ಸ್ಟುಡಿಯೋದಲ್ಲಿ ಅಪ್ಪ-ಮಗ
ಡಬ್ಬಿಂಗ್ ಮಾಡಿದ ಗಣೇಶ್ ಪುತ್ರ ವಿಹಾನ್
Team Udayavani, Aug 4, 2019, 3:01 AM IST
ಬಹುತೇಕರಿಗೆ ಒಂದು ಆಸೆ ಇರುತ್ತದೆ. ಅದೇನೆಂದರೆ ತಮ್ಮ ಮಕ್ಕಳು ಕೂಡಾ ತಮ್ಮ ಕ್ಷೇತ್ರಕ್ಕೆ ಬರಬೇಕೆಂದು. ಅದರಲ್ಲೂ ಸಿನಿಮಾ ಮಂದಿಗೆ ತಮ್ಮ ಕುಟುಂಬದ ಯಾರಾದರೊಬ್ಬರು ಮುಂದೆ ಚಿತ್ರರಂಗದಲ್ಲಿರಬೇಕೆಂಬ ಆಸೆ ಇರುತ್ತದೆ. ಈಗಾಗಲೇ ಅನೇಕ ಹೀರೋಗಳು ತಮ್ಮ ಮಕ್ಕಳನ್ನು ಬಾಲನಟ-ನಟಿಯರಾಗಿ ಚಿತ್ರರಂಗಕ್ಕೆ ಪರಿಚಯಿಸಿ, ಭವಿಷ್ಯದ ಕನಸು ಕಂಡಿದ್ದಾರೆ. ನಟ ಗಣೇಶ್ ತಮ್ಮ ಪುತ್ರ ವಿಹಾನ್ನನ್ನು ಚಿತ್ರರಂಗಕ್ಕೆ ಪರಿಚಯಿಸಲು ಮುಂದಾಗಿದ್ದಾರೆ.
ವಿಹಾನ್ ಈಗಾಗಲೇ “ಗೀತಾ’ ಚಿತ್ರದ ದೃಶ್ಯವೊಂದರಲ್ಲಿ ನಟಿಸಿದ್ದು, ಈಗ ವಿಹಾನ್ ಡಬ್ಬಿಂಗ್ ಕೂಡಾ ಮಾಡಿದ್ದಾರೆ. ಅಪ್ಪನ ಜೊತೆಗೆ ವಿಹಾನ್ ಕೂಡಾ ಡಬ್ಬಿಂಗ್ ಮಾಡಿದ್ದಾರೆ. ಈ ಮೂಲಕ ಸಿನಿಮಾ ತರಬೇತಿ ಪಡೆಯುತ್ತಿದ್ದಾರೆ. ಮಗ ಡಬ್ಬಿಂಗ್ ಮಾಡುತ್ತಿರುವ ಫೋಟೋವನ್ನು ಗಣೇಶ್ ಟ್ವೀಟ್ ಮಾಡಿದ್ದಾರೆ. ಗಣೇಶ್ ನಾಯಕರಾಗಿರುವ “ಗೀತಾ’ ಚಿತ್ರದಲ್ಲಿ ಸಾನ್ವಿ, ಪ್ರಯಾಗ್ ಹಾಗೂ ಪಾರ್ವತಿ ನಾಯಕಿಯರಾಗಿದ್ದಾರೆ. ಚಿತ್ರ ಸೆಪ್ಟೆಂಬರ್ನಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sathish Ninasam: ಅಶೋಕನಿಗೆ ನೀನಾಸಂ ಸತೀಶ್ ಸಾಥ್
Sandalwood: ಉಪ್ಪಿ ʼಯುಐʼ ಓಟಿಟಿ ರಿಲೀಸ್ ಯಾವಾಗ?; ಚಿತ್ರತಂಡದಿಂದ ಸಿಕ್ತು ಸ್ಪಷ್ಟನೆ
Sandalwood: ಸ್ಪಾನ್ಸರ್ಸ್ ಇದಿದ್ರೆ ನಾನ್ಯಾಕೆ 12 ವರ್ಷ ಕಷ್ಟಪಡಬೇಕಿತ್ತು: ರಚಿತಾ ರಾಮ್
ಒಳ್ಳೆಯ ಸ್ಕ್ರಿಪ್ಟ್ ಗಾಗಿ ಎದುರು ನೋಡುತ್ತಿದ್ದೇನೆ – ಕಂಬ್ಯಾಕ್ ಬಗ್ಗೆ ರಮ್ಯಾ ಮಾತು
Toxic Movie: ಫ್ಯಾನ್ಸ್ ನಶೆಯೇರಿಸಿದ ಯಶ್; ಹಾಲಿವುಡ್ ರೇಂಜ್ನಲ್ಲಿ ಮಿಂಚಿದ ರಾಕಿಭಾಯ್.!
MUST WATCH
ಹೊಸ ಸೇರ್ಪಡೆ
Naxal Package: “ಮೊದಲೇ ಪ್ಯಾಕೇಜ್ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ
Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!
Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ
Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!
Mangaluru: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯಿಂದ ಕಡತ ತಿದ್ದುಪಡಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.