ಹೆದ್ದಾರಿ ಕಾಮಗಾರಿ
Team Udayavani, Aug 3, 2019, 11:27 AM IST
ಬಂಟ್ವಾಳ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-75ರ ಬಿ.ಸಿ. ರೋಡ್-ಅಡ್ಡಹೊಳೆ ನಡುವಣ ಹೆದ್ದಾರಿ ಅಗಲ ಕಾಮಗಾರಿ ಆರಂಭಗೊಂಡು ಸಾಕಷ್ಟು ಕಾಲ ಕಳೆದರೂ ಕಲ್ಲಡ್ಕ ಪೇಟೆಯಲ್ಲಿ ಏನು ವ್ಯವಸ್ಥೆ ಎಂಬುದು ಇದುವರೆಗೆ ಯಕ್ಷಪ್ರಶ್ನೆಯಾಗಿತ್ತು. ಈಗ ಅದಕ್ಕೆ ಉತ್ತರ ಸಿಕ್ಕಿದ್ದು, ಹೆದ್ದಾರಿ ಪ್ರಾಧಿಕಾರವು ಫ್ಲೆಓವರ್ ನಿರ್ಮಿಸುವ ನಿರ್ಧಾರಕ್ಕೆ ಬಂದಿದೆ.
ಆದರೆ ಈ ಹಿನ್ನೆಲೆಯಲ್ಲಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ)ವು ಹೆಚ್ಚುವರಿ ಜಮೀನನ್ನು ಸ್ವಾಧೀನ ಪಡಿಸಲು ಆದೇಶ ಹೊರಡಿಸಿ, ನಿಗದಿ ಪಡಿಸಿರುವ ಮೌಲ್ಯಕ್ಕೆ ಆಕ್ಷೇಪ ಕೇಳಿಬರುತ್ತಿದೆ. ಮೌಲ್ಯ ನಿಗದಿಯಲ್ಲಿ ತಾರತಮ್ಯ ಆಗಿದೆ ಎಂಬುದು ಪ್ರಮುಖ ಆರೋಪ. ಮೌಲ್ಯ ನಿಗದಿಗೆ ಮಾನದಂಡ ಏನು ಎಂಬುದನ್ನು ಬಹಿರಂಗ ಪಡಿಸಲು ಸ್ಥಳೀಯರು ಆಗ್ರಹಿಸಿದ್ದಾರೆ.
ಹೆಚ್ಚುವರಿ ಭೂಸ್ವಾಧೀನಕ್ಕೆ ನೋಟಿಸ್
ಹಾಸನ ಎನ್‌ಎಚ್‌ಎಐನ ಬಿ.ಸಿ. ರೋಡ್ ವಿಭಾಗದ ವಿಶೇಷ ಭೂ ಸ್ವಾಧೀನಾಧಿಕಾರಿ ಮತ್ತು ಸಕ್ಷಮ ಪ್ರಾಧಿಕಾರದಿಂದ ಹೆಚ್ಚುವರಿ ಭೂಸ್ವಾಧೀನ ಪ್ರಕ್ರಿಯೆಯ ಬಗ್ಗೆ ಕಳೆದ ಮಾರ್ಚ್‌ನಲ್ಲಿ ಸಂಬಂಧಪಟ್ಟ ಗ್ರಾ.ಪಂ.ಗಳ ನಾಮಫಲಕಗಳಲ್ಲಿ ಅಳವಡಿಸುವುದಕ್ಕೆ ಜಾಗದ ಸರ್ವೆ ನಂ.ಗಳನ್ನೊಳಗೊಂಡ ನೋಟಿಸ್ ನೀಡಲಾಗಿದೆ. ಜತೆಗೆ ಸರ್ವೆ ನಂ. ನಮೂದಿಸಿರುವ ಜಮೀನುಗಳಲ್ಲಿ ಕಟ್ಟಡ ರಚನೆಗೆ ಲೈಸನ್ಸ್ ನೀಡದಂತೆ ತಿಳಿಸಲಾಗಿದೆ. ಗೋಳ್ತಮಜಲು ಗ್ರಾ.ಪಂ.ನ ಒಟ್ಟು 6 ಮತ್ತು ಬಾಳ್ತಿಲ ಗ್ರಾ.ಪಂ.ನ 16 ಸರ್ವೆ ನಂ.ಗಳನ್ನು ಗುರುತಿಸಲಾಗಿದೆ.
