ದೋಣಿ ಅಪಘಾತ: ಮೀನುಗಾರರ ರಕ್ಷಣೆ
Team Udayavani, Aug 4, 2019, 9:33 AM IST
ಮಂಗಳೂರು: ತಣ್ಣೀರು ಬಾವಿ ಬೀಚ್ ಬಳಿ ಮೀನುಗಾರಿಕೆ ನಡೆಸುತ್ತಿದ್ದ ದೋಣಿಯೊಂದು ಶನಿವಾರ ಅಲೆಗಳ ಅಬ್ಬರಕ್ಕೆ ಸಿಲುಕಿ ಅಪಘಾತಕ್ಕೀಡಾಗಿದ್ದು, ಅದರಲ್ಲಿದ್ದ ಎಲ್ಲ 9 ಮಂದಿ ಮೀನುಗಾರರನ್ನು ಇನ್ನೊಂದು ಮೀನುಗಾರಿಕಾ ದೋಣಿಯವರು ರಕ್ಷಿಸಿದ್ದಾರೆ.
ಶಬೀರ್, ನಾಸಿರ್, ರಿಯಾಜ್, ಆಶಿಕ್, ಲಕ್ಷ್ಮಣ್, ಎಲ್.ಆರ್.ರಾವ್, ಕೃಷ್ಣ, ಗುರು ಮತ್ತು ಪವ ನ್ ಈ ಬೋಟ್‌ನಲ್ಲಿದ್ದರು.
ಬೆಳಗ್ಗೆ 7.45ಕ್ಕೆ ಸಸಿಹಿತ್ಲು ಶಬೀರ್ ಮಾಲಕತ್ವದ “ಶಬೀರ್’ ಎಂಬ ಹೆಸರಿನ ದೋಣಿಯು ತಣ್ಣೀರುಬಾವಿ ಬೀಚ್ ಬಳಿ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿತ್ತು. ಈ ಸಂದರ್ಭ ಬೀಸಿದ ಗಾಳಿ ಮತ್ತು ಸಮುದ್ರಗಳ ಅಲೆಗಳ ಅಬ್ಬರಕ್ಕೆ ಸಿಲುಕಿ ದೋಣಿ ಮಗುಚಿ ಬಿದ್ದು ಅದರಲ್ಲಿದ್ದ 9 ಮಂದಿ ನೀರಿಗೆ ಬಿದ್ದು ಅಪಾಯದಲ್ಲಿದ್ದರು. ಕೂಡಲೇ ಸಮೀಪದಲ್ಲಿದ್ದ “ಸುವರ್ಣ ಕುಸುಮ’ ಹಾಗೂ “ಶ್ರೀರಾಮ’ ದೋಣಿಯವರು ಅವರನ್ನು ರಕ್ಷಿಸಿದರು. ಮುಳುಗಿದ ದೋಣಿಯನ್ನು ಬಳಿಕ ಸ್ಥಳೀಯರ ಸಹಕಾರದಿಂದ ಸಮುದ್ರದ ದಡಕ್ಕೆ ಎಳೆದು ತರಲಾಯಿತು. ದೋಣಿಯಲ್ಲಿದ್ದ ಮೀನುಗಾರರು ಸುರಕ್ಷಿತರಾಗಿದ್ದಾರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.