ಕತ್ತಲಲ್ಲಿದ್ದ ಬದುಕಿಗೆ ಸೌರ ಬೆಳಕಿನ ಸೌಭಾಗ್ಯ
Team Udayavani, Aug 3, 2019, 5:00 AM IST
ಸುಳ್ಯ: ವಿದ್ಯುತ್ ಸಂಪರ್ಕ ಕಾಣದ ಹಲವು ಮನೆಗಳು ಆ ಗ್ರಾಮದಲ್ಲಿದ್ದವು . ಗ್ರಾಮದ ಕೆಲ ಮನೆಗಳಿಗೆ ದಶಕಗಳಿಂದ ವಿದ್ಯುತ್ ಸಂಪರ್ಕ ಕಲ್ಪಿಸಲು ಸಾಧ್ಯವಾಗಿರಲಿಲ್ಲ. ಕಾರಣ ವಿದ್ಯುತ್ ಮಾರ್ಗ ಹಾದು ಹೋಗುವಲ್ಲಿ ಕಾನೂನು ತೊಡಕಿತ್ತು. ಆದರೀಗ ಅಂತಹ ಮನೆಗಳಲ್ಲಿ ಬೆಳಕು ಬಂದಿದೆ. ಅದಕ್ಕೆ ಕಾರಣವಾದದ್ದು ಕೇಂದ್ರ ಸರಕಾರದ ಸೌಭಾಗ್ಯ ಯೋಜನೆ.
ಸುಳ್ಯ ತಾಲೂಕಿನ ಗಡಿ ಗ್ರಾಮಗಳ ಮನೆಗಳಿಗೆ ಸೋಲಾರ್ ದೀಪವನ್ನು ಅಳವಡಿಸಿದ ಮೆಸ್ಕಾಂ ಆ ಪ್ರದೇಶದ ಹತ್ತಾರು ಕುಟುಂಬಗಳ ಬಾಳಿಗೆ ಸೌಭಾಗ್ಯದ ಬೆಳಕು ಹರಿಸಿದೆ.
ಸೌಭಾಗ್ಯ ಒದಗಿತು
ಆಲೆಟ್ಟಿ ಗ್ರಾಮದ ಮಾಣಿಮರ್ಧು ಬಟ್ಟಂಗಾಯ ದೇವಕಜೆ ಚೆರ್ನೂರು ಮತ್ತು ಕೊಚ್ಚಿಯ ಗ್ರಾಮಗಳಿಗೆ ಕೇಂದ್ರ ಸರಕಾರದ ಸೌಭಾಗ್ಯ ಯೋಜನೆಯಡಿ ಸೌರ ವಿದ್ಯುತ್ ಒದಗಿಸಲಾಗಿದೆ. ಈ ಪ್ರದೇಶದ ಹಲವು ವರ್ಷಗಳ ವಿದ್ಯುತ್ ಬೇಡಿಕೆಗೆ ನಿಗಮ ಸ್ಪಂದಿಸಿದೆ.
ಜಿಲ್ಲೆಯ ಅನ್ಯ ತಾಲೂಕುಗಳಲ್ಲಿ ಈ ಯೋಜನೆ ಅನುಷ್ಠಾನವಾಗಿದ್ದರೂ ಕಾಡು ಆವೃತ ಸುಳ್ಯದ ಮಟ್ಟಿಗೆ ಇದು ಅತ್ಯಂತ ಮಹತ್ವದ್ದು. ಆಲೆಟ್ಟಿ ಗ್ರಾಮದ ಮನೆಗಳಿಗೆ ಈ ಸೌಭಾಗ್ಯ ಒದಗಿ ಬಂದಿದೆ. ಆಲೆಟ್ಟಿ ಗ್ರಾಮದ ಬಟ್ಟಂಗಾಯದಲ್ಲಿ 6, ಮಾಣಿಮರ್ಧುವಿನಲ್ಲಿ 6. ಚೆರ್ನೂರುವಿನಲ್ಲಿ 3, ದೇವಕಜೆಯಲ್ಲಿ 1 ಮತ್ತು ಕೊಚ್ಚಿಯಲ್ಲಿ 4 ಸೇರಿ ಒಟ್ಟು 20 ಮನೆಗಳಿಗೆ ಸೋಲಾರ್ ದೀಪದ ವ್ಯವಸ್ಥೆ ಅಳವಡಿಸಲಾಗಿದೆ.
