ನೀರಿನ ಮಿತಬಳಕೆ ಟ್ಯಾಪ್‌, ಸಾಧನಗಳ ಮಾದರಿ ಮಂಗಳೂರಿಗೂ ಅಗತ್ಯ…


Team Udayavani, Aug 4, 2019, 5:21 AM IST

x-24

ನೀರಿನ ಮಿತಿ ಮೀರಿದ ಪೋಲು ಹಾಗೂ ಹೆಚ್ಚುತ್ತಿರುವ ಬೇಡಿಕೆಯ ಹಿನ್ನೆಲೆಯಲ್ಲಿ ಜಲಸಂರಕ್ಷಣೆಯ ಜತೆಗೆ ಮಿತ ಬಳಕೆಯೂ ಪ್ರಮುಖವಾಗಿದೆ. ವರ್ಷದಿಂದ ವರ್ಷಕ್ಕೆ ಜಲಕ್ಷಾಮ ಹೆಚ್ಚುತಿದೆ. ಇನ್ನೊಂದೆಡೆ ಜನಸಂಖ್ಯೆ ವೃದ್ಧಿಯಾಗುತ್ತಿದೆ. ನೀರಿನ ಲಭ್ಯತೆ ಕಡಿಮೆಯಾಗುತ್ತಿದೆ. ಮಳೆಕೊಯ್ಲ, ನೀರು ಇಂಗಿಸುವಿಕೆ, ತ್ಯಾಜ್ಯನೀರು ಸಂಸ್ಕರಿಸಿ ಮರುಬಳಕೆ, ಸಮುದ್ರ ನೀರು ಸಂಸ್ಕರಿಸಿ ಬಳಕೆ ಸೇರಿದಂತೆ ನೀರಿನ ಸಮಸ್ಯೆ ಪರಿಹಾರಕ್ಕೆ ಸರಕಾರ, ಸಾರ್ವಜನಿಕರಿಂದ ಉಪಕ್ರಮಗಳು ನಡೆಯುತ್ತಿವೆ. ಇದೆಲ್ಲರ ಜತೆಗೆ ನೀರಿನ ಮಿತಬಳಕೆಯ ಮೂಲಕ ಉಳಿತಾಯಕ್ಕೂ ಹೆಚ್ಚು ಒತ್ತು ನೀಡಬೇಕು.

ನೀರಿನ ಪೋಲು ನಿಯಂತ್ರಣ ಹಾಗೂ ಹೆಚ್ಚುತ್ತಿರುವ ನೀರಿನ ಬೇಡಿಕೆಯನ್ನು ಪೂರೈಸುವ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಕೆಲವು ಪ್ರಾಯೋಗಿಕ ಕ್ರಮಗಳನ್ನು ಅನುಷ್ಠಾನಕ್ಕೆ ತರಲು ರಾಜ್ಯ ಸರಕಾರ ಚಿಂತನೆ ನಡೆಸಿದೆ. ಮುಖ್ಯವಾಗಿ ಕಡಿಮೆ ನೀರು ಹೊರಹಾಕುವ ಟ್ಯಾಪ್‌ಗ್ಳ ಬಳಕೆಗೆ ಉತ್ತೇಜನ ನೀಡಲು ಕಾರ್ಯಯೋಜನೆ ರೂಪಿಸುತ್ತಿದ್ದು ಆರಂಭಿಕ ಹಂತದಲ್ಲಿ ಸರಕಾರಿ ಕಚೇರಿಗಳಲ್ಲಿ ಸ್ಮಾರ್ಟ್‌ ಟ್ಯಾಪ್‌ಗ್ಳು ಸೇರಿದಂತೆ ಕಡಿಮೆ ನೀರು ಹೊರಹಾಕುವ ಟ್ಯಾಪ್‌ಗ್ಳನ್ನು ಪ್ರಾಯೋಗಿಕವಾಗಿ ಅಳವಡಿಸಲು ಸರಕಾರ ನಿರ್ಧರಿಸಿದೆ. ಕುಡಿಯುವ ನೀರಿನ ಕೊರತೆಯನ್ನು ಎದುರಿಸುತ್ತಿರುವ ಮಂಗಳೂರಿನಲ್ಲೂ ಈ ಮಾದರಿಯ ಕ್ರಮಗಳನ್ನು ಕೈಕೊಳ್ಳುವ ನಿಟ್ಟಿನಲ್ಲಿ ಚಿಂತನೆಗಳು ನಡೆಯಬೇಕಾಗಿದೆ.