ಅಂತಿಮ ಹಂತದಲ್ಲಿ ಡಿಪಿಆರ್
ಕಲ್ಲಡ್ಕ ಫ್ಲೆಓವರ್‌ನ ಡಿಪಿಆರ್ ಅಂತಿಮ ಹಂತದಲ್ಲಿದ್ದು, ಏಳೆಂಟು ತಿಂಗಳಲ್ಲಿ ಕಾಮಗಾರಿ ಆರಂಭಗೊಳ್ಳುವ ಸಾಧ್ಯತೆ ಇದೆ. ಹೆದ್ದಾರಿ ಕಾಮಗಾರಿ ಗುತ್ತಿಗೆಗೂ ಫ್ಲೆಓವರ್ ಕಾಮಗಾರಿಗೂ ಸಂಬಂಧವಿಲ್ಲ. ಇದನ್ನು ಬೇರೆಯೇ ನಿರ್ಮಾಣ ಸಂಸ್ಥೆ ನಿರ್ವಹಿಸಲಿದೆ. ಪ್ರಸ್ತುತ ಭೂಸ್ವಾಧೀನ ಪ್ರಕ್ರಿಯೆ ಪ್ರಾರಂಭಗೊಂಡಿದ್ದು, ಜಾಗದ ಮೌಲ್ಯವನ್ನು ನೀಡುವ ಪ್ರಕ್ರಿಯೆ ನಡೆಯುತ್ತಿದೆ. ಪ್ರಸ್ತುತ ಕಲ್ಲಡ್ಕದಲ್ಲಿ ಮಾತ್ರ; ಮುಂದೆ ಅಗತ್ಯವಿದ್ದರೆ ಇತರೆಡೆಯೂ ಫ್ಲೆಓವರ್ ನಿರ್ಮಿಸುವ ಸಾಧ್ಯತೆ ಇದೆ ಎಂದು ಹಾಸನ ಎನ್‌ಎಚ್‌ಎಐನ ಬಿ.ಸಿ. ರೋಡ್ ವಿಭಾಗದ ಮೂಲಗಳು ತಿಳಿಸಿವೆ.
ಫ್ಲೆಓವರ್ ಆರಂಭ- ಅಂತ್ಯ
ಫ್ಲೆಓವರ್‌ನ ಮಾರ್ಕಿಂಗ್ ಕಾರ್ಯ ಪೂರ್ಣಗೊಂಡಿದೆ. ಮಾಣಿ ಭಾಗದಿಂದ ಕಲ್ಲಡ್ಕಕ್ಕೆ ಆಗಮಿಸುವಾಗ ಕುದ್ರೆಬೆಟ್ಟಿನ ಸಮೀಪ ಫ್ಲೆ$çಓವರ್ ಆರಂಭ; ಕರಿಂಗಾನ ಕ್ರಾಸ್ ರಸ್ತೆಯ ಸಮೀಪ ಅಂತ್ಯ ಎಂದು ಮಾರ್ಕಿಂಗ್ ಮಾಡಲಾಗಿದೆ. ಅದಕ್ಕೂ ಸ್ವಲ್ಪ ದೂರದಲ್ಲಿ ಎಪ್ರೋಚ್ ರೋಡ್ ಸ್ಟಾರ್ಟ್-ಎಂಡ್ ಎಂದು ಮಾರ್ಕಿಂಗ್ ಮಾಡಲಾಗಿದೆ.