ವಂಚಿತರಾಗಿದ್ದರು
ವಿದ್ಯುತ್ ಸಂಪರ್ಕ ಒದಗಿಸಿ ಬೆಳಕು ನೀಡುವ ಹಲವಾರು ಸರಕಾರದ ಯೋಜನೆಗಳು ಜಾರಿಯಲ್ಲಿವೆ. ದೀನ್‌ದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆ ಗ್ರಾಮೀಣ ಭಾಗದಲ್ಲಿ ಅಸ್ತಿತ್ವದಲ್ಲಿದೆ. ನಗರ ಪ್ರದೇಶದಲ್ಲಿ ವಿತರಣ ಜಾಲದ ಅಭಿವೃದ್ಧಿಗೆ ಐಪಿಡಿಎಸ್ ಯೋಜನೆ ಇದೆ. ಲೈನ್ ಎಳೆದು ವಿದ್ಯುತ್ ಸಂಪರ್ಕ ಕಲ್ಪಿಸಲು ಸಾಧ್ಯವಾಗದ ಕಡೆಗಳಲ್ಲಿ ಸೋಲಾರ್ ವಿದ್ಯುತ್ ಒದಗಿಸುವ ಸೌಭಾಗ್ಯ ಯೋಜನೆ ಹಲವರ ಬದುಕಿಗೆ ಬೆಳಕಾಗಿದೆ. ಮೀಸಲು ಅರಣ್ಯದೊಳಗೆ ವಿದ್ಯುತ್ ಮಾರ್ಗ ಸಾಧ್ಯವಿಲ್ಲದೆ ಈ ಕುಟುಂಬಗಳಿಗೆ ವಿದ್ಯುತ್ ಸರಬರಾಜು ದೂರದ ಮಾತಾಗಿತ್ತು. ಹೀಗಾಗಿ 20 ಕುಟುಂಬಗಳು ವಿದ್ಯುತ್ ಸೌಕರ್ಯದಿಂದ ವಂಚಿತವಾಗಿದ್ದವು.
8.16 ಲಕ್ಷ ರೂ. ವೆಚ್ಚ
ಸೌಭಾಗ್ಯ ಯೋಜನೆಯಲ್ಲಿ ಪ್ರತಿ ಮನೆಗೆ 40,800 ರೂ. ಮೊತ್ತದ ಸೋಲಾರ್ ಉಪಕರಣಗಳನ್ನು ಉಚಿತವಾಗಿ ನೀಡಲಾಗುತ್ತದೆ. ಎರಡು ಸೋಲಾರ್ ಪ್ಯಾನಲ್, 75 ಎಎಚ್ ಸಾಮರ್ಥ್ಯದ ಬ್ಯಾಟರಿ, ಏಳು ವ್ಯಾಟ್ಸ್‌ನ ಎರಡು ಬಲ್ಬ್ಗಳು, 20 ವ್ಯಾಟ್ಸ್ ಡಿ.ಸಿ. ಫ್ಯಾನ್ ಅಳವಡಿಸಲಾಗುತ್ತದೆ. ಸೋಲಾರ್ ಚಾರ್ಜರ್, ಕಂಟ್ರೋಲರ್, ಜಂಕ್ಷನ್ ಬಾಕ್ಸ್, ವೈರಿಂಗ್ ಉಪಕರಣ ಹೀಗೆ ಎಲ್ಲವನ್ನೂ ಉಚಿತವಾಗಿ ಅಳವಡಿಸಲಾಗುತ್ತದೆ. 20 ಮನೆಗಳಿಗೆ 8.16 ಲಕ್ಷ ರೂ. ವೆಚ್ಚದಲ್ಲಿ ವ್ಯವಸ್ಥೆ ಅಳವಡಿಸಲಾಗಿದೆ. ಪ್ರಸ್ತುತ ಈ ಸ್ಕೀಂ ಮುಗಿದಿದೆ.