ಕೊನೆಗಾಣದ ಕಡಲ ಮಕ್ಕಳ ಸಂಕಟ..
•ಕಾಸರಕೋಡ-ರಾಮನಗರ ಭಾಗದಲ್ಲಿ ಕೈಗೊಳ್ಳಲೇಬೇಕು ತುರ್ತು ಕಾರ್ಯ
Team Udayavani, Aug 4, 2019, 12:32 PM IST
ಹೊನ್ನಾವರ: ಕಾಸರಕೋಡ ರಾಮನಗರ ಪ್ರದೇಶಗಳಲ್ಲಿ ಸಮುದ್ರ ಕೊರೆತ ಉಂಟಾಗಿರುವುದು.
ಹೊನ್ನಾವರ: ಮೂರು ದಶಕಗಳಿಂದ ತಾಲೂಕಿನ ಕಡಲ ತೀರದ ನಿವಾಸಿಗಳಿಗೆ ದುಸ್ವಪ್ನವಾಗಿರುವ ಕಡಲ ಕೊರೆತವೆಂಬ ಸಂಕಟಕ್ಕೆ ಕೊನೆಯೇ ಇಲ್ಲದಾಗಿದೆ. ಈ ವರ್ಷ ತೊಪ್ಪಲಕೇರಿ ಮತ್ತು ಕಾಸರಕೋಡ ಭಾಗದಲ್ಲಿ ಕಡಲ್ಕೊರೆತ ತೀವ್ರವಾಗಿದೆ. ಕಾಸರಕೋಡನ ರಾಮನಗರ, ಜಟಕನ ಮನೆ ಪ್ರದೇಶದ ಸಮುದ್ರ ಕೊರೆತ ತಡೆಗೆ ತುರ್ತು ಕಾಮಗಾರಿ ನಡೆಸಬೇಕಾಗಿದೆ.
ನೇರವಾಗಿ ಸಮುದ್ರ ಸೇರುತ್ತಿದ್ದ ಶರಾವತಿಗೆ ಹೆದ್ದಾರಿ ಸೇತುವೆ ನಿರ್ಮಾಣವಾಯಿತು. ಶರಾವತಿ ಟೇಲರೀಸ್ ಅಣೆಕಟ್ಟು ನಿರ್ಮಾಣವಾಯಿತು. ಕಾಡು ನಾಶದಿಂದ ಸಂಗಮದಲ್ಲಿ ಹೂಳು ತುಂಬಿತು. ಮತ್ತೆ ರೇಲ್ವೆ ಸೇತುವೆ ನಿರ್ಮಾಣವಾಗಿದೆ, ಹೆದ್ದಾರಿಗೆ ಇನ್ನೊಂದು ಸೇತುವೆ ಬಂದಿದೆ. ಇದರಿಂದ ಶರಾವತಿ ಸಮುದ್ರ ಸೇರದೆ ತೆವಳತೊಡಗಿತು. ಬಲಕ್ಕೆ ಸರಿಯುತ್ತ ಹೋಯಿತು. ಇದರಿಂದ ಉಂಟಾದ ಸಮುದ್ರ ಕೊರೆತ ಮಲ್ಲುಕುರ್ವೆ ಎಂಬ ಕಂದಾಯ ಗ್ರಾಮವನ್ನು ಬಲಿಪಡೆಯಿತು. ಆಗ ಸಮುದ್ರ ಕೊರೆತ ತಡೆಗೋಡೆ ಕಾಮಗಾರಿ ಆರಂಭವಾಗಿತ್ತು. ಊರು ಸೂರೆ ಹೋದ ಮೇಲೆ ದಿಡ್ಡಿಬಾಗಿಲು ಹಾಕಿದಂತೆ ಪಾವಿನಕುರ್ವೆ ಕೊರೆತ ಆರಂಭವಾದ ಮೇಲೆ ಕಾಸರಕೋಡ ಕಡೆ ಕೊರೆತ ಆರಂಭವಾಯಿತು. ಹೂಳು ತುಂಬಿ ಮೀನುಗಾರಿಕಾ ಬೋಟ್‌ಗಳು ಅಳವೆಯ ಹೊಯ್ಗೆ ದಿನ್ನೆಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ನೂರಾರು ಬೋಟ್‌ಗಳು ಘಾಸಿಗೊಂಡವು. 15ಕ್ಕೂ ಹೆಚ್ಚು ಜನ ಬಲಿಯಾದರು. ಮೀನುಗಾರರ ಸತತ ಹೋರಾಟ ಅಳವೆ ಕಾಮಗಾರಿಗೆ ಕೇಂದ್ರ ಸರ್ಕಾರದ 300ಕೋಟಿ ರೂ. ಬಂತು. ಈ ಹಣ ಬಳಕೆಯಾಗಿದ್ದರೆ ಕಡಲ ಕೊರೆತ ಕಡಿಮೆಯಾಗುತ್ತಿತ್ತು. ಕಾಮಗಾರಿ ಆರಂಭವಾಗುವ ಮೊದಲು ಹಿಂದಿನ ಬಿಜೆಪಿ ಸರ್ಕಾರದಲ್ಲಿ ಬಂದರು ಮಂತ್ರಿಗಳಾಗಿದ್ದ ಪಾಲೇಮಾರ್ ಆಂಧ್ರದ ಬಂಡವಾಳದಾರರ ಹೊನ್ನಾವರ ಪೋರ್ಟ್ ಕಂಪನಿಗೆ ಅಳವೆ ಸಹಿತ 100ಎಕರೆ ಭೂಮಿಯನ್ನು ಟೊಂಕದಲ್ಲಿ ಬಿಟ್ಟುಕೊಟ್ಟಿತ್ತು. ಅಳವೆ ನಿರ್ಮಾಣದ ಹಣ ಮರಳಿ ಹೋಯಿತು. ಮೀನುಗಾರರು ಬೀದಿಯಲ್ಲಿ ಬಿದ್ದರು. ಕಂಪನಿ ಈಗ ಧಕ್ಕೆ ನಿರ್ಮಾಣ ಆರಂಭಿಸಿದೆ. ಅಳವೆ ಹೂಳು ತೆಗೆದು ನಿರ್ಮಾಣ ಆರಂಭಮಾಡಿಲ್ಲ. ಬೋಟ್‌ಗಳು 5ನೇ ತಾರೀಖೀನಿಂದ ಸಮುದ್ರಕ್ಕಿಳಿಯಲಿವೆ. ಮುಂದೇನೋ ಗೊತ್ತಿಲ್ಲ.