ಮರುಪರಿಶೀಲನೆ ಬಯಸಿದರೆ ಲಭ್ಯ
ಕೆಲವು ಕಟ್ಟಡ ಸರಕಾರಿ ಭೂಮಿಯಲ್ಲಿದ್ದಾಗ ಪರಿಹಾರ ಸಿಗುವುದಿಲ್ಲ. ಕಲ್ಲಡ್ಕದ 1.2 ಕಿ.ಮೀ.ಗೆ ಒಟ್ಟು 28 ಕೋ.ರೂ.ಗಳ ಪರಿಹಾರ ಮೌಲ್ಯವನ್ನು ನಿಗದಿ ಪಡಿಸಲಾಗಿದೆ. ಇದು ಗ್ರಾ.ಪಂ. ವ್ಯಾಪ್ತಿಯಲ್ಲಿರುವುದರಿಂದ ಮೌಲ್ಯ ಕಡಿಮೆ ಇರುತ್ತದೆ. ತೆಂಗು, ಅಡಿಕೆ ಮರಗಳು ಇದ್ದರೆ ಹೆಚ್ಚಿನ ಪರಿಹಾರ ಲಭಿಸಿ, ತೆರಿಗೆಯೂ ಇರುವುದಿಲ್ಲ. ಮೌಲ್ಯ ಪಡೆದುಕೊಂಡು ಮರುಪರಿಶೀಲನೆ ಬಯಸಿದರೆ ಮಾಡಿಕೊಡಲಾಗುತ್ತದೆ. ಸುಮಾರು 70 ಗ್ರಾಮಗಳಲ್ಲಿ ಇದೇ ಕೊನೆಯ ಗ್ರಾಮವಾಗಿದ್ದು, ಯಾವುದೇ ಗೊಂದಲಗಳಿಲ್ಲ ಎಂದು ಎನ್‌ಎಚ್‌ಎಐ ಮೂಲಗಳು ತಿಳಿಸಿವೆ.
ಮರುಮೌಲ್ಯಮಾಪನಕ್ಕೆ ಅವಕಾಶ
ಕಲ್ಲಡ್ಕದಲ್ಲಿ ಫ್ಲೆಓವರ್ ಬರುತ್ತಿರುವುದರಿಂದ 2.5 ಮೀ. ಭೂಸ್ವಾಧೀನ ಕಡಿಮೆಯಾಗಿ ಕೆಲವು ಕಟ್ಟಡಗಳು ಸೇಫ್ ಝೋನ್‌ಗೆ ಬಂದಿವೆ. ಹೀಗಾಗಿ ಭೂ ಸ್ವಾಧೀನದ ಮೌಲ್ಯದ ಮೊತ್ತ ಕಡಿಮೆಯಾಗಿದೆ. ಮೌಲ್ಯವನ್ನು ಎನ್‌ಎಚ್‌ಎಐಯ ತಾಂತ್ರಿಕ ವಿಭಾಗದ ಮೌಲ್ಯಮಾಪಕರು ನಿರ್ಧರಿಸುತ್ತಿದ್ದು, ವ್ಯತ್ಯಾಸಗಳಿದ್ದರೆ ಮೌಲ್ಯದ ಮರು ಪರಿಶೀಲನೆಗೆ ಅವಕಾಶವಿದೆ. ಅವರು ಹೆಚ್ಚುವರಿ ಪರಿಹಾರಕ್ಕೆ ಸೂಚಿಸಿದರೆ ನೀಡಲಾಗುತ್ತದೆ.
ಮಂಜುನಾಥ್, ವಿಶೇಷ ಭೂಸ್ವಾಧೀನಾಧಿಕಾರಿ ಮತ್ತು ಸಕ್ಷಮ ಪ್ರಾಧಿಕಾರ, ಎನ್‌ಎಚ್‌ಎಐ, ಹಾಸನ, ಬಿಸಿ. ರೋಡ್ ವಿಭಾಗ
ಕಿರಣ್ ಸರಪಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi: ಪಿಒಕೆ ಬಗ್ಗೆ ಕಾಂಗ್ರೆಸ್ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್
ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ
Vijay Hazare Trophy: ಮಯಾಂಕ್ ಅಗರ್ವಾಲ್ ಶತಕದಾಟ; ಪಂಜಾಬ್ ಕೈನಿಂದ ಜಯ ಕಸಿದ ಕರ್ನಾಟಕ
Borewell Tragedy: 4ನೇ ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯಾಚರಣೆ… ಬಾಲಕಿಯ ಸ್ಥಿತಿ ಹೇಗಿದೆ
Maulana Masood: 26/11 ದಾಳಿಯ ಮಾಸ್ಟರ್ ಮೈಂಡ್: ಭಯೋ*ತ್ಪಾದಕ ಮಸೂದ್ ಗೆ ಹೃದಯಾಘಾತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.