ಗ್ರಾ. ಪಂ. ಸಮೀಕ್ಷೆ ಪ್ರಕಾರ ಸುಳ್ಯ ತಾಲೂಕಿನಲ್ಲಿ ಗ್ರಾಮೀಣ ಪ್ರದೇಶಗಳ 486 ಮನೆಗಳಿಗೆ ದೀನದಯಾಳ್ ಉಪಾಧ್ಯಾಯ ಯೋಜನೆಯಲ್ಲಿ ಸಂಪರ್ಕ ನೀಡಲಾಗಿದೆ. ಗ್ರಾಮ ಜ್ಯೋತಿ ಯೋಜನೆ ಮೂಲಕವು ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಇದೀಗ ಸೌಭಾಗ್ಯ ಯೋಜನೆಯಲ್ಲಿ ಸೌರ ವಿದ್ಯುತ್ ಒದಗಿಸಲಾಗಿದೆ.
ಕಾನೂನು ತೊಡಕಿತ್ತು
ಆಲೆಟ್ಟಿಯ 20 ಕುಟುಂಬಗಳಿಗೆ ದೀನ್‌ದಯಾಳ್ ಯೋಜನೆಯಲ್ಲಿ ವಿದ್ಯುತ್ ಒದಗಿಸಲು ಕಾನೂನು ತೊಡಕಿತ್ತು. ಅದೇ ಹೊತ್ತಿಗೆ ಸೌಭಾಗ್ಯ ಯೋಜನೆ ಬಂತು. ಈ ಯೋಜನೆಯಲ್ಲಿ ಆ ಮನೆಗಳಿಗೆ ಸಂಪರ್ಕ ಒದಗಿಸಿದ್ದೇವೆ. ಸದ್ಯ ಸೌಭಾಗ್ಯ ಯೋಜನೆ ಸ್ಕೀಂ ಮುಗಿದಿದೆ. ವಿದ್ಯುತ್ ಸಂಪರ್ಕ ಆಗದ ಮನೆಗಳ ಪಟ್ಟಿ ಪಂಚಾಯತ್‌ಗಳಿಂದ ಬಂದರೆ ಮುಂದೆ ಇಂತಹ ಯೋಜನೆಗಳು ಬಂದಾಗ ಅದರಲ್ಲಿ ಸೇರಿಸಿ ನೀಡುತ್ತೇವೆ.
– ನರಸಿಂಹ, ಎಕ್ಸಿಕ್ಯೂಟಿವ್ ಎಂಜಿನಿಯರ್, ಪುತ್ತೂರು ಉಪ ವಿಭಾಗ
ಬಾಲಕೃಷ್ಣ ಭೀಮಗುಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Seema Haider; 4 ಮಕ್ಕಳೊಂದಿಗೆ ಭಾರತಕ್ಕೆ ಬಂದಿದ್ದ ಸೀಮಾ ಈಗ ಗರ್ಭಿಣಿ!!
Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು
Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
Drama ಬಿಟ್ಟು ಅಂಬೇಡ್ಕರ್ ಅವರಿಗೆ ನಿರಂತರ ಅವಮಾನ ಮಾಡಿದ್ದಕ್ಕೆ ಕಾಂಗ್ರೆಸ್ ಕ್ಷಮೆ ಕೇಳಲಿ
You Tuber: ನೀಲಿ ಚಿತ್ರತಾರೆ ಆಗಲು ಪಿಎಚ್ ಡಿ ಕಲಿಕೆಯನ್ನೇ ತೊರೆದ ಖ್ಯಾತ ಯೂಟ್ಯೂಬರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.