ಈ ಮಧ್ಯೆ ಗಾಳಿ ಜೋರಾಗಿ ಸಮುದ್ರ ಕೊರೆತ ತೀವ್ರವಾಗಿದೆ. ಹಿಂದೆ ಕಟ್ಟಿದ್ದ ತಡೆಗೋಡೆಗಳ ಕಲ್ಲನ್ನು ಸಮುದ್ರ ಕಬಳಿಸಿ, ಭೂಮಿ ಸ್ವಾಹಾ ಮಾಡುತ್ತಿದೆ. ರಾಮನಗರದಲ್ಲಿ ನೆಲೆಸಿದವರು ಬಹುಪಾಲು ಮಲ್ಲುಕುರ್ವೆ, ಪಾವಿನಕುರ್ವೆ ನಿರಾಶ್ರಿತರು. ತುಂಬ ಹೋರಾಡಿ ಕೆಲವರು ಪಟ್ಟ ಪಡೆದಿದ್ದಾರೆ. ಇಕೋ ಬೀಚಿನಿಂದ ಸುಮಾರು 2ಕಿಮೀ ಶರಾವತಿ ಸಂಗಮದವರೆಗೆ ಅಲ್ಲಲ್ಲಿ ತಡೆಗೋಡೆ ಕುಸಿದು ರಸ್ತೆ ಮುರಿದು ನೀರು ನುಗ್ಗಿದೆ. ಸರ್ಕಾರ ಬಿಡುಗಡೆ ಮಾಡಿರುವ ಹಣ ಯಾತಕ್ಕೂ ಸಾಲದು. 3 ವರ್ಷದಿಂದ ಹಣಬಿಡುಗಡೆಗಾಗಿ ಕಾಯುತ್ತಿರುವ ತೊಪ್ಪಲಕೇರಿಯವರು ಪ್ರಧಾನಿಯವರೆಗೆ ದೂರು ಸಲ್ಲಿಸಿದ್ದಾರೆ. ಈವರೆಗೆ ಯಾವ ಪ್ರಗತಿಯೂ ಆಗಿಲ್ಲ.
ಹೊನ್ನಾವರ, ಭಟ್ಕಳ ತಾಲೂಕಿನಲ್ಲಿ ಕನಿಷ್ಠ 10ಕಿಮೀ ಪ್ರದೇಶದಲ್ಲಿ ತೀವ್ರ ಸಮುದ್ರ ಕೊರೆತವಿದೆ. ಈ ವರ್ಷ 100ಕೋಟಿ ರೂ. ಮಂಜೂರಾದರೆ ತುರ್ತು ಕಾಮಗಾರಿ ನಡೆಸಬಹುದು. ಮುಂದಿನ ವರ್ಷದಲ್ಲಿ ಇನ್ನೆಲ್ಲಿ ಕೊರೆಯುತ್ತದೆಯೋ ಗೊತ್ತಿಲ್ಲ. ಕಡಲ ತೀರದವರ ಕಣ್ಣೀರು ಸಮುದ್ರದ ಉಪ್ಪುನೀರಿನ ಜೊತೆ ಬೆರೆತು ಹೋಗುತ್ತಿದೆ. ಸಂಪೂರ್ಣ ಸುರಕ್ಷತೆ ಮರೀಚಿಕೆಯಾಗಿದೆ.
•ಜೀಯು, ಹೊನ್ನಾವರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sirasi: ಭಾರತಕ್ಕೆ ಆಮದಾಗುವ ಅಕ್ರಮ ಅಡಿಕೆಗಳಿಗೆ ತಡೆಯೊಡ್ಡಿ; ಬೆಳೆಗಾರರ ಪ್ರತಿನಿಧಿಗಳ ನಿಯೋಗ
Sirsi: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ಪರಾರಿ; ಆರೋಪಿ ಬಂಧನ
Sirsi: ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾದ ಸಂಸದ ಕಾಗೇರಿ
Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ
ಮಕ್ಕಳನ್ನು ಶಾಲೆಗೆ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಸಚಿವ ಮಧು ಬಂಗಾರಪ್ಪ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.