ನೀರಿನ ಮಿತಿ ಮೀರಿದ ಪೋಲು ಹಾಗೂ ಹೆಚ್ಚುತ್ತಿರುವ ಬೇಡಿಕೆಯ ಹಿನ್ನೆಲೆಯಲ್ಲಿ ಜಲಸಂರಕ್ಷಣೆಯ ಜತೆಗೆ ಮಿತ ಬಳಕೆಯೂ ಪ್ರಮುಖವಾಗಿದೆ. ವರ್ಷದಿಂದ ವರ್ಷಕ್ಕೆ ಜಲಕ್ಷಾಮ ಹೆಚ್ಚುತಿದೆ. ಇನ್ನೊಂದೆಡೆ ಜನಸಂಖ್ಯೆ ವೃದ್ಧಿಯಾಗುತ್ತಿದೆ. ಉದ್ದಿಮೆಗಳು ಜಾಸ್ತಿಯಾಗುತ್ತಿದೆ. ನೀರಿನ ಲಭ್ಯತೆ ಕಡಿಮೆಯಾಗುತ್ತಿವೆ. ಮಳೆಕೊಯ್ಲ, ನೀರು ಇಂಗಿಸುವಿಕೆ, ತ್ಯಾಜ್ಯನೀರು ಸಂಸ್ಕರಿಸಿ ಮರುಬಳಕೆ, ಸಮುದ್ರ ನೀರು ಸಂಸ್ಕರಿಸಿ ಬಳಕೆ ಸೇರಿದಂತೆ ನೀರಿನ ಸಮಸ್ಯೆ ಪರಿಹಾರಕ್ಕೆ ಸರಕಾರ, ಸಾರ್ವಜನಿಕರಿಂದ ಉಪಕ್ರಮಗಳು ನಡೆಯುತ್ತಿವೆ. ಇದೆಲ್ಲರ ಜತೆಗೆ ನೀರಿನ ಮಿತಬಳಕೆಯ ಮೂಲಕ ಉಳಿತಾಯಕ್ಕೂ ಹೆಚ್ಚು ಒತ್ತು ನೀಡುವುದು ಇಂದಿನ ಆವಶ್ಯಕತೆಯಾಗಿದೆ.

ಮಿತ ಟ್ಯಾಪ್‌ಗ್ಳ ಬಳಕೆಗೆ ಪ್ರೇರೆಪಣೆ
ಕಡಿಮೆ ನೀರು ಚೆಲ್ಲುವ ಟ್ಯಾಪ್‌ಗ್ಳ ಬಳಕೆಗೆ ಪ್ರರೇಪಿಸುವ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಪ್ರಾಯೋಗಿಕವಾಗಿ ಕ್ರಮಗಳನ್ನು ಕೈಗೊಳ್ಳಲು ಸರಕಾರ ನಿರ್ಧರಿಸಿದೆ. ಬೆಂಗಳೂರಿನ ಜಲಮಂಡಳಿ ಹಾಗೂ ಲೋಕೋಪಯೋಗಿ ಇಲಾಖೆಗಳ ಮೂಲಕ ಇದನ್ನು ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ. ಈ ನಿಟ್ಟಿನಲ್ಲಿ ಸ್ಮಾರ್ಟ್‌ ಟ್ಯಾಪ್‌ ಸೇರಿದಂತೆ ಕಡಿಮೆ ಪ್ರಮಾಣದಲ್ಲಿ ನೀರು ಹೊರಚೆಲ್ಲುವ ಟ್ಯಾಪ್‌ಗ್ಳ ಅಳವಡಿಕೆಯನ್ನು ಉತ್ತೇಜಿಸಲು ಸರಕಾರ ಚಿಂತನೆ ನಡೆಸಿದ್ದು ಆರಂಭದಲ್ಲಿ ಪ್ರಾಯೋಗಿಕವಾಗಿ ಸರಕಾರಿ ಕಚೇರಿಗಳಲ್ಲಿ ಇದನ್ನು ಅನುಷ್ಠಾನಕ್ಕೆ ತರಲು ನಿರ್ಧರಿಸಿದೆ. ಈ ರೀತಿಯ ಟ್ಯಾಪ್‌ಗ್ಳನ್ನು ಬಳಸಿದರೆ ಸರಕಾರಿ ಕಚೇರಿಗಳಲ್ಲಿ ಉಪಯೋಗಿಸುವ ನೀರಿನಲ್ಲಿ ಶೇ. 30 ರಿಂದ 40 ರಷ್ಟು ನೀರು ಉಳಿತಾಯ ಮಾಡಲು ಸಾಧ್ಯ ಎಂಬುದಾಗಿ ಜಲಮಂಡಳಿ ಅಧಿಕಾರಿಗಳು ಅಂದಾಜಿಸಿದ್ದಾರೆ. ಯೋಜನೆಯನ್ನು ಸರಕಾರಿ ಕಚೇರಿಗಳಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸುವ ಬಗ್ಗೆ ಲೋಕೋಪಯೋಗಿ ಇಲಾಖೆಯೊಂದಿಗೆ ಕೂಡ ಚರ್ಚೆ ನಡೆದಿದೆ.

ಪ್ರಸ್ತುತ ನಾವು ಬಳಕೆ ಮಾಡುವ ಸಾಮಾನ್ಯ ನಳ್ಳಿಗಳಲ್ಲಿ ಅಗತ್ಯಕ್ಕಿಂತ ಹೆಚ್ಚು ನೀರು ಹೊರಬರುತ್ತದೆ. ಸ್ಮಾರ್ಟ್‌ ಟ್ಯಾಪ್‌ಗ್ಳು ಅಥವಾ ಅಗತ್ಯಕ್ಕೆ ತಕ್ಕಷ್ಟೆ ನೀರು ಹೊರಚೆಲ್ಲುವ ಅತ್ಯಾಧುನಿಕ ಟ್ಯಾಪ್‌ಗ್ಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಇವುಗಳನ್ನು ಹೆಚ್ಚು ಬಳಕೆಗೆ ತರುವ ಬಗ್ಗೆ ಲೋಕೋಪಯೋಗಿ ಇಲಾಖೆಯಲ್ಲಿ ಚರ್ಚೆ ನಡೆಯುತ್ತಿರುವ ಜತೆಯಲ್ಲೇ ಖಾಸಗಿ ಕಟ್ಟಡ ವಸತಿ ಸಮುಚ್ಚಯಗಳಲ್ಲಿ ಬಳಕೆಗೆ ಪ್ರೇರೆಪಣೆ ನೀಡುವ ನಿಟ್ಟಿನಲ್ಲಿ ಬೆಂಗಳೂರಿನ ಜಲಮಂಡಳಿ ಕಾರ್ಯೋನ್ಮುಖವಾಗಿದೆ. ವಸತಿ ಸಮುಚ್ಚಯಗಳ ನಿರ್ಮಾಣಗಾರರು, ವಸತಿ ಸಮುಚ್ಚಯಗಳ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳಿಗೆ ಕಾರ್ಯಾಗಾರ ನಡೆಸಿ ಮಿತಬಳಕೆ ಟ್ಯಾಪ್‌ಗ್ಳ ಉಪಯೋಗದ ಮಹತ್ವ ಹಾಗೂ ಆವಶ್ಯಕತೆಯ ಬಗ್ಗೆ ಮನವರಿಕೆ ಮಾಡಲು ಬೆಂಗಳೂರಿನ ಜಲಮಂಡಳಿ ನಿರ್ಧರಿಸಿದೆ.

ಸರಕಾರದಿಂದ ಸಹಾಯಧನ ಇರಲಿ
ವಿದ್ಯುತ್‌ ಉಳಿತಾಯದ ನಿಟ್ಟಿನಲ್ಲಿ ಈಗಾಗಲೇ ಕೇಂದ್ರ ಸರಕಾರ ಎಲ್‌ಇಡಿ ವಿದ್ಯುತ್‌ದೀಪಗಳನ್ನು ಅಳವಡಿಸಲು ಸಹಾಯಧನ ಯೋಜನೆ ಜಾರಿಗೆ ತಂದಿದೆ. ಪ್ರತಿಯೊಂದು ಕುಟುಂಬಕ್ಕೆ ನಿರ್ದಿಷ್ಟ ಪ್ರಮಾಣದಲ್ಲಿ ಎಲ್‌ಇಡಿ ಬಲ್ಬ್ಗಳನ್ನು, ಟ್ಯೂಬ್‌ ಲೈಟ್‌ಗಳನ್ನು ಸಹಾಯಧನದಲ್ಲಿ ನೀಡಲಾಗುತ್ತಿದೆ. ಇದೇ ರೀತಿಯಾಗಿ ನೀರಿನ ಮಿತಬಳಕೆಗೆ ಪೂರಕವಾದ ಟ್ಯಾಪ್‌ಗ್ಳ ಅಳವಡಿಕೆಗೆ ಜನರನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸರಕಾರದಿಂದ ಸಹಾಯಧನ ನೀಡಬೇಕು ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ. ಸ್ಮಾರ್ಟ್‌ ಟ್ಯಾಪ್‌ಗ್ಳು ಸೇರಿದಂತೆ ಅತ್ಯಾಧುನಿಕ ಟ್ಯಾಪ್‌ಗ್ಳು ದುಬಾರಿಯಾಗಿರುತ್ತದೆ. ಅದುದರಿಂದ ಇವುಗಳನ್ನು ಅಳವಡಿಸಲು ಜನರು ಮುಂದೆ ಬರುವುದಿಲ್ಲ. ಸಹಾಯಧನ ಲಭ್ಯವಾದರೆ ಜನರನ್ನು ಇದರತ್ತ ಆಕರ್ಷಿಸಬಹುದಾಗಿದೆ. ಕಡಿಮೆ ನೀರು ಹೊರಸೂಸುವ ಟ್ಯಾಪ್‌ಗ್ಳನ್ನು ಅಳವಡಿಸಲು ಉತ್ತೇಜಿಸಲು ಎಲ್‌ಇ ಡಿ ಬಲ್ಬ್ಗಳ ಮಾದರಿಯಲ್ಲೇ ಸಹಾಯಧನ ಯೋಜನೆಯನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳು ರೂಪಿಸಬೇಕು. ಕಡಿಮೆ ನೀರು ಹೊರಸೂಸುವ ಟ್ಯಾಪ್‌ಗ್ಳನ್ನು ಬಳಸುವುದರಿಂದ ಆಗುವ ಲಾಭಗಳು ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲೂ ಕಾರ್ಯಕ್ರಮಗಳು ನಡೆಯಬೇಕು.

ತ್ಯಾಜ್ಯ ನೀರು ಸಂಸ್ಕರಣೆ
ಮಳೆ ನೀರನ್ನು ಸಂರಕ್ಷಿಸುವುದರ ಜತೆಗೆ ತ್ಯಾಜ್ಯ ನೀರು ಸಂಸ್ಕರಣೆ ವ್ಯವಸ್ಥೆಯನ್ನು ನಡೆಸುವುದು ಕೂಡ ನೀರು ಉಳಿಸಲು ಪೂರಕವಾಗಿದೆ. ಈಗಾಗಲೇ ನಗರಗಳಲ್ಲಿ ತ್ಯಾಜ್ಯ ನೀರು ಸಂಸ್ಕರಿಸಿ ಬಳಕೆ ಮಾಡಲಾಗುತ್ತಿದ್ದರೂ ಪೂರ್ಣ ಪ್ರಮಾಣದಲ್ಲಿ ಆಗುತ್ತಿಲ್ಲ. ಅಪಾರ್ಟ್‌ಮೆಂಟ್‌ಗಳಲ್ಲಿ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳು ಕಡ್ಡಾಯವಾಗಿ ಸ್ಥಾಪನೆಯಾಗಬೇಕು ಎಂಬ ನಿಯಮ ಇದ್ದರೂ ಪಾಲನೆಯಾಗುತ್ತಿಲ್ಲ. ಈ ನೀರನ್ನು ಇತರ ಬಳಕೆಗೆ ಉಪಯೋಗಿಸುವುದರಿಂದ ನೀರಿನ ಸಂರಕ್ಷಣೆಯಾಗುತ್ತದೆ. ಮಂಗಳೂರಿನಲ್ಲಿ ತ್ಯಾಜ್ಯನೀರನ್ನು ಸಂಸ್ಕರಿಸಿ ಎಂಆರ್‌ಪಿಎಲ್‌, ಎಸ್‌ಇಝಡ್‌ಗೆ ಬಳಸಲಾಗುತ್ತಿದೆ. ಇದೀಗ ಮನೆಯಲ್ಲಿ ಫ್ಲಶ್‌ ನೀರನ್ನು ಶುದ್ಧೀಕರಿಸಿ ಮರುಬಳಕೆ ಮಾಡುವ ತಂತ್ರಜ್ಞಾನವೂ ಬಂದಿದೆ.

  ಕೇಶವ ಕುಂದರ್‌

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

1-aaaaaaa

Karkala: ಕಾಂಗ್ರೆಸ್ ನಾಯಕ ಡಿ. ಅರ್.‌ರಾಜು ನಿಧನ

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

1-chuii